ನವೆಂಬರ್ 1ರಂದು ದೆಹಲಿಯ ರಾಮಲೀಲಾ ಮೈದಾನದಲ್ಲಿ ನಡೆಯಲಿರುವ ಕಾಂಗ್ರೆಸ್ ನೇತೃತ್ವದ ಇಂಡಿಯಾ ಬಣದ ರ್ಯಾಲಿಯ ವಿರುದ್ಧ ಬಿಜೆಪಿ (BJP) ದೆಹಲಿಯಲ್ಲಿ ಶಕ್ತಿ ಪ್ರದರ್ಶನಕ್ಕೆ ಸಜ್ಜಾಗಿದೆ.
ಕಾಂಗ್ರೆಸ್ನ ʻದೆಹಲಿ ಚಲೋʼ ಪ್ರತಿಭಟನಾ ಮೆರವಣಿಗೆಗೆ ಕೌಂಟರ್ ಕೊಡಲು ಸುಮಾರು 5,000 ಜನರನ್ನು ಒಳಗೊಂಡ ಮೆರವಣಿಗೆ ನಡೆಸಲು ಬಿಜೆಪಿ ಮುಂದಾಗಿದೆ. ಜೊತೆಗೆ ಈ ಬೃಹತ್ ಮೆರವಣಿಗೆಯಲ್ಲಿ ʻ1984 ರ ಸಿಖ್ ವಿರೋಧಿ ಗಲಭೆʼಯ ಸಂತ್ರಸ್ತ ಕುಟುಂಬದ ಸದಸ್ಯರು ಸಹ ಭಾಗವಹಿಸುವ ನಿರೀಕ್ಷೆಯಿದ್ದು, ಬಿಜೆಪಿಯ ಈ ಪ್ರತಿದಾಳಿಯ ಪ್ರಮುಖ ಆಕರ್ಷಣೆಯಾಗಿದೆ.
ಈ ಮೆರವಣಿಗೆಯನ್ನು ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ ನೇತೃತ್ವ ವಹಿಸಲಿದ್ದು, ಭಾನುವಾರ (ನವೆಂಬರ್ 1) ಬೆಳಿಗ್ಗೆ 11 ಗಂಟೆಗೆ ದೆಹಲಿಯ ಹರಿ ನಗರದಲ್ಲಿ ಮೆರವಣಿಗೆ ನಡೆಯಲಿದೆ. ಪಕ್ಷದ ಹಿರಿಯ ಸಿಖ್ ನಾಯಕರು ಸೇರಿದಂತೆ ಹಲವಾರು ಪ್ರಮುಖ ಬಿಜೆಪಿ ನಾಯಕರು ಈ ಕಾರ್ಯಕ್ರಮದಲ್ಲಿ ಭಾಗವಹಿಸುವ ನಿರೀಕ್ಷೆಯಿದೆ.l
ಕಾಂಗ್ರೆಸ್ ತನ್ನ ರ್ಯಾಲಿ ಮೂಲಕ ದೇಶದ ಗಮನ ಸೆಳೆಯಲು ಮುಂದಾಗಿರುವಾಗ 1984ರ ಸಿಖ್ ವಿರೋಧಿ ಗಲಭೆಯ ಹಿಂಸಾಚಾರವನ್ನು ನೆನಪಿಸಲು ಬಿಜೆಪಿ ಸಿದ್ಧತೆ ನಡೆಸುತ್ತಿದೆ.










