ʻಬಸವ ಮಂಟಪʼ ಕೃತಿ ಬ್ಯಾನ್‌ – ಕಾನೂನು ಅಭಿಪ್ರಾಯ ಪಡೆದು ಕ್ರಮ ವಹಿಸಲು ಸಿಎಸ್‌ಗೆ ಸಿಎಂ ಸೂಚನೆ..

ಸುದ್ದಿ ಮತ್ತು ಪ್ರಕಟಣೆಗಳಿಗಾಗಿ:
9000144466
kannadasakshi.in

ʻಬಸವ ಮಂಟಪʼ ಕೃತಿ ಬ್ಯಾನ್‌ – ಕಾನೂನು ಅಭಿಪ್ರಾಯ ಪಡೆದು ಕ್ರಮ ವಹಿಸಲು ಸಿಎಸ್‌ಗೆ ಸಿಎಂ ಸೂಚನೆ..

19 Nov 2026, 10:47 pm KANNADA SAKSHI

12ನೇ ಶತಮಾನದ ಕ್ರಾಂತಿಕಾರಿ ಭಕ್ತಿ ಭಂಡಾರಿ ಬಸವಣ್ಣ ವಿರುದ್ಧ ಅಮೆರಿಕ ಮೂಲದ ಲೇಖಕ ರವಿ ಹಂಜ್ (Author Ravi Hanj) ಬರೆದಿರುವ ಪುಸ್ತಕ ʻಬಸವ ಮಂಟಪʼ (Basava Mantapa) ಬ್ಯಾನ್‌ ಮಾಡಲು ಇಂದಿನ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂದು ಡಿಸಿಎಂ ಪರಮೇಶ್ವರ್‌ ತಿಳಿಸಿದ್ದಾರೆ.
ಈ ಮಧ್ಯೆ ರವಿ ಹಂಜ್‌ ಅವರ ʻಬಸವ ಮಂಟಪʼ ಕೃತಿ ಬ್ಯಾನ್‌ ಮಾಡುವ ಸಂಬಂಧ ಕಾನೂನು ಅಭಿಪ್ರಾಯ ಪಡೆಯಲು ಸಿಎಂ ಡಿಕೆ ಶಿವಕುಮಾರ್‌ ಅವರು, ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್‌ ಅವರಿಗೆ ಸೂಚನೆ ನೀಡಿದ್ದಾರೆ ಎಂದು ತಿಳಿದುಬಂದಿದೆ.
ಬಸವ ಸಮಿತಿ ಅಧ್ಯಕ್ಷ ಅರವಿಂದ ಜತ್ತಿ ಅವರು ನೀಡಿದ ದೂರನ್ನು ಆಧರಿಸಿ ಸಿಎಸ್‌ಗೆ ಮುಖ್ಯಮಂತ್ರಿಗಳು ಸೂಚನೆ ನೀಡಿದ್ದಾರೆ. ದೂರಿನ‌ ಪ್ರತಿಯಲ್ಲಿ ಲಿಂಗಾಯತ ಸಚಿವರು, ಶಾಸಕರ ಸಹಿಯೂ ಇದೆ. ಸಚಿವರಾದ ಎಂ.ಬಿ ಪಾಟೀಲ್, ಬಸವರಾಜ ರಾಯರೆಡ್ಡಿ, ಶರಣಪ್ರಕಾಶ್‌ ಪಾಟೀಲ್, ಈಶ್ವರ್ ಖಂಡ್ರೆ, ಎಸ್.ಎಸ್ ಮಲ್ಲಿಕಾರ್ಜುನ ಮುಂತಾದವರ ಸಹಿಯೂ ಇದೆ.
ಕೃತಿ ಬ್ಯಾನ್ ಮಾಡುವ ಸಂಬಂಧ ಕಾನೂನು ಅಭಿಪ್ರಾಯ ಪಡೆಯುವಂತೆ ಹಾಗೂ ಸಂಬಂಧಿಸಿದ ವ್ಯಕ್ತಿಗಳ ವಿರುದ್ಧ ಕ್ರಮ ವಹಿಸಲು ಸಿಎಂ ಸೂಚನೆ ನೀಡಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ. ಸದ್ಯದಲ್ಲೇ ಈ ಸಂಬಂಧ ರಾಜ್ಯ ಸರ್ಕಾರ ಅಧಿಕೃತ ಘೋಷಣೆ ಹೊರಡಿಸುವ ಸಾಧ್ಯತೆಯೂ ಇದೆ ಎನ್ನಲಾಗಿದೆ. ಇದನ್ನೂ ಓದಿ: 
ರವಿ ಹಂಜ್‌ ವಿರುದ್ಧದ ಆರೋಪವೇನು?ಪುಸ್ತಕದಲ್ಲಿ ಸಾಮಾಜಿಕ ಸುಧಾರಕ ಬಸವಣ್ನನವರ ಚಾರಿತ್ರ್ಯ ವಧೆ ಮಾಡಿರುವ ಆರೋಪ ಮಾಡಲಾಗಿದೆ. ಬಸವಣ್ಣನವರನ್ನ ಕೊಲೆಗಾರನ ರೀತಿ ಬಿಂಬಿಸಿರುವ ಲೇಖಕ ಬಿಜ್ಜಳನ ಹತ್ಯೆಯಲ್ಲಿ ಬಸವಣ್ಣನ ಪಾತ್ರ ಎಂದಿದ್ದಾರೆ. ಸದ್ಯ ಇದು ವೀರಶೈವ ಲಿಂಗಾಯತ (Veerashaiva Lingayat) ಸಮುದಾಯದವರನ್ನ ಕೆರಳಿಸಿದೆ. ಲೇಖಕ ರವಿ ಹಂಜ್ ಆಕ್ರೋಶ ಹೊರಹಾಕಿದ್ದು, ಪುಸ್ತಕಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ತಮ್ಮ ಲೇಖನಕ್ಕೆ ವ್ಯಾಪಕ ವಿರೋಧ ವ್ಯಕ್ತವಾದ ಬೆನ್ನಲ್ಲೇ ಲೇಖಕ ರವಿ ಹಂಜ್ ಸ್ಪಷ್ಟನೆ ನೀಡಿದ್ದಾರೆ. ʻಪಬ್ಲಿಕ್‌ ಟಿವಿʼ ಜೊತೆಗೆ ಮಾತನಾಡಿರುವ ಅವರು, ವೀರಶೈವ ಲಿಂಗಾಯತ ಒಂದೇ ಅನ್ನೋದಷ್ಟೇ ನನ್ನ ವಾದ. ಧರ್ಮ ವಿರೋಧಿಗಳು ನನ್ನ ವಾದ ಒಪ್ಪೋದಿಲ್ಲ. ಬಸವಣ್ಣನ ವಚನಗಳ ಬಗ್ಗೆ ಆರೋಪ ಮಾಡಿದ್ದವರೂ ಓದಿಕೊಂಡಿಲ್ಲ. ನನ್ನ ಹೇಳಿಕೆಗೆ ನಾನು ಈಗಲೂ ಬದ್ಧನಿದ್ದೇನೆ. ಯಾವುದೇ ದೂರು ನೀಡಿದರೂ ಎದುರಿಸಲು ಸಿದ್ಧನಿದ್ದೇನೆ ಎಂದು ಹೇಳಿದ್ದಾರೆ.

Generating image…

ರವಿ ಹಂಜ್‌ ವಿರುದ್ಧದ ಆರೋಪವೇನು?
ಪುಸ್ತಕದಲ್ಲಿ ಸಾಮಾಜಿಕ ಸುಧಾರಕ ಬಸವಣ್ನನವರ ಚಾರಿತ್ರ್ಯ ವಧೆ ಮಾಡಿರುವ ಆರೋಪ ಮಾಡಲಾಗಿದೆ. ಬಸವಣ್ಣನವರನ್ನ ಕೊಲೆಗಾರನ ರೀತಿ ಬಿಂಬಿಸಿರುವ ಲೇಖಕ ಬಿಜ್ಜಳನ ಹತ್ಯೆಯಲ್ಲಿ ಬಸವಣ್ಣನ ಪಾತ್ರ ಎಂದಿದ್ದಾರೆ. ಸದ್ಯ ಇದು ವೀರಶೈವ ಲಿಂಗಾಯತ (Veerashaiva Lingayat) ಸಮುದಾಯದವರನ್ನ ಕೆರಳಿಸಿದೆ. ಲೇಖಕ ರವಿ ಹಂಜ್ ಆಕ್ರೋಶ ಹೊರಹಾಕಿದ್ದು, ಪುಸ್ತಕಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ತಮ್ಮ ಲೇಖನಕ್ಕೆ ವ್ಯಾಪಕ ವಿರೋಧ ವ್ಯಕ್ತವಾದ ಬೆನ್ನಲ್ಲೇ ಲೇಖಕ ರವಿ ಹಂಜ್ ಸ್ಪಷ್ಟನೆ ನೀಡಿದ್ದಾರೆ. ʻಪಬ್ಲಿಕ್‌ ಟಿವಿʼ ಜೊತೆಗೆ ಮಾತನಾಡಿರುವ ಅವರು, ವೀರಶೈವ ಲಿಂಗಾಯತ ಒಂದೇ ಅನ್ನೋದಷ್ಟೇ ನನ್ನ ವಾದ. ಧರ್ಮ ವಿರೋಧಿಗಳು ನನ್ನ ವಾದ ಒಪ್ಪೋದಿಲ್ಲ. ಬಸವಣ್ಣನ ವಚನಗಳ ಬಗ್ಗೆ ಆರೋಪ ಮಾಡಿದ್ದವರೂ ಓದಿಕೊಂಡಿಲ್ಲ. ನನ್ನ ಹೇಳಿಕೆಗೆ ನಾನು ಈಗಲೂ ಬದ್ಧನಿದ್ದೇನೆ. ಯಾವುದೇ ದೂರು ನೀಡಿದರೂ ಎದುರಿಸಲು ಸಿದ್ಧನಿದ್ದೇನೆ ಎಂದು ಹೇಳಿದ್ದಾರೆ.

Editor Reporter
kannadasakshi.in

ʻಬಸವ ಮಂಟಪʼ ಕೃತಿ ಬ್ಯಾನ್‌ – ಕಾನೂನು ಅಭಿಪ್ರಾಯ ಪಡೆದು ಕ್ರಮ ವಹಿಸಲು ಸಿಎಸ್‌ಗೆ ಸಿಎಂ ಸೂಚನೆ..

12ನೇ ಶತಮಾನದ ಕ್ರಾಂತಿಕಾರಿ ಭಕ್ತಿ ಭಂಡಾರಿ ಬಸವಣ್ಣ ವಿರುದ್ಧ ಅಮೆರಿಕ ಮೂಲದ ಲೇಖಕ ರವಿ ಹಂಜ್ (Author Ravi Hanj) ಬರೆದಿರುವ ಪುಸ್ತಕ ʻಬಸವ ಮಂಟಪʼ (Basava Mantapa) ಬ್ಯಾನ್‌ ಮಾಡಲು ಇಂದಿನ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂದು ಡಿಸಿಎಂ ಪರಮೇಶ್ವರ್‌ ತಿಳಿಸಿದ್ದಾರೆ.
ಈ ಮಧ್ಯೆ ರವಿ ಹಂಜ್‌ ಅವರ ʻಬಸವ ಮಂಟಪʼ ಕೃತಿ ಬ್ಯಾನ್‌ ಮಾಡುವ ಸಂಬಂಧ ಕಾನೂನು ಅಭಿಪ್ರಾಯ ಪಡೆಯಲು ಸಿಎಂ ಡಿಕೆ ಶಿವಕುಮಾರ್‌ ಅವರು, ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್‌ ಅವರಿಗೆ ಸೂಚನೆ ನೀಡಿದ್ದಾರೆ ಎಂದು ತಿಳಿದುಬಂದಿದೆ.
ಬಸವ ಸಮಿತಿ ಅಧ್ಯಕ್ಷ ಅರವಿಂದ ಜತ್ತಿ ಅವರು ನೀಡಿದ ದೂರನ್ನು ಆಧರಿಸಿ ಸಿಎಸ್‌ಗೆ ಮುಖ್ಯಮಂತ್ರಿಗಳು ಸೂಚನೆ ನೀಡಿದ್ದಾರೆ. ದೂರಿನ‌ ಪ್ರತಿಯಲ್ಲಿ ಲಿಂಗಾಯತ ಸಚಿವರು, ಶಾಸಕರ ಸಹಿಯೂ ಇದೆ. ಸಚಿವರಾದ ಎಂ.ಬಿ ಪಾಟೀಲ್, ಬಸವರಾಜ ರಾಯರೆಡ್ಡಿ, ಶರಣಪ್ರಕಾಶ್‌ ಪಾಟೀಲ್, ಈಶ್ವರ್ ಖಂಡ್ರೆ, ಎಸ್.ಎಸ್ ಮಲ್ಲಿಕಾರ್ಜುನ ಮುಂತಾದವರ ಸಹಿಯೂ ಇದೆ.
ಕೃತಿ ಬ್ಯಾನ್ ಮಾಡುವ ಸಂಬಂಧ ಕಾನೂನು ಅಭಿಪ್ರಾಯ ಪಡೆಯುವಂತೆ ಹಾಗೂ ಸಂಬಂಧಿಸಿದ ವ್ಯಕ್ತಿಗಳ ವಿರುದ್ಧ ಕ್ರಮ ವಹಿಸಲು ಸಿಎಂ ಸೂಚನೆ ನೀಡಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ. ಸದ್ಯದಲ್ಲೇ ಈ ಸಂಬಂಧ ರಾಜ್ಯ ಸರ್ಕಾರ ಅಧಿಕೃತ ಘೋಷಣೆ ಹೊರಡಿಸುವ ಸಾಧ್ಯತೆಯೂ ಇದೆ ಎನ್ನಲಾಗಿದೆ. ಇದನ್ನೂ ಓದಿ: 
ರವಿ ಹಂಜ್‌ ವಿರುದ್ಧದ ಆರೋಪವೇನು?ಪುಸ್ತಕದಲ್ಲಿ ಸಾಮಾಜಿಕ ಸುಧಾರಕ ಬಸವಣ್ನನವರ ಚಾರಿತ್ರ್ಯ ವಧೆ ಮಾಡಿರುವ ಆರೋಪ ಮಾಡಲಾಗಿದೆ. ಬಸವಣ್ಣನವರನ್ನ ಕೊಲೆಗಾರನ ರೀತಿ ಬಿಂಬಿಸಿರುವ ಲೇಖಕ ಬಿಜ್ಜಳನ ಹತ್ಯೆಯಲ್ಲಿ ಬಸವಣ್ಣನ ಪಾತ್ರ ಎಂದಿದ್ದಾರೆ. ಸದ್ಯ ಇದು ವೀರಶೈವ ಲಿಂಗಾಯತ (Veerashaiva Lingayat) ಸಮುದಾಯದವರನ್ನ ಕೆರಳಿಸಿದೆ. ಲೇಖಕ ರವಿ ಹಂಜ್ ಆಕ್ರೋಶ ಹೊರಹಾಕಿದ್ದು, ಪುಸ್ತಕಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ತಮ್ಮ ಲೇಖನಕ್ಕೆ ವ್ಯಾಪಕ ವಿರೋಧ ವ್ಯಕ್ತವಾದ ಬೆನ್ನಲ್ಲೇ ಲೇಖಕ ರವಿ ಹಂಜ್ ಸ್ಪಷ್ಟನೆ ನೀಡಿದ್ದಾರೆ. ʻಪಬ್ಲಿಕ್‌ ಟಿವಿʼ ಜೊತೆಗೆ ಮಾತನಾಡಿರುವ ಅವರು, ವೀರಶೈವ ಲಿಂಗಾಯತ ಒಂದೇ ಅನ್ನೋದಷ್ಟೇ ನನ್ನ ವಾದ. ಧರ್ಮ ವಿರೋಧಿಗಳು ನನ್ನ ವಾದ ಒಪ್ಪೋದಿಲ್ಲ. ಬಸವಣ್ಣನ ವಚನಗಳ ಬಗ್ಗೆ ಆರೋಪ ಮಾಡಿದ್ದವರೂ ಓದಿಕೊಂಡಿಲ್ಲ. ನನ್ನ ಹೇಳಿಕೆಗೆ ನಾನು ಈಗಲೂ ಬದ್ಧನಿದ್ದೇನೆ. ಯಾವುದೇ ದೂರು ನೀಡಿದರೂ ಎದುರಿಸಲು ಸಿದ್ಧನಿದ್ದೇನೆ ಎಂದು ಹೇಳಿದ್ದಾರೆ.

Share ePaper Clip

Preparing image...

   SHARE  

Facebook
Twitter
Telegram
WhatsApp

   TOP NEWS  

   RECENT NEWS