ನಿತೇಶ್ ತಿವಾರಿ (Nitesh Tiwari) ನಿರ್ದೇಶನದ `ರಾಮಾಯಣ’ (Ramayana) ಬಾಕ್ಸ್ ಆಫೀಸ್ ಭರ್ಜರಿ ಪ್ರದರ್ಶನ ಮುಂದುವರಿಸಿದೆ. ಬಿಡುಗಡೆಯಾದ 7 ದಿನದಲ್ಲಿ 900 ಕೋಟಿ ರೂ. ಕಲೆಕ್ಷನ್ ದಾಟಿದ್ದು, 1000 ಕೋಟಿಯತ್ತ ದಾಪುಗಾಲು ಇಟ್ಟಿದೆ.
ರಣಬೀರ್ ಕಪೂರ್, ಸಾಯಿ ಪಲ್ಲವಿ ಮತ್ತು ಯಶ್ ನಟನೆಯ `ರಾಮಾಯಣ: ಭಾಗ 1′ ಪೌರಾಣಿಕ ಮಹಾಕಾವ್ಯವು ಏಳು ದಿನಗಳಲ್ಲಿ ಜಾಗತಿಕ ಮಟ್ಟದಲ್ಲಿ ಒಟ್ಟು 934.55 ಕೋಟಿ ರೂ. ಗಳಿಸಿದೆ. ಭಾರತದಲ್ಲಿ 511.10 ಕೋಟಿ ರೂ. ನೆಟ್ ಗಳಿಕೆ ಬಾಚಿಕೊಂಡಿದೆ.
ದೀಪಾವಳಿ ಹಬ್ಬದ ರಜೆಗಳು ಮುಗಿದರೂ ಸಹ ಚಿತ್ರಮಂದಿರಗಳಲ್ಲಿ ಕ್ರೇಜ್ ಕಡಿಮೆ ಆಗಿಲ್ಲ ಬುಧವಾರದಂದು ದೇಶಾದ್ಯಂತ ಒಟ್ಟು 24,239 ಪ್ರದರ್ಶನಗಳಿಂದ ಸಿನಿಮಾ 70.65 ಕೋಟಿ ನೆಟ್ ಗಳಿಕೆ ಮಾಡಿದೆ. ಎಂಟನೇ ದಿನವೂ ಎಪ್ಪತ್ತಕ್ಕೂ ಕೋಟಿಗೂ ಅಧಿಕ ಹಣ ಬರುವ ನಿರೀಕ್ಷೆ ಇದೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸಿನಿಮಾ ತನ್ನ ಪಾರುಪತ್ಯ ಮುಂದುವರಿಸಿದ್ದು. ಯಶ್ ಮತ್ತು ಚಿತ್ರತಂಡವು ತಮ್ಮ ಶ್ರಮಕ್ಕೆ ತಕ್ಕ ಫಲವನ್ನೇ ಪಡೆದುಕೊಳ್ಳುತ್ತಿದೆ.
ಏಳನೇ ದಿನದಂದು ಹಿಂದಿ ಆವೃತ್ತಿಯು ಚಿತ್ರದ ದೇಶೀಯ ಗಳಿಕೆಯಲ್ಲಿ ಮುಂಚೂಣಿಯಲ್ಲಿದ್ದು, 58 ಕೋಟಿ ರೂ. ಸಂಗ್ರಹಿಸಿದೆ. ಕನ್ನಡವು 4.50 ಕೋಟಿ ರೂ. ಕೊಡುಗೆ ನೀಡಿದೆ. ಆದರೆ ತೆಲುಗು ಮತ್ತು ಮಲಯಾಳಂ ತಲಾ ರೂ. 2.75 ಕೋಟಿ ಗಳಿಸಿವೆ. ತಮಿಳು ಆವೃತ್ತಿಯು ಒಟ್ಟು ಮೊತ್ತಕ್ಕೆ 2.65 ಕೋಟಿ ರೂ. ಸೇರಿಸಿದೆ
ಒಟ್ಟಾರೆ ಭಾಷಾವಾರು ಸಂಗ್ರಹವನ್ನು ಗಮನಿಸಿದರೆ, ಹಿಂದಿ ಭಾಷೆಯು 394 ಕೋಟಿ ರೂ. ಕೊಡುಗೆ ನೀಡಿದ್ದು, ಇದು ಚಿತ್ರದ ಭಾರತದ ನೆಟ್ ಗಳಿಕೆಯ ಶೇ.77.1 ರಷ್ಟಿದೆ. ಕನ್ನಡವು 45.70 ಕೋಟಿ ರೂ., ತೆಲುಗು 35.75 ಕೋಟಿ ರೂ. ಗಳಿಸಿದೆ. ತಮಿಳು ಮತ್ತು ಮಲಯಾಳಂ ಕ್ರಮವಾಗಿ 20 ಕೋಟಿ ರೂ. ಮತ್ತು 15.65 ಕೋಟಿ ರೂ. ಸಂಗ್ರಹಿಸಿವೆ.










