ಪ್ರಣಬ್‌ ಮುಖರ್ಜಿ ಪ್ರಧಾನಿಯಾಗುವ ಆಸೆ ಹೊಂದಿದ್ದರು: ಆತ್ಮಕಥನದಲ್ಲಿ ಸೋನಿಯಾ ಉಲ್ಲೇಖ ..

ಸುದ್ದಿ ಮತ್ತು ಪ್ರಕಟಣೆಗಳಿಗಾಗಿ:
9000144466
kannadasakshi.in

ಪ್ರಣಬ್‌ ಮುಖರ್ಜಿ ಪ್ರಧಾನಿಯಾಗುವ ಆಸೆ ಹೊಂದಿದ್ದರು: ಆತ್ಮಕಥನದಲ್ಲಿ ಸೋನಿಯಾ ಉಲ್ಲೇಖ ..

10 Nov 2026, 9:50 pm KANNADA SAKSHI

ಪ್ರಣಬ್ ಮುಖರ್ಜಿ ಅವರಿಗೆ ಪ್ರಧಾನಿಯಾಗುವ ಮಹತ್ವಾಕಾಂಕ್ಷೆ ಇತ್ತು ಎಂಬ ವಿಚಾರವನ್ನು ಕಾಂಗ್ರೆಸ್‌ ಹಿರಿಯ ನಾಯಕಿ ಸೋನಿಯಾ ಗಾಂಧಿ (Sonia Gandhi) ತಮ್ಮ ಆತ್ಮಕಥೆ ‘Belonging: A Journey Of Love’ ಪುಸ್ತಕದಲ್ಲಿ ಉಲ್ಲೇಖಿಸಿದ್ದಾರೆ.
ಆಗಿನ ಪ್ರಧಾನ ಮಂತ್ರಿ ಮನಮೋಹನ್‌ ಸಿಂಗ್‌ ಮತ್ತು ನನ್ನ ನಡುವೆ ಜವಾಬ್ದಾರಿಯುತ ವಿಭಜನೆ ಇತ್ತು. ಸಿಂಗ್‌ ಅವರ ನೇತೃತ್ವದಲ್ಲಿ ಸರ್ಕಾರ ಮತ್ತು ನನ್ನ ನೇತೃತ್ವದಲ್ಲಿ ಕಾಂಗ್ರೆಸ್‌ ಪಕ್ಷ ಸುಗಮವಾಗಿ ಕಾರ್ಯನಿರ್ವಹಿಸುತ್ತಿತ್ತು. ಪಕ್ಷ ಮತ್ತು ಸರ್ಕಾರದ ನಡುವಿನ ಅಧಿಕಾರ ವಿಭಜನೆಯನ್ನು ಎತ್ತಿ ತೋರಿಸುವಾಗ, ಪ್ರಣಬ್‌ ಮುಖರ್ಜಿ ಅವರು ಒಮ್ಮೆ ತಾವು ಪ್ರಧಾನ ಮಂತ್ರಿಯಾಗುವ ಬಯಕೆಯನ್ನು ವ್ಯಕ್ತಪಡಿಸಿದ್ದರು ಎಂದು ಸೋನಿಯಾ ಗಾಂಧಿ ತಿಳಿಸಿದ್ದಾರೆ.
ಪಕ್ಷ ಮತ್ತು ಸರ್ಕಾರದ ನಡುವಿನ ಸಮನ್ವಯವನ್ನು ಖಚಿತಪಡಿಸಿಕೊಳ್ಳಲು, ಪ್ರಧಾನ ಮಂತ್ರಿಯವರೊಂದಿಗೆ ಒಂದು ಪ್ರಮುಖ ಗುಂಪು ಪ್ರತಿ ವಾರ ಸಭೆ ಸೇರುತ್ತಿತ್ತು. ಈ ಗುಂಪಿನಲ್ಲಿ ಪ್ರಣಬ್ ಮುಖರ್ಜಿ (Pranab Mukherjee), ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಅರ್ಜುನ್ ಸಿಂಗ್, ಕೇರಳದ ಮಾಜಿ ಮುಖ್ಯಮಂತ್ರಿ ಎ.ಕೆ.ಆಂಟನಿ ಹಾಗೂ ಅಹ್ಮದ್ ಪಟೇಲ್ ಇದ್ದರು. ಸಂಸತ್ತಿನಲ್ಲಿ ಪ್ರಸ್ತಾಪಿಸಬೇಕಾದ ವಿಷಯಗಳ ಬಗ್ಗೆ ಚರ್ಚಿಸಲು ರಚಿಸಲಾಗಿದ್ದ ‘ಸ್ಟ್ರಾಟಜಿ ಗ್ರೂಪ್’ (ಕಾರ್ಯತಂತ್ರ ಗುಂಪು) ಸದಸ್ಯರಾಗಿ ನಾವೆಲ್ಲರೂ ನಿಯಮಿತವಾಗಿ ಸಭೆ ಸೇರುತ್ತಿದ್ದೆವು. ಪ್ರಣಬ್ ಅವರು, ಕೆಲವೊಮ್ಮೆ ಸಭೆಯ ನಂತರವೂ ಅಲ್ಲೇ ಉಳಿದು ಮಾತನಾಡುತ್ತಿದ್ದರು ಎಂದು ಸೋನಿಯಾ ಗಾಂಧಿ ವಿವರಿಸಿದ್ದಾರೆ.

(ಪ್ರಣಬ್ ಅವರಿಗೆ ಹಣಕಾಸು ಸಚಿವ ಪಿ. ಚಿದಂಬರಂ ಅವರೊಂದಿಗೆ ಭಿನ್ನಾಭಿಪ್ರಾಯಗಳಿದ್ದವು. 2010ರಲ್ಲಿ ಒಮ್ಮೆ, ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದ ನಂತರ, ಅವರು ನನಗೆ ಒಂದು ಆಘಾತಕಾರಿ ಸಲಹೆಯನ್ನು ನೀಡಿದರು. ಉನ್ನತ ಹುದ್ದೆಯಲ್ಲಿ ಬದಲಾವಣೆಯಾಗುವ ಸಮಯ ಬಂದಿರಬಹುದು ಎಂದು ಪ್ರಣಬ್‌ ಹೇಳಿದ್ದರು. ಇದನ್ನು ನಾನು, ಪ್ರಧಾನಿಯಾಗಬೇಕೆಂಬ ಅವರ ಬಹುಕಾಲದ ಆಕಾಂಕ್ಷೆಯ ಸುಳಿವು ಎಂದು ಅರ್ಥೈಸಿಕೊಂಡೆ ಎಂಬುದಾಗಿ ಸೋನಿಯಾ ಪುಸ್ತಕದಲ್ಲಿ ಬರೆದುಕೊಂಡಿದ್ದಾರೆ.‌
ನಾನು ಚಾತುರ್ಯದಿಂದ ವಿಷಯವನ್ನು ಬದಲಾಯಿಸಿದೆ. ಇದರಿಂದ ಅವರಿಗೆ ನಿರಾಸೆಯಾಗಿರಬಹುದು. ಆದರೂ, ಆ ವಿಷಯಕ್ಕಾಗಿ ನನ್ನ ಮೇಲೆ ಎಂದಿಗೂ ನನ್ನ ಮೇಲೆ ಅಸಮಾಧಾನ ಭಾವನೆ ವ್ಯಕ್ತಪಡಿಸಿಲ್ಲ ಎಂದು ಪ್ರಣಬ್‌ ವ್ಯಕ್ತಿತ್ವದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸದಾಕಾಲವೂ ವಿದ್ವತ್ಪೂರ್ಣ ಹಾಗೂ ಜ್ಞಾನಿ ರಾಜಕಾರಣಿಯಾಗಿಯೇ ಉಳಿದಿದ್ದ ಅವರೊಂದಿಗೆ ಸಂಭಾಷಣೆ ನಡೆಸಲು ನಾನು ಆಗಾಗ್ಗೆ ಪ್ರಣಬ್‌ ಅವರನ್ನು ಭೇಟಿಯಾಗುತ್ತಿದ್ದೆ ಎಂದು ತಿಳಿಸಿದ್ದಾರೆ.
ಅದಾದ ಬಳಿಕ, 2012ರಲ್ಲಿ ಕಾಂಗ್ರೆಸ್ ಪಕ್ಷವು ಪ್ರಣಬ್‌ ಮುಖರ್ಜಿಯವರನ್ನು ಭಾರತದ ಅತ್ಯುನ್ನತ ಹುದ್ದೆಯಾದ ರಾಷ್ಟ್ರಪತಿ ಸ್ಥಾನಕ್ಕೆ ಯುಪಿಎ (UPA) ಅಭ್ಯರ್ಥಿಯಾಗಿ ನಾಮನಿರ್ದೇಶನ ಮಾಡಿತ್ತು. ನಂತರ ರಾಷ್ಟ್ರಪತಿಯಾಗಿ ಅವರು ಆಯ್ಕೆಯಾದರು

Generating image…

Editor Reporter

Share ePaper Clip

Preparing image...

   SHARE  

Facebook
Twitter
Telegram
WhatsApp

   TOP NEWS  

   RECENT NEWS