ಖಾಸಗಿ ಆಸ್ಪತ್ರೆಗಳ ಬಿಲ್‌ ಕಳ್ಳಾಟಕ್ಕೆ ಬ್ರೇಕ್‌?- ಇನ್ಮುಂದೆ ರಶೀದಿಯಲ್ಲಿ ಔಷಧ ಬೆಲೆ ಕಡ್ಡಾಯ..

ಸುದ್ದಿ ಮತ್ತು ಪ್ರಕಟಣೆಗಳಿಗಾಗಿ:
9000144466
kannadasakshi.in

ಖಾಸಗಿ ಆಸ್ಪತ್ರೆಗಳ ಬಿಲ್‌ ಕಳ್ಳಾಟಕ್ಕೆ ಬ್ರೇಕ್‌?- ಇನ್ಮುಂದೆ ರಶೀದಿಯಲ್ಲಿ ಔಷಧ ಬೆಲೆ ಕಡ್ಡಾಯ..

11 Oct 2026, 6:30 am KANNADA SAKSHI

ಖಾಸಗಿ ಆಸ್ಪತ್ರೆಗಳಲ್ಲಿ ಔಷಧಿಗಳ ಹೆಸರಿನಲ್ಲಿ (Hospital bill Scam) ರೋಗಿಗಳಿಂದ ದುಪ್ಪಟ್ಟು ಹಣ ವಸೂಲಿ ಮಾಡುವುದಕ್ಕೆ ಬ್ರೇಕ್‌ ಹಾಕಲು ಆಹಾರ ಸುರಕ್ಷತೆ ಮತ್ತು ಔಷಧ ನಿಯಂತ್ರಣ ಇಲಾಖೆ ಹೊಸ ಮಾರ್ಗಸೂಚಿ (Bengaluru) ಬಿಡುಗಡೆ ಮಾಡಿದೆ.
ಇನ್ಮುಂದೆ ಆಸ್ಪತ್ರೆಗಳ ಬಿಲ್‌ನಲ್ಲಿ ಔಷಧಿಗಳ ಮೂಲ ಬೆಲೆ, ಲ್ಯಾಂಡಿಂಗ್‌ ಕಾಸ್ಟ್‌ ಮತ್ತು ಎಂಆರ್‌ಪಿ ವಿವರಗಳನ್ನು ನಮೂದಿಸುವುದು ಕಡ್ಡಾಯವಾಗಲಿದೆ.

ಸರ್ಕಾರಿ ಆಸ್ಪತ್ರೆಗಳು, ಖಾಸಗಿ ಆಸ್ಪತ್ರೆಗಳು, ನರ್ಸಿಂಗ್‌ ಹೋಮ್‌ಗಳು, ಕ್ಲಿನಿಕ್‌ಗಳು, ಡೇ ಕೇರ್‌ ಸೆಂಟರ್‌ಗಳು ಹಾಗೂ ಡಯಾಗ್ನಸ್ಟಿಕ್‌ ಸೆಂಟರ್‌ಗಳಿಗೆ ಈ ಮಾರ್ಗಸೂಚಿ ಅನ್ವಯವಾಗಲಿದೆ. ಔಷಧಿಗಳ ಬೆಲೆ ವಿಚಾರದಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳುವುದು ಮತ್ತು ರೋಗಿಗಳಿಂದ ಹೆಚ್ಚುವರಿ ಹಣ ವಸೂಲಿ ಮಾಡುವುದನ್ನು ತಡೆಯುವುದು ಇದರ ಉದ್ದೇಶವಾಗಿದೆ.

ಆಸ್ಪತ್ರೆಗಳು ಔಷಧಿಗಳ ಬಿಲ್‌ನಲ್ಲಿ ಮೂಲ ಬೆಲೆ, ಲ್ಯಾಂಡಿಂಗ್‌ ಕಾಸ್ಟ್‌ ಹಾಗೂ ಎಂಆರ್‌ಪಿ ವಿವರಗಳನ್ನು ಕಡ್ಡಾಯವಾಗಿ ನಮೂದಿಸಬೇಕು. ಅಲ್ಲದೆ, ಮೂರು ವರ್ಷಗಳವರೆಗೆ ಸಂಬಂಧಿತ ದಾಖಲೆಗಳನ್ನು ಸಂಗ್ರಹಿಸಿಟ್ಟುಕೊಳ್ಳಬೇಕು. ಪ್ರತಿ ಔಷಧಿಯ ವಿವರಗಳೂ ಬಿಲ್‌ನಲ್ಲಿ ಸ್ಪಷ್ಟವಾಗಿರಬೇಕು.

ಔಷಧಿಗಳ ಜನರಿಕ್‌ ಹೆಸರು, ಬ್ರ್ಯಾಂಡ್‌, ಬ್ಯಾಚ್‌ ಸಂಖ್ಯೆ, ಉತ್ಪಾದನಾ ದಿನಾಂಕ ಮತ್ತು ಎಕ್ಸ್‌ಪೈರಿ ದಿನಾಂಕದ ವಿವರಗಳನ್ನೂ ನಮೂದಿಸಬೇಕು. ಔಷಧಿಗಳ ಬೆಲೆಯನ್ನು ಆಸ್ಪತ್ರೆಯ ಮುಖ್ಯದ್ವಾರ ಅಥವಾ ಸೂಕ್ತ ಸ್ಥಳದಲ್ಲಿ ಪ್ರದರ್ಶಿಸುವಂತೆ ಮಾರ್ಗಸೂಚಿಯಲ್ಲಿ ಸೂಚಿಸಲಾಗಿದೆ.
ರಾಷ್ಟ್ರೀಯ ಔಷಧ ಬೆಲೆ ಪ್ರಾಧಿಕಾರ ನಿಗದಿಪಡಿಸಿರುವ ಬೆಲೆ ನಿಯಮಗಳನ್ನು ಉಲ್ಲಂಘಿಸುವಂತಿಲ್ಲ. ಎಂಆರ್‌ಪಿಗಿಂತ ಹೆಚ್ಚಿನ ದರ ವಸೂಲಿ ಮಾಡುವುದು ಅಥವಾ ನಿಗದಿತ ಬೆಲೆಗಿಂತ ಅಧಿಕ ದರದಲ್ಲಿ ಔಷಧಿ ಮಾರಾಟ ಮಾಡುವುದು ಕಂಡುಬಂದರೆ ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಲಾಗಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಆರೋಗ್ಯ ಸಚಿವ ಯು.ಟಿ. ಖಾದರ್‌, ಎಲ್ಲರೂ ಮಾರ್ಗಸೂಚಿಯಲ್ಲಿರುವ ನಿಯಮಗಳನ್ನು ಪಾಲಿಸಬೇಕು ಎಂದು ಹೇಳಿದ್ದಾರೆ. ಇಷ್ಟ ಬಂದಂತೆ ಬಿಲ್‌ ನೀಡಲು ಸಾಧ್ಯವಿಲ್ಲ. ಆದೇಶದಲ್ಲಿರುವ ನಿಯಮಗಳನ್ನು ಪಾಲಿಸುವುದರಲ್ಲಿ ಏನು ಕಷ್ಟ? ನಿಯಮ ಪಾಲಿಸದವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಈ ಸಂಬಂಧ ಈಗಾಗಲೇ ಸರ್ಕ್ಯುಲರ್‌ ಹೊರಡಿಸಲಾಗಿದೆ ಎಂದು ತಿಳಿಸಿದ್ದಾರೆ.

Generating image…

Editor Reporter

Share ePaper Clip

Preparing image...

   SHARE  

Facebook
Twitter
Telegram
WhatsApp

   TOP NEWS  

   RECENT NEWS