ಶಿವಕುಮಾರ್‌ ಅವರೇ ನಮ್ಮ ಸಹಕಾರದಿಂದಲೇ ಇಂದು ಬೆಂಗಳೂರು ಮೆಟ್ರೋ ಸೆಂಚುರಿ ಬಾರಿಸಿದೆ: ಅನುದಾನ ತಾರತಮ್ಯದ ಆರೋಪಕ್ಕೆ ಮೋದಿ ತಿರುಗೇಟು..

ಸುದ್ದಿ ಮತ್ತು ಪ್ರಕಟಣೆಗಳಿಗಾಗಿ:
9000144466
kannadasakshi.in

ಶಿವಕುಮಾರ್‌ ಅವರೇ ನಮ್ಮ ಸಹಕಾರದಿಂದಲೇ ಇಂದು ಬೆಂಗಳೂರು ಮೆಟ್ರೋ ಸೆಂಚುರಿ ಬಾರಿಸಿದೆ: ಅನುದಾನ ತಾರತಮ್ಯದ ಆರೋಪಕ್ಕೆ ಮೋದಿ ತಿರುಗೇಟು..

13 Nov 2026, 9:43 pm KANNADA SAKSHI

ಮೆಟ್ರೋ ಅನುದಾನ ಹಂಚಿಕೆಯಲ್ಲಿ ತಾರತಮ್ಯವಾಗುತ್ತಿದೆ ಎಂದು ವೇದಿಕೆಯಲ್ಲೇ ಪ್ರಸ್ತಾಪಿಸಿದ್ದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ (DK Shivakumar) ಅವರಿಗೆ ಪ್ರಧಾನಿ ನರೇಂದ್ರ ಮೋದಿ(Narendra Modi) ನಯವಾಗಿಯೇ ತಿರುಗೇಟು ನೀಡಿದ್ದಾರೆ.
ಪಿಂಕ್‌ ಲೈನ್‌ಗೆ ಚಾಲನೆ ನೀಡಿದ ಬಳಿಕ ನಗರದ ಐಐಎಂಬಿ (IIMB) ಆಡಿಟೋರಿಯಂನಲ್ಲಿ ನಡೆದ ವಿವಿಧ ಅಭಿವೃದ್ಧಿ ಯೋಜನೆಗಳ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಪ್ರಧಾನಿ ಮೋದಿ, ವಿಕಸಿತ ಕರ್ನಾಟಕದಿಂದ ವಿಕಸಿತ ಭಾರತ ನಿರ್ಮಾಣವಾಗಲಿದೆ ಎಂದು ಅಭಿಪ್ರಾಯಪಟ್ಟರು.
ನಮ್ಮ ಮೆಟ್ರೋಗೆ(Namma Metro) ಕೇಂದ್ರದ ಸಂಪೂರ್ಣ ಸಹಯೋಗ ಇದೆ. 2014 ರಲ್ಲಿ ನಮ್ಮ ಮೆಟ್ರೋ ಜಾಲ 17 ಕಿ.ಮೀ ಇತ್ತು.  ನಮ್ಮ ಸಹಕಾರದಿಂದಲೇ ಇಂದು ಬೆಂಗಳೂರು ಮೆಟ್ರೋ ಜಾಲ 100 ಕಿ.ಮೀ. ದಾಟಿ ಸೆಂಚುರಿ ಬಾರಿಸಿದೆ ಎಂದು ಎಂದು ಹೇಳುವ ಮೂಲಕ ಕರ್ನಾಟಕಕ್ಕೆ ಕೇಂದ್ರ ಸರ್ಕಾರ ನೀಡಿರುವ ಕೊಡುಗೆಗಳನ್ನು ಅಂಕಿಅಂಶಗಳ ಸಮೇತ ಪ್ರಧಾನಿ ತೆರೆದಿಟ್ಟರು.  ಮೋದಿ ಅವರು ವೇದಿಕೆಯಲ್ಲೇ  ಶಿವಕುಮಾರ್‌ ಹೆಸರನ್ನು ಪ್ರಸ್ತಾಪ ಮಾಡಿದ ಕೂಡಲೇ ಸಿಎಂ, ಮತ್ತು ಸಂಸದ ತೇಜಸ್ವಿ ಸೂರ್ಯ ನಗೆ ಬೀರಿದರು.  !

ಕೇಂದ್ರ ಸರ್ಕಾರ ಕರ್ನಾಟಕಕ್ಕೆ ನೀಡುತ್ತಿರುವ ಸಹಕಾರವನ್ನು ಉದಾಹರಣೆ ಸಹಿತ ವಿವರಿಸಿದ ಮೋದಿ, ಕೇಂದ್ರ ಸರ್ಕಾರ ಕರ್ನಾಟಕದ ರೈಲ್ವೆ ಬಜೆಟ್‌ನಲ್ಲಿ ನಾಲ್ಕು ಪಟ್ಟು ಹೆಚ್ಚಳ ಮಾಡಿದೆ. ವಂದೇ ಭಾರತ್ ರೈಲು, ಅಮೃತ್ ಭಾರತ್ ಸ್ಟೇಷನ್ ಹಾಗೂ ವಿಕಸಿತ್ ಭಾರತ್ ಯೋಜನೆಗಳ ಮೂಲಕ ರೈಲ್ವೆ ಕ್ಷೇತ್ರದಲ್ಲಿ ಕ್ರಾಂತಿಯಾಗುತ್ತಿದೆ. ಪುನರಾಭಿವೃದ್ಧಿಗೊಂಡ ರೈಲು ನಿಲ್ದಾಣಗಳಲ್ಲಿ ಸಂವೇದನಾಶೀಲತೆ ಹಾಗೂ ಆಧುನಿಕತೆ ಎರಡೂ ಇದೆ. ಈಗ ವಿಮಾನ ನಿಲ್ದಾಣದ ಸೌಕರ್ಯಗಳು ರೈಲು ನಿಲ್ದಾಣಗಳಲ್ಲೇ ಸಿಗುತ್ತಿವೆ ಎಂದು ಹೇಳಿದರು.
ಇಂದು ಚಿಪ್‌ನಿಂದ ಶಿಪ್‌ವರೆಗೆ, ಎಐ (AI) ಯಿಂದ ಕ್ವಾಂಟಮ್ ತಂತ್ರಜ್ಞಾನದವರೆಗೆ ಭಾರತ ಆಶಾಭಾವನೆಯಿಂದ ಸಾಗುತ್ತಿದೆ. ಇಂಧನ ಭದ್ರತೆಗೂ ನಾವು ಹೆಚ್ಚಿನ ಒತ್ತು ನೀಡಿದ್ದು, ಕಳೆದ ದಶಕದ ನಿರ್ಧಾರಗಳು ಸಂಕಷ್ಟದಿಂದ ಹೊರಬರಲು ನೆರವಾಗಿವೆ. ವಿದ್ಯುತ್ ಬಳಕೆಯಲ್ಲಿ ಮಾತ್ರವಲ್ಲದೆ ವಿದ್ಯುತ್ ಉತ್ಪಾದನೆಯಲ್ಲೂ ನಾವು ಸ್ವಾವಲಂಬಿಗಳಾಗುತ್ತಿದ್ದೇವೆ. ಪಿಎಂ ಕುಸುಮ್ ಯೋಜನೆಯಡಿ ರಾಜ್ಯದ ಎಂಟು ಲಕ್ಷ ರೈತರಿಗೆ ಸಹಕಾರ ನೀಡಲಾಗಿದೆ ಎಂದು ತಿಳಿಸಿದರು.
2014ರಲ್ಲಿ ‘ಸಬ್ ಕಾ ಸಾತ್, ಸಬ್ ಕಾ ವಿಕಾಸ್’ ಪರಿಕಲ್ಪನೆಯೊಂದಿಗೆ ನಾವು ಹೆಜ್ಜೆ ಇಟ್ಟೆವು. ಇಂದು ಅದು ಸಾಕಾರವಾಗಿದ್ದು, ಬಡ ಹಾಗೂ ಮಧ್ಯಮ ವರ್ಗದವರ ಬದುಕು ಸುಧಾರಿಸಿದೆ. ‘ನಿಯೋ ಮಧ್ಯಮ ವರ್ಗ’ ಭಾರತದ ಆರ್ಥಿಕತೆಯ ಇಂಜಿನ್ ಆಗಿದೆ ಎಂದು ಪ್ರಧಾನಿ ಮೋದಿ ಬಣ್ಣಿಸಿದರು.

ಇದು ಟೆಕ್ ಸಿಟಿ ಹಾಗೂ ಐಟಿ-ಬಿಟಿ ಸಿಟಿ. ದೇಶದ ಆರ್ಥಿಕತೆಯಲ್ಲಿ ಬೆಂಗಳೂರಿನ ಯೋಗದಾನ ಬಹಳ ದೊಡ್ಡದಿದೆ. ಇಂದು ಪಿಂಕ್ ಲೈನ್ ಮೆಟ್ರೋಗೆ ಗ್ರೀನ್ ಸಿಗ್ನಲ್ ನೀಡಿದ್ದೇನೆ. ಮೆಟ್ರೋ ನಗರದ ಸಂಪರ್ಕ ಸೇತುವಾಗಿದ್ದು, ಇದರಿಂದ ಬೆಂಗಳೂರಿಗರ ಸಮಯ ಹಾಗೂ ಹಣ ಉಳಿತಾಯವಾಗಲಿದೆ ಎಂದರು. ಭಾಷಣದ ಆರಂಭದಲ್ಲಿ ದ್ರದ ಮಾಜಿ ಸಚಿವ ದಿವಂಗತ ಅನಂತಕುಮಾರ್ ಅವರನ್ನು ಸ್ಮರಿಸಿದ ಪ್ರಧಾನಿಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದರು.

Generating image…

Editor Reporter

Share ePaper Clip

Preparing image...

   SHARE  

Facebook
Twitter
Telegram
WhatsApp

   TOP NEWS  

   RECENT NEWS