ಪಶು ವೈದ್ಯಕೀಯ ನೇಮಕಾತಿ ಪರೀಕ್ಷೆ ಹಗರಣದಲ್ಲಿ ಆರೋಪಿಯಾಗಿರುವ ಕೆಪಿಎಸ್‌ಸಿ ಸದಸ್ಯೆ ಗೀತಾ ಸಿಕ್ಕಿಬಿದ್ದ ರಹಸ್ಯ ಬಯಲಾಗಿದೆ. ಸಿಡಿಆರ್ ರಿಪೋರ್ಟ್ ಮತ್ತು ಕೆಂಪು ಬಣ್ಣದ ಕಾರಿನಿಂದ ಗೀತಾ (KPSC Member Geetha) ಸಿಕ್ಕಿಬಿದ್ದಿರೋದು ತನಿಖೆ ವೇಳೆ ಬೆಳಕಿಗೆ ಬಂದಿದೆ.
ನಂದೀಶ್ ಎಂಬ ಅಭ್ಯರ್ಥಿಯ ಹೇಳಿಕೆ ದಾಖಲು ವೇಳೆ ಇಡಿಗೆ ಸಾಕ್ಷ್ಯ ಸಿಕ್ಕಿತ್ತು. ಪರೀಕ್ಷೆ ಅಪ್ಲಿಕೇಷನ್ ಹಾಕಿದ ಬಳಿಕ ಮಧ್ಯವರ್ತಿಗಳು ಅಭ್ಯರ್ಥಿಗಳನ್ನ ಸಂಪರ್ಕ ಮಾಡಿದ್ರು. ಈ ವೇಳೆ ಅಭ್ಯರ್ಥಿ ನಂದೀಶ್‌ನನ್ನೂ ಮಧ್ಯವರ್ತಿಗಳು ಸಂಪರ್ಕಿಸಿದ್ದರು. ಆಗ ನಂದೀಶ್ ಹಣ ಕೊಟ್ಟು ಕೆಲಸ ಗಿಟ್ಟಿಸಿಕೊಳ್ಳಲು ಒಲ್ಲೆ ಎಂದಿದ್ದರಂತೆ. ಬಳಿಕ ಕೆಪಿಎಸ್‌ಸಿ ಸದಸ್ಯೆ ಗೀತಾ ಸಂಪರ್ಕ ಆಗಿತ್ತು ಎಂದು ನಂದೀಶ್ ಬಾಯ್ಬಿಟ್ಟಿದ್ದ. ಆತನ ಕಾಲ್ ರೆಕಾರ್ಡ್ ಡೀಟೆಲ್ಸ್ ತೆಗೆದಾಗ ಗೀತಾ ಬಲೆಗೆ ಸಿಕ್ಕಿಬಿದ್ದಿರುವುದಾಗಿ ತಿಳಿದುಬಂದಿದೆ.
ಗೀತಾ ಅಭ್ಯರ್ಥಿಯನ್ನ ಭೇಟಿ ಮಾಡಿದ್ದೆಲ್ಲಿ? ಡೀಲ್ ಕುದುರಿಸಿದ್ದು ಎಲ್ಲಿ ಅಂತ ನೋಡೋದಾದರೆ,









