ಯುಟಿ ಖಾದರ್ (UT Khader) ಅವರೇ ನೀವು ಇಲ್ಲದಿದ್ದರೂ ನಿಮ್ಮ ಕ್ಷೇತ್ರ, ಇಲಾಖೆ ನಡೆಯುತ್ತೆ, ನಿಮ್ಗೆ ಸಂಬಳ ಯಾಕೆ? ರಾಜೀನಾಮೆ ಕೊಡಿ ಎಂದು ಬಿಜೆಪಿ (BJP) ಎಂಎಲ್‌ಸಿ ರವಿಕುಮಾರ್ (MLC Ravi Kumar) ವ್ಯಂಗ್ಯವಾಡಿದ್ದಾರೆ.
ಆಶಾ ಕಾರ್ಯಕರ್ತೆಯರು (Asha Workers) ಇಲ್ಲದಿದ್ದರೂ ನಡೆಯುತ್ತೆ ಎಂಬ ಹೇಳಿಕೆಗೆ ಬಿಜೆಪಿ ಕಚೇರಿಯಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಆಶಾ ಕಾರ್ಯಕರ್ತೆಯರು 11 ದಿನಗಳಿಂದ ಪ್ರತಿಭಟನೆ ಮಾಡುತ್ತಿದ್ದಾರೆ. ಆದ್ರೆ ಸಿಎಂ, ಸಚಿವರು, ಕಾರ್ಮಿಕ ಇಲಾಖೆ, ಮಹಿಳಾ ಇಲಾಖೆ, ಧನಾತ್ಮಕವಾಗಿ ಅವರ ಜೊತೆ ಮಾತುಕತೆ ಮಾಡಿಲ್ಲ. ಯು.ಟಿ.ಖಾದರ್ ಆಶಾ ಕಾರ್ಯಕರ್ತೆಯರು ಇಲ್ಲದೆ ಕೆಲಸ ಆಗ್ತಿದೆ. ಸಮಸ್ಯೆಯೇ ಆಗಿಲ್ಲ ಅಂತ ಹೇಳಿದ್ದಾರೆ. ಆಶಾ ಕಾರ್ಯಕರ್ತೆಯರು ಹೋರಾಟ ಕೈ ಬಿಟ್ಟು ಹೋಗಿ ಅಂತಿದ್ದಾರೆ. ಯು.ಟಿ.ಖಾದರ್ ಅವರೇ ನಿಮ್ಮ ಕ್ಷೇತ್ರದಲ್ಲಿ ನೀವು ಇಲ್ಲ ಅಂದ್ರಿ, ನಿಮ್ಮ ಕ್ಷೇತ್ರ, ನಿಮ್ಮ ಇಲಾಖೆ ನಡೆಯುತ್ತದೆ. ನೀವು ರಾಜೀನಾಮೆ ಕೊಟ್ಟುಬಿಡಿ. ನಿಮಗೆ ಟಿಎ, ಡಿಎ, ಸಂಬಳ ಯಾಕೆ ಬೇಕು ಎಂದು ಪ್ರಶ್ನಿಸಿದ್ದಾರೆ.









