980 ರೂಪಾಯಿ ಶಾಲ್‌ಗೆ ಟೆಂಡರ್‌ ಬೇಡ, ಬೆಂಗ್ಳೂರಿಂದ ಹೋಲ್‌ಸೇಲ್‌ಗೆ ತನ್ನಿ – ಸಚಿವ ಶಿವಲಿಂಗೇಗೌಡ ಗರಂ..

ಸುದ್ದಿ ಮತ್ತು ಪ್ರಕಟಣೆಗಳಿಗಾಗಿ:
9000144466
kannadasakshi.in

980 ರೂಪಾಯಿ ಶಾಲ್‌ಗೆ ಟೆಂಡರ್‌ ಬೇಡ, ಬೆಂಗ್ಳೂರಿಂದ ಹೋಲ್‌ಸೇಲ್‌ಗೆ ತನ್ನಿ – ಸಚಿವ ಶಿವಲಿಂಗೇಗೌಡ ಗರಂ..

09 Oct 2026, 11:33 pm KANNADA SAKSHI

ಅ.29ರಿಂದ ನ.11ರ ವರೆಗೆ ನಡೆಯಲಿರುವ ಹಾಸನಾಂಬ ದೇವಿ ಜಾತ್ರಾ ಮಹೋತ್ಸವದ (Hassanamba Jatra Mahotsav) ಹಿನ್ನೆಲೆ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಂ ಶಿವಲಿಂಗೇಗೌಡ (KM Shivalinge Gowda) ಅಧ್ಯಕ್ಷತೆಯಲ್ಲಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಇಂದು ಪೂರ್ವಭಾವಿ ಸಭೆ ನಡೆಯಿತು.
 
ಸಭೆಯಲ್ಲಿ ಶಾಸಕ ಹೆಚ್.ಪಿ ಸ್ವರೂಪ್‌ಪ್ರಕಾಶ್, ಜಿಲ್ಲಾಧಿಕಾರಿ ಕೆ.ಎಸ್.ಲತಾಕುಮಾರಿ, ಎಸ್ಪಿ ಶುಭನ್ವಿತಾ ಹಾಗೂ ಜಿಲ್ಲಾಮಟ್ಟದ ಅಧಿಕಾರಿಗಳು ಭಾಗಿಯಾಗಿದ್ದರು. ವಿವಿಧ ಕಾಮಗಾರಿಗಳನ್ನ ಅನುಷ್ಠಾನಗೊಳಿಸಲು ಆಡಳಿತಾತ್ಮಕ ಅನುಮೋದನೆ ಕುರಿತು ಸಚಿವರು ಅಧಿಕಾರಿಗಳಿಂದ ಮಾಹಿತಿ ಪಡೆದರು. ಈ ವೇಳೆ ಜಾತ್ರಾ ಮಹೋತ್ಸವಕ್ಕೆ ಖರ್ಚು ವೆಚ್ಚ ಕೇಳಿ ಅಧಿಕಾರಿಗಳ ವಿರುದ್ಧ ಗರಂ ಆದ ಪ್ರಸಂಗವೂ ನಡೆಯಿತು.

ದೇವಿ ದರ್ಶನಕ್ಕೆ ಆಗಮಿಸುವ ವಿವಿಧ ಕ್ಷೇತ್ರಗಳ ಗಣ್ಯರನ್ನ ಸನ್ಮಾನಿಸಲು ಒಂದು ಶಾಲಿಗೆ 980 ರೂಪಾಯಿ ವೆಚ್ಚದಲ್ಲಿ ಟೆಂಡರ್ ಕರೆಯಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಸಚಿವ ಕೆ.ಎಂ.ಶಿವಲಿಂಗೇಗೌಡ, ಇದಕ್ಕೆ ಟೆಂಡರ್ ಕರೆಯಬೇಡಿ. ಬೆಂಗಳೂರಿಗೆ ಹೋಗಿ ಹೋಲ್‌ಸೇಲ್‌ನಿಂದ ತನ್ನಿ. ಅಲ್ಲಿ 500 ರೂಪಾಯಿಗೆ ಸಿಗುತ್ತೆ ಎಂದು ಸೂಚಿಸಿದರು.
ಎಐ ಬಗ್ಗೆ ನಂಗೇನು ಗೊತ್ತಿಲ್ಲಇನ್ನೂ ಕ್ರೌಡ್ ಮ್ಯಾನೇಜ್‌ಮೆಂಟ್‌ಗಾಗಿ ಎಐ ಟೆಕ್ನಾಲಜಿ ಬಳಸಲು 12 ಲಕ್ಷ ರೂಪಾಯಿ ಮೀಸಲಿಟ್ಟಿರುವ ಬಗ್ಗೆ ಅಧಿಕಾರಿಗಳು ಮಾಹಿತಿ ನೀಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, ʻಈ ಎಐ (AI) ಬಗ್ಗೆ ನಂಗೇನು ಗೊತ್ತಿಲ್ಲ. ನಂಗೆ ಗೊತ್ತಿಲ್ಲದೆ ಇರೋದನ್ನ ಗೊತ್ತು ಎನ್ನಲ್ಲ. ಎ, ಬಿ ಇವೆಲ್ಲ ಗೊತ್ತಿಲ್ಲ, ನೀವು ಅದೇನೋ ಮಾಡಿ ಎಂದರು.
ಸೋಷಿಯಲ್ ಮೀಡಿಯಾ ಖರ್ಚಿಗೆ ಶಾಸಕ ಸ್ವರೂಪ್‌ ಆಕ್ಷೇಪಇನ್ನೂ ಸಭೆಯಲ್ಲಿ ಸೋಷಿಯಲ್ ಮೀಡಿಯಾ ಪ್ರಚಾರದ ಬಗ್ಗೆಯೂ ಶಾಸಕ ಹೆಚ್.ಪಿ ಸ್ವರೂಪ್‌ಪ್ರಕಾಶ್ ಆಕ್ಷೇಪ ವ್ಯಕ್ತಪಡಿಸಿದರು. ಸೋಷಿಯಲ್ ಮೀಡಿಯಾಗೆ ಪ್ರತಿನಿತ್ಯ 21 ಸಾವಿರ ರೂಪಾಯಿ ಖರ್ಚಾಗುತ್ತದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು. ವೆಬ್‌ಸೈಟ್‌ಗೆ ಮೂರುವರೆ ಲಕ್ಷ ರೂಪಾಯಿ ಇದೆ ಎಂದ ಅಧಿಕಾರಿಗಳು ತಿಳಿಸಿದರು.
ಮತ್ತೆ ಸೋಷಿಯಲ್ ಮೀಡಿಯಾಗೆ ಹಣ ಯಾಕೆ? ಹಾಸನಾಂಬೆ ಬಗ್ಗೆ ಪ್ರಚಾರ ಮಾಡಿದ್ರೆ ಅವರಿಗೆ ಆದಾಯ ಬರುತ್ತೆ, ನಾವು ಯಾಕೆ ಹಣ ಕೊಡಬೇಕು ಎಂದು ಶಾಸಕರು ಆಕ್ಷೇಪ ವ್ಯಕ್ತಪಡಿಸಿದರು. ಇದಲ್ಲದೆ, ರೀಲ್ಸ್‌ಗಾಗಿ ಪ್ರತ್ಯೇಕ ಪಿಆರ್ ಟೀಂ ಇರುವ ಬಗ್ಗೆಯೂ ಅಧಿಕಾರಿಗಳು ಮಾಹಿತಿ ನೀಡಿದರು. ಇದಕ್ಕೂ ಆಕ್ಷೇಪ ವ್ಯಕ್ತಪಡಿಸಿದ ಶಾಸಕ, ಇದೆಲ್ಲಾ ಯಾಕೆ ಬೇಕು? ಎಂದು ಪ್ರಶ್ನೆ ಮಾಡಿದರು.

ಇದಕ್ಕೆ ಅಧಿಕಾರಿಗಳು, ಪ್ರಚಾರ ಮಾಡದೇ ಹೋದರೆ ಜನರ ಬರಲ್ಲ. ಜನರು ಬರದೆ ಇದ್ದರೆ ಆದಾಯ ಬರಲ್ಲ ಸರ್ ಎಂದು ಹೇಳಿದರು. ಹಾಸನಾಂಬೆ ಉತ್ಸವದಲ್ಲಿ ಆದಾಯ ಬರಬೇಕೆಂದರೆ ಸೋಷಿಯಲ್ ಮೀಡಿಯಾ ಅಗತ್ಯ ಎಂದು ಅಧಿಕಾರಿಗಳು ಮನವರಿಕೆ ಮಾಡಿದರು.

Generating image…

ಎಐ ಬಗ್ಗೆ ನಂಗೇನು ಗೊತ್ತಿಲ್ಲ
ಇನ್ನೂ ಕ್ರೌಡ್ ಮ್ಯಾನೇಜ್‌ಮೆಂಟ್‌ಗಾಗಿ ಎಐ ಟೆಕ್ನಾಲಜಿ ಬಳಸಲು 12 ಲಕ್ಷ ರೂಪಾಯಿ ಮೀಸಲಿಟ್ಟಿರುವ ಬಗ್ಗೆ ಅಧಿಕಾರಿಗಳು ಮಾಹಿತಿ ನೀಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, ʻಈ ಎಐ (AI) ಬಗ್ಗೆ ನಂಗೇನು ಗೊತ್ತಿಲ್ಲ. ನಂಗೆ ಗೊತ್ತಿಲ್ಲದೆ ಇರೋದನ್ನ ಗೊತ್ತು ಎನ್ನಲ್ಲ. ಎ, ಬಿ ಇವೆಲ್ಲ ಗೊತ್ತಿಲ್ಲ, ನೀವು ಅದೇನೋ ಮಾಡಿ ಎಂದರು.

ಸೋಷಿಯಲ್ ಮೀಡಿಯಾ ಖರ್ಚಿಗೆ ಶಾಸಕ ಸ್ವರೂಪ್‌ ಆಕ್ಷೇಪ
ಇನ್ನೂ ಸಭೆಯಲ್ಲಿ ಸೋಷಿಯಲ್ ಮೀಡಿಯಾ ಪ್ರಚಾರದ ಬಗ್ಗೆಯೂ ಶಾಸಕ ಹೆಚ್.ಪಿ ಸ್ವರೂಪ್‌ಪ್ರಕಾಶ್ ಆಕ್ಷೇಪ ವ್ಯಕ್ತಪಡಿಸಿದರು. ಸೋಷಿಯಲ್ ಮೀಡಿಯಾಗೆ ಪ್ರತಿನಿತ್ಯ 21 ಸಾವಿರ ರೂಪಾಯಿ ಖರ್ಚಾಗುತ್ತದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು. ವೆಬ್‌ಸೈಟ್‌ಗೆ ಮೂರುವರೆ ಲಕ್ಷ ರೂಪಾಯಿ ಇದೆ ಎಂದ ಅಧಿಕಾರಿಗಳು ತಿಳಿಸಿದರು.

ಮತ್ತೆ ಸೋಷಿಯಲ್ ಮೀಡಿಯಾಗೆ ಹಣ ಯಾಕೆ? ಹಾಸನಾಂಬೆ ಬಗ್ಗೆ ಪ್ರಚಾರ ಮಾಡಿದ್ರೆ ಅವರಿಗೆ ಆದಾಯ ಬರುತ್ತೆ, ನಾವು ಯಾಕೆ ಹಣ ಕೊಡಬೇಕು ಎಂದು ಶಾಸಕರು ಆಕ್ಷೇಪ ವ್ಯಕ್ತಪಡಿಸಿದರು. ಇದಲ್ಲದೆ, ರೀಲ್ಸ್‌ಗಾಗಿ ಪ್ರತ್ಯೇಕ ಪಿಆರ್ ಟೀಂ ಇರುವ ಬಗ್ಗೆಯೂ ಅಧಿಕಾರಿಗಳು ಮಾಹಿತಿ ನೀಡಿದರು. ಇದಕ್ಕೂ ಆಕ್ಷೇಪ ವ್ಯಕ್ತಪಡಿಸಿದ ಶಾಸಕ, ಇದೆಲ್ಲಾ ಯಾಕೆ ಬೇಕು? ಎಂದು ಪ್ರಶ್ನೆ ಮಾಡಿದರು.

ಇದಕ್ಕೆ ಅಧಿಕಾರಿಗಳು, ಪ್ರಚಾರ ಮಾಡದೇ ಹೋದರೆ ಜನರ ಬರಲ್ಲ. ಜನರು ಬರದೆ ಇದ್ದರೆ ಆದಾಯ ಬರಲ್ಲ ಸರ್ ಎಂದು ಹೇಳಿದರು. ಹಾಸನಾಂಬೆ ಉತ್ಸವದಲ್ಲಿ ಆದಾಯ ಬರಬೇಕೆಂದರೆ ಸೋಷಿಯಲ್ ಮೀಡಿಯಾ ಅಗತ್ಯ ಎಂದು ಅಧಿಕಾರಿಗಳು ಮನವರಿಕೆ ಮಾಡಿದರು.

Editor Reporter
kannadasakshi.in

980 ರೂಪಾಯಿ ಶಾಲ್‌ಗೆ ಟೆಂಡರ್‌ ಬೇಡ, ಬೆಂಗ್ಳೂರಿಂದ ಹೋಲ್‌ಸೇಲ್‌ಗೆ ತನ್ನಿ – ಸಚಿವ ಶಿವಲಿಂಗೇಗೌಡ ಗರಂ..

ಅ.29ರಿಂದ ನ.11ರ ವರೆಗೆ ನಡೆಯಲಿರುವ ಹಾಸನಾಂಬ ದೇವಿ ಜಾತ್ರಾ ಮಹೋತ್ಸವದ (Hassanamba Jatra Mahotsav) ಹಿನ್ನೆಲೆ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಂ ಶಿವಲಿಂಗೇಗೌಡ (KM Shivalinge Gowda) ಅಧ್ಯಕ್ಷತೆಯಲ್ಲಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಇಂದು ಪೂರ್ವಭಾವಿ ಸಭೆ ನಡೆಯಿತು.
 
ಸಭೆಯಲ್ಲಿ ಶಾಸಕ ಹೆಚ್.ಪಿ ಸ್ವರೂಪ್‌ಪ್ರಕಾಶ್, ಜಿಲ್ಲಾಧಿಕಾರಿ ಕೆ.ಎಸ್.ಲತಾಕುಮಾರಿ, ಎಸ್ಪಿ ಶುಭನ್ವಿತಾ ಹಾಗೂ ಜಿಲ್ಲಾಮಟ್ಟದ ಅಧಿಕಾರಿಗಳು ಭಾಗಿಯಾಗಿದ್ದರು. ವಿವಿಧ ಕಾಮಗಾರಿಗಳನ್ನ ಅನುಷ್ಠಾನಗೊಳಿಸಲು ಆಡಳಿತಾತ್ಮಕ ಅನುಮೋದನೆ ಕುರಿತು ಸಚಿವರು ಅಧಿಕಾರಿಗಳಿಂದ ಮಾಹಿತಿ ಪಡೆದರು. ಈ ವೇಳೆ ಜಾತ್ರಾ ಮಹೋತ್ಸವಕ್ಕೆ ಖರ್ಚು ವೆಚ್ಚ ಕೇಳಿ ಅಧಿಕಾರಿಗಳ ವಿರುದ್ಧ ಗರಂ ಆದ ಪ್ರಸಂಗವೂ ನಡೆಯಿತು.

ದೇವಿ ದರ್ಶನಕ್ಕೆ ಆಗಮಿಸುವ ವಿವಿಧ ಕ್ಷೇತ್ರಗಳ ಗಣ್ಯರನ್ನ ಸನ್ಮಾನಿಸಲು ಒಂದು ಶಾಲಿಗೆ 980 ರೂಪಾಯಿ ವೆಚ್ಚದಲ್ಲಿ ಟೆಂಡರ್ ಕರೆಯಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಸಚಿವ ಕೆ.ಎಂ.ಶಿವಲಿಂಗೇಗೌಡ, ಇದಕ್ಕೆ ಟೆಂಡರ್ ಕರೆಯಬೇಡಿ. ಬೆಂಗಳೂರಿಗೆ ಹೋಗಿ ಹೋಲ್‌ಸೇಲ್‌ನಿಂದ ತನ್ನಿ. ಅಲ್ಲಿ 500 ರೂಪಾಯಿಗೆ ಸಿಗುತ್ತೆ ಎಂದು ಸೂಚಿಸಿದರು.
ಎಐ ಬಗ್ಗೆ ನಂಗೇನು ಗೊತ್ತಿಲ್ಲಇನ್ನೂ ಕ್ರೌಡ್ ಮ್ಯಾನೇಜ್‌ಮೆಂಟ್‌ಗಾಗಿ ಎಐ ಟೆಕ್ನಾಲಜಿ ಬಳಸಲು 12 ಲಕ್ಷ ರೂಪಾಯಿ ಮೀಸಲಿಟ್ಟಿರುವ ಬಗ್ಗೆ ಅಧಿಕಾರಿಗಳು ಮಾಹಿತಿ ನೀಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, ʻಈ ಎಐ (AI) ಬಗ್ಗೆ ನಂಗೇನು ಗೊತ್ತಿಲ್ಲ. ನಂಗೆ ಗೊತ್ತಿಲ್ಲದೆ ಇರೋದನ್ನ ಗೊತ್ತು ಎನ್ನಲ್ಲ. ಎ, ಬಿ ಇವೆಲ್ಲ ಗೊತ್ತಿಲ್ಲ, ನೀವು ಅದೇನೋ ಮಾಡಿ ಎಂದರು.
ಸೋಷಿಯಲ್ ಮೀಡಿಯಾ ಖರ್ಚಿಗೆ ಶಾಸಕ ಸ್ವರೂಪ್‌ ಆಕ್ಷೇಪಇನ್ನೂ ಸಭೆಯಲ್ಲಿ ಸೋಷಿಯಲ್ ಮೀಡಿಯಾ ಪ್ರಚಾರದ ಬಗ್ಗೆಯೂ ಶಾಸಕ ಹೆಚ್.ಪಿ ಸ್ವರೂಪ್‌ಪ್ರಕಾಶ್ ಆಕ್ಷೇಪ ವ್ಯಕ್ತಪಡಿಸಿದರು. ಸೋಷಿಯಲ್ ಮೀಡಿಯಾಗೆ ಪ್ರತಿನಿತ್ಯ 21 ಸಾವಿರ ರೂಪಾಯಿ ಖರ್ಚಾಗುತ್ತದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು. ವೆಬ್‌ಸೈಟ್‌ಗೆ ಮೂರುವರೆ ಲಕ್ಷ ರೂಪಾಯಿ ಇದೆ ಎಂದ ಅಧಿಕಾರಿಗಳು ತಿಳಿಸಿದರು.
ಮತ್ತೆ ಸೋಷಿಯಲ್ ಮೀಡಿಯಾಗೆ ಹಣ ಯಾಕೆ? ಹಾಸನಾಂಬೆ ಬಗ್ಗೆ ಪ್ರಚಾರ ಮಾಡಿದ್ರೆ ಅವರಿಗೆ ಆದಾಯ ಬರುತ್ತೆ, ನಾವು ಯಾಕೆ ಹಣ ಕೊಡಬೇಕು ಎಂದು ಶಾಸಕರು ಆಕ್ಷೇಪ ವ್ಯಕ್ತಪಡಿಸಿದರು. ಇದಲ್ಲದೆ, ರೀಲ್ಸ್‌ಗಾಗಿ ಪ್ರತ್ಯೇಕ ಪಿಆರ್ ಟೀಂ ಇರುವ ಬಗ್ಗೆಯೂ ಅಧಿಕಾರಿಗಳು ಮಾಹಿತಿ ನೀಡಿದರು. ಇದಕ್ಕೂ ಆಕ್ಷೇಪ ವ್ಯಕ್ತಪಡಿಸಿದ ಶಾಸಕ, ಇದೆಲ್ಲಾ ಯಾಕೆ ಬೇಕು? ಎಂದು ಪ್ರಶ್ನೆ ಮಾಡಿದರು.

ಇದಕ್ಕೆ ಅಧಿಕಾರಿಗಳು, ಪ್ರಚಾರ ಮಾಡದೇ ಹೋದರೆ ಜನರ ಬರಲ್ಲ. ಜನರು ಬರದೆ ಇದ್ದರೆ ಆದಾಯ ಬರಲ್ಲ ಸರ್ ಎಂದು ಹೇಳಿದರು. ಹಾಸನಾಂಬೆ ಉತ್ಸವದಲ್ಲಿ ಆದಾಯ ಬರಬೇಕೆಂದರೆ ಸೋಷಿಯಲ್ ಮೀಡಿಯಾ ಅಗತ್ಯ ಎಂದು ಅಧಿಕಾರಿಗಳು ಮನವರಿಕೆ ಮಾಡಿದರು.

Share ePaper Clip

Preparing image...

   SHARE  

Facebook
Twitter
Telegram
WhatsApp

   TOP NEWS  

   RECENT NEWS