ನಮ್ಮ ಮೆಟ್ರೋ ಪ್ರಯಾಣಿಕರಿಗೆ ಮತ್ತೊಂದು ಗುಡ್ ನ್ಯೂಸ್ ಸಿಕ್ಕಿದೆ. ನ.16 ರಿಂದ ಹಳದಿ ಮಾರ್ಗದಲ್ಲಿ ಪ್ರಯಾಣಿಕರ ಸೇವೆಗೆ ಹೆಚ್ಚುವರಿ ರೈಲು ಸೇರ್ಪಡೆಯಾಗಿದೆ.
ಬಿಎಂಆರ್‌ಸಿಎಲ್ ನ.16ರಿಂದ ನಮ್ಮ ಮೆಟ್ರೋದ ಹಳದಿ ಮಾರ್ಗದಲ್ಲಿ ಪ್ರಯಾಣಿಕರ ಸೇವೆಗೆ ಒಂದು ಹೆಚ್ಚುವರಿ ರೈಲನ್ನು ಸೇರ್ಪಡೆಗೊಳಿಸಲಾಗುತ್ತಿದೆ ಎಂದು ಸಾರ್ವಜನಿಕರಿಗೆ ತಿಳಿಸಲು ಹರ್ಷಿಸುತ್ತದೆ. ಈ ಹೆಚ್ಚುವರಿ ರೈಲಿನ ಸೇರ್ಪಡೆಯೊಂದಿಗೆ ಹಳದಿ ಮಾರ್ಗದಲ್ಲಿ ಪ್ರತಿದಿನ ಒಟ್ಟು 13 ರೈಲುಗಳು ಸಂಚರಿಸಲಿದ್ದು, ರೈಲುಗಳ ಸಂಚಾರದ ಆವರ್ತನವನ್ನು ಹೆಚ್ಚಿಸುವ ಮೂಲಕ ಪ್ರಯಾಣಿಕರ ಕಾಯುವ ಸಮಯವನ್ನು ಕಡಿಮೆ ಮಾಡಲಾಗುವುದು.
ಸೋಮವಾರದಿಂದ ಶುಕ್ರವಾರದವರೆಗೆ
ದಟ್ಟಣೆಯ ಅವಧಿಯಲ್ಲಿ: ಪ್ರಸ್ತುತ ಇರುವ 6 ನಿಮಿಷಗಳ ಅಂತರದ ಬದಲಾಗಿ ಪ್ರತಿ 5.5 ನಿಮಿಷಗಳಿಗೊಮ್ಮೆ ರೈಲುಗಳು ಸಂಚರಿಸಲಿವೆ.
ದಟ್ಟಣೆಯೇತರ ಅವಧಿಯಲ್ಲಿ: ಪ್ರತಿ 10 ನಿಮಿಷಗಳಿಗೊಮ್ಮೆ ರೈಲುಗಳು ಸಂಚರಿಸಲಿವೆ.
ಶನಿವಾರ ಮತ್ತು ಭಾನುವಾರ
ವಾರಾಂತ್ಯದ ದಿನಗಳಲ್ಲಿ ಎಂದಿನಂತೆ ದಿನವಿಡೀ ಪ್ರತಿ 10 ನಿಮಿಷಗಳಿಗೊಮ್ಮೆ ರೈಲುಗಳು ಸಂಚರಿಸಲಿವೆ.
ವಾರದ ಯಾವುದೇ ದಿನಗಳಲ್ಲಿ ಹಳದಿ ಮಾರ್ಗದ ಕೊನೆಯ ನಿಲ್ದಾಣಗಳಾದ ಆರ್.ವಿ. ರಸ್ತೆ ಮತ್ತು ಬೊಮ್ಮಸಂದ್ರ ಮೆಟ್ರೋ ನಿಲ್ದಾಣಗಳಿಂದ ಹೊರಡುವ ಮೊದಲ ಮತ್ತು ಕೊನೆಯ ರೈಲುಗಳ ಸಮಯದಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ. ಪ್ರಯಾಣಿಕರು ಪರಿಷ್ಕೃತ ರೈಲು ಸಂಚಾರದ ಆವರ್ತನವನ್ನು ಗಮನದಲ್ಲಿಟ್ಟುಕೊಂಡು, ಸುಧಾರಿತ ಮೆಟ್ರೋ ಸೇವೆಗಳ ಸದುಪಯೋಗ ಪಡೆದುಕೊಳ್ಳುವಂತೆ ಬಿಎಂಆರ್‌ಸಿಎಲ್ ಮನವಿ ಮಾಡುತ್ತದೆ.









