ನಿಮ್ಮ ಹಸಿವು ಎಷ್ಟಿದ್ದರೂ ತೀರದು, ತೆರಿಗೆ ವಿನಾಯಿತಿಗಳಿಂದ ಬಂದ ಲಾಭವನ್ನ ಜೇಬಿಗಿಳಿಸಿಕೊಂಡಿವೆ: ಕಾರ್ಪೊರೇಟ್ ಕಂಪನಿಗಳ ವಿರುದ್ಧ ಸಿಡಿದ ಮೋದಿ..

ಸುದ್ದಿ ಮತ್ತು ಪ್ರಕಟಣೆಗಳಿಗಾಗಿ:
9000144466
kannadasakshi.in

ನಿಮ್ಮ ಹಸಿವು ಎಷ್ಟಿದ್ದರೂ ತೀರದು, ತೆರಿಗೆ ವಿನಾಯಿತಿಗಳಿಂದ ಬಂದ ಲಾಭವನ್ನ ಜೇಬಿಗಿಳಿಸಿಕೊಂಡಿವೆ: ಕಾರ್ಪೊರೇಟ್ ಕಂಪನಿಗಳ ವಿರುದ್ಧ ಸಿಡಿದ ಮೋದಿ..

19 Nov 2026, 10:46 pm KANNADA SAKSHI

ದೇಶದ ಕಾರ್ಪೊರೇಟ್‌ ಕಂಪನಿಗಳನ್ನ (Corporate Companies) ಪ್ರಧಾನಿ ನರೇಂದ್ರ ಮೋದಿ ಅವರು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ. ಸರ್ಕಾರ ನೀಡಿದ ತೆರಿಗೆ ವಿನಾಯಿತಿಗಳಿಂದ ಬಂದ ಲಾಭವನ್ನ ಕಾರ್ಪೊರೇಟ್ ಕಂಪನಿಗಳು ತಮ್ಮ ಜೇಬಿಗಿಳಿಸಿಕೊಳ್ಳುತ್ತಿವೆಯೇ ಹೊರತು, ಉದ್ಯೋಗ ಸೃಷ್ಟಿ ಮಾಡಿಲ್ಲ. ವೇತನವನ್ನೂ ಹೆಚ್ಚಿಸಿಲ್ಲ ಎಂದು ಅಸಮಾಧಾನ ಹೊರಹಾಕಿದರು.
ಗುರುವಾರ (ಇಂದು) ದೆಹಲಿಯ ಭಾರತ್‌ ಮಂಟಪದಲ್ಲಿ ನಡೆದ ಉದ್ಯಮ ಸಂಘಟನೆ ಫೆಡರೇಷನ್ ಆಫ್ ಇಂಡಿಯನ್ ಚೇಂಬರ್ಸ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರಿ (FICCI) ಸಂಸ್ಥೆಯ 100ನೇ ಸಂಸ್ಥಾಪನಾ ವರ್ಷಾಚರಣೆ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ (PM Modi) ಮಾತನಾಡಿದರು. ಈ ವೇಳೆ ಕಾರ್ಪೊರೇಟ್‌ ಕಂಪನಿಗಳ ಉದ್ಯಮಿಗಳಿಗೆ ನೇರವಾಗಿಯೇ ಚಾಟಿ ಬೀಸಿದರು.

2014ರಲ್ಲಿ ಶೇ.30ರಷ್ಟಿದ್ದ ಕಾರ್ಪೊರೇಟ್ ತೆರಿಗೆಯನ್ನ 2019ರಲ್ಲಿ ಶೇ.22ಕ್ಕೆ ಇಳಿಸಲಾಗಿದೆ. ಅಲ್ಲದೇ, ವಾರ್ಷಿಕ 12 ಲಕ್ಷ ರೂಪಾಯಿವರೆಗಿನ ಆದಾಯಕ್ಕೆ ತೆರಿಗೆ ವಿನಾಯಿತಿ ನೀಡುವ ಮೂಲಕ ಜನಸಾಮಾನ್ಯರ ಮೇಲಿನ ತೆರಿಗೆ ಹೊರೆ ಕಡಿಮೆ ಮಾಡಲಾಗಿದೆ. ಆದರೆ, ಸರ್ಕಾರದ ಈ ಕ್ರಮಗಳಿಗೆ ಪ್ರತಿಯಾಗಿ ಕಾರ್ಪೊರೇಟ್ ಕಂಪನಿಗಳು ಉದ್ಯೋಗ ಸೃಷ್ಟಿ ಅಥವಾ ವೇತನ ಹೆಚ್ಚಳದ ಮೂಲಕ ಕೊಡುಗೆ ನೀಡಿವೆಯೇ? ಎಂದು ಪ್ರಶ್ನೆ ಮಾಡಿದರು.
ಉದ್ಯೋಗಿಗಳ ವೇತನವನ್ನ ಹೆಚ್ಚಿಸಿದ್ದೀರಾ?ಉದ್ಯಮಿಗಳಿಗೆ ಖಡಕ್ಕಾಗಿ ಹೇಳಿದ ಮೋದಿ, ನೀವು ಚಪ್ಪಾಳೆ ತಟ್ಟುವುದಿಲ್ಲ ಎಂಬುದು ನನಗೆ ಗೊತ್ತು. ನಿಮ್ಮ ಹಸಿವು ಎಷ್ಟಿದೆಯೆಂದರೆ, ಎಷ್ಟೇ ತಿನ್ನಿಸಿದರೂ ನಿಮ್ಮ ಹೊಟ್ಟೆ ತುಂಬುವುದಿಲ್ಲ ಎಂಬುದು ನನಗೆ ಚೆನ್ನಾಗಿ ತಿಳಿದಿದೆ. ಸರ್ಕಾರದ ತೆರಿಗೆ ಲಾಭ ಪಡೆದು ಉದ್ಯೋಗಿಗಳ ವೇತನವನ್ನ ಹೆಚ್ಚಿಸಿದ್ದೀರಾ? ಉದ್ಯೋಗಿಗಳ ಸಂಖ್ಯೆಯನ್ನು ಹೆಚ್ಚಿಸಿದ್ದೀರಾ? ಖಂಡಿತವಾಗಿಯೂ ಇಲ್ಲ. ನಿಮ್ಮ ಮನೋಭಾವ ಏನೆಂದರೆ, ಮೋದಿ ಜಿ, ನೀವೇ ಎಲ್ಲವನ್ನೂ ಮಾಡಿ. ನಾವು ಸುಮ್ಮನೆ ನೋಡುತ್ತೇವೆ ಎಂಬಂತಿದೆ. ಇದೇ ರೀತಿ ಮುಂದುವರಿಯಬೇಕೇ? ಎಂದು ಉದ್ಯಮಿಗಳನ್ನು ಪ್ರಶ್ನಿಸಿದರು.
ಜನರ ಖರೀದಿ ಸಾಮರ್ಥ್ಯ ಹೆಚ್ಚಿಸಲು ತೆರಿಗೆ ವಿನಾಯಿತಿಮುಂದುವರಿದು ಮಾತನಾಡಿದ ಪ್ರಧಾನಿ ಮೋದಿ, ಕೇಂದ್ರ ಸರ್ಕಾರವು ಜನರ ಖರೀದಿ ಸಾಮರ್ಥ್ಯ ಹೆಚ್ಚಿಸಲು ಹಲವು ಕ್ರಮಗಳನ್ನು ಕೈಗೊಂಡಿದೆ. ಆದಾಯ ತೆರಿಗೆಯಲ್ಲಿ ಗಣನೀಯ ಪ್ರಮಾಣದ ಪರಿಹಾರ ನೀಡುವಂತಹ ಮಹತ್ವದ ನಿರ್ಧಾರವನ್ನ ನಾವು ಕೈಗೊಂಡಿದ್ದೇವೆ. ಇದರಿಂದ ಜನರ ಖರೀದಿ ಸಾಮರ್ಥ್ಯ ಗಣನೀಯವಾಗಿ ಹೆಚ್ಚಾಗಿದೆ. ಅಲ್ಲದೇ, ಆದಾಯ ತೆರಿಗೆ ಮರುಪಾವತಿ ಪ್ರಕ್ರಿಯೆಯಲ್ಲೂ ಮಹತ್ವದ ಬದಲಾವಣೆ ತರಲಾಗಿದೆ. ಹಿಂದೆ ತೆರಿಗೆ ಮರುಪಾವತಿಗಾಗಿ ಹಲವು ತಿಂಗಳು ಕಾಯಬೇಕಾಗುತ್ತಿತ್ತು. ಆದರೆ, ಈಗ ಕೇವಲ 1 ವಾರದೊಳಗೆ ತೆರಿಗೆ ಹಣ ಖಾತೆಗೆ ತಲುಪುತ್ತಿದೆ ಎಂದು ಪ್ರಧಾನಿ ವಿವರಿಸಿದರು.

ಇದಕ್ಕಾದ್ರೂ ಚಪ್ಪಾಳೆ ತಟ್ಟಿತೆರಿಗೆ ಪಾವತಿದಾರರ ಹಣ ವ್ಯವಸ್ಥೆಯಲ್ಲಿ ಅನಗತ್ಯವಾಗಿ ಸಿಲುಕಿಕೊಳ್ಳಬಾರದು ಎಂಬ ಉದ್ದೇಶದಿಂದ ತೆರಿಗೆ ರಿಟರ್ನ್ಸ್ ಮತ್ತು ಮರುಪಾವತಿ ವ್ಯವಸ್ಥೆಯನ್ನು ಸರಳಗೊಳಿಸಿದ್ದೇವೆ. ಹಿಂದೆ 8 ತಿಂಗಳ ನಂತರ ಪತ್ರ ಬರುತ್ತಿತ್ತು. ಆದರೆ, ಈಗ ಒಂದು ವಾರದೊಳಗೆ ಹಣ ಮರುಪಾವತಿಯಾಗುತ್ತಿದೆ. ಇದು ಆಗುತ್ತಿದೆಯೇ ಇಲ್ಲವೇ? ಕನಿಷ್ಠ ಇದಕ್ಕಾದರೂ ಚಪ್ಪಾಳೆ ತಟ್ಟಿ ಎಂದು ಮೋದಿ ವ್ಯಂಗ್ಯವಾಗಿ ಹೇಳಿದರು.
ಮೋತಿಲಾಲ್ ಓಸ್ವಾಲ್ ಫೈನಾನ್ಷಿಯಲ್ ಸರ್ವೀಸಸ್ ಜೂನ್ 2026ರಲ್ಲಿ ಪ್ರಕಟಿಸಿದ ವರದಿಯ ಪ್ರಕಾರ, ದೇಶದ ಆರ್ಥಿಕ ಬೆಳವಣಿಗೆಗೆ ಹೋಲಿಸಿದರೆ ಕಾರ್ಪೊರೇಟ್ ಕಂಪನಿಗಳ ಲಾಭದ ಪ್ರಮಾಣ ಗಣನೀಯವಾಗಿ ಹೆಚ್ಚಾಗಿದೆ. 2020ರ ಆರ್ಥಿಕ ವರ್ಷದಿಂದ 2026ರ ಆರ್ಥಿಕ ವರ್ಷದ ಅವಧಿಯಲ್ಲಿ ನಿಫ್ಟಿ-500 ಕಂಪನಿಗಳ ಗಳಿಕೆಯು ವಾರ್ಷಿಕ ಸರಾಸರಿ ಶೇ.28.7ರ ಸಂಯುಕ್ತ ಬೆಳವಣಿಗೆ ದರದಲ್ಲಿ (CAGR) ವೃದ್ಧಿಯಾಗಿದೆ. ಇದೇ ಅವಧಿಯಲ್ಲಿ ಭಾರತದ ಜಿಡಿಪಿ ಬೆಳವಣಿಗೆಯ ವಾರ್ಷಿಕ ಸರಾಸರಿ ದರ ಶೇ.9.5ರಷ್ಟಿತ್ತು ಎಂದು ವರದಿ ತಿಳಿಸಿದೆ.

Generating image…

ಉದ್ಯೋಗಿಗಳ ವೇತನವನ್ನ ಹೆಚ್ಚಿಸಿದ್ದೀರಾ?
ಉದ್ಯಮಿಗಳಿಗೆ ಖಡಕ್ಕಾಗಿ ಹೇಳಿದ ಮೋದಿ, ನೀವು ಚಪ್ಪಾಳೆ ತಟ್ಟುವುದಿಲ್ಲ ಎಂಬುದು ನನಗೆ ಗೊತ್ತು. ನಿಮ್ಮ ಹಸಿವು ಎಷ್ಟಿದೆಯೆಂದರೆ, ಎಷ್ಟೇ ತಿನ್ನಿಸಿದರೂ ನಿಮ್ಮ ಹೊಟ್ಟೆ ತುಂಬುವುದಿಲ್ಲ ಎಂಬುದು ನನಗೆ ಚೆನ್ನಾಗಿ ತಿಳಿದಿದೆ. ಸರ್ಕಾರದ ತೆರಿಗೆ ಲಾಭ ಪಡೆದು ಉದ್ಯೋಗಿಗಳ ವೇತನವನ್ನ ಹೆಚ್ಚಿಸಿದ್ದೀರಾ? ಉದ್ಯೋಗಿಗಳ ಸಂಖ್ಯೆಯನ್ನು ಹೆಚ್ಚಿಸಿದ್ದೀರಾ? ಖಂಡಿತವಾಗಿಯೂ ಇಲ್ಲ. ನಿಮ್ಮ ಮನೋಭಾವ ಏನೆಂದರೆ, ಮೋದಿ ಜಿ, ನೀವೇ ಎಲ್ಲವನ್ನೂ ಮಾಡಿ. ನಾವು ಸುಮ್ಮನೆ ನೋಡುತ್ತೇವೆ ಎಂಬಂತಿದೆ. ಇದೇ ರೀತಿ ಮುಂದುವರಿಯಬೇಕೇ? ಎಂದು ಉದ್ಯಮಿಗಳನ್ನು ಪ್ರಶ್ನಿಸಿದರು.

ಜನರ ಖರೀದಿ ಸಾಮರ್ಥ್ಯ ಹೆಚ್ಚಿಸಲು ತೆರಿಗೆ ವಿನಾಯಿತಿ
ಮುಂದುವರಿದು ಮಾತನಾಡಿದ ಪ್ರಧಾನಿ ಮೋದಿ, ಕೇಂದ್ರ ಸರ್ಕಾರವು ಜನರ ಖರೀದಿ ಸಾಮರ್ಥ್ಯ ಹೆಚ್ಚಿಸಲು ಹಲವು ಕ್ರಮಗಳನ್ನು ಕೈಗೊಂಡಿದೆ. ಆದಾಯ ತೆರಿಗೆಯಲ್ಲಿ ಗಣನೀಯ ಪ್ರಮಾಣದ ಪರಿಹಾರ ನೀಡುವಂತಹ ಮಹತ್ವದ ನಿರ್ಧಾರವನ್ನ ನಾವು ಕೈಗೊಂಡಿದ್ದೇವೆ. ಇದರಿಂದ ಜನರ ಖರೀದಿ ಸಾಮರ್ಥ್ಯ ಗಣನೀಯವಾಗಿ ಹೆಚ್ಚಾಗಿದೆ. ಅಲ್ಲದೇ, ಆದಾಯ ತೆರಿಗೆ ಮರುಪಾವತಿ ಪ್ರಕ್ರಿಯೆಯಲ್ಲೂ ಮಹತ್ವದ ಬದಲಾವಣೆ ತರಲಾಗಿದೆ. ಹಿಂದೆ ತೆರಿಗೆ ಮರುಪಾವತಿಗಾಗಿ ಹಲವು ತಿಂಗಳು ಕಾಯಬೇಕಾಗುತ್ತಿತ್ತು. ಆದರೆ, ಈಗ ಕೇವಲ 1 ವಾರದೊಳಗೆ ತೆರಿಗೆ ಹಣ ಖಾತೆಗೆ ತಲುಪುತ್ತಿದೆ ಎಂದು ಪ್ರಧಾನಿ ವಿವರಿಸಿದರು.

income tax returns

ಇದಕ್ಕಾದ್ರೂ ಚಪ್ಪಾಳೆ ತಟ್ಟಿ
ತೆರಿಗೆ ಪಾವತಿದಾರರ ಹಣ ವ್ಯವಸ್ಥೆಯಲ್ಲಿ ಅನಗತ್ಯವಾಗಿ ಸಿಲುಕಿಕೊಳ್ಳಬಾರದು ಎಂಬ ಉದ್ದೇಶದಿಂದ ತೆರಿಗೆ ರಿಟರ್ನ್ಸ್ ಮತ್ತು ಮರುಪಾವತಿ ವ್ಯವಸ್ಥೆಯನ್ನು ಸರಳಗೊಳಿಸಿದ್ದೇವೆ. ಹಿಂದೆ 8 ತಿಂಗಳ ನಂತರ ಪತ್ರ ಬರುತ್ತಿತ್ತು. ಆದರೆ, ಈಗ ಒಂದು ವಾರದೊಳಗೆ ಹಣ ಮರುಪಾವತಿಯಾಗುತ್ತಿದೆ. ಇದು ಆಗುತ್ತಿದೆಯೇ ಇಲ್ಲವೇ? ಕನಿಷ್ಠ ಇದಕ್ಕಾದರೂ ಚಪ್ಪಾಳೆ ತಟ್ಟಿ ಎಂದು ಮೋದಿ ವ್ಯಂಗ್ಯವಾಗಿ ಹೇಳಿದರು.

ಮೋತಿಲಾಲ್ ಓಸ್ವಾಲ್ ಫೈನಾನ್ಷಿಯಲ್ ಸರ್ವೀಸಸ್ ಜೂನ್ 2026ರಲ್ಲಿ ಪ್ರಕಟಿಸಿದ ವರದಿಯ ಪ್ರಕಾರ, ದೇಶದ ಆರ್ಥಿಕ ಬೆಳವಣಿಗೆಗೆ ಹೋಲಿಸಿದರೆ ಕಾರ್ಪೊರೇಟ್ ಕಂಪನಿಗಳ ಲಾಭದ ಪ್ರಮಾಣ ಗಣನೀಯವಾಗಿ ಹೆಚ್ಚಾಗಿದೆ. 2020ರ ಆರ್ಥಿಕ ವರ್ಷದಿಂದ 2026ರ ಆರ್ಥಿಕ ವರ್ಷದ ಅವಧಿಯಲ್ಲಿ ನಿಫ್ಟಿ-500 ಕಂಪನಿಗಳ ಗಳಿಕೆಯು ವಾರ್ಷಿಕ ಸರಾಸರಿ ಶೇ.28.7ರ ಸಂಯುಕ್ತ ಬೆಳವಣಿಗೆ ದರದಲ್ಲಿ (CAGR) ವೃದ್ಧಿಯಾಗಿದೆ. ಇದೇ ಅವಧಿಯಲ್ಲಿ ಭಾರತದ ಜಿಡಿಪಿ ಬೆಳವಣಿಗೆಯ ವಾರ್ಷಿಕ ಸರಾಸರಿ ದರ ಶೇ.9.5ರಷ್ಟಿತ್ತು ಎಂದು ವರದಿ ತಿಳಿಸಿದೆ.

Editor Reporter
kannadasakshi.in

ನಿಮ್ಮ ಹಸಿವು ಎಷ್ಟಿದ್ದರೂ ತೀರದು, ತೆರಿಗೆ ವಿನಾಯಿತಿಗಳಿಂದ ಬಂದ ಲಾಭವನ್ನ ಜೇಬಿಗಿಳಿಸಿಕೊಂಡಿವೆ: ಕಾರ್ಪೊರೇಟ್ ಕಂಪನಿಗಳ ವಿರುದ್ಧ ಸಿಡಿದ ಮೋದಿ..

ದೇಶದ ಕಾರ್ಪೊರೇಟ್‌ ಕಂಪನಿಗಳನ್ನ (Corporate Companies) ಪ್ರಧಾನಿ ನರೇಂದ್ರ ಮೋದಿ ಅವರು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ. ಸರ್ಕಾರ ನೀಡಿದ ತೆರಿಗೆ ವಿನಾಯಿತಿಗಳಿಂದ ಬಂದ ಲಾಭವನ್ನ ಕಾರ್ಪೊರೇಟ್ ಕಂಪನಿಗಳು ತಮ್ಮ ಜೇಬಿಗಿಳಿಸಿಕೊಳ್ಳುತ್ತಿವೆಯೇ ಹೊರತು, ಉದ್ಯೋಗ ಸೃಷ್ಟಿ ಮಾಡಿಲ್ಲ. ವೇತನವನ್ನೂ ಹೆಚ್ಚಿಸಿಲ್ಲ ಎಂದು ಅಸಮಾಧಾನ ಹೊರಹಾಕಿದರು.
ಗುರುವಾರ (ಇಂದು) ದೆಹಲಿಯ ಭಾರತ್‌ ಮಂಟಪದಲ್ಲಿ ನಡೆದ ಉದ್ಯಮ ಸಂಘಟನೆ ಫೆಡರೇಷನ್ ಆಫ್ ಇಂಡಿಯನ್ ಚೇಂಬರ್ಸ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರಿ (FICCI) ಸಂಸ್ಥೆಯ 100ನೇ ಸಂಸ್ಥಾಪನಾ ವರ್ಷಾಚರಣೆ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ (PM Modi) ಮಾತನಾಡಿದರು. ಈ ವೇಳೆ ಕಾರ್ಪೊರೇಟ್‌ ಕಂಪನಿಗಳ ಉದ್ಯಮಿಗಳಿಗೆ ನೇರವಾಗಿಯೇ ಚಾಟಿ ಬೀಸಿದರು.

2014ರಲ್ಲಿ ಶೇ.30ರಷ್ಟಿದ್ದ ಕಾರ್ಪೊರೇಟ್ ತೆರಿಗೆಯನ್ನ 2019ರಲ್ಲಿ ಶೇ.22ಕ್ಕೆ ಇಳಿಸಲಾಗಿದೆ. ಅಲ್ಲದೇ, ವಾರ್ಷಿಕ 12 ಲಕ್ಷ ರೂಪಾಯಿವರೆಗಿನ ಆದಾಯಕ್ಕೆ ತೆರಿಗೆ ವಿನಾಯಿತಿ ನೀಡುವ ಮೂಲಕ ಜನಸಾಮಾನ್ಯರ ಮೇಲಿನ ತೆರಿಗೆ ಹೊರೆ ಕಡಿಮೆ ಮಾಡಲಾಗಿದೆ. ಆದರೆ, ಸರ್ಕಾರದ ಈ ಕ್ರಮಗಳಿಗೆ ಪ್ರತಿಯಾಗಿ ಕಾರ್ಪೊರೇಟ್ ಕಂಪನಿಗಳು ಉದ್ಯೋಗ ಸೃಷ್ಟಿ ಅಥವಾ ವೇತನ ಹೆಚ್ಚಳದ ಮೂಲಕ ಕೊಡುಗೆ ನೀಡಿವೆಯೇ? ಎಂದು ಪ್ರಶ್ನೆ ಮಾಡಿದರು.
ಉದ್ಯೋಗಿಗಳ ವೇತನವನ್ನ ಹೆಚ್ಚಿಸಿದ್ದೀರಾ?ಉದ್ಯಮಿಗಳಿಗೆ ಖಡಕ್ಕಾಗಿ ಹೇಳಿದ ಮೋದಿ, ನೀವು ಚಪ್ಪಾಳೆ ತಟ್ಟುವುದಿಲ್ಲ ಎಂಬುದು ನನಗೆ ಗೊತ್ತು. ನಿಮ್ಮ ಹಸಿವು ಎಷ್ಟಿದೆಯೆಂದರೆ, ಎಷ್ಟೇ ತಿನ್ನಿಸಿದರೂ ನಿಮ್ಮ ಹೊಟ್ಟೆ ತುಂಬುವುದಿಲ್ಲ ಎಂಬುದು ನನಗೆ ಚೆನ್ನಾಗಿ ತಿಳಿದಿದೆ. ಸರ್ಕಾರದ ತೆರಿಗೆ ಲಾಭ ಪಡೆದು ಉದ್ಯೋಗಿಗಳ ವೇತನವನ್ನ ಹೆಚ್ಚಿಸಿದ್ದೀರಾ? ಉದ್ಯೋಗಿಗಳ ಸಂಖ್ಯೆಯನ್ನು ಹೆಚ್ಚಿಸಿದ್ದೀರಾ? ಖಂಡಿತವಾಗಿಯೂ ಇಲ್ಲ. ನಿಮ್ಮ ಮನೋಭಾವ ಏನೆಂದರೆ, ಮೋದಿ ಜಿ, ನೀವೇ ಎಲ್ಲವನ್ನೂ ಮಾಡಿ. ನಾವು ಸುಮ್ಮನೆ ನೋಡುತ್ತೇವೆ ಎಂಬಂತಿದೆ. ಇದೇ ರೀತಿ ಮುಂದುವರಿಯಬೇಕೇ? ಎಂದು ಉದ್ಯಮಿಗಳನ್ನು ಪ್ರಶ್ನಿಸಿದರು.
ಜನರ ಖರೀದಿ ಸಾಮರ್ಥ್ಯ ಹೆಚ್ಚಿಸಲು ತೆರಿಗೆ ವಿನಾಯಿತಿಮುಂದುವರಿದು ಮಾತನಾಡಿದ ಪ್ರಧಾನಿ ಮೋದಿ, ಕೇಂದ್ರ ಸರ್ಕಾರವು ಜನರ ಖರೀದಿ ಸಾಮರ್ಥ್ಯ ಹೆಚ್ಚಿಸಲು ಹಲವು ಕ್ರಮಗಳನ್ನು ಕೈಗೊಂಡಿದೆ. ಆದಾಯ ತೆರಿಗೆಯಲ್ಲಿ ಗಣನೀಯ ಪ್ರಮಾಣದ ಪರಿಹಾರ ನೀಡುವಂತಹ ಮಹತ್ವದ ನಿರ್ಧಾರವನ್ನ ನಾವು ಕೈಗೊಂಡಿದ್ದೇವೆ. ಇದರಿಂದ ಜನರ ಖರೀದಿ ಸಾಮರ್ಥ್ಯ ಗಣನೀಯವಾಗಿ ಹೆಚ್ಚಾಗಿದೆ. ಅಲ್ಲದೇ, ಆದಾಯ ತೆರಿಗೆ ಮರುಪಾವತಿ ಪ್ರಕ್ರಿಯೆಯಲ್ಲೂ ಮಹತ್ವದ ಬದಲಾವಣೆ ತರಲಾಗಿದೆ. ಹಿಂದೆ ತೆರಿಗೆ ಮರುಪಾವತಿಗಾಗಿ ಹಲವು ತಿಂಗಳು ಕಾಯಬೇಕಾಗುತ್ತಿತ್ತು. ಆದರೆ, ಈಗ ಕೇವಲ 1 ವಾರದೊಳಗೆ ತೆರಿಗೆ ಹಣ ಖಾತೆಗೆ ತಲುಪುತ್ತಿದೆ ಎಂದು ಪ್ರಧಾನಿ ವಿವರಿಸಿದರು.

ಇದಕ್ಕಾದ್ರೂ ಚಪ್ಪಾಳೆ ತಟ್ಟಿತೆರಿಗೆ ಪಾವತಿದಾರರ ಹಣ ವ್ಯವಸ್ಥೆಯಲ್ಲಿ ಅನಗತ್ಯವಾಗಿ ಸಿಲುಕಿಕೊಳ್ಳಬಾರದು ಎಂಬ ಉದ್ದೇಶದಿಂದ ತೆರಿಗೆ ರಿಟರ್ನ್ಸ್ ಮತ್ತು ಮರುಪಾವತಿ ವ್ಯವಸ್ಥೆಯನ್ನು ಸರಳಗೊಳಿಸಿದ್ದೇವೆ. ಹಿಂದೆ 8 ತಿಂಗಳ ನಂತರ ಪತ್ರ ಬರುತ್ತಿತ್ತು. ಆದರೆ, ಈಗ ಒಂದು ವಾರದೊಳಗೆ ಹಣ ಮರುಪಾವತಿಯಾಗುತ್ತಿದೆ. ಇದು ಆಗುತ್ತಿದೆಯೇ ಇಲ್ಲವೇ? ಕನಿಷ್ಠ ಇದಕ್ಕಾದರೂ ಚಪ್ಪಾಳೆ ತಟ್ಟಿ ಎಂದು ಮೋದಿ ವ್ಯಂಗ್ಯವಾಗಿ ಹೇಳಿದರು.
ಮೋತಿಲಾಲ್ ಓಸ್ವಾಲ್ ಫೈನಾನ್ಷಿಯಲ್ ಸರ್ವೀಸಸ್ ಜೂನ್ 2026ರಲ್ಲಿ ಪ್ರಕಟಿಸಿದ ವರದಿಯ ಪ್ರಕಾರ, ದೇಶದ ಆರ್ಥಿಕ ಬೆಳವಣಿಗೆಗೆ ಹೋಲಿಸಿದರೆ ಕಾರ್ಪೊರೇಟ್ ಕಂಪನಿಗಳ ಲಾಭದ ಪ್ರಮಾಣ ಗಣನೀಯವಾಗಿ ಹೆಚ್ಚಾಗಿದೆ. 2020ರ ಆರ್ಥಿಕ ವರ್ಷದಿಂದ 2026ರ ಆರ್ಥಿಕ ವರ್ಷದ ಅವಧಿಯಲ್ಲಿ ನಿಫ್ಟಿ-500 ಕಂಪನಿಗಳ ಗಳಿಕೆಯು ವಾರ್ಷಿಕ ಸರಾಸರಿ ಶೇ.28.7ರ ಸಂಯುಕ್ತ ಬೆಳವಣಿಗೆ ದರದಲ್ಲಿ (CAGR) ವೃದ್ಧಿಯಾಗಿದೆ. ಇದೇ ಅವಧಿಯಲ್ಲಿ ಭಾರತದ ಜಿಡಿಪಿ ಬೆಳವಣಿಗೆಯ ವಾರ್ಷಿಕ ಸರಾಸರಿ ದರ ಶೇ.9.5ರಷ್ಟಿತ್ತು ಎಂದು ವರದಿ ತಿಳಿಸಿದೆ.

Share ePaper Clip

Preparing image...

   SHARE  

Facebook
Twitter
Telegram
WhatsApp

   TOP NEWS  

   RECENT NEWS