ಪ್ರಧಾನಿ ನರೇಂದ್ರ ಮೋದಿ ಅವರ ಅಧಿಕೃತ ಫೇಸ್‌ಬುಕ್ ಖಾತೆಯಲ್ಲಿ ಪ್ರಕಟವಾಗಿದ್ದ ವಿಡಿಯೋ ಸಾರ್ವಜನಿಕ ವೀಕ್ಷಣೆಯಿಂದ ಕಾಣೆಯಾಗಿದ್ದ ಘಟನೆಗೆ ಸಂಬಂಧಿಸಿದಂತೆ ಟೆಕ್ ದೈತ್ಯ ಮೆಟಾ ಕ್ಷಮೆಯಾಚಿಸಿದೆ. ಈ ವಿಡಿಯೋ ಉದ್ದೇಶಪೂರ್ವಕವಾಗಿ ತೆಗೆದುಹಾಕಲಾಗಿಲ್ಲ, ತಾಂತ್ರಿಕ ದೋಷದಿಂದ ಈ ಸಮಸ್ಯೆ ಉಂಟಾಗಿದೆ ಎಂದು ಕಂಪನಿ ಸ್ಪಷ್ಟಪಡಿಸಿದೆ.
ಮೆಟಾ ನೀಡಿದ ಮಾಹಿತಿಯಂತೆ, ತಾಂತ್ರಿಕ ದೋಷದಿಂದ ವಿಡಿಯೋ ತಪ್ಪಾಗಿ ಅಳಿಸಲ್ಪಟ್ಟಿದ್ದು, ಸೋಮವಾರವೇ ಅದನ್ನು ಮರುಸ್ಥಾಪಿಸಲಾಗಿದೆ. ಈ ಬೆಳವಣಿಗೆಯ ನಂತರ ಸಾಮಾಜಿಕ ಜಾಲತಾಣಗಳಲ್ಲಿ ವಿವಿಧ ರೀತಿಯ ಚರ್ಚೆಗಳು ನಡೆದಿದ್ದರೂ, ಕಂಪನಿ ಇದು ಯಾವುದೇ ಉದ್ದೇಶಿತ ಕ್ರಮವಲ್ಲ ಎಂದು ಪುನರುಚ್ಚರಿಸಿದೆ.
ಈ ಕುರಿತು ಪ್ರತಿಕ್ರಿಯಿಸಿದ ಮೆಟಾ ವಕ್ತಾರರು, “ವಿಡಿಯೋ ತಪ್ಪಾಗಿ ಡಿಲೀಟ್ ಆಗಿತ್ತು. ಇದೀಗ ಅದನ್ನು ಮರುಸ್ಥಾಪಿಸಲಾಗಿದೆ. ಈ ತಪ್ಪಿಗಾಗಿ ನಾವು ಕ್ಷಮೆಯಾಚಿಸುತ್ತೇವೆ. ಇದು ಯಾವುದೇ ಉದ್ದೇಶಪೂರ್ವಕ ಕ್ರಮವಾಗಿರಲಿಲ್ಲ” ಎಂದು ತಿಳಿಸಿದ್ದಾರೆ.










