ನ.13ರಂದು ರಾಜ್ಯಕ್ಕೆ ಮೋದಿ ಭೇಟಿ: ಕಾರ್ಯಕ್ರಮಗಳ ಸಂಪೂರ್ಣ ಪಟ್ಟಿ ಇಲ್ಲಿದೆ..

ಸುದ್ದಿ ಮತ್ತು ಪ್ರಕಟಣೆಗಳಿಗಾಗಿ:
9000144466
kannadasakshi.in

ನ.13ರಂದು ರಾಜ್ಯಕ್ಕೆ ಮೋದಿ ಭೇಟಿ: ಕಾರ್ಯಕ್ರಮಗಳ ಸಂಪೂರ್ಣ ಪಟ್ಟಿ ಇಲ್ಲಿದೆ..

12 Nov 2026, 4:48 am KANNADA SAKSHI

ಪ್ರಧಾನಮಂತ್ರಿ ನರೇಂದ್ರ ಮೋದಿ(Narendra Modi) ಅವರು ನವೆಂಬರ್ 13ರಂದು ಕರ್ನಾಟಕಕ್ಕೆ ಭೇಟಿ ನೀಡಲಿದ್ದು, ರಾಜ್ಯದಲ್ಲಿ (Karnataka) 15,000 ಕೋಟಿ ರೂ.ಗೂ ಅಧಿಕ ಮೌಲ್ಯದ ವಿವಿಧ ಅಭಿವೃದ್ಧಿ ಯೋಜನೆಗಳ ಉದ್ಘಾಟನೆ, ಲೋಕಾರ್ಪಣೆ ಹಾಗೂ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.
ಮೋದಿ ಅವರು ಬೆಂಗಳೂರು(Bengaluru) ಮತ್ತು ಮೈಸೂರಿನಲ್ಲಿ (Mysuru) ನಡೆಯಲಿರುವ ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲಿದ್ದಾರೆ. ನಮ್ಮ ಮೆಟ್ರೋ ಪಿಂಕ್ ಲೈನ್ ಲೋಕಾರ್ಪಣೆ, ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿಗೆ ಹಸಿರು ನಿಶಾನೆ ಸೇರಿದಂತೆ ಹಲವು ಅಭಿವೃದ್ಧಿ ಯೋಜನೆಗಳಿಗೆ ಅವರು ಚಾಲನೆ ನೀಡಲಿದ್ದಾರೆ.

ಪ್ರಧಾನಿ ಮೋದಿ ಅವರ ದಿನಪೂರ್ತಿ ಪ್ರವಾಸದ ವೇಳಾಪಟ್ಟಿ ಇಂತಿದೆ:
ಬೆಳಗ್ಗೆ 10.05: ದೆಹಲಿಯಿಂದ ವಿಶೇಷ ವಿಮಾನದ ಮೂಲಕ ಬೆಂಗಳೂರಿನ ಎಚ್‌ಎಎಲ್ (HAL) ವಿಮಾನ ನಿಲ್ದಾಣಕ್ಕೆ ಆಗಮನ.ಬೆಳಗ್ಗೆ 10.45: ಪ್ರಶಾಂತಿ ಕುಟೀರಂ ಸುವರ್ಣ ಮಹೋತ್ಸವ ಕಾರ್ಯಕ್ರಮದಲ್ಲಿ ಭಾಗಿಮಧ್ಯಾಹ್ನ 12.40: ಬೆಂಗಳೂರಿನ ಬನ್ನೇರುಘಟ್ಟ ರಸ್ತೆಯಲ್ಲಿರುವ ಆರ್. ಎ. ಮಂಡೂರ್ಕರ್ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಅಕಾಡೆಮಿಗೆ ಹೆಲಿಕಾಪ್ಟರ್‌ ಮೂಲಕ ಆಗಮನ.
ಮಧ್ಯಾಹ್ನ 12.45: ನಮ್ಮ ಮೆಟ್ರೋ ಪಿಂಕ್ ಲೈನ್ ಲೋಕಾರ್ಪಣೆ ಹಾಗೂ ತಾವರೆಕೆರೆಯಿಂದ ಐಐಎಂಬಿ (IIMB) ನಿಲ್ದಾಣದವರೆಗೆ ಮೆಟ್ರೋದಲ್ಲಿ ಸಂಚಾರ.ಮಧ್ಯಾಹ್ನ 1.15: ಐಐಎಂಬಿ (IIMB) ಆಡಿಟೋರಿಯಂನಲ್ಲಿ ವಿವಿಧ ಅಭಿವೃದ್ಧಿ ಯೋಜನೆಗಳ ಉದ್ಘಾಟನೆ.ಮಧ್ಯಾಹ್ನ 2.00: ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್‌ನಲ್ಲಿ ಬೆಂಗಳೂರು (ಯಶವಂತಪುರ) – ಮಂಗಳೂರು – ಮಡಗಾಂವ್ ವಂದೇ ಭಾರತ್ ರೈಲಿಗೆ ಚಾಲನೆ.
ಮಧ್ಯಾಹ್ನ 2.30: ಹೆಲಿಕಾಪ್ಟರ್ ಮೂಲಕ ಮೈಸೂರಿಗೆ ಪ್ರಯಾಣ.ಮಧ್ಯಾಹ್ನ 3.30: ಮೈಸೂರಿನ ಕೆ.ಸಿ. ಲೇಔಟ್ ಪಾರ್ಕ್‌ನಲ್ಲಿ ‘ಭಾರತ್ ವ್ಯಾನ್’ ಕಾರ್ಯಕ್ರಮದಲ್ಲಿ ಭಾಗಿ.ಸಂಜೆ 4.00: ಮೈಸೂರು ಕಾಸ್ಮಾಸ್ / ಪ್ಲಾನೆಟೋರಿಯಂ ಉದ್ಘಾಟನೆ.ಸಂಜೆ 6.05: ಮೈಸೂರಿನಿಂದ ನೇರವಾಗಿ ದೆಹಲಿಗೆ ವಾಪಸ್ ಪ್ರಯಾಣ.
ಮೋದಿ ಅವರ ಭೇಟಿಯ ವೇಳೆ ಚಾಲನೆ ದೊರೆಯಲಿರುವ ಪ್ರಮುಖ ಯೋಜನೆಗಳ ವಿವರಬೆಂಗಳೂರು ಮೆಟ್ರೋ:ನಮ್ಮ ಮೆಟ್ರೋ ಹಂತ-2 (ಪಿಂಕ್ ಲೈನ್ – ಎಲಿವೇಟೆಡ್ ಮಾರ್ಗ): 3,470 ಕೋಟಿ ರೂ. ವೆಚ್ಚದ ಕಾಳೇನ ಅಗ್ರಹಾರದಿಂದ ಡೈರಿ ಸರ್ಕಲ್‌ವರೆಗಿನ ಮಾರ್ಗದ ಉದ್ಘಾಟನೆ.

ರೈಲ್ವೆ ಸಚಿವಾಲಯ:ವಂದೇ ಭಾರತ್ ಎಕ್ಸ್‌ಪ್ರೆಸ್: ಬೆಂಗಳೂರು-ಮಂಗಳೂರು-ಮಡಗಾಂವ್ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿಗೆ ಹಸಿರು ನಿಶಾನೆ.ರೈಲು ನಿಲ್ದಾಣಗಳ ಪುನರಾಭಿವೃದ್ಧಿ (ಉದ್ಘಾಟನೆ): ಚಾಮರಾಜನಗರ ರೈಲು ನಿಲ್ದಾಣ (22 ಕೋಟಿ ರೂ.), ಚಿಕ್ಕಮಗಳೂರು ನಿಲ್ದಾಣ (22 ಕೋಟಿ ರೂ.), ಸಕಲೇಶಪುರ ನಿಲ್ದಾಣ (19 ಕೋಟಿ ರೂ.) ಹಾಗೂ ಸುಬ್ರಹ್ಮಣ್ಯ ರೋಡ್ ನಿಲ್ದಾಣದ (24 ಕೋಟಿ ರೂ.) ಪುನರಾಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ.ಬಾಗಲಕೋಟೆ-ವಂದಾಲ್ ಜೋಡಿ ಮಾರ್ಗ: ಗದಗ-ಹೊಟಗಿ (284 ಕಿ.ಮೀ) ಜೋಡಿ ಮಾರ್ಗ ಯೋಜನೆಯ ಭಾಗವಾಗಿರುವ 294 ಕೋಟಿ ರೂ. ವೆಚ್ಚದ ಬಾಗಲಕೋಟೆ-ವಂದಾಲ್ (44.6 ಕಿ.ಮೀ) ಜೋಡಿ ರೈಲು ಮಾರ್ಗ ಲೋಕಾರ್ಪಣೆ.ಘಾಟ್ ಸೆಕ್ಷನ್ ವಿದ್ಯುದೀಕರಣ: 100 ಕೋಟಿ ರೂ. ವೆಚ್ಚದ ಸಕಲೇಶಪುರ-ಸುಬ್ರಹ್ಮಣ್ಯ ರೋಡ್ ಘಾಟ್ ವಿಭಾಗದ (55 ಕಿ.ಮೀ) ವಿದ್ಯುದೀಕರಣ ಕಾಮಗಾರಿ ಲೋಕಾರ್ಪಣೆ.
ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ:ಮಂಗಳೂರಿನಲ್ಲಿ ಎಚ್‌ಪಿಸಿಎಲ್ (HPCL) ವತಿಯಿಂದ 854 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿರುವ 80 ಟಿಎಂಟಿ (TMT) ಎಲ್‌ಪಿಜಿ ಸಂಗ್ರಹಣಾ ಭೂಗತ ಘಟಕದ (Storage Cavern) ಉದ್ಘಾಟನೆ.ಬೆಂಗಳೂರಿನಲ್ಲಿ 123.42 ಕೋಟಿ ರೂ. ವೆಚ್ಚದ ಕಂಪ್ರೆಸ್ಡ್ ಬಯೋ-ಗ್ಯಾಸ್ (CBG) ಯೋಜನೆಗೆ ಶಂಕುಸ್ಥಾಪನೆ.ದಕ್ಷಿಣ ಕನ್ನಡದಲ್ಲಿ 330 ಕೋಟಿ ರೂ. ವೆಚ್ಚದ ಎಂಆರ್‌ಪಿಎಲ್ (MRPL) ಮಾರ್ಕೆಟಿಂಗ್ ಟರ್ಮಿನಲ್ ಲೋಕಾರ್ಪಣೆ.
ವಿದ್ಯುತ್ ಸಚಿವಾಲಯ:ಕೊಪ್ಪಳ-2 (ಹಂತ ಎ ಮತ್ತು ಬಿ) ಹಾಗೂ ಗದಗ-2 (ಹಂತ ಎ) ನವೀಕರಿಸಬಹುದಾದ ಇಂಧನ ವಲಯದ (ಹಂತ-2) ಏಕೀಕರಣಕ್ಕಾಗಿ 4,445 ಕೋಟಿ ರೂ. ವೆಚ್ಚದ ಪ್ರಸರಣ ಯೋಜನೆಯ ಉದ್ಘಾಟನೆ.ಬೀದರ್‌ನಲ್ಲಿ 1,368 ಕೋಟಿ ರೂ. ವೆಚ್ಚದ ಸೌರಶಕ್ತಿ ವಲಯದ (2,500 ಮೆಗಾವ್ಯಾಟ್) ಪ್ರಸರಣ ಯೋಜನೆಯ ಉದ್ಘಾಟನೆ.ದಾವಣಗೆರೆ/ಚಿತ್ರದುರ್ಗ ಮತ್ತು ಬಳ್ಳಾರಿ ನವೀಕರಿಸಬಹುದಾದ ಇಂಧನ ವಲಯಗಳ ಏಕೀಕರಣಕ್ಕಾಗಿ 3,453 ಕೋಟಿ ರೂ. ವೆಚ್ಚದ ಪ್ರಸರಣ ಯೋಜನೆಗೆ ಶಂಕುಸ್ಥಾಪನೆ.ದಾವಣಗೆರೆ (0.25 GW) ಮತ್ತು ಬಳ್ಳಾರಿಯಲ್ಲಿ (2.75 GW) ಹೆಚ್ಚುವರಿ ನವೀಕರಿಸಬಹುದಾದ ಇಂಧನ ಸಾಮರ್ಥ್ಯದ ಏಕೀಕರಣಕ್ಕಾಗಿ 1,111 ಕೋಟಿ ರೂ. ವೆಚ್ಚದ ಪ್ರಸರಣ ವ್ಯವಸ್ಥೆ ಬಲವರ್ಧನೆ ಯೋಜನೆಗೆ ಶಂಕುಸ್ಥಾಪನೆ.

Generating image…

Namma Metro Pink Line

ಪ್ರಧಾನಿ ಮೋದಿ ಅವರ ದಿನಪೂರ್ತಿ ಪ್ರವಾಸದ ವೇಳಾಪಟ್ಟಿ ಇಂತಿದೆ:

ಬೆಳಗ್ಗೆ 10.05: ದೆಹಲಿಯಿಂದ ವಿಶೇಷ ವಿಮಾನದ ಮೂಲಕ ಬೆಂಗಳೂರಿನ ಎಚ್‌ಎಎಲ್ (HAL) ವಿಮಾನ ನಿಲ್ದಾಣಕ್ಕೆ ಆಗಮನ.
ಬೆಳಗ್ಗೆ 10.45: ಪ್ರಶಾಂತಿ ಕುಟೀರಂ ಸುವರ್ಣ ಮಹೋತ್ಸವ ಕಾರ್ಯಕ್ರಮದಲ್ಲಿ ಭಾಗಿ
ಮಧ್ಯಾಹ್ನ 12.40: ಬೆಂಗಳೂರಿನ ಬನ್ನೇರುಘಟ್ಟ ರಸ್ತೆಯಲ್ಲಿರುವ ಆರ್. ಎ. ಮಂಡೂರ್ಕರ್ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಅಕಾಡೆಮಿಗೆ ಹೆಲಿಕಾಪ್ಟರ್‌ ಮೂಲಕ ಆಗಮನ.

ಮಧ್ಯಾಹ್ನ 12.45: ನಮ್ಮ ಮೆಟ್ರೋ ಪಿಂಕ್ ಲೈನ್ ಲೋಕಾರ್ಪಣೆ ಹಾಗೂ ತಾವರೆಕೆರೆಯಿಂದ ಐಐಎಂಬಿ (IIMB) ನಿಲ್ದಾಣದವರೆಗೆ ಮೆಟ್ರೋದಲ್ಲಿ ಸಂಚಾರ.
ಮಧ್ಯಾಹ್ನ 1.15: ಐಐಎಂಬಿ (IIMB) ಆಡಿಟೋರಿಯಂನಲ್ಲಿ ವಿವಿಧ ಅಭಿವೃದ್ಧಿ ಯೋಜನೆಗಳ ಉದ್ಘಾಟನೆ.
ಮಧ್ಯಾಹ್ನ 2.00: ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್‌ನಲ್ಲಿ ಬೆಂಗಳೂರು (ಯಶವಂತಪುರ) – ಮಂಗಳೂರು – ಮಡಗಾಂವ್ ವಂದೇ ಭಾರತ್ ರೈಲಿಗೆ ಚಾಲನೆ.

ಮಧ್ಯಾಹ್ನ 2.30: ಹೆಲಿಕಾಪ್ಟರ್ ಮೂಲಕ ಮೈಸೂರಿಗೆ ಪ್ರಯಾಣ.
ಮಧ್ಯಾಹ್ನ 3.30: ಮೈಸೂರಿನ ಕೆ.ಸಿ. ಲೇಔಟ್ ಪಾರ್ಕ್‌ನಲ್ಲಿ ‘ಭಾರತ್ ವ್ಯಾನ್’ ಕಾರ್ಯಕ್ರಮದಲ್ಲಿ ಭಾಗಿ.
ಸಂಜೆ 4.00: ಮೈಸೂರು ಕಾಸ್ಮಾಸ್ / ಪ್ಲಾನೆಟೋರಿಯಂ ಉದ್ಘಾಟನೆ.
ಸಂಜೆ 6.05: ಮೈಸೂರಿನಿಂದ ನೇರವಾಗಿ ದೆಹಲಿಗೆ ವಾಪಸ್ ಪ್ರಯಾಣ.

ಮೋದಿ ಅವರ ಭೇಟಿಯ ವೇಳೆ ಚಾಲನೆ ದೊರೆಯಲಿರುವ ಪ್ರಮುಖ ಯೋಜನೆಗಳ ವಿವರ
ಬೆಂಗಳೂರು ಮೆಟ್ರೋ:
ನಮ್ಮ ಮೆಟ್ರೋ ಹಂತ-2 (ಪಿಂಕ್ ಲೈನ್ – ಎಲಿವೇಟೆಡ್ ಮಾರ್ಗ): 3,470 ಕೋಟಿ ರೂ. ವೆಚ್ಚದ ಕಾಳೇನ ಅಗ್ರಹಾರದಿಂದ ಡೈರಿ ಸರ್ಕಲ್‌ವರೆಗಿನ ಮಾರ್ಗದ ಉದ್ಘಾಟನೆ.

Vande Bharat Express Train

ರೈಲ್ವೆ ಸಚಿವಾಲಯ:
ವಂದೇ ಭಾರತ್ ಎಕ್ಸ್‌ಪ್ರೆಸ್: ಬೆಂಗಳೂರು-ಮಂಗಳೂರು-ಮಡಗಾಂವ್ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿಗೆ ಹಸಿರು ನಿಶಾನೆ.
ರೈಲು ನಿಲ್ದಾಣಗಳ ಪುನರಾಭಿವೃದ್ಧಿ (ಉದ್ಘಾಟನೆ): ಚಾಮರಾಜನಗರ ರೈಲು ನಿಲ್ದಾಣ (22 ಕೋಟಿ ರೂ.), ಚಿಕ್ಕಮಗಳೂರು ನಿಲ್ದಾಣ (22 ಕೋಟಿ ರೂ.), ಸಕಲೇಶಪುರ ನಿಲ್ದಾಣ (19 ಕೋಟಿ ರೂ.) ಹಾಗೂ ಸುಬ್ರಹ್ಮಣ್ಯ ರೋಡ್ ನಿಲ್ದಾಣದ (24 ಕೋಟಿ ರೂ.) ಪುನರಾಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ.
ಬಾಗಲಕೋಟೆ-ವಂದಾಲ್ ಜೋಡಿ ಮಾರ್ಗ: ಗದಗ-ಹೊಟಗಿ (284 ಕಿ.ಮೀ) ಜೋಡಿ ಮಾರ್ಗ ಯೋಜನೆಯ ಭಾಗವಾಗಿರುವ 294 ಕೋಟಿ ರೂ. ವೆಚ್ಚದ ಬಾಗಲಕೋಟೆ-ವಂದಾಲ್ (44.6 ಕಿ.ಮೀ) ಜೋಡಿ ರೈಲು ಮಾರ್ಗ ಲೋಕಾರ್ಪಣೆ.
ಘಾಟ್ ಸೆಕ್ಷನ್ ವಿದ್ಯುದೀಕರಣ: 100 ಕೋಟಿ ರೂ. ವೆಚ್ಚದ ಸಕಲೇಶಪುರ-ಸುಬ್ರಹ್ಮಣ್ಯ ರೋಡ್ ಘಾಟ್ ವಿಭಾಗದ (55 ಕಿ.ಮೀ) ವಿದ್ಯುದೀಕರಣ ಕಾಮಗಾರಿ ಲೋಕಾರ್ಪಣೆ.

ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ:
ಮಂಗಳೂರಿನಲ್ಲಿ ಎಚ್‌ಪಿಸಿಎಲ್ (HPCL) ವತಿಯಿಂದ 854 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿರುವ 80 ಟಿಎಂಟಿ (TMT) ಎಲ್‌ಪಿಜಿ ಸಂಗ್ರಹಣಾ ಭೂಗತ ಘಟಕದ (Storage Cavern) ಉದ್ಘಾಟನೆ.
ಬೆಂಗಳೂರಿನಲ್ಲಿ 123.42 ಕೋಟಿ ರೂ. ವೆಚ್ಚದ ಕಂಪ್ರೆಸ್ಡ್ ಬಯೋ-ಗ್ಯಾಸ್ (CBG) ಯೋಜನೆಗೆ ಶಂಕುಸ್ಥಾಪನೆ.
ದಕ್ಷಿಣ ಕನ್ನಡದಲ್ಲಿ 330 ಕೋಟಿ ರೂ. ವೆಚ್ಚದ ಎಂಆರ್‌ಪಿಎಲ್ (MRPL) ಮಾರ್ಕೆಟಿಂಗ್ ಟರ್ಮಿನಲ್ ಲೋಕಾರ್ಪಣೆ.

ವಿದ್ಯುತ್ ಸಚಿವಾಲಯ:
ಕೊಪ್ಪಳ-2 (ಹಂತ ಎ ಮತ್ತು ಬಿ) ಹಾಗೂ ಗದಗ-2 (ಹಂತ ಎ) ನವೀಕರಿಸಬಹುದಾದ ಇಂಧನ ವಲಯದ (ಹಂತ-2) ಏಕೀಕರಣಕ್ಕಾಗಿ 4,445 ಕೋಟಿ ರೂ. ವೆಚ್ಚದ ಪ್ರಸರಣ ಯೋಜನೆಯ ಉದ್ಘಾಟನೆ.
ಬೀದರ್‌ನಲ್ಲಿ 1,368 ಕೋಟಿ ರೂ. ವೆಚ್ಚದ ಸೌರಶಕ್ತಿ ವಲಯದ (2,500 ಮೆಗಾವ್ಯಾಟ್) ಪ್ರಸರಣ ಯೋಜನೆಯ ಉದ್ಘಾಟನೆ.
ದಾವಣಗೆರೆ/ಚಿತ್ರದುರ್ಗ ಮತ್ತು ಬಳ್ಳಾರಿ ನವೀಕರಿಸಬಹುದಾದ ಇಂಧನ ವಲಯಗಳ ಏಕೀಕರಣಕ್ಕಾಗಿ 3,453 ಕೋಟಿ ರೂ. ವೆಚ್ಚದ ಪ್ರಸರಣ ಯೋಜನೆಗೆ ಶಂಕುಸ್ಥಾಪನೆ.
ದಾವಣಗೆರೆ (0.25 GW) ಮತ್ತು ಬಳ್ಳಾರಿಯಲ್ಲಿ (2.75 GW) ಹೆಚ್ಚುವರಿ ನವೀಕರಿಸಬಹುದಾದ ಇಂಧನ ಸಾಮರ್ಥ್ಯದ ಏಕೀಕರಣಕ್ಕಾಗಿ 1,111 ಕೋಟಿ ರೂ. ವೆಚ್ಚದ ಪ್ರಸರಣ ವ್ಯವಸ್ಥೆ ಬಲವರ್ಧನೆ ಯೋಜನೆಗೆ ಶಂಕುಸ್ಥಾಪನೆ.

Editor Reporter
kannadasakshi.in

ನ.13ರಂದು ರಾಜ್ಯಕ್ಕೆ ಮೋದಿ ಭೇಟಿ: ಕಾರ್ಯಕ್ರಮಗಳ ಸಂಪೂರ್ಣ ಪಟ್ಟಿ ಇಲ್ಲಿದೆ..

ಪ್ರಧಾನಮಂತ್ರಿ ನರೇಂದ್ರ ಮೋದಿ(Narendra Modi) ಅವರು ನವೆಂಬರ್ 13ರಂದು ಕರ್ನಾಟಕಕ್ಕೆ ಭೇಟಿ ನೀಡಲಿದ್ದು, ರಾಜ್ಯದಲ್ಲಿ (Karnataka) 15,000 ಕೋಟಿ ರೂ.ಗೂ ಅಧಿಕ ಮೌಲ್ಯದ ವಿವಿಧ ಅಭಿವೃದ್ಧಿ ಯೋಜನೆಗಳ ಉದ್ಘಾಟನೆ, ಲೋಕಾರ್ಪಣೆ ಹಾಗೂ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.
ಮೋದಿ ಅವರು ಬೆಂಗಳೂರು(Bengaluru) ಮತ್ತು ಮೈಸೂರಿನಲ್ಲಿ (Mysuru) ನಡೆಯಲಿರುವ ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲಿದ್ದಾರೆ. ನಮ್ಮ ಮೆಟ್ರೋ ಪಿಂಕ್ ಲೈನ್ ಲೋಕಾರ್ಪಣೆ, ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿಗೆ ಹಸಿರು ನಿಶಾನೆ ಸೇರಿದಂತೆ ಹಲವು ಅಭಿವೃದ್ಧಿ ಯೋಜನೆಗಳಿಗೆ ಅವರು ಚಾಲನೆ ನೀಡಲಿದ್ದಾರೆ.

ಪ್ರಧಾನಿ ಮೋದಿ ಅವರ ದಿನಪೂರ್ತಿ ಪ್ರವಾಸದ ವೇಳಾಪಟ್ಟಿ ಇಂತಿದೆ:
ಬೆಳಗ್ಗೆ 10.05: ದೆಹಲಿಯಿಂದ ವಿಶೇಷ ವಿಮಾನದ ಮೂಲಕ ಬೆಂಗಳೂರಿನ ಎಚ್‌ಎಎಲ್ (HAL) ವಿಮಾನ ನಿಲ್ದಾಣಕ್ಕೆ ಆಗಮನ.ಬೆಳಗ್ಗೆ 10.45: ಪ್ರಶಾಂತಿ ಕುಟೀರಂ ಸುವರ್ಣ ಮಹೋತ್ಸವ ಕಾರ್ಯಕ್ರಮದಲ್ಲಿ ಭಾಗಿಮಧ್ಯಾಹ್ನ 12.40: ಬೆಂಗಳೂರಿನ ಬನ್ನೇರುಘಟ್ಟ ರಸ್ತೆಯಲ್ಲಿರುವ ಆರ್. ಎ. ಮಂಡೂರ್ಕರ್ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಅಕಾಡೆಮಿಗೆ ಹೆಲಿಕಾಪ್ಟರ್‌ ಮೂಲಕ ಆಗಮನ.
ಮಧ್ಯಾಹ್ನ 12.45: ನಮ್ಮ ಮೆಟ್ರೋ ಪಿಂಕ್ ಲೈನ್ ಲೋಕಾರ್ಪಣೆ ಹಾಗೂ ತಾವರೆಕೆರೆಯಿಂದ ಐಐಎಂಬಿ (IIMB) ನಿಲ್ದಾಣದವರೆಗೆ ಮೆಟ್ರೋದಲ್ಲಿ ಸಂಚಾರ.ಮಧ್ಯಾಹ್ನ 1.15: ಐಐಎಂಬಿ (IIMB) ಆಡಿಟೋರಿಯಂನಲ್ಲಿ ವಿವಿಧ ಅಭಿವೃದ್ಧಿ ಯೋಜನೆಗಳ ಉದ್ಘಾಟನೆ.ಮಧ್ಯಾಹ್ನ 2.00: ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್‌ನಲ್ಲಿ ಬೆಂಗಳೂರು (ಯಶವಂತಪುರ) – ಮಂಗಳೂರು – ಮಡಗಾಂವ್ ವಂದೇ ಭಾರತ್ ರೈಲಿಗೆ ಚಾಲನೆ.
ಮಧ್ಯಾಹ್ನ 2.30: ಹೆಲಿಕಾಪ್ಟರ್ ಮೂಲಕ ಮೈಸೂರಿಗೆ ಪ್ರಯಾಣ.ಮಧ್ಯಾಹ್ನ 3.30: ಮೈಸೂರಿನ ಕೆ.ಸಿ. ಲೇಔಟ್ ಪಾರ್ಕ್‌ನಲ್ಲಿ ‘ಭಾರತ್ ವ್ಯಾನ್’ ಕಾರ್ಯಕ್ರಮದಲ್ಲಿ ಭಾಗಿ.ಸಂಜೆ 4.00: ಮೈಸೂರು ಕಾಸ್ಮಾಸ್ / ಪ್ಲಾನೆಟೋರಿಯಂ ಉದ್ಘಾಟನೆ.ಸಂಜೆ 6.05: ಮೈಸೂರಿನಿಂದ ನೇರವಾಗಿ ದೆಹಲಿಗೆ ವಾಪಸ್ ಪ್ರಯಾಣ.
ಮೋದಿ ಅವರ ಭೇಟಿಯ ವೇಳೆ ಚಾಲನೆ ದೊರೆಯಲಿರುವ ಪ್ರಮುಖ ಯೋಜನೆಗಳ ವಿವರಬೆಂಗಳೂರು ಮೆಟ್ರೋ:ನಮ್ಮ ಮೆಟ್ರೋ ಹಂತ-2 (ಪಿಂಕ್ ಲೈನ್ – ಎಲಿವೇಟೆಡ್ ಮಾರ್ಗ): 3,470 ಕೋಟಿ ರೂ. ವೆಚ್ಚದ ಕಾಳೇನ ಅಗ್ರಹಾರದಿಂದ ಡೈರಿ ಸರ್ಕಲ್‌ವರೆಗಿನ ಮಾರ್ಗದ ಉದ್ಘಾಟನೆ.

ರೈಲ್ವೆ ಸಚಿವಾಲಯ:ವಂದೇ ಭಾರತ್ ಎಕ್ಸ್‌ಪ್ರೆಸ್: ಬೆಂಗಳೂರು-ಮಂಗಳೂರು-ಮಡಗಾಂವ್ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿಗೆ ಹಸಿರು ನಿಶಾನೆ.ರೈಲು ನಿಲ್ದಾಣಗಳ ಪುನರಾಭಿವೃದ್ಧಿ (ಉದ್ಘಾಟನೆ): ಚಾಮರಾಜನಗರ ರೈಲು ನಿಲ್ದಾಣ (22 ಕೋಟಿ ರೂ.), ಚಿಕ್ಕಮಗಳೂರು ನಿಲ್ದಾಣ (22 ಕೋಟಿ ರೂ.), ಸಕಲೇಶಪುರ ನಿಲ್ದಾಣ (19 ಕೋಟಿ ರೂ.) ಹಾಗೂ ಸುಬ್ರಹ್ಮಣ್ಯ ರೋಡ್ ನಿಲ್ದಾಣದ (24 ಕೋಟಿ ರೂ.) ಪುನರಾಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ.ಬಾಗಲಕೋಟೆ-ವಂದಾಲ್ ಜೋಡಿ ಮಾರ್ಗ: ಗದಗ-ಹೊಟಗಿ (284 ಕಿ.ಮೀ) ಜೋಡಿ ಮಾರ್ಗ ಯೋಜನೆಯ ಭಾಗವಾಗಿರುವ 294 ಕೋಟಿ ರೂ. ವೆಚ್ಚದ ಬಾಗಲಕೋಟೆ-ವಂದಾಲ್ (44.6 ಕಿ.ಮೀ) ಜೋಡಿ ರೈಲು ಮಾರ್ಗ ಲೋಕಾರ್ಪಣೆ.ಘಾಟ್ ಸೆಕ್ಷನ್ ವಿದ್ಯುದೀಕರಣ: 100 ಕೋಟಿ ರೂ. ವೆಚ್ಚದ ಸಕಲೇಶಪುರ-ಸುಬ್ರಹ್ಮಣ್ಯ ರೋಡ್ ಘಾಟ್ ವಿಭಾಗದ (55 ಕಿ.ಮೀ) ವಿದ್ಯುದೀಕರಣ ಕಾಮಗಾರಿ ಲೋಕಾರ್ಪಣೆ.
ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ:ಮಂಗಳೂರಿನಲ್ಲಿ ಎಚ್‌ಪಿಸಿಎಲ್ (HPCL) ವತಿಯಿಂದ 854 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿರುವ 80 ಟಿಎಂಟಿ (TMT) ಎಲ್‌ಪಿಜಿ ಸಂಗ್ರಹಣಾ ಭೂಗತ ಘಟಕದ (Storage Cavern) ಉದ್ಘಾಟನೆ.ಬೆಂಗಳೂರಿನಲ್ಲಿ 123.42 ಕೋಟಿ ರೂ. ವೆಚ್ಚದ ಕಂಪ್ರೆಸ್ಡ್ ಬಯೋ-ಗ್ಯಾಸ್ (CBG) ಯೋಜನೆಗೆ ಶಂಕುಸ್ಥಾಪನೆ.ದಕ್ಷಿಣ ಕನ್ನಡದಲ್ಲಿ 330 ಕೋಟಿ ರೂ. ವೆಚ್ಚದ ಎಂಆರ್‌ಪಿಎಲ್ (MRPL) ಮಾರ್ಕೆಟಿಂಗ್ ಟರ್ಮಿನಲ್ ಲೋಕಾರ್ಪಣೆ.
ವಿದ್ಯುತ್ ಸಚಿವಾಲಯ:ಕೊಪ್ಪಳ-2 (ಹಂತ ಎ ಮತ್ತು ಬಿ) ಹಾಗೂ ಗದಗ-2 (ಹಂತ ಎ) ನವೀಕರಿಸಬಹುದಾದ ಇಂಧನ ವಲಯದ (ಹಂತ-2) ಏಕೀಕರಣಕ್ಕಾಗಿ 4,445 ಕೋಟಿ ರೂ. ವೆಚ್ಚದ ಪ್ರಸರಣ ಯೋಜನೆಯ ಉದ್ಘಾಟನೆ.ಬೀದರ್‌ನಲ್ಲಿ 1,368 ಕೋಟಿ ರೂ. ವೆಚ್ಚದ ಸೌರಶಕ್ತಿ ವಲಯದ (2,500 ಮೆಗಾವ್ಯಾಟ್) ಪ್ರಸರಣ ಯೋಜನೆಯ ಉದ್ಘಾಟನೆ.ದಾವಣಗೆರೆ/ಚಿತ್ರದುರ್ಗ ಮತ್ತು ಬಳ್ಳಾರಿ ನವೀಕರಿಸಬಹುದಾದ ಇಂಧನ ವಲಯಗಳ ಏಕೀಕರಣಕ್ಕಾಗಿ 3,453 ಕೋಟಿ ರೂ. ವೆಚ್ಚದ ಪ್ರಸರಣ ಯೋಜನೆಗೆ ಶಂಕುಸ್ಥಾಪನೆ.ದಾವಣಗೆರೆ (0.25 GW) ಮತ್ತು ಬಳ್ಳಾರಿಯಲ್ಲಿ (2.75 GW) ಹೆಚ್ಚುವರಿ ನವೀಕರಿಸಬಹುದಾದ ಇಂಧನ ಸಾಮರ್ಥ್ಯದ ಏಕೀಕರಣಕ್ಕಾಗಿ 1,111 ಕೋಟಿ ರೂ. ವೆಚ್ಚದ ಪ್ರಸರಣ ವ್ಯವಸ್ಥೆ ಬಲವರ್ಧನೆ ಯೋಜನೆಗೆ ಶಂಕುಸ್ಥಾಪನೆ.

Share ePaper Clip

Preparing image...

   SHARE  

Facebook
Twitter
Telegram
WhatsApp

   TOP NEWS  

   RECENT NEWS