ಬುಲೆಟ್ ರೈಲು ಯೋಜನೆ ವೆಚ್ಚ ದುಪ್ಪಟ್ಟು: 2.02 ಲಕ್ಷ ಕೋಟಿಗೆ ಏರಿಕೆ..

ಸುದ್ದಿ ಮತ್ತು ಪ್ರಕಟಣೆಗಳಿಗಾಗಿ:
9000144466
kannadasakshi.in

ಬುಲೆಟ್ ರೈಲು ಯೋಜನೆ ವೆಚ್ಚ ದುಪ್ಪಟ್ಟು: 2.02 ಲಕ್ಷ ಕೋಟಿಗೆ ಏರಿಕೆ..

19 Nov 2026, 8:57 am KANNADA SAKSHI

ದೇಶದ ಮಹತ್ವಾಕಾಂಕ್ಷೆಯ ಅಹಮದಾಬಾದ್-ಮುಂಬೈ ಹೈ-ಸ್ಪೀಡ್ ರೈಲು ಕಾರಿಡಾರ್ (MAHSR)ಯೋಜನೆಯ ಅಂದಾಜು ವೆಚ್ಚವು ಆರಂಭಿಕ ಮೊತ್ತಕ್ಕಿಂತ ಬಹುತೇಕ ದುಪ್ಪಟ್ಟಾಗಿದೆ. ಮಾರ್ಚ್ 2026ರ ಅಂತ್ಯದ ವೇಳೆಗೆ ಈ ಯೋಜನೆಗಾಗಿ ರಾಷ್ಟ್ರೀಯ ಹೈ-ಸ್ಪೀಡ್ ರೈಲು ನಿಗಮ ನಿಯಮಿತ (NHSRCL) ಈಗಾಗಲೇ 92,761 ಕೋಟಿ ಖರ್ಚು ಮಾಡಿದೆ ಎಂಬ ಮಹತ್ವದ ಮಾಹಿತಿ ಮಾಹಿತಿ ಹಕ್ಕು ಕಾಯ್ದೆಯಡಿ (RTI) ಬಹಿರಂಗವಾಗಿದೆ.
ಮಹಾರಾಷ್ಟ್ರ, ಗುಜರಾತ್ ಹಾಗೂ ಕೇಂದ್ರಾಡಳಿತ ಪ್ರದೇಶವಾದ ದಾದ್ರಾ ಮತ್ತು ನಗರ ಹವೇಲಿ ಮೂಲಕ ಹಾದುಹೋಗುವ 508 ಕಿ.ಮೀ. ಉದ್ದದ ಈ ಬುಲೆಟ್ ರೈಲು ಯೋಜನೆಯ ಆರಂಭಿಕ ಅಂದಾಜು ವೆಚ್ಚ 1,08,000 ಕೋಟಿ ರೂ. ಇತ್ತು. ಆದರೆ ಇದೀಗ ಪರಿಷ್ಕೃತ ಅಂದಾಜು ವೆಚ್ಚವು ಬರೋಬ್ಬರಿ 2,02,797 ಕೋಟಿ ರೂ.ಗೆ ಏರಿಕೆಯಾಗಿದೆ. ಭೂಸ್ವಾಧೀನ ಪರಿಹಾರ ಸೇರಿದಂತೆ ಹಲವು ಕಾರಣಗಳಿಂದಾಗಿ ಈ ಯೋಜನೆ ಗಣನೀಯವಾಗಿ ವಿಳಂಬವಾಗಿದೆ.

ಆರ್‌ಟಿಐ ಅರ್ಜಿಗೆ ಉತ್ತರಿಸಿರುವ ಎನ್‌ಎಚ್‌ಎಸ್‌ಆರ್‌ಸಿಎಲ್ (NHSRCL) ಮೂಲತಃ ಈ ಯೋಜನೆಯನ್ನು 2023ರ ವೇಳೆಗೆ ಪೂರ್ಣಗೊಳಿಸುವ ಗುರಿ ಹೊಂದಲಾಗಿತ್ತು ಎಂದು ತಿಳಿಸಿದೆ. ಈ ಯೋಜನೆ ಯಾವಾಗ ಪೂರ್ಣಗೊಳ್ಳಬಹುದು ಎಂಬ ಪ್ರಶ್ನೆಗೆ, ಎಲ್ಲಾ ಗುತ್ತಿಗೆ ಪ್ಯಾಕೇಜ್‌ಗಳನ್ನು ನೀಡಿದ ನಂತರವಷ್ಟೇ ಯೋಜನೆ ಪೂರ್ಣಗೊಳ್ಳುವ ಅಂದಾಜು ಸಮಯವನ್ನು ನಿರ್ಧರಿಸಲು ಸಾಧ್ಯ ಎಂದು ಉತ್ತರಿಸಿದೆ.

ಜಪಾನಿನ ಟ್ರ್ಯಾಕ್ ತಂತ್ರಜ್ಞಾನ, ಜಪಾನೇತರ ಸಿಗ್ನಲಿಂಗ್ ವ್ಯವಸ್ಥೆ ಮತ್ತು ಭಾರತದಲ್ಲಿ ನಿರ್ಮಿತವಾದ ರೈಲುಗಳ ಸಂಯೋಜನೆಯು ಮೂಲ ಯೋಜನೆಯ ಭಾಗವಾಗಿತ್ತೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿರುವ ನಿಗಮ, ಆರಂಭದಲ್ಲಿ ಜಪಾನಿನ ಶಿಂಕಾನ್ಸೆನ್ (Shinkansen) ರೈಲುಗಳನ್ನು ಬಳಸಿ ಕಾರ್ಯಾಚರಣೆ ಆರಂಭಿಸಲು ಯೋಜಿಸಲಾಗಿತ್ತು. ಆದರೆ ಇದೀಗ ದೇಶೀಯವಾಗಿ ಅಭಿವೃದ್ಧಿಪಡಿಸಿದ ರೈಲು ಸೆಟ್‌ಗಳೊಂದಿಗೆ (Indigenous Trainset) ಕಾರ್ಯಾಚರಣೆ ಪ್ರಾರಂಭಿಸಲು ನಿರ್ಧರಿಸಲಾಗಿದೆ ಎಂದು ಸ್ಪಷ್ಟಪಡಿಸಿದೆ.

ರೈಲುಗಳ ಪೂರೈಕೆ ವೇಳಾಪಟ್ಟಿಯ ಕುರಿತು ಮಾಹಿತಿ ನೀಡಿರುವ ನಿಗಮ, “ಭಾರತದ ಬಿಇಎಂಎಲ್ ಲಿಮಿಟೆಡ್ (BEML Ltd) ಸಂಸ್ಥೆಯಿಂದ ಮೊದಲ ಸ್ವದೇಶಿ ನಿರ್ಮಿತ ಬುಲೆಟ್ ರೈಲು ಸೆಟ್ ಅನ್ನು 2027ರ ಫೆಬ್ರವರಿಯಲ್ಲಿ ರವಾನಿಸಲು ಯೋಜಿಸಲಾಗಿದೆ. ಆ ಬಳಿಕ ಉಳಿದ ರೈಲು ಸೆಟ್‌ಗಳು ಹಂತಹಂತವಾಗಿ ಪೂರೈಕೆಯಾಗಲಿವೆ” ಎಂದು ತಿಳಿಸಿದೆ.

ಸಿಗ್ನಲಿಂಗ್ ವ್ಯವಸ್ಥೆ ಖರೀದಿಗೆ ಸಂಬಂಧಿಸಿದಂತೆ ಭಾರತ ಮತ್ತು ಜಪಾನ್ ಸರ್ಕಾರಗಳ ನಡುವೆ ಭಿನ್ನಾಭಿಪ್ರಾಯ ಮೂಡಿದೆ ಎಂಬ ವರದಿಗಳ ಕುರಿತ ಪತ್ರವ್ಯವಹಾರದ ಪ್ರತಿಗಳನ್ನು ನೀಡಲು ನಿಗಮ ನಿರಾಕರಿಸಿದೆ. ಉಭಯ ಸರ್ಕಾರಗಳ ನಡುವಿನ ಗೌಪ್ಯತಾ ಒಪ್ಪಂದದ (Non-Disclosure Agreement) ಅಡಿಯಲ್ಲಿ ಈ ದಾಖಲೆಗಳನ್ನು ಹಂಚಿಕೊಳ್ಳಲು ನಿರ್ಬಂಧವಿದೆ ಎಂದು ಕಾರಣ ನೀಡಿದೆ.

ಭಾರತದಲ್ಲಿ ತಯಾರಾದ ರೈಲುಗಳನ್ನು ಬಳಸಲು ಜಪಾನ್ ಸರ್ಕಾರ ಅನುಮೋದನೆ ನೀಡಿದೆಯೇ ಅಥವಾ ಆಕ್ಷೇಪ ವ್ಯಕ್ತಪಡಿಸಿದೆಯೇ ಎಂಬ ದಾಖಲೆಗಳನ್ನು ನೀಡಲೂ ಸಹ ನಿಗಮ ನಿರಾಕರಿಸಿದ್ದು, ವಿದೇಶಿ ಸರ್ಕಾರದಿಂದ ಗೌಪ್ಯವಾಗಿ ಪಡೆದ ಮಾಹಿತಿಯನ್ನು ಬಹಿರಂಗಪಡಿಸುವುದರಿಂದ ವಿನಾಯಿತಿ ನೀಡುವ ಆರ್‌ಟಿಐ ಕಾಯ್ದೆಯನ್ನು ಉಲ್ಲೇಖಿಸಿದೆ.

Generating image…

Editor Reporter

Share ePaper Clip

Preparing image...

   SHARE  

Facebook
Twitter
Telegram
WhatsApp

   TOP NEWS  

   RECENT NEWS