ಯೆಮೆನ್ ಮತ್ತು ಸೊಮಾಲಿಯಾ ಕರಾವಳಿಯ ಬಳಿ ನಡೆದ ಎರಡು ಪ್ರತ್ಯೇಕ ಘಟನೆಗಳಲ್ಲಿ ಎರಡು ವಾಣಿಜ್ಯ ಹಡಗುಗಳನ್ನು ಕಡಲ್ಗಳ್ಳರು ಹೈಜಾಕ್ ಮಾಡಿರುವ ಘಟನೆ ನಡೆದಿದೆ. ಎರಡೂ ಹಡಗುಗಳಲ್ಲಿ 22 ಭಾರತೀಯ ಪ್ರಜೆಗಳು ಸೇರಿದಂತೆ ಒಟ್ಟು 30 ಸಿಬ್ಬಂದಿ ಇದ್ದರು ಎಂದು ವರದಿಯಾಗಿದೆ.
ಘಟನೆಯನ್ನು ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ದೃಢಪಡಿಸಿದ್ದಾರೆ. ಅಪಹರಣಕ್ಕೊಳಗಾದ ಎರಡೂ ಹಡಗುಗಳು ವಿದೇಶಿ ಧ್ವಜವನ್ನು ಹೊಂದಿದ್ದು, ಅವುಗಳಲ್ಲಿದ್ದ ಭಾರತೀಯರು ಸೇರಿದಂತೆ ಸಿಬ್ಬಂದಿಯ ಸುರಕ್ಷತೆ ಕುರಿತು ಅಧಿಕಾರಿಗಳು ಮಾಹಿತಿ ಕಲೆಹಾಕುತ್ತಿದ್ದಾರೆ ಎಂದು ತಿಳಿಸಿದ್ದಾರೆ.
ಯೆಮೆನ್ ಮತ್ತು ಸೊಮಾಲಿಯಾ ಕರಾವಳಿ ಪ್ರದೇಶಗಳಲ್ಲಿ ಕಡಲ್ಗಳ್ಳತನ ಹಾಗೂ ಹಡಗುಗಳ ಮೇಲೆ ದಾಳಿಯ ಅಪಾಯ ಮುಂದುವರಿದಿರುವ ಹಿನ್ನೆಲೆಯಲ್ಲಿ ಈ ಘಟನೆ ಆತಂಕ ಮೂಡಿಸಿದೆ. ಹಡಗುಗಳಲ್ಲಿದ್ದ ಭಾರತೀಯರ ಸುರಕ್ಷತೆಗಾಗಿ ಸಂಬಂಧಿತ ಅಧಿಕಾರಿಗಳು ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತಿದ್ದಾರೆ.










