ರ್ಯಾಪಿಡೋ ಬೈಕ್ ಚಾಲಕನೊಬ್ಬ ಯುವತಿಯೊಂದಿಗೆ ನಡೆದುಕೊಂಡ ರೀತಿಯ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ನಡೆಯುತ್ತಿದೆ. ಯುವತಿಯನ್ನು ಬೈಕ್ನಲ್ಲಿ ಕೂರಿಸಿಕೊಳ್ಳದೇ, ಆಕೆಯಿಂದ ಒಟಿಪಿ ಪಡೆದು ಹೆಲ್ಮೆಟ್ ನೀಡಿದ ಬಳಿಕ ಚಾಲಕ ಒಬ್ಬರೇ ಬೈಕ್ ಚಲಾಯಿಸಿಕೊಂಡು ಹೋಗಿದ್ದಾರೆ ಎಂದು ಹೇಳಲಾಗಿದೆ.
ಈ ಕುರಿತು ‘retired sports fan’ ಎಂಬ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಲಾಗಿದೆ. ಚಾಲಕ ಬಂದಾಗ ಒಟಿಪಿ ನೀಡಿದ್ದು, ಅವರು ನೀಡಿದ ಹೆಲ್ಮೆಟ್ ಧರಿಸಿದ್ದಾಗಿ ಯುವತಿ ಹೇಳಿಕೊಂಡಿದ್ದಾರೆ. ಬಳಿಕ ಚಾಲಕ ಬೈಕ್ನಲ್ಲಿ ತನ್ನನ್ನು ಕೂರಿಸಿಕೊಳ್ಳದೇ ಸುಮಾರು 10 ನಿಮಿಷಗಳ ಕಾಲ ಒಬ್ಬರೇ ಪ್ರಯಾಣಿಸಿದ್ದಾರೆ ಎಂದು ಪೋಸ್ಟ್ನಲ್ಲಿ ವಿವರಿಸಲಾಗಿದೆ.
ಈ ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಘಟನೆಗೆ ಸಂಬಂಧಿಸಿದಂತೆ ನೆಟ್ಟಿಗರು ವಿವಿಧ ರೀತಿಯ ಪ್ರತಿಕ್ರಿಯೆಗಳನ್ನು ನೀಡಿದ್ದಾರೆ. ಕೆಲ ಕನ್ನಡಿಗರು ಈ ಘಟನೆಯನ್ನು ‘ಗಾಳಿಪಟ’ ಸಿನಿಮಾದ ದೃಶ್ಯವೊಂದಕ್ಕೆ ಹೋಲಿಸಿ ಕಾಮೆಂಟ್ ಮಾಡಿದ್ದಾರೆ.










