ಇಂದಿನ ಡಿಜಿಟಲ್ ಯುಗದಲ್ಲಿ ಸ್ಮಾರ್ಟ್‌ಫೋನ್ ಮೂಲಕ ದಿನಸಿ ಹಾಗೂ ಆಹಾರವನ್ನು ಆನ್‌ಲೈನ್‌ನಲ್ಲಿ ಆರ್ಡರ್ ಮಾಡುವುದು ಸಾಮಾನ್ಯವಾಗಿದೆ. ಆದರೆ ಹಿರಿಯರಿಗೆ ಇಂತಹ ಆ್ಯಪ್‌ಗಳನ್ನು ಬಳಸುವುದು ಕೆಲವೊಮ್ಮೆ ಸವಾಲಿನ ಕೆಲಸವಾಗಿರುತ್ತದೆ.
ಇದೀಗ ಅಜ್ಜಿಯೊಬ್ಬರು ಹೊಸ ತಂತ್ರಜ್ಞಾನವನ್ನು ಕಲಿಯಲು ಆಸಕ್ತಿ ತೋರಿದ್ದು, ತಮ್ಮ ಮೊಮ್ಮಗಳ ಬಳಿ ಬ್ಲಿಂಕಿಟ್ ಆ್ಯಪ್ ಬಳಸುವುದನ್ನು ಕಲಿಯುತ್ತಿದ್ದಾರೆ. ಮೊಮ್ಮಗಳು ಅಜ್ಜಿಗೆ ಆ್ಯಪ್ ಬಳಕೆಯ ವಿಧಾನವನ್ನು ತಿಳಿಸಿಕೊಡುತ್ತಿರುವ ದೃಶ್ಯಗಳು ಗಮನ ಸೆಳೆಯುತ್ತಿವೆ.
ಅಜ್ಜಿ ಮತ್ತು ಮೊಮ್ಮಗಳ ನಡುವಿನ ಈ ಮುದ್ದಾದ ಕ್ಷಣದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಹೊಸ ತಂತ್ರಜ್ಞಾನವನ್ನು ಕಲಿಯಲು ಅಜ್ಜಿ ತೋರಿದ ಉತ್ಸಾಹಕ್ಕೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.










