ಎತ್ತಿನಹೊಳೆ ಯೋಜನೆಗೆ ಬೈರಗೊಂಡ್ಲು ಜಲಾಶಯವೇ ಬೇಕು! ಸರ್ಕಾರಕ್ಕೆ ಕೆ. ಸುಧಾಕರ್‌ ಖಡಕ್ ಆಗ್ರಹ..

ಸುದ್ದಿ ಮತ್ತು ಪ್ರಕಟಣೆಗಳಿಗಾಗಿ:
9000144466
kannadasakshi.in

ಎತ್ತಿನಹೊಳೆ ಯೋಜನೆಗೆ ಬೈರಗೊಂಡ್ಲು ಜಲಾಶಯವೇ ಬೇಕು! ಸರ್ಕಾರಕ್ಕೆ ಕೆ. ಸುಧಾಕರ್‌ ಖಡಕ್ ಆಗ್ರಹ..

08 Nov 2026, 7:59 am KANNADA SAKSHI

ಎತ್ತಿನಹೊಳೆ ಯೋಜನೆಯಲ್ಲಿ ಬೈರಗೊಂಡ್ಲು ಜಲಾಶಯವನ್ನು ಹಿಂದಿನ ವಿನ್ಯಾಸದಂತೆಯೇ ನಿರ್ಮಿಸುವ ಬದಲು ಹೊಸ ಕಡೆ ನಿರ್ಮಿಸಿ ರೈತರನ್ನು ವಂಚಿಸಲಾಗುತ್ತಿದೆ. ಹಿಂದಿನ ವಿನ್ಯಾಸದಂತೆ ಜಲಾಶಯ ನಿರ್ಮಿಸಿದರೆ ಇಡೀ ವರ್ಷ ರೈತರಿಗೆ ನೀರು ನೀಡಬಹುದು. ಆದ್ದರಿಂದ ಸರ್ಕಾರ ಹಳೆ ವಿನ್ಯಾಸದಂತೆಯೇ 6 ಟಿಎಂಸಿ ನೀರು ಸಂಗ್ರಹ ಸಾಮರ್ಥ್ಯದ ಬೈರಗೊಂಡ್ಲು ಜಲಾಶಯವನ್ನು ನಿರ್ಮಿಸಬೇಕು ಎಂದು ಸಂಸದ ಡಾ.ಕೆ.ಸುಧಾಕರ್ ಆಗ್ರಹಿಸಿದ್ದಾರೆ.
ಎತ್ತಿನಹೊಳೆ ಯೋಜನೆ ಅನುಷ್ಠಾನಕ್ಕೆ ಸಂಬಂಧಿಸಿದಂತೆ, ವಿಶ್ವೇಶ್ವರಯ್ಯ ಜಲ ನಿಗಮ ನಿಯಮಿತದ ಅಧಿಕಾರಿಗಳೊಂದಿಗೆ ಅವರು ಸಭೆ ನಡೆಸಿದರು. ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಹಾಗೂ ಕೋಲಾರ ಭಾಗಕ್ಕೆ ಶೀಘ್ರವಾಗಿ ನೀರು ಹರಿಸುವ ಕುರಿತು ಕ್ರಮ ವಹಿಸಬೇಕಿದ್ದು, ಇದಕ್ಕಾಗಿ ಕಾಮಗಾರಿಗಳನ್ನು ಚುರುಕುಗೊಳಿಸಬೇಕಿದೆ. ಕಾಲಕಾಲಕ್ಕೆ ಅನುದಾನ ಬಿಡುಗಡೆ ಮಾಡಿ ಗುತ್ತಿಗೆದಾರರಿಗೆ ಬಾಕಿ ಪಾವತಿಸಿ ಕಾಮಗಾರಿ ಸ್ಥಗಿತವಾಗದಂತೆ ಎಚ್ಚರ ವಹಿಸಬೇಕು.

ಎತ್ತಿನಹೊಳೆ ನೀರಿಗಾಗಿ ಕಾಯುತ್ತಿದ್ದಾರೆ
ಭೂ ಸ್ವಾಧೀನ ಪ್ರಕ್ರಿಯೆಯನ್ನು ಕೂಡ ಶೀಘ್ರವಾಗಿ ಮುಗಿಸಬೇಕು. ಈ ಭಾಗದ ಜನರು ಎತ್ತಿನಹೊಳೆ ನೀರಿಗಾಗಿ ಕಾಯುತ್ತಿದ್ದಾರೆ. ಈ ಬಾರಿ ಬರಗಾಲದಿಂದಾಗಿ ನೀರಿನ ಇನ್ನಷ್ಟು ಕೊರತೆ ಉಂಟಾಗಿರುವುದರಿಂದ ಈ ಶಾಶ್ವತ ನೀರಾವರಿ ಯೋಜನೆಯನ್ನು ಬೇಗ ಪೂರ್ಣಗೊಳಿಸಲು ಕ್ರಮ ವಹಿಸಬೇಕು ಎಂದು ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಕಾಂಗ್ರೆಸ್‌ ಸರ್ಕಾರ ಎತ್ತಿನಹೊಳೆ ಯೋಜನೆಯಲ್ಲಿನ ತೊಡಕುಗಳನ್ನು ಬದ್ಧತೆಯಿಂದ ನಿವಾರಣೆ ಮಾಡಿದ್ದರೆ, ಈಗಾಗಲೇ ಬಯಲುಸೀಮೆಗೆ ನೀರು ದೊರೆಯುತ್ತಿತ್ತು. ಬೈರಗೊಂಡ್ಲು ಜಲಾಶಯದಲ್ಲಿ 6 ಟಿಎಂಸಿ ನೀರು ಸಂಗ್ರಹವಾಗುತ್ತದೆ. ಆದರೆ ಇದನ್ನು ಕೈ ಬಿಟ್ಟು ದೊಡ್ಡಬಳ್ಳಾಪುರದ ಲಕ್ಕೇನಹಳ್ಳಿಯಲ್ಲಿ 1.6, 1.8 ಟಿಎಂಸಿ ನೀರು ಸಂಗ್ರಹಿಸುವ ಜಲಾಶಯ ನಿರ್ಮಿಸಲು ತೀರ್ಮಾನಿಸಲಾಗಿದೆ.

ಇದರಿಂದಾಗಿ ಮೂರು ಜಿಲ್ಲೆಗಳ ರೈತರಿಗೆ ಮೋಸವಾಗಿದೆ. ಈಗಾಗಲೇ ಬಹಳಷ್ಟು ತಡವಾಗಿದೆ. ಆದ್ದರಿಂದ ಶಾಶ್ವತವಾಗಿ ಇದಕ್ಕೆ ಪರಿಹಾರ ಕಲ್ಪಿಸುವ ಕೆಲಸವನ್ನು ಸರ್ಕಾರ ಮಾಡಬೇಕು. ಮೊದಲಿನಂತೆಯೇ ಬೈರಗೊಂಡ್ಲು ಜಲಾಶಯವನ್ನು ಅದೇ ಸ್ಥಳದಲ್ಲಿ ನಿರ್ಮಿಸಿ ಹೆಚ್ಚು ನೀರು ಸಂಗ್ರಹಿಸಬೇಕು ಎಂದು ಆಗ್ರಹಿಸಿದರು.
ಭೂ ಸ್ವಾಧೀನ ಪ್ರಕ್ರಿಯೆಯನ್ನು ಶೀಘ್ರವಾಗಿ ನಡೆಸಿ
ಎತ್ತಿನಹೊಳೆ ಯೋಜನೆಯಲ್ಲಿ ನೀರು ಸಿಗುವುದರಲ್ಲಿ ನಮ್ಮ ಜಿಲ್ಲೆ ಕೊನೆಯ ಭಾಗದಲ್ಲಿದೆ. ಬಸವರಾಜ ಬೊಮ್ಮಾಯಿ ನೀರಾವರಿ ಸಚಿವರಾಗಿದ್ದಾಗ, ಸದಾನಂದಗೌಡರು ಮುಖ್ಯಮಂತ್ರಿಯಾಗಿದ್ದಾಗ ಇದು ಆರಂಭವಾಗಿತ್ತು. ಬಹಳ ಸುದೀರ್ಘ ಸಮಯವನ್ನು ಇದು ತೆಗೆದುಕೊಂಡಿದೆ. ರಾಜ್ಯ ಸರ್ಕಾರ ಮುಂದಿನ ವರ್ಷವೇ ನೀರು ನೀಡಲಾಗುವುದು ಎಂದು ಹೇಳಿದೆ. ಆದರೆ ಇದು ಸಾಧ್ಯವಾಗಬೇಕೆಂದರೆ ಭೂ ಸ್ವಾಧೀನ ಪ್ರಕ್ರಿಯೆಯನ್ನು ಶೀಘ್ರವಾಗಿ ನಡೆಸಬೇಕಿದೆ. ನಮ್ಮ ಭಾಗ ಮಳೆಯನ್ನೇ ನಂಬಿಕೊಂಡಿದ್ದು, ಸಂಸ್ಕರಿತ ನೀರನ್ನು ಬಳಸುವ ದುಸ್ಥಿತಿ ಇದೆ. ಇಂತಹ ಪರಿಸ್ಥಿತಿಯಲ್ಲಿ ಮೂಲ ವಿನ್ಯಾಸವನ್ನು ಬದಲಿಸಲಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಈ ಜಲಾಶಯದಿಂದ ನೀರನ್ನು ಪಂಪ್‌ ಮಾಡಿ ಕಳುಹಿಸಬೇಕು. ಮಳೆ ಬರುವ ಸಮಯದಲ್ಲಿ ಜಲಾಶಯದಲ್ಲಿ ನೀರು ಸಂಗ್ರಹವಾಗುತ್ತದೆ. ಆದರೆ ಇಡೀ ವರ್ಷ ನೀರು ನೀಡಬೇಕೆಂದರೆ ದೊಡ್ಡ ಜಲಾಶಯದ ಅಗತ್ಯವಿದೆ. ಅದಕ್ಕಾಗಿ ಬೈರಗೊಂಡ್ಲು ಜಲಾಶಯವನ್ನು ನಿರ್ಮಿಸಬೇಕಿತ್ತು. ಆದರೆ ಈ ಸರ್ಕಾರ ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿಲ್ಲ. ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರು ಈ ಜಲಾಶಯದ ನಿರ್ಮಾಣವನ್ನು ಕೈ ಬಿಡಬಾರದು. ಕೇವಲ 1.6 ಟಿಎಂಸಿ ನೀರು ಸಂಗ್ರಹಿಸುವ ಜಲಾಶಯ ನಿರ್ಮಿಸಿದರೆ ಮೂರು ಜಿಲ್ಲೆಗಳಿಗೆ ಅನ್ಯಾಯವಾಗುತ್ತದೆ. ಕನಿಷ್ಠ 5-6 ಟಿಎಂಸಿ ನೀರು ಸಂಗ್ರಹಿಸುವ ಜಲಾಶಯ ನಿರ್ಮಿಸಿದರೆ ಮಾತ್ರ ರೈತರಿಗೆ ಇಡೀ ವರ್ಷ ಅನುಕೂಲವಾಗುತ್ತದೆ ಎಂದು ಸಲಹೆ ನೀಡಿದರು.

ಯೋಜನೆಯನ್ನು ಬೇಗ ಪೂರ್ಣಗೊಳಿಸಲಾಗಿದೆ ಎಂದು ಹೇಳಿಕೊಳ್ಳುವ ರಾಜಕೀಯ ಉದ್ದೇಶದಿಂದ ಕಡಿಮೆ ಸಾಮರ್ಥ್ಯದ ಜಲಾಶಯವನ್ನು ನಿರ್ಮಿಸಿದರೆ ರೈತರಿಗೆ ತೊಂದರೆಯಾಗುತ್ತದೆ. ಅದಕ್ಕಾಗಿ ದೊಡ್ಡಬಳ್ಳಾಪುರ, ಕೊರಟಗೆರೆ ಸೇರಿದಂತೆ ಮುಳುಗಡೆಯಾಗುವ ಪ್ರದೇಶಗಳಲ್ಲಿನ ರೈತರನ್ನು ವಿಶ್ವಾಸಕ್ಕೆ ತೆಗೆದುಕೊಂಡು, ಭೂ ಸ್ವಾಧೀನ ಕಾನೂನಿನಲ್ಲಿ ತಿದ್ದುಪಡಿ ಮಾಡಿ ದೊಡ್ಡ ಜಲಾಶಯವನ್ನು ನಿರ್ಮಿಸಬೇಕು ಎಂದು ಒತ್ತಾಯಿಸಿದರು.
ಭೂ ಸ್ವಾಧೀನಾಧಿಕಾರಿಗಳ ಕೊರತೆ
ಮೂರು ಜಿಲ್ಲೆಗಳಿಗೆ ಒಬ್ಬ ವಿಶೇಷ ಭೂ ಸ್ವಾಧೀನಾಧಿಕಾರಿಯನ್ನು ಸರ್ಕಾರ ನೇಮಿಸಿದೆ. ಹೀಗೆ ಮಾಡಿದರೆ ಅವರು ಪ್ರವಾಸ ಮಾಡಿ ಮಾಹಿತಿ ಸಂಗ್ರಹಿಸುವುದು ಕಷ್ಟವಾಗುತ್ತದೆ. ಇದರ ಬದಲು ಸಹಾಯಕ ಆಯುಕ್ತರಿಗೆ ಭೂ ಸ್ವಾಧೀನ ಮಾಡುವ ಅಧಿಕಾರವನ್ನು ನೀಡಬೇಕು. ಕೇವಲ ಭಾಷಣಗಳನ್ನು ಮಾಡುವುದರಿಂದ ಯೋಜನೆ ಪೂರ್ಣಗೊಳ್ಳುವುದಿಲ್ಲ ಹಾಗೂ ಕಾಮಗಾರಿ ಮುಗಿಯುವುದಿಲ್ಲ. ಬಿಜೆಪಿ ಅವಧಿಯಲ್ಲಿ ಕೋವಿಡ್‌ ಇದ್ದಾಗಲೂ 9,000 ಕೋಟಿ ರೂ. ಯೋಜನೆಗೆ ನೀಡಲಾಗಿದೆ. ಗುತ್ತಿಗೆದಾರರಿಗೆ ಹಣ ನೀಡದಿದ್ದರೆ ಕಾಮಗಾರಿ ಮಾಡಲು ಹೇಗೆ ಸಾಧ್ಯ? ನಮ್ಮ ಜಿಲ್ಲೆಗಳ ಬಗ್ಗೆ ಕಾಳಜಿ ಇದ್ದರೆ ಕೂಡಲೇ ಹೆಚ್ಚು ಅನುದಾನ ನೀಡಬೇಕು ಎಂದು ಒತ್ತಾಯಿಸಿದರು.

ಮಧುಗಿರಿ, ಕೊರಟಗೆರೆ, ತುಮಕೂರು, ಪಾವಗಡ, ಅರಸೀಕೆರೆ, ಕಡೂರು, ಬೇಲೂರು ಸೇರಿದಂತೆ ಹಲವಾರು ತಾಲೂಕುಗಳು ಮಾರ್ಗಮಧ್ಯೆ ಬರುತ್ತದೆ. ಕೊನೆಯಲ್ಲಿ ಚಿಕ್ಕಬಳ್ಳಾಪುರದ ಬಾಗೇಪಲ್ಲಿ, ಚಿಂತಾಮಣಿ, ಕೋಲಾರ ಬರುತ್ತದೆ. 24.1 ಟಿಎಂಸಿ ನೀರನ್ನು ಈ ಎಲ್ಲ ಭಾಗಗಳಿಗೆ ನೀಡಬೇಕಾಗುತ್ತದೆ. ಕಳೆದೆರಡು ವರ್ಷಗಳಲ್ಲಿ 7-8 ಟಿಎಂಸಿ ಮಳೆ ಸುರಿದಿದೆ. ಇಷ್ಟು ಕಡಿಮೆ ನೀರನ್ನು ನೀಡಲು ಹೊರಟರೆ ತುಮಕೂರಿಗೆ ಬರುವಾಗ ನೀರು ಖಾಲಿಯಾಗುತ್ತದೆ. ಆದ್ದರಿಂದ ವೈಜ್ಞಾನಿಕವಾಗಿ ಈ ಬಗ್ಗೆ ವಿಚಾರ ಮಾಡಬೇಕಿದೆ. 8 ಟಿಎಂಸಿ ನೀರು ಮಳೆ ಬಂದಾಗ ಯಾವ ಪ್ರಮಾಣದಲ್ಲಿ ಯಾವ ಜಿಲ್ಲೆಗೆ ನೀರು ನೀಡಬೇಕು ಎಂದು ತೀರ್ಮಾನ ಮಾಡಬೇಕು ಎಂದು ಸಲಹೆ ನೀಡಿದರು.

ಚಿಕ್ಕಬಳ್ಳಾಪುರ, ಕೋಲಾರ, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಿಗೆ ಶಾಶ್ವತ ನೀರಾವರಿ ಕಲ್ಪಿಸಲು ಎತ್ತಿನಹೊಳೆ ಯೋಜನೆ ರೂಪಿಸಲಾಗಿತ್ತು. 2014 ರಲ್ಲಿ ನಾನು ಶಾಸಕನಾಗಿದ್ದಾಗ ನನ್ನ ಅಧ್ಯಕ್ಷತೆಯಲ್ಲೇ ಈ ಯೋಜನೆ ಆರಂಭ ಆಗಿತ್ತು. 12 ವರ್ಷಗಳಾದರೂ ಇದು ಈಡೇರಿಲ್ಲ. ಕೋವಿಡ್‌ ಸಮಯದಲ್ಲೂ ಬಿಜೆಪಿ ಅವಧಿಯಲ್ಲಿ ಮಾಜಿ ಸಿಎಂ ಬಿ.ಎಸ್‌.ಯಡಿಯೂರಪ್ಪ ಹಾಗೂ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಮನವಿ ಮಾಡಿ ಪ್ರತಿ ವರ್ಷ ಈ ಯೋಜನೆಗೆ ಸುಮಾರು ಮೂರು ಸಾವಿರ ಕೋಟಿ ರೂ. ಬಿಡುಗಡೆ ಮಾಡಿಸಿದ್ದೆ. ಹೆಚ್‌.ಎನ್‌.ವ್ಯಾಲಿ ಹಾಗೂ ಕೆಸಿ ವ್ಯಾಲಿ ನೀರು ಕೂಡ ನಮಗೆ ಸಾಲುತ್ತಿಲ್ಲ. ಕಳೆದ ನಾಲ್ಕು ವರ್ಷಗಳಲ್ಲಿ ಅದರಿಂದ ಅನೇಕ ಕೆರೆಗಳನ್ನು ತುಂಬಿಸಿರುವುದರಿಂದ ರೈತರು ನಿಶ್ಚಿಂತೆಯಿಂದ ಇದ್ದರು. ಈ ಬಾರಿ ಬರಗಾಲ ಹೆಚ್ಚಿದ್ದು, ಬೋರ್‌ವೆಲ್‌ನಿಂದಲೂ ನೀರು ಸಿಗುತ್ತಿಲ್ಲ ಎಂದರು.

Generating image…

Editor Reporter

Share ePaper Clip

Preparing image...

   SHARE  

Facebook
Twitter
Telegram
WhatsApp

   TOP NEWS  

   RECENT NEWS