ಹಿರಿಯೂರು ಉಪ ಚುನಾವಣೆ ಟಿಕೆಟ್ ಜೆಡಿಎಸ್ಗೆ (JDS) ನೀಡುವಂತೆ ಕೇಂದ್ರ ಸಚಿವ ಹೆಚ್ಡಿ ಕುಮಾರಸ್ವಾಮಿ (HD Kumaraswamy) ಅವರು ಕೇಂದ್ರ ಗೃಹ ಸಚಿವ ಅಮಿತ್ ಶಾರನ್ನು (Amit Shah) ಮನವರಿಗೆ ಮಾಡಿದ್ದಾರೆ.
ಬಿಜೆಪಿ-ಜೆಡಿಎಸ್ ಮಧ್ಯೆ ಚಿತ್ರದುರ್ಗದ (Chitradurga) ಹಿರಿಯೂರು ಉಪ ಚುನಾವಣೆ ಟಿಕೆಟ್ ಫೈಟ್ ಜೋರಾಗಿದೆ. ರಾಜ್ಯ ಬಿಜೆಪಿ ನಾಯಕರು ಹಿರಿಯೂರು ಟಿಕೆಟ್ ನಮ್ಮ ಪಕ್ಷಕ್ಕೇ ಬೇಕು. ಅಲ್ಲಿ ನಮ್ಮ ಪಕ್ಷಕ್ಕೆ ಬೆಂಬಲ ಇದೆ ಅಂತ ವಾದಿಸ್ತಿದ್ದಾರೆ.
ಈ ಹೊತ್ತಲ್ಲೇ ಜೆಡಿಎಸ್ ರಾಜ್ಯಾಧ್ಯಕ್ಷರೂ ಆಗಿರುವ ಕೇಂದ್ರ ಸಚಿವ ಕುಮಾರಸ್ವಾಮಿ ನಿನ್ನೆ (ನ.18) ದೆಹಲಿಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾರನ್ನು ಭೇಟಿಯಾಗಿದ್ದಾರೆ. ಎಂಎಲ್ಸಿ ಚುನಾವಣೆಯಲ್ಲಿ ಒಟ್ಟಾಗಿ ಹೋಗಿದ್ದಕ್ಕೆ ನಾವು ಗೆದ್ದಿದ್ದೇವೆ. ಹಿರಿಯೂರಿನಲ್ಲೂ ಒಟ್ಟಿಗೆ ಹೋದ್ರೆ ಗೆಲ್ಲುವ ಸಾಧ್ಯ ಇದೆ ಅಂತ ನಿನ್ನೆ ಮನವರಿಕೆ ಮಾಡಿಕೊಟ್ಟಿದ್ದಾರೆ.
ಇಂದು (ನ.19) ಮತ್ತೊಮ್ಮೆ ಭೇಟಿಯಾಗಿದ್ದು, ಜೆಡಿಎಸ್ಗೆ ಯಾಕೆ ಟಿಕೆಟ್ ಬೇಕು ಅನ್ನೋ ವಿಚಾರ ವಿವರವಾಗಿ ಚರ್ಚಿಸಿದ್ದಾರೆ. ಕಳೆದ 15 ವರ್ಷಗಳ ಅಂಕಿ ಅಂಶಗಳ ಸಮೇತ ಅಮಿತ್ ಶಾ ಜೊತೆ ಮಾತುಕತೆ ನಡೆಸಿದ್ದಾರೆ. ಕಾಂಗ್ರೆಸ್ ವಿರುದ್ದ ರಾಜ್ಯದಲ್ಲಿ ಜನಾಕ್ರೋಶ ಇದೆ. ಉಪಚುನಾವಣೆಯಲ್ಲಿ ನಾವು ಗೆದ್ದರೆ 2028 ಚುನಾವಣೆಗೆ ದೊಡ್ಡ ಸಂದೇಶ ರವಾನೆಯಾಗಲಿದೆ. ಎನ್ಡಿಎ ಅಡಿ ಸ್ಪರ್ಧೆ ಮಾಡಿದ್ರೆ ದೊಡ್ಡ ಸಂದೇಶ ರವಾನೆ ಆಗಲಿದೆ ಅಂತ ಮನದಟ್ಟು ಮಾಡಿದ್ದಾರೆ. ಈ ಮಧ್ಯೆ, ಅಶೋಕ್ ಮಾತಾಡಿ, ನಮ್ಮ ರಾಷ್ಟ್ರೀಯ ನಾಯಕರು ಸ್ಥಾನ ಜೆಡಿಎಸ್ಗೆ ಬಿಟ್ಟು ಕೊಡಿ ಅಂದ್ರೆ ಬಿಡ್ತೇವೆ ಅಂದಿದ್ದಾರೆ.









