ಮೋದಿ ಸಮ್ಮುಖದಲ್ಲೇ ನಯವಾಗಿ ರಾಜ್ಯದ ಬೇಡಿಕೆ ಪಟ್ಟಿ ಮುಂದಿಟ್ಟ ಸಿಎಂ

ಸುದ್ದಿ ಮತ್ತು ಪ್ರಕಟಣೆಗಳಿಗಾಗಿ:
9000144466
kannadasakshi.in

ಮೋದಿ ಸಮ್ಮುಖದಲ್ಲೇ ನಯವಾಗಿ ರಾಜ್ಯದ ಬೇಡಿಕೆ ಪಟ್ಟಿ ಮುಂದಿಟ್ಟ ಸಿಎಂ

13 Nov 2026, 9:41 pm KANNADA SAKSHI

ಪ್ರಧಾನಿ ನರೇಂದ್ರ ಮೋದಿ(Narendra Modi) ಅವರ ಸಮ್ಮುಖದಲ್ಲೇ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ (DK Shivakumar) ಅವರು ರಾಜ್ಯದ ಪ್ರಮುಖ ಬೇಡಿಕೆಗಳ ಪಟ್ಟಿಯನ್ನು ನಯವಾಗಿಯೇ ಮುಂದಿಟ್ಟಿದ್ದಾರೆ. ಮೆಟ್ರೋ(Namma Metro) ಯೋಜನೆಯಲ್ಲಿ ಸಮಾನ ಪಾಲುದಾರಿಕೆ, ಬರ ಪರಿಹಾರ ಹಾಗೂ ಕಬ್ಬು ಬೆಳೆಗಾರರ ನೆರವಿಗೆ ಧಾವಿಸುವಂತೆ ಪ್ರಧಾನಿಗಳಿಗೆ ಮನವಿ ಮಾಡಿದ್ದಾರೆ.
ನಗರದ ಐಐಎಂಬಿ (IIMB) ಆಡಿಟೋರಿಯಂನಲ್ಲಿ ನಡೆದ ವಿವಿಧ ಅಭಿವೃದ್ಧಿ ಯೋಜನೆಗಳ ಉದ್ಘಾಟನಾ ಸಮಾರಂಭದಲ್ಲಿ ಮೆಟ್ರೋ ಅನುದಾನ ಹಂಚಿಕೆಯ ತಾರತಮ್ಯದ ಕುರಿತು ಪ್ರಸ್ತಾಪಿಸಿದ ಸಿಎಂ, ಮೆಟ್ರೋ ಯೋಜನೆಯಲ್ಲಿ 50:50 ಸಹಭಾಗಿತ್ವವಿದ್ದರೂ ವಾಸ್ತವದಲ್ಲಿ ಅದು ಪಾಲನೆಯಾಗುತ್ತಿಲ್ಲ. ಕೇಂದ್ರದ ಅನುದಾನ ಕಡಿಮೆಯಾಗುತ್ತಿದ್ದು, ರಾಜ್ಯದ ಮೇಲೆ ಆರ್ಥಿಕ ಹೊರೆ ಹೆಚ್ಚಾಗುತ್ತಿದೆ. ಯೋಜನೆಯ ಮೂಲ ವೆಚ್ಚದ ಜೊತೆಗೆ ಹೆಚ್ಚುವರಿ ವೆಚ್ಚದಲ್ಲೂ ಕೇಂದ್ರ ಸರ್ಕಾರ 50:50 ಪಾಲು ಭರಿಸಬೇಕು ಎಂದು ಒತ್ತಾಯಿಸಿದರು.

ದೆಹಲಿ ಮಾದರಿಯಲ್ಲಿ ಬೆಂಗಳೂರಿನ ಸಂಚಾರ ದಟ್ಟಣೆಗೆ ಪರಿಹಾರ ಕಂಡುಕೊಳ್ಳಲು ಮೆಟ್ರೋ ಒಂದೇ ದಾರಿಯಾಗಿದೆ. ರೆಡ್ ಲೈನ್ ಯೋಜನೆಗೆ ಅನುಮೋದನೆ ನೀಡಲು ಎರಡು ವರ್ಷ ವಿಳಂಬವಾಗಿದೆ. ಕೇಂದ್ರದ ಅನುಮೋದನೆ ವಿಳಂಬದಿಂದಾಗಿ ಹೆಚ್ಚಾದ ವೆಚ್ಚವನ್ನು ಕೇಂದ್ರವೇ ಭರಿಸಬೇಕು ಹಾಗೂ ಬಾಕಿ ಇರುವ ಮೆಟ್ರೋ ಯೋಜನೆಗಳಿಗೆ ಶೀಘ್ರ ಅನುಮತಿ ನೀಡಬೇಕು. ಅಲ್ಲದೆ, ವಿದೇಶಿ ಸಾಲದ ಹೊರೆ ಹೆಚ್ಚಾಗುತ್ತಿರುವುದರಿಂದ ಕಡಿಮೆ ಬಡ್ಡಿ ದರದಲ್ಲಿ ಸಾಲ ಸಿಗುವಂತೆ ವ್ಯವಸ್ಥೆ ಮಾಡಬೇಕು ಎಂದು ಪ್ರಧಾನಿಗಳಿಗೆ ನೇರವಾಗಿ ಮನವಿ ಮಾಡಿದರು.

ರಾಜ್ಯದ ರೈತರ ಸಂಕಷ್ಟವನ್ನು ಪ್ರಧಾನಿಗಳ ಗಮನಕ್ಕೆ ತಂದ ಡಿ.ಕೆ. ಶಿವಕುಮಾರ್, ಬರಗಾಲದಿಂದ ರಾಜ್ಯದಲ್ಲಿ 85 ಲಕ್ಷ ಎಕರೆ ಬೆಳೆ ನಷ್ಟವಾಗಿದ್ದು, ಸುಮಾರು 62 ಸಾವಿರ ಕೋಟಿ ರೂ. ನಷ್ಟ ಸಂಭವಿಸಿದೆ. ಕೇಂದ್ರ ಸರ್ಕಾರ ಶೀಘ್ರವೇ ಬರ ಪರಿಹಾರ ಬಿಡುಗಡೆ ಮಾಡಿ ನಮ್ಮ ರೈತರ ಕಷ್ಟಕ್ಕೆ ನೆರವಾಗಬೇಕು ಎಂದರು.

ಇದೇ ವೇಳೆ ಸಕ್ಕರೆ ಉದ್ಯಮದ ಬಗ್ಗೆಯೂ ಪ್ರಸ್ತಾಪಿಸಿದ ಅವರು, ಕಳೆದ ಹಲವು ವರ್ಷಗಳಿಂದ ಕಬ್ಬು ಬೆಳೆಗಾರರ ಕನಿಷ್ಠ ಬೆಂಬಲ ಬೆಲೆ (MSP) ಹಾಗೂ ಸಕ್ಕರೆ ದರವನ್ನು ಹೆಚ್ಚಿಸಿಲ್ಲ. ತಕ್ಷಣವೇ ಕಬ್ಬು ಬೆಳೆಗಾರರ ಎಂಎಸ್‌ಪಿ ಮತ್ತು ಸಕ್ಕರೆ ದರವನ್ನು ಹೆಚ್ಚಿಸಿ ಬೆಳೆಗಾರರ ನೆರವಿಗೆ ನಿಲ್ಲಬೇಕು ಎಂದು ಕೋರಿದರು.

ಕರ್ನಾಟಕ ಮತ್ತು ಬೆಂಗಳೂರಿನ ಕೊಡುಗೆಗಳನ್ನು ಸ್ಮರಿಸಿದ ಸಿಎಂ, 1902ರಲ್ಲಿ ಕರ್ನಾಟಕದಲ್ಲಿ ಮೊದಲ ಬಾರಿಗೆ ವಿದ್ಯುತ್ ಉತ್ಪಾದನೆಯಾಯಿತು, ಬೆಂಗಳೂರು ವಿದ್ಯುತ್ ಬಳಸಿದ ಮೊದಲ ನಗರವಾಗಿದೆ. ದೇಶದ ಮೊದಲ ಸ್ಟಾರ್ಟ್‌ಅಪ್ ನೀತಿ ಜಾರಿಯಾಗಿದ್ದು ನಮ್ಮಲ್ಲೇ. ಜಗತ್ತಿನ ಅತಿ ಹೆಚ್ಚಿನ ಎಐ (AI) ಪ್ರತಿಭೆಗಳು ನಮ್ಮಲ್ಲಿದ್ದು, ಚಿಪ್ ವಿನ್ಯಾಸದಲ್ಲಿ ಬೆಂಗಳೂರು ಏಷ್ಯಾದಲ್ಲೇ ಎರಡನೇ ಸ್ಥಾನದಲ್ಲಿದೆ. ರಫ್ತು ಹಾಗೂ ಪ್ರತಿಭಾ ವಲಯದಲ್ಲಿ ಕರ್ನಾಟಕ ನಂಬರ್ ಒನ್ ಸ್ಥಾನದಲ್ಲಿದೆ ಎಂದು ಹೆಮ್ಮೆಯಿಂದ ಹೇಳಿದರು.

ಭಗವದ್ಗೀತೆಯ “ಕರ್ಮಣ್ಯೇವಾಧಿಕಾರಸ್ತೇ…” ಶ್ಲೋಕವನ್ನು ಉಲ್ಲೇಖಿಸಿದ ಅವರು, “ನಮ್ಮದು ಕಾಯಕವೇ ಕೈಲಾಸ ಎಂಬ ಮನಸ್ಥಿತಿ. ಪ್ರಯತ್ನ ನಮ್ಮದು, ಫಲ ದೇವರದ್ದು. ವಿಶ್ವಮಾನವ ತತ್ವದಡಿ ನಾವು ಜೊತೆಗೂಡಿ ಕೆಲಸ ಮಾಡೋಣ. ನಮ್ಮ ಭಾವನೆಗಳು ಮತ್ತು ಕಷ್ಟಗಳನ್ನು ತಾವು ಅರ್ಥಮಾಡಿಕೊಳ್ಳುತ್ತೀರಿ ಎಂಬ ಭರವಸೆ ಇದೆ” ಎಂದು ಪ್ರಧಾನಿ ಮೋದಿ ಅವರಿಗೆ ತಿಳಿಸಿದರು.
ಪ್ರಧಾನಿ ಮುಂದೆ ಸಿಎಂ ಇಟ್ಟ ಪ್ರಮುಖ ಬೇಡಿಕೆಗಳು:– ಮೆಟ್ರೋ ಬಾಕಿ ಅನುದಾನ ಬಿಡುಗಡೆ ಹಾಗೂ ಹೆಚ್ಚುವರಿ ವೆಚ್ಚದಲ್ಲಿ 50:50 ಪಾಲು ಭರಿಸುವುದು.– ಬಾಕಿ ಇರುವ ಮೆಟ್ರೋ ಯೋಜನೆಗಳಿಗೆ ಶೀಘ್ರ ಅನುಮೋದನೆ ಹಾಗೂ ಕಡಿಮೆ ಬಡ್ಡಿ ದರದಲ್ಲಿ ಸಾಲದ ವ್ಯವಸ್ಥೆ.– ಬರ ಪರಿಹಾರದ ಹಣವನ್ನು ಶೀಘ್ರವಾಗಿ ಬಿಡುಗಡೆ ಮಾಡುವುದು.– ಕಬ್ಬು ಬೆಳೆಗಾರರಿಗೆ ನೆರವು ನೀಡುವುದು ಹಾಗೂ ಸಕ್ಕರೆ ದರ ಹೆಚ್ಚಳ ಮಾಡುವುದು.

Generating image…

ಪ್ರಧಾನಿ ಮುಂದೆ ಸಿಎಂ ಇಟ್ಟ ಪ್ರಮುಖ ಬೇಡಿಕೆಗಳು:
– ಮೆಟ್ರೋ ಬಾಕಿ ಅನುದಾನ ಬಿಡುಗಡೆ ಹಾಗೂ ಹೆಚ್ಚುವರಿ ವೆಚ್ಚದಲ್ಲಿ 50:50 ಪಾಲು ಭರಿಸುವುದು.
– ಬಾಕಿ ಇರುವ ಮೆಟ್ರೋ ಯೋಜನೆಗಳಿಗೆ ಶೀಘ್ರ ಅನುಮೋದನೆ ಹಾಗೂ ಕಡಿಮೆ ಬಡ್ಡಿ ದರದಲ್ಲಿ ಸಾಲದ ವ್ಯವಸ್ಥೆ.
– ಬರ ಪರಿಹಾರದ ಹಣವನ್ನು ಶೀಘ್ರವಾಗಿ ಬಿಡುಗಡೆ ಮಾಡುವುದು.
– ಕಬ್ಬು ಬೆಳೆಗಾರರಿಗೆ ನೆರವು ನೀಡುವುದು ಹಾಗೂ ಸಕ್ಕರೆ ದರ ಹೆಚ್ಚಳ ಮಾಡುವುದು.

Editor Reporter
kannadasakshi.in

ಮೋದಿ ಸಮ್ಮುಖದಲ್ಲೇ ನಯವಾಗಿ ರಾಜ್ಯದ ಬೇಡಿಕೆ ಪಟ್ಟಿ ಮುಂದಿಟ್ಟ ಸಿಎಂ

ಪ್ರಧಾನಿ ನರೇಂದ್ರ ಮೋದಿ(Narendra Modi) ಅವರ ಸಮ್ಮುಖದಲ್ಲೇ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ (DK Shivakumar) ಅವರು ರಾಜ್ಯದ ಪ್ರಮುಖ ಬೇಡಿಕೆಗಳ ಪಟ್ಟಿಯನ್ನು ನಯವಾಗಿಯೇ ಮುಂದಿಟ್ಟಿದ್ದಾರೆ. ಮೆಟ್ರೋ(Namma Metro) ಯೋಜನೆಯಲ್ಲಿ ಸಮಾನ ಪಾಲುದಾರಿಕೆ, ಬರ ಪರಿಹಾರ ಹಾಗೂ ಕಬ್ಬು ಬೆಳೆಗಾರರ ನೆರವಿಗೆ ಧಾವಿಸುವಂತೆ ಪ್ರಧಾನಿಗಳಿಗೆ ಮನವಿ ಮಾಡಿದ್ದಾರೆ.
ನಗರದ ಐಐಎಂಬಿ (IIMB) ಆಡಿಟೋರಿಯಂನಲ್ಲಿ ನಡೆದ ವಿವಿಧ ಅಭಿವೃದ್ಧಿ ಯೋಜನೆಗಳ ಉದ್ಘಾಟನಾ ಸಮಾರಂಭದಲ್ಲಿ ಮೆಟ್ರೋ ಅನುದಾನ ಹಂಚಿಕೆಯ ತಾರತಮ್ಯದ ಕುರಿತು ಪ್ರಸ್ತಾಪಿಸಿದ ಸಿಎಂ, ಮೆಟ್ರೋ ಯೋಜನೆಯಲ್ಲಿ 50:50 ಸಹಭಾಗಿತ್ವವಿದ್ದರೂ ವಾಸ್ತವದಲ್ಲಿ ಅದು ಪಾಲನೆಯಾಗುತ್ತಿಲ್ಲ. ಕೇಂದ್ರದ ಅನುದಾನ ಕಡಿಮೆಯಾಗುತ್ತಿದ್ದು, ರಾಜ್ಯದ ಮೇಲೆ ಆರ್ಥಿಕ ಹೊರೆ ಹೆಚ್ಚಾಗುತ್ತಿದೆ. ಯೋಜನೆಯ ಮೂಲ ವೆಚ್ಚದ ಜೊತೆಗೆ ಹೆಚ್ಚುವರಿ ವೆಚ್ಚದಲ್ಲೂ ಕೇಂದ್ರ ಸರ್ಕಾರ 50:50 ಪಾಲು ಭರಿಸಬೇಕು ಎಂದು ಒತ್ತಾಯಿಸಿದರು.

ದೆಹಲಿ ಮಾದರಿಯಲ್ಲಿ ಬೆಂಗಳೂರಿನ ಸಂಚಾರ ದಟ್ಟಣೆಗೆ ಪರಿಹಾರ ಕಂಡುಕೊಳ್ಳಲು ಮೆಟ್ರೋ ಒಂದೇ ದಾರಿಯಾಗಿದೆ. ರೆಡ್ ಲೈನ್ ಯೋಜನೆಗೆ ಅನುಮೋದನೆ ನೀಡಲು ಎರಡು ವರ್ಷ ವಿಳಂಬವಾಗಿದೆ. ಕೇಂದ್ರದ ಅನುಮೋದನೆ ವಿಳಂಬದಿಂದಾಗಿ ಹೆಚ್ಚಾದ ವೆಚ್ಚವನ್ನು ಕೇಂದ್ರವೇ ಭರಿಸಬೇಕು ಹಾಗೂ ಬಾಕಿ ಇರುವ ಮೆಟ್ರೋ ಯೋಜನೆಗಳಿಗೆ ಶೀಘ್ರ ಅನುಮತಿ ನೀಡಬೇಕು. ಅಲ್ಲದೆ, ವಿದೇಶಿ ಸಾಲದ ಹೊರೆ ಹೆಚ್ಚಾಗುತ್ತಿರುವುದರಿಂದ ಕಡಿಮೆ ಬಡ್ಡಿ ದರದಲ್ಲಿ ಸಾಲ ಸಿಗುವಂತೆ ವ್ಯವಸ್ಥೆ ಮಾಡಬೇಕು ಎಂದು ಪ್ರಧಾನಿಗಳಿಗೆ ನೇರವಾಗಿ ಮನವಿ ಮಾಡಿದರು.

ರಾಜ್ಯದ ರೈತರ ಸಂಕಷ್ಟವನ್ನು ಪ್ರಧಾನಿಗಳ ಗಮನಕ್ಕೆ ತಂದ ಡಿ.ಕೆ. ಶಿವಕುಮಾರ್, ಬರಗಾಲದಿಂದ ರಾಜ್ಯದಲ್ಲಿ 85 ಲಕ್ಷ ಎಕರೆ ಬೆಳೆ ನಷ್ಟವಾಗಿದ್ದು, ಸುಮಾರು 62 ಸಾವಿರ ಕೋಟಿ ರೂ. ನಷ್ಟ ಸಂಭವಿಸಿದೆ. ಕೇಂದ್ರ ಸರ್ಕಾರ ಶೀಘ್ರವೇ ಬರ ಪರಿಹಾರ ಬಿಡುಗಡೆ ಮಾಡಿ ನಮ್ಮ ರೈತರ ಕಷ್ಟಕ್ಕೆ ನೆರವಾಗಬೇಕು ಎಂದರು.

ಇದೇ ವೇಳೆ ಸಕ್ಕರೆ ಉದ್ಯಮದ ಬಗ್ಗೆಯೂ ಪ್ರಸ್ತಾಪಿಸಿದ ಅವರು, ಕಳೆದ ಹಲವು ವರ್ಷಗಳಿಂದ ಕಬ್ಬು ಬೆಳೆಗಾರರ ಕನಿಷ್ಠ ಬೆಂಬಲ ಬೆಲೆ (MSP) ಹಾಗೂ ಸಕ್ಕರೆ ದರವನ್ನು ಹೆಚ್ಚಿಸಿಲ್ಲ. ತಕ್ಷಣವೇ ಕಬ್ಬು ಬೆಳೆಗಾರರ ಎಂಎಸ್‌ಪಿ ಮತ್ತು ಸಕ್ಕರೆ ದರವನ್ನು ಹೆಚ್ಚಿಸಿ ಬೆಳೆಗಾರರ ನೆರವಿಗೆ ನಿಲ್ಲಬೇಕು ಎಂದು ಕೋರಿದರು.

ಕರ್ನಾಟಕ ಮತ್ತು ಬೆಂಗಳೂರಿನ ಕೊಡುಗೆಗಳನ್ನು ಸ್ಮರಿಸಿದ ಸಿಎಂ, 1902ರಲ್ಲಿ ಕರ್ನಾಟಕದಲ್ಲಿ ಮೊದಲ ಬಾರಿಗೆ ವಿದ್ಯುತ್ ಉತ್ಪಾದನೆಯಾಯಿತು, ಬೆಂಗಳೂರು ವಿದ್ಯುತ್ ಬಳಸಿದ ಮೊದಲ ನಗರವಾಗಿದೆ. ದೇಶದ ಮೊದಲ ಸ್ಟಾರ್ಟ್‌ಅಪ್ ನೀತಿ ಜಾರಿಯಾಗಿದ್ದು ನಮ್ಮಲ್ಲೇ. ಜಗತ್ತಿನ ಅತಿ ಹೆಚ್ಚಿನ ಎಐ (AI) ಪ್ರತಿಭೆಗಳು ನಮ್ಮಲ್ಲಿದ್ದು, ಚಿಪ್ ವಿನ್ಯಾಸದಲ್ಲಿ ಬೆಂಗಳೂರು ಏಷ್ಯಾದಲ್ಲೇ ಎರಡನೇ ಸ್ಥಾನದಲ್ಲಿದೆ. ರಫ್ತು ಹಾಗೂ ಪ್ರತಿಭಾ ವಲಯದಲ್ಲಿ ಕರ್ನಾಟಕ ನಂಬರ್ ಒನ್ ಸ್ಥಾನದಲ್ಲಿದೆ ಎಂದು ಹೆಮ್ಮೆಯಿಂದ ಹೇಳಿದರು.

ಭಗವದ್ಗೀತೆಯ “ಕರ್ಮಣ್ಯೇವಾಧಿಕಾರಸ್ತೇ…” ಶ್ಲೋಕವನ್ನು ಉಲ್ಲೇಖಿಸಿದ ಅವರು, “ನಮ್ಮದು ಕಾಯಕವೇ ಕೈಲಾಸ ಎಂಬ ಮನಸ್ಥಿತಿ. ಪ್ರಯತ್ನ ನಮ್ಮದು, ಫಲ ದೇವರದ್ದು. ವಿಶ್ವಮಾನವ ತತ್ವದಡಿ ನಾವು ಜೊತೆಗೂಡಿ ಕೆಲಸ ಮಾಡೋಣ. ನಮ್ಮ ಭಾವನೆಗಳು ಮತ್ತು ಕಷ್ಟಗಳನ್ನು ತಾವು ಅರ್ಥಮಾಡಿಕೊಳ್ಳುತ್ತೀರಿ ಎಂಬ ಭರವಸೆ ಇದೆ” ಎಂದು ಪ್ರಧಾನಿ ಮೋದಿ ಅವರಿಗೆ ತಿಳಿಸಿದರು.
ಪ್ರಧಾನಿ ಮುಂದೆ ಸಿಎಂ ಇಟ್ಟ ಪ್ರಮುಖ ಬೇಡಿಕೆಗಳು:– ಮೆಟ್ರೋ ಬಾಕಿ ಅನುದಾನ ಬಿಡುಗಡೆ ಹಾಗೂ ಹೆಚ್ಚುವರಿ ವೆಚ್ಚದಲ್ಲಿ 50:50 ಪಾಲು ಭರಿಸುವುದು.– ಬಾಕಿ ಇರುವ ಮೆಟ್ರೋ ಯೋಜನೆಗಳಿಗೆ ಶೀಘ್ರ ಅನುಮೋದನೆ ಹಾಗೂ ಕಡಿಮೆ ಬಡ್ಡಿ ದರದಲ್ಲಿ ಸಾಲದ ವ್ಯವಸ್ಥೆ.– ಬರ ಪರಿಹಾರದ ಹಣವನ್ನು ಶೀಘ್ರವಾಗಿ ಬಿಡುಗಡೆ ಮಾಡುವುದು.– ಕಬ್ಬು ಬೆಳೆಗಾರರಿಗೆ ನೆರವು ನೀಡುವುದು ಹಾಗೂ ಸಕ್ಕರೆ ದರ ಹೆಚ್ಚಳ ಮಾಡುವುದು.

Share ePaper Clip

Preparing image...

   SHARE  

Facebook
Twitter
Telegram
WhatsApp

   TOP NEWS  

   RECENT NEWS