ಓಜೋನ್ ಗ್ರೂಪ್‌ಗೆ ಇಡಿ ಬಿಗ್ ಶಾಕ್ – 702.70 ಕೋಟಿ ರೂ. ಮೌಲ್ಯದ ಸ್ಥಿರಾಸ್ತಿ ಜಪ್ತಿ..

ಸುದ್ದಿ ಮತ್ತು ಪ್ರಕಟಣೆಗಳಿಗಾಗಿ:
9000144466
kannadasakshi.in

ಓಜೋನ್ ಗ್ರೂಪ್‌ಗೆ ಇಡಿ ಬಿಗ್ ಶಾಕ್ – 702.70 ಕೋಟಿ ರೂ. ಮೌಲ್ಯದ ಸ್ಥಿರಾಸ್ತಿ ಜಪ್ತಿ..

26 Nov 2026, 11:19 pm KANNADA SAKSHI

ಮನೆ ಖರೀದಿದಾರರಿಗೆ ಸಾವಿರಾರು ಕೋಟಿ ರೂಪಾಯಿ ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರು ವಿಭಾಗದ ಜಾರಿ ನಿರ್ದೇಶನಾಲಯ (ED) ಅಧಿಕಾರಿಗಳು ಓಜೋನ್ ಗ್ರೂಪ್ (Ozone Group) ವಿರುದ್ಧ ಅತ್ಯಂತ ಕಠಿಣ ಕ್ರಮ ಕೈಗೊಂಡಿದ್ದಾರೆ. ಬೆಂಗಳೂರು ಮತ್ತು ಇತರಡೆ ಇರುವ ಬರೋಬ್ಬರಿ 702.70 ಕೋಟಿ ರೂ. ಮೌಲ್ಯದ ಫ್ಲಾಟ್‌ಗಳು ಹಾಗೂ ಭೂಮಿಯನ್ನು ಅಧಿಕಾರಿಗಳು ತಾತ್ಕಾಲಿಕವಾಗಿ ಮುಟ್ಟುಗೋಲು ಹಾಕಿಕೊಂಡಿದ್ದಾರೆ.
ಸುಪ್ರೀಂ ಕೋರ್ಟ್ ನಿರ್ದೇಶನದಂತೆ ಕರ್ನಾಟಕ ಪೊಲೀಸ್ ಮತ್ತು ಸಿಬಿಐ ದಾಖಲಿಸಿದ್ದ ವಂಚನೆ ಎಫ್‌ಐಆರ್‌ಗಳ (FIR) ಆಧಾರದ ಮೇಲೆ ಇಡಿ ಅಧಿಕಾರಿಗಳು ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯಡಿ (PMLA) ತನಿಖೆ ನಡೆಸುತ್ತಿದ್ದಾರೆ.

ಓಜೋನ್ ಗ್ರೂಪ್ ಗ್ರಾಹಕರನ್ನು ಸೆಳೆಯಲು ಸಬ್‌ವೆನ್ಷನ್, ಬೈಬ್ಯಾಕ್ ಮತ್ತು ಜೀರೋ-ಡೌನ್ ಪೇಮೆಂಟ್‌ನಂತಹ ಆಕರ್ಷಕ ಯೋಜನೆಗಳ ಹೆಸರನ್ನು ಬಳಸಿತ್ತು. ಅಕ್ವಾ-2, ಅವೆನ್ಯೂ, ಪ್ರೈಮ್, ಮೆಟ್ರೋಜೋನ್, WF-48 ಮತ್ತು ಪೋಲ್‌ಸ್ಟಾರ್‌ ನಂತಹ ಪ್ರತಿಷ್ಠಿತ ಯೋಜನೆಗಳಲ್ಲಿ ಫ್ಲಾಟ್‌ಗಳನ್ನು ನೀಡುವುದಾಗಿ ನಂಬಿಸಿ ಗ್ರಾಹಕರಿಂದ ಕೋಟ್ಯಂತರ ರೂಪಾಯಿ ಹಣ ಸಂಗ್ರಹಿಸಿತ್ತು. ಆದರೆ ಭರವಸೆ ನೀಡಿದಂತೆ ಫ್ಲಾಟ್‌ಗಳನ್ನೂ ನೀಡದೆ ಹಾಗೂ ಕಟ್ಟಿದ ಹಣವನ್ನೂ ವಾಪಸ್ ಮಾಡದೆ ಒಟ್ಟು 1,305.11 ಕೋಟಿ ರೂ. ವಂಚಿಸಿದೆ ಎಂದು ಇಡಿ ತನಿಖೆಯಿಂದ ತಿಳಿದುಬಂದಿದೆ.

ಗ್ರಾಹಕರು ಫ್ಲಾಟ್‌ಗಳಿಗಾಗಿ ನೀಡಿದ್ದ ಹಣವನ್ನು ಕಟ್ಟಡ ನಿರ್ಮಾಣಕ್ಕೆ ಬಳಸುವ ಬದಲಾಗಿ, ಸಂಸ್ಥೆಯು ಆ ಹಣವನ್ನು ಬೇರೆ ಬೇರೆ ಕಂಪನಿಗಳಿಗೆ ಡೈವರ್ಟ್ ಮಾಡಿದೆ. ಆ ಹಣದಿಂದ ತನ್ನ ಇತರ ಸಾಲಗಳನ್ನು ತೀರಿಸಲು ಮತ್ತು ಕಾರ್ಪೊರೇಟ್ ಖರ್ಚುಗಳಿಗೆ ಅಕ್ರಮವಾಗಿ ಬಳಸಿಕೊಂಡಿದೆ ಎಂದು ಆರೋಪಿಸಲಾಗಿದೆ.

ಓಜೋನ್ ಗ್ರೂಪ್‌ನ ಅಕ್ರಮಗಳ ಬೆನ್ನತ್ತಿರುವ ಇಡಿ, ಕಳೆದ ವರ್ಷ ಅಕ್ಟೋಬರ್ 4, 2025 ರಂದು 423.37 ಕೋಟಿ ರೂ. ಮೌಲ್ಯದ ಆಸ್ತಿಯನ್ನು ಜಪ್ತಿ ಮಾಡಿತ್ತು. ಈಗ ನಡೆಸಿರುವ ದೈತ್ಯ ಕಾರ್ಯಾಚರಣೆಯೊಂದಿಗೆ ಸಂಸ್ಥೆಗೆ ಸೇರಿದ ಒಟ್ಟು 1,126 ಕೋಟಿ ರೂ.ಗೂ ಅಧಿಕ ಮೌಲ್ಯದ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದ್ದು, ಪ್ರಕರಣದ ತನಿಖೆ ತೀವ್ರಗೊಂಡಿದೆ. ಇದು ವಂಚನೆಗೊಳಗಾದ ನೂರಾರು ಮನೆ ಖರೀದಿದಾರರಲ್ಲಿ ಸಣ್ಣ ಆಶಾಭಾವನೆ ಮೂಡಿಸಿದೆ.

Generating image…

Editor Reporter

Share ePaper Clip

Preparing image...

   SHARE  

Facebook
Twitter
Telegram
WhatsApp

   TOP NEWS  

   RECENT NEWS