ಶಸ್ತ್ರಚಿಕಿತ್ಸೆ ವೇಳೆ ಮಗು ಕೋಮಾಗೆ ಜಾರಿದ ಕೇಸ್: ಆಸ್ಪತ್ರೆಯ ತೊಂದರೆಗಳಿಗೆ ದೂರು ನೀಡಲು ಯುಟಿ ಖಾದರ್ ಸೂಚನೆ..

ಸುದ್ದಿ ಮತ್ತು ಪ್ರಕಟಣೆಗಳಿಗಾಗಿ:
9000144466
kannadasakshi.in

ಶಸ್ತ್ರಚಿಕಿತ್ಸೆ ವೇಳೆ ಮಗು ಕೋಮಾಗೆ ಜಾರಿದ ಕೇಸ್: ಆಸ್ಪತ್ರೆಯ ತೊಂದರೆಗಳಿಗೆ ದೂರು ನೀಡಲು ಯುಟಿ ಖಾದರ್ ಸೂಚನೆ..

17 Nov 2026, 7:02 am KANNADA SAKSHI

ಕಿವಿ ಗಾಯದ ಶಸ್ತ್ರಚಿಕಿತ್ಸೆ ವೇಳೆ ಮಗು ಕೋಮಾಗೆ ಜಾರಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಗರದ ಕ್ಲೌಡ್‌ನೈನ್ ಆಸ್ಪತ್ರೆಯು ಸ್ಪಷ್ಟನೆ ನೀಡಿದ ಬೆನ್ನಲ್ಲೇ ಇಂದು ಸೋಮವಾರ ಜಯನಗರದ ಆಸ್ಪತ್ರೆಗೆ ಆರೋಗ್ಯ ಸಚಿವ ಯು.ಟಿ ಖಾದರ್ ದಿಢೀರ್ ಭೇಟಿ ನೀಡಿದರು. ಯಾವುದೇ ಆಸ್ಪತ್ರೆಯಲ್ಲಿ ಚಿಕಿತ್ಸೆಯ ವೇಳೆ ತೊಂದರೆಯಾದರೆ, ಕರ್ನಾಟಕ ವೈದ್ಯಕೀಯ ಪರಿಷತ್‌ಗೆ ಲಿಖಿತ ದೂರು ನೀಡಿ. ಆ ದೂರಿನ ಒಂದು ಪ್ರತಿಯನ್ನು ಸರ್ಕಾರಕ್ಕೂ ಸಲ್ಲಿಸುವಂತೆ ಸಚಿವರು ತಿಳಿಸಿದರು.
ಇಂದು ಜಯನಗರದ ಕ್ಲೌಡ್‌ನೈನ್ ಆಸ್ಪತ್ರೆಗೆ ಭೇಟಿ ನೀಡಿ, ಆಪರೇಷನ್ ಬಳಿಕ ಕೋಮಾ ಸ್ಥಿತಿಗೆ ಹೋಗಿರುವ ಪುಟ್ಟ ಮಗು ಶಯಾನ್‌ನ ಆರೋಗ್ಯ ಸ್ಥಿತಿ ಪರಿಶೀಲಿಸಿ ಮಾತನಾಡಿದರು. ಮಗು ಕಣ್ಣು ತೆರೆದಿರುವುದನ್ನು ಗಮನಿಸಿದೆ. ಮಗುವಿನ ಈಗಿನ ಸ್ಥಿತಿ ಹಾಗೂ ಮುಂದಿನ ಚಿಕಿತ್ಸೆಯ ಬಗ್ಗೆ ವೈದ್ಯರಿಂದ ಸಂಪೂರ್ಣ ಮಾಹಿತಿ ಪಡೆದಿದ್ದೇನೆ ಎಂದರು.
ಮಗುವಿಗೆ ಉತ್ತಮ ಚಿಕಿತ್ಸೆಗೆ ಅದ್ಯತೆ
ಮಗುವಿನ ಪೋಷಕರು, ಆಸ್ಪತ್ರೆಯ ಮುಖ್ಯಸ್ಥರು ಹಾಗೂ ವೈದ್ಯರೊಂದಿಗೆ ಜಂಟಿ ಸಭೆ ನಡೆಸಿ ಕೆಲವು ಸ್ಪಷ್ಟ ಸೂಚನೆಗಳನ್ನು ನೀಡಿದ್ದೇನೆ. ಮಗುವಿನ ಸಂಪೂರ್ಣ ವೈದ್ಯಕೀಯ ವರದಿಯನ್ನು ಅಧ್ಯಯನ ಮಾಡಿ, ಈಗಿನ ಸ್ಥಿತಿ ಮತ್ತು ಮುಂದೆ ಏನು ಮಾಡಬಹುದು ಎಂಬುದನ್ನು ಪೋಷಕರಿಗೆ ಸ್ಪಷ್ಟವಾಗಿ ತಿಳಿಸಬೇಕು. ಇದಕ್ಕಿಂತ ಉತ್ತಮ ಚಿಕಿತ್ಸೆ ಬೇರೆ ಯಾವುದೇ ಆಸ್ಪತ್ರೆಯಲ್ಲಿ ಅಥವಾ ಯಾವುದೇ ತಜ್ಞ ವೈದ್ಯರಿಂದ ಸಿಗುವುದಾದರೆ, ಮಗುವನ್ನು ಅಲ್ಲಿಗೆ ಸ್ಥಳಾಂತರಿಸಬಹುದು ಎಂದು ಹೇಳಿದರು.
ಬೇರೆ ಆಸ್ಪತ್ರೆಗೆ ಸ್ಥಳಾಂತರಿಸಿದರೂ ಸಹ, ಚಿಕಿತ್ಸೆಯ ಸಂಪೂರ್ಣ ವೆಚ್ಚವನ್ನು ಇದೇ ಆಸ್ಪತ್ರೆ ಭರಿಸಬೇಕು.ಯಾವ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿಸಬೇಕು ಎಂಬ ಅಂತಿಮ ತೀರ್ಮಾನವನ್ನು ಪೋಷಕರು ತಮ್ಮ ಕುಟುಂಬದವರೊಂದಿಗೆ ಹಾಗೂ ವೈದ್ಯರೊಂದಿಗೆ ಚರ್ಚಿಸಿ ತೆಗೆದುಕೊಳ್ಳಲಿದ್ದಾರೆ.
ಈ ಹಿಂದೆ ಮಗುವಿನ ಕುಟುಂಬದವರು ನನ್ನನ್ನು ಭೇಟಿ ಮಾಡಿ ತಮ್ಮ ಸಮಸ್ಯೆ ತಿಳಿಸಿದಾಗಲೇ, ಮಗುವಿಗೆ ಸಂಪೂರ್ಣ ಉಚಿತ ಚಿಕಿತ್ಸೆ ನೀಡಬೇಕು ಎಂದು ನಿರ್ದೇಶನ ನೀಡಿದ್ದೆ. ಅದರಂತೆ ಕೆಪಿಎಂಇ ಕುಂದುಕೊರತೆ ನಿವಾರಣಾ ಪ್ರಾಧಿಕಾರದ ಅಧ್ಯಕ್ಷರೂ ಆಗಿರುವ ಬೆಂಗಳೂರು ನಗರ ಜಿಲ್ಲಾಧಿಕಾರಿಗಳು 08.10.2026ರಂದು ಆದೇಶ ಹೊರಡಿಸಿದ್ದು, ಜಿಲ್ಲಾ ಆರೋಗ್ಯಾಧಿಕಾರಿಗಳು 12.10.2026ರಂದು ಆಸ್ಪತ್ರೆಗೆ ಅಧಿಕೃತ ಪತ್ರ ಕಳುಹಿಸಿದ್ದಾರೆ ಎಂದು ವಿವರಿಸಿದರು.
ತನಿಖಾ ವರದಿ ಬಳಿಕ ಕ್ರಮದ ಭರವಸೆ
ಮಗುವಿನ ತಂದೆ ನೀಡಿದ ದೂರಿನ ಬಗ್ಗೆ ತಜ್ಞ ವೈದ್ಯರ ತಂಡ ವಿಚಾರಣೆ ನಡೆಸಿದೆ. ಜಿಲ್ಲಾಧಿಕಾರಿಗಳು ಎರಡೂ ಕಡೆಯವರ ವಾದ ಆಲಿಸಿ, ಪ್ರಕರಣವನ್ನು ಕರ್ನಾಟಕ ವೈದ್ಯಕೀಯ ಪರಿಷತ್ (KMC)ಗೆ ಕಳುಹಿಸಿದ್ದಾರೆ. ಕೌನ್ಸಿಲ್‌ನ ತನಿಖಾ ವರದಿ ಬಂದ ನಂತರ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು..ಸಾರ್ವಜನಿಕರಲ್ಲಿ ತಮಗೆ ಆಸ್ಪತ್ರೆಯಲ್ಲಿ ಚಿಕಿತ್ಸೆಯ ವೇಳೆ ತೊಂದರೆ ಆದಲ್ಲಿ ಕರ್ನಾಟಕ ವೈದ್ಯಕೀಯ ಪರಿಷತ್‌ಗೆ ಲಿಖಿತ ದೂರು ನೀಡಬೇಕು.. ಆ ದೂರಿನ ಒಂದು ಪ್ರತಿಯನ್ನು ಸರ್ಕಾರಕ್ಕೂ ಸಲ್ಲಿಸಿದರೆ ನಾವು ಸ್ಪಂದಿಸುತ್ತೇವೆ. ಪುಟ್ಟ ಶಯಾನ್ ಬೇಗ ಗುಣಮುಖನಾಗಲಿ ಎಂದು ಹಾರೈಸುತ್ತೇನೆ. ಈ ಕಷ್ಟದ ಸಮಯದಲ್ಲಿ ಸರ್ಕಾರ ಮಗುವಿನ ಕುಟುಂಬದ ಜೊತೆಗಿದೆ ಎಂದು ಧೈರ್ಯ ನೀಡಿದ್ದಾರೆ.
ಕಿವಿ ಗಾಯ ಹಿನ್ನೆಲೇ ಮಗುವಿಗೆ ನಾಗರಬಾವಿಯ ಕ್ಲೌಡ್‌ನೈನ್ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ಮಾಡಿಸಲಾಗಿತ್ತು. ಈ ವೇಳೆ ವೈದ್ಯರ ನಿರ್ಲಕ್ಷ್ಯದಿಂದಾಗಿ ಒಂದು ವರ್ಷದ ಗಂಡು ಮಗು ಶಯಾನ್ ಕೋಮಾಗೆ ಜಾರಿದ್ದರ ಬಗ್ಗೆ ಆರೋಪಗಳು ಕೇಳಿ ಬಂದವು. ಈ ಆರೋಪಗಳಲ್ಲಿ ಹುರುಳಿಲ್ಲ ಎಂದು ಆಸ್ಪತ್ರೆ ಸ್ಪಷ್ಟಪಡಿಸಿತು. ಬಳಿಕ ಜಯನಗರ ಆಸ್ಪತ್ರೆಗೆ ಮಗುವಿಗೆ ಚಿಕಿತ್ಸೆ ನೀಡಲಾಗುತ್ತಿತ್ತು. ಆಸ್ಪತ್ರೆ ವಿರುದ್ಧ ಸಾರ್ವಜನಿಕ ವಲಯದಲ್ಲಿ ಸಾಕಷ್ಟು ಆಕ್ರೋಶ ಕೇಳಿ ಬಂದಿತ್ತು. ಇದರ ಬೆನ್ನಲ್ಲೆ ಸಚಿವರು ಆಸ್ಪತ್ರೆಗೆ ಭೇಟಿ ನೀಡಿ ಮಗು ಆರೈಕೆ, ಉತ್ತಮ ಚಿಕಿತ್ಸೆ ಭರವಸೆ ನೀಡಿದ್ದಾರೆ.

Generating image…

ಬೇರೆ ಆಸ್ಪತ್ರೆಗೆ ಸ್ಥಳಾಂತರಿಸಿದರೂ ಸಹ, ಚಿಕಿತ್ಸೆಯ ಸಂಪೂರ್ಣ ವೆಚ್ಚವನ್ನು ಇದೇ ಆಸ್ಪತ್ರೆ ಭರಿಸಬೇಕು.
ಯಾವ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿಸಬೇಕು ಎಂಬ ಅಂತಿಮ ತೀರ್ಮಾನವನ್ನು ಪೋಷಕರು ತಮ್ಮ ಕುಟುಂಬದವರೊಂದಿಗೆ ಹಾಗೂ ವೈದ್ಯರೊಂದಿಗೆ ಚರ್ಚಿಸಿ ತೆಗೆದುಕೊಳ್ಳಲಿದ್ದಾರೆ.

ಈ ಹಿಂದೆ ಮಗುವಿನ ಕುಟುಂಬದವರು ನನ್ನನ್ನು ಭೇಟಿ ಮಾಡಿ ತಮ್ಮ ಸಮಸ್ಯೆ ತಿಳಿಸಿದಾಗಲೇ, ಮಗುವಿಗೆ ಸಂಪೂರ್ಣ ಉಚಿತ ಚಿಕಿತ್ಸೆ ನೀಡಬೇಕು ಎಂದು ನಿರ್ದೇಶನ ನೀಡಿದ್ದೆ. ಅದರಂತೆ ಕೆಪಿಎಂಇ ಕುಂದುಕೊರತೆ ನಿವಾರಣಾ ಪ್ರಾಧಿಕಾರದ ಅಧ್ಯಕ್ಷರೂ ಆಗಿರುವ ಬೆಂಗಳೂರು ನಗರ ಜಿಲ್ಲಾಧಿಕಾರಿಗಳು 08.10.2026ರಂದು ಆದೇಶ ಹೊರಡಿಸಿದ್ದು, ಜಿಲ್ಲಾ ಆರೋಗ್ಯಾಧಿಕಾರಿಗಳು 12.10.2026ರಂದು ಆಸ್ಪತ್ರೆಗೆ ಅಧಿಕೃತ ಪತ್ರ ಕಳುಹಿಸಿದ್ದಾರೆ ಎಂದು ವಿವರಿಸಿದರು.

ತನಿಖಾ ವರದಿ ಬಳಿಕ ಕ್ರಮದ ಭರವಸೆ

ಮಗುವಿನ ತಂದೆ ನೀಡಿದ ದೂರಿನ ಬಗ್ಗೆ ತಜ್ಞ ವೈದ್ಯರ ತಂಡ ವಿಚಾರಣೆ ನಡೆಸಿದೆ. ಜಿಲ್ಲಾಧಿಕಾರಿಗಳು ಎರಡೂ ಕಡೆಯವರ ವಾದ ಆಲಿಸಿ, ಪ್ರಕರಣವನ್ನು ಕರ್ನಾಟಕ ವೈದ್ಯಕೀಯ ಪರಿಷತ್ (KMC)ಗೆ ಕಳುಹಿಸಿದ್ದಾರೆ. ಕೌನ್ಸಿಲ್‌ನ ತನಿಖಾ ವರದಿ ಬಂದ ನಂತರ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.
.
ಸಾರ್ವಜನಿಕರಲ್ಲಿ ತಮಗೆ ಆಸ್ಪತ್ರೆಯಲ್ಲಿ ಚಿಕಿತ್ಸೆಯ ವೇಳೆ ತೊಂದರೆ ಆದಲ್ಲಿ ಕರ್ನಾಟಕ ವೈದ್ಯಕೀಯ ಪರಿಷತ್‌ಗೆ ಲಿಖಿತ ದೂರು ನೀಡಬೇಕು.. ಆ ದೂರಿನ ಒಂದು ಪ್ರತಿಯನ್ನು ಸರ್ಕಾರಕ್ಕೂ ಸಲ್ಲಿಸಿದರೆ ನಾವು ಸ್ಪಂದಿಸುತ್ತೇವೆ. ಪುಟ್ಟ ಶಯಾನ್ ಬೇಗ ಗುಣಮುಖನಾಗಲಿ ಎಂದು ಹಾರೈಸುತ್ತೇನೆ. ಈ ಕಷ್ಟದ ಸಮಯದಲ್ಲಿ ಸರ್ಕಾರ ಮಗುವಿನ ಕುಟುಂಬದ ಜೊತೆಗಿದೆ ಎಂದು ಧೈರ್ಯ ನೀಡಿದ್ದಾರೆ.

ಕಿವಿ ಗಾಯ ಹಿನ್ನೆಲೇ ಮಗುವಿಗೆ ನಾಗರಬಾವಿಯ ಕ್ಲೌಡ್‌ನೈನ್ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ಮಾಡಿಸಲಾಗಿತ್ತು. ಈ ವೇಳೆ ವೈದ್ಯರ ನಿರ್ಲಕ್ಷ್ಯದಿಂದಾಗಿ ಒಂದು ವರ್ಷದ ಗಂಡು ಮಗು ಶಯಾನ್ ಕೋಮಾಗೆ ಜಾರಿದ್ದರ ಬಗ್ಗೆ ಆರೋಪಗಳು ಕೇಳಿ ಬಂದವು. ಈ ಆರೋಪಗಳಲ್ಲಿ ಹುರುಳಿಲ್ಲ ಎಂದು ಆಸ್ಪತ್ರೆ ಸ್ಪಷ್ಟಪಡಿಸಿತು. ಬಳಿಕ ಜಯನಗರ ಆಸ್ಪತ್ರೆಗೆ ಮಗುವಿಗೆ ಚಿಕಿತ್ಸೆ ನೀಡಲಾಗುತ್ತಿತ್ತು. ಆಸ್ಪತ್ರೆ ವಿರುದ್ಧ ಸಾರ್ವಜನಿಕ ವಲಯದಲ್ಲಿ ಸಾಕಷ್ಟು ಆಕ್ರೋಶ ಕೇಳಿ ಬಂದಿತ್ತು. ಇದರ ಬೆನ್ನಲ್ಲೆ ಸಚಿವರು ಆಸ್ಪತ್ರೆಗೆ ಭೇಟಿ ನೀಡಿ ಮಗು ಆರೈಕೆ, ಉತ್ತಮ ಚಿಕಿತ್ಸೆ ಭರವಸೆ ನೀಡಿದ್ದಾರೆ.

Editor Reporter
kannadasakshi.in

ಶಸ್ತ್ರಚಿಕಿತ್ಸೆ ವೇಳೆ ಮಗು ಕೋಮಾಗೆ ಜಾರಿದ ಕೇಸ್: ಆಸ್ಪತ್ರೆಯ ತೊಂದರೆಗಳಿಗೆ ದೂರು ನೀಡಲು ಯುಟಿ ಖಾದರ್ ಸೂಚನೆ..

ಕಿವಿ ಗಾಯದ ಶಸ್ತ್ರಚಿಕಿತ್ಸೆ ವೇಳೆ ಮಗು ಕೋಮಾಗೆ ಜಾರಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಗರದ ಕ್ಲೌಡ್‌ನೈನ್ ಆಸ್ಪತ್ರೆಯು ಸ್ಪಷ್ಟನೆ ನೀಡಿದ ಬೆನ್ನಲ್ಲೇ ಇಂದು ಸೋಮವಾರ ಜಯನಗರದ ಆಸ್ಪತ್ರೆಗೆ ಆರೋಗ್ಯ ಸಚಿವ ಯು.ಟಿ ಖಾದರ್ ದಿಢೀರ್ ಭೇಟಿ ನೀಡಿದರು. ಯಾವುದೇ ಆಸ್ಪತ್ರೆಯಲ್ಲಿ ಚಿಕಿತ್ಸೆಯ ವೇಳೆ ತೊಂದರೆಯಾದರೆ, ಕರ್ನಾಟಕ ವೈದ್ಯಕೀಯ ಪರಿಷತ್‌ಗೆ ಲಿಖಿತ ದೂರು ನೀಡಿ. ಆ ದೂರಿನ ಒಂದು ಪ್ರತಿಯನ್ನು ಸರ್ಕಾರಕ್ಕೂ ಸಲ್ಲಿಸುವಂತೆ ಸಚಿವರು ತಿಳಿಸಿದರು.
ಇಂದು ಜಯನಗರದ ಕ್ಲೌಡ್‌ನೈನ್ ಆಸ್ಪತ್ರೆಗೆ ಭೇಟಿ ನೀಡಿ, ಆಪರೇಷನ್ ಬಳಿಕ ಕೋಮಾ ಸ್ಥಿತಿಗೆ ಹೋಗಿರುವ ಪುಟ್ಟ ಮಗು ಶಯಾನ್‌ನ ಆರೋಗ್ಯ ಸ್ಥಿತಿ ಪರಿಶೀಲಿಸಿ ಮಾತನಾಡಿದರು. ಮಗು ಕಣ್ಣು ತೆರೆದಿರುವುದನ್ನು ಗಮನಿಸಿದೆ. ಮಗುವಿನ ಈಗಿನ ಸ್ಥಿತಿ ಹಾಗೂ ಮುಂದಿನ ಚಿಕಿತ್ಸೆಯ ಬಗ್ಗೆ ವೈದ್ಯರಿಂದ ಸಂಪೂರ್ಣ ಮಾಹಿತಿ ಪಡೆದಿದ್ದೇನೆ ಎಂದರು.
ಮಗುವಿಗೆ ಉತ್ತಮ ಚಿಕಿತ್ಸೆಗೆ ಅದ್ಯತೆ
ಮಗುವಿನ ಪೋಷಕರು, ಆಸ್ಪತ್ರೆಯ ಮುಖ್ಯಸ್ಥರು ಹಾಗೂ ವೈದ್ಯರೊಂದಿಗೆ ಜಂಟಿ ಸಭೆ ನಡೆಸಿ ಕೆಲವು ಸ್ಪಷ್ಟ ಸೂಚನೆಗಳನ್ನು ನೀಡಿದ್ದೇನೆ. ಮಗುವಿನ ಸಂಪೂರ್ಣ ವೈದ್ಯಕೀಯ ವರದಿಯನ್ನು ಅಧ್ಯಯನ ಮಾಡಿ, ಈಗಿನ ಸ್ಥಿತಿ ಮತ್ತು ಮುಂದೆ ಏನು ಮಾಡಬಹುದು ಎಂಬುದನ್ನು ಪೋಷಕರಿಗೆ ಸ್ಪಷ್ಟವಾಗಿ ತಿಳಿಸಬೇಕು. ಇದಕ್ಕಿಂತ ಉತ್ತಮ ಚಿಕಿತ್ಸೆ ಬೇರೆ ಯಾವುದೇ ಆಸ್ಪತ್ರೆಯಲ್ಲಿ ಅಥವಾ ಯಾವುದೇ ತಜ್ಞ ವೈದ್ಯರಿಂದ ಸಿಗುವುದಾದರೆ, ಮಗುವನ್ನು ಅಲ್ಲಿಗೆ ಸ್ಥಳಾಂತರಿಸಬಹುದು ಎಂದು ಹೇಳಿದರು.
ಬೇರೆ ಆಸ್ಪತ್ರೆಗೆ ಸ್ಥಳಾಂತರಿಸಿದರೂ ಸಹ, ಚಿಕಿತ್ಸೆಯ ಸಂಪೂರ್ಣ ವೆಚ್ಚವನ್ನು ಇದೇ ಆಸ್ಪತ್ರೆ ಭರಿಸಬೇಕು.ಯಾವ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿಸಬೇಕು ಎಂಬ ಅಂತಿಮ ತೀರ್ಮಾನವನ್ನು ಪೋಷಕರು ತಮ್ಮ ಕುಟುಂಬದವರೊಂದಿಗೆ ಹಾಗೂ ವೈದ್ಯರೊಂದಿಗೆ ಚರ್ಚಿಸಿ ತೆಗೆದುಕೊಳ್ಳಲಿದ್ದಾರೆ.
ಈ ಹಿಂದೆ ಮಗುವಿನ ಕುಟುಂಬದವರು ನನ್ನನ್ನು ಭೇಟಿ ಮಾಡಿ ತಮ್ಮ ಸಮಸ್ಯೆ ತಿಳಿಸಿದಾಗಲೇ, ಮಗುವಿಗೆ ಸಂಪೂರ್ಣ ಉಚಿತ ಚಿಕಿತ್ಸೆ ನೀಡಬೇಕು ಎಂದು ನಿರ್ದೇಶನ ನೀಡಿದ್ದೆ. ಅದರಂತೆ ಕೆಪಿಎಂಇ ಕುಂದುಕೊರತೆ ನಿವಾರಣಾ ಪ್ರಾಧಿಕಾರದ ಅಧ್ಯಕ್ಷರೂ ಆಗಿರುವ ಬೆಂಗಳೂರು ನಗರ ಜಿಲ್ಲಾಧಿಕಾರಿಗಳು 08.10.2026ರಂದು ಆದೇಶ ಹೊರಡಿಸಿದ್ದು, ಜಿಲ್ಲಾ ಆರೋಗ್ಯಾಧಿಕಾರಿಗಳು 12.10.2026ರಂದು ಆಸ್ಪತ್ರೆಗೆ ಅಧಿಕೃತ ಪತ್ರ ಕಳುಹಿಸಿದ್ದಾರೆ ಎಂದು ವಿವರಿಸಿದರು.
ತನಿಖಾ ವರದಿ ಬಳಿಕ ಕ್ರಮದ ಭರವಸೆ
ಮಗುವಿನ ತಂದೆ ನೀಡಿದ ದೂರಿನ ಬಗ್ಗೆ ತಜ್ಞ ವೈದ್ಯರ ತಂಡ ವಿಚಾರಣೆ ನಡೆಸಿದೆ. ಜಿಲ್ಲಾಧಿಕಾರಿಗಳು ಎರಡೂ ಕಡೆಯವರ ವಾದ ಆಲಿಸಿ, ಪ್ರಕರಣವನ್ನು ಕರ್ನಾಟಕ ವೈದ್ಯಕೀಯ ಪರಿಷತ್ (KMC)ಗೆ ಕಳುಹಿಸಿದ್ದಾರೆ. ಕೌನ್ಸಿಲ್‌ನ ತನಿಖಾ ವರದಿ ಬಂದ ನಂತರ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು..ಸಾರ್ವಜನಿಕರಲ್ಲಿ ತಮಗೆ ಆಸ್ಪತ್ರೆಯಲ್ಲಿ ಚಿಕಿತ್ಸೆಯ ವೇಳೆ ತೊಂದರೆ ಆದಲ್ಲಿ ಕರ್ನಾಟಕ ವೈದ್ಯಕೀಯ ಪರಿಷತ್‌ಗೆ ಲಿಖಿತ ದೂರು ನೀಡಬೇಕು.. ಆ ದೂರಿನ ಒಂದು ಪ್ರತಿಯನ್ನು ಸರ್ಕಾರಕ್ಕೂ ಸಲ್ಲಿಸಿದರೆ ನಾವು ಸ್ಪಂದಿಸುತ್ತೇವೆ. ಪುಟ್ಟ ಶಯಾನ್ ಬೇಗ ಗುಣಮುಖನಾಗಲಿ ಎಂದು ಹಾರೈಸುತ್ತೇನೆ. ಈ ಕಷ್ಟದ ಸಮಯದಲ್ಲಿ ಸರ್ಕಾರ ಮಗುವಿನ ಕುಟುಂಬದ ಜೊತೆಗಿದೆ ಎಂದು ಧೈರ್ಯ ನೀಡಿದ್ದಾರೆ.
ಕಿವಿ ಗಾಯ ಹಿನ್ನೆಲೇ ಮಗುವಿಗೆ ನಾಗರಬಾವಿಯ ಕ್ಲೌಡ್‌ನೈನ್ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ಮಾಡಿಸಲಾಗಿತ್ತು. ಈ ವೇಳೆ ವೈದ್ಯರ ನಿರ್ಲಕ್ಷ್ಯದಿಂದಾಗಿ ಒಂದು ವರ್ಷದ ಗಂಡು ಮಗು ಶಯಾನ್ ಕೋಮಾಗೆ ಜಾರಿದ್ದರ ಬಗ್ಗೆ ಆರೋಪಗಳು ಕೇಳಿ ಬಂದವು. ಈ ಆರೋಪಗಳಲ್ಲಿ ಹುರುಳಿಲ್ಲ ಎಂದು ಆಸ್ಪತ್ರೆ ಸ್ಪಷ್ಟಪಡಿಸಿತು. ಬಳಿಕ ಜಯನಗರ ಆಸ್ಪತ್ರೆಗೆ ಮಗುವಿಗೆ ಚಿಕಿತ್ಸೆ ನೀಡಲಾಗುತ್ತಿತ್ತು. ಆಸ್ಪತ್ರೆ ವಿರುದ್ಧ ಸಾರ್ವಜನಿಕ ವಲಯದಲ್ಲಿ ಸಾಕಷ್ಟು ಆಕ್ರೋಶ ಕೇಳಿ ಬಂದಿತ್ತು. ಇದರ ಬೆನ್ನಲ್ಲೆ ಸಚಿವರು ಆಸ್ಪತ್ರೆಗೆ ಭೇಟಿ ನೀಡಿ ಮಗು ಆರೈಕೆ, ಉತ್ತಮ ಚಿಕಿತ್ಸೆ ಭರವಸೆ ನೀಡಿದ್ದಾರೆ.

Share ePaper Clip

Preparing image...

   SHARE  

Facebook
Twitter
Telegram
WhatsApp

   TOP NEWS  

   RECENT NEWS