ತ್ಯಾಜ್ಯದಿಂದ ವಿದ್ಯುತ್ ಉತ್ಪಾದನೆ: ಜಪಾನ್‌ ಕಂಪನಿ ಜೊತೆ ಸಿಎಂ ಚರ್ಚೆ..

ಸುದ್ದಿ ಮತ್ತು ಪ್ರಕಟಣೆಗಳಿಗಾಗಿ:
9000144466
kannadasakshi.in

ತ್ಯಾಜ್ಯದಿಂದ ವಿದ್ಯುತ್ ಉತ್ಪಾದನೆ: ಜಪಾನ್‌ ಕಂಪನಿ ಜೊತೆ ಸಿಎಂ ಚರ್ಚೆ..

25 Nov 2026, 10:58 pm KANNADA SAKSHI

ಸಿಎಂ ಡಿ. ಕೆ. ಶಿವಕುಮಾರ್ (DK Shivakumar) ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಮೂಲಸೌಕರ್ಯ ಅಭಿವೃದ್ಧಿ ಸಚಿವರಾದ ಎಂ. ಬಿ. ಪಾಟೀಲ್ (MB Patil) ಅವರೊಂದಿಗೆ ಜಪಾನ್‌ನಲ್ಲಿ(Japan) ಜೆಎಫ್‌ಇ ಇಂಜಿನಿಯರಿಂಗ್ ಕಾರ್ಪೊರೇಷನ್ ವ್ಯವಸ್ಥಾಪಕ ನಿರ್ದೇಶಕರಾದ ಕೀಚಿ ನಾಗಯಾ ಮತ್ತು ಕಂಪನಿಯ ಹಿರಿಯ ಪ್ರತಿನಿಧಿಗಳನ್ನು ಭೇಟಿ ಮಾಡಿದರು.
ತ್ಯಾಜ್ಯದಿಂದ ಇಂಧನ ಉತ್ಪಾದನೆ, ನಗರ ಘನತ್ಯಾಜ್ಯ ನಿರ್ವಹಣೆ ಮತ್ತು ನಗರ ಮೂಲಸೌಕರ್ಯ ಕ್ಷೇತ್ರಗಳಲ್ಲಿ ಸಹಯೋಗದ ಅವಕಾಶಗಳನ್ನು ಅನ್ವೇಷಿಸುವ ಕುರಿತು ಈ ಸಂದರ್ಭದಲ್ಲಿ ಚರ್ಚಿಸಲಾಯಿತು.

ಜಪಾನ್ ಮತ್ತು ಭಾರತ ಸೇರಿದಂತೆ ಇತರ ಮಾರುಕಟ್ಟೆಗಳಲ್ಲಿ ನಗರ ಘನತ್ಯಾಜ್ಯವನ್ನು ಇಂಧನವನ್ನಾಗಿ ಪರಿವರ್ತಿಸುವಲ್ಲಿ ಜೆಎಫ್‌ಇ ಇಂಜಿನಿಯರಿಂಗ್ ಹೊಂದಿರುವ ಅನುಭವದ ಕುರಿತು ಚರ್ಚೆ ನಡೆಯಿತು. ಲ್ಯಾಂಡ್ ಫಿಲ್ ಪ್ರದೇಶಗಳಿಗೆ ಸೇರುವ ತ್ಯಾಜ್ಯದ ಪ್ರಮಾಣವನ್ನು ಗಣನೀಯವಾಗಿ ಕಡಿಮೆ ಮಾಡುವುದರ ಜೊತೆಗೆ, ಸುಮಾರು 15 ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸುವ ಸಾಮರ್ಥ್ಯವಿರುವ ತ್ಯಾಜ್ಯದಿಂದ ಇಂಧನ ತಯಾರಿಸುವ ಘಟಕಗಳನ್ನು ಅಭಿವೃದ್ಧಿಪಡಿಸುವ ತನ್ನ ಪರಿಣತಿಯನ್ನು ಕಂಪನಿಯು ಹಂಚಿಕೊಂಡಿತು
ತ್ಯಾಜ್ಯ ಸಂಸ್ಕರಣೆ, ಇಂಧನ ಉತ್ಪಾದನೆ ಮತ್ತು ದೀರ್ಘಕಾಲೀನ ಕಾರ್ಯಾಚರಣೆಗಳನ್ನು ಸಂಯೋಜಿಸುವ ಮೂಲಕ, ಕರ್ನಾಟಕದ ನಗರ ತ್ಯಾಜ್ಯ ನಿರ್ವಹಣಾ ಅಗತ್ಯಗಳಿಗೆ ತಕ್ಕಂತೆ ಜೆಎಫ್‌ಇ ಸಂಸ್ಥೆಯ ತಂತ್ರಜ್ಞಾನ ಮತ್ತು ಕಾರ್ಯನಿರ್ವಹಣಾ ಮಾದರಿಗಳನ್ನು ಅಳವಡಿಸಿಕೊಳ್ಳುವ ಸಾಧ್ಯತೆಗಳ ಕುರಿತು ನಿಯೋಗವು ಪರಿಶೀಲಿಸಿತು. ಆಯಾ ನಗರಗಳ ತ್ಯಾಜ್ಯದ ಸ್ವರೂಪ, ಸಂಗ್ರಹಣಾ ವ್ಯವಸ್ಥೆ, ಪ್ರಮಾಣ ಮತ್ತು ಮೂಲಸೌಕರ್ಯ ಅಗತ್ಯಗಳಿಗೆ ಅನುಗುಣವಾಗಿ ವಿಶೇಷ ಪರಿಹಾರಗಳನ್ನು ಅಭಿವೃದ್ಧಿಪಡಿಸುವ ಕುರಿತೂ ಚರ್ಚಿಸಲಾಯಿತು.

“ಬೆಂಗಳೂರಿನ ಹೊರತಾಗಿ ಕರ್ನಾಟಕದ ಇತರ ಪ್ರಮುಖ ನಗರಗಳಿಗೂ ಸುಧಾರಿತ ತ್ಯಾಜ್ಯದಿಂದ ಇಂಧನ ಉತ್ಪಾದಿಸುವ ಪರಿಹಾರಗಳನ್ನು ವಿಸ್ತರಿಸಲು ನಮ್ಮ ಸರ್ಕಾರ ಆಸಕ್ತಿ ವ್ಯಕ್ತಪಡಿಸಿದೆ. ಯೋಜನೆಯ ಅಭಿವೃದ್ಧಿ, ಅನುಷ್ಠಾನ ಮತ್ತು ದೀರ್ಘಕಾಲೀನ ಕಾರ್ಯಾಚರಣೆಗಳಿಗಾಗಿ ಜಪಾನಿನ ತಂತ್ರಜ್ಞಾನ ಮತ್ತು ಇಂಜಿನಿಯರಿಂಗ್ ಪರಿಣತಿಯನ್ನು ಸ್ಥಳೀಯ ಸಾಮರ್ಥ್ಯಗಳೊಂದಿಗೆ ಸಂಯೋಜಿಸಲು ಸೂಕ್ತ ಸ್ಥಳೀಯ ಪಾಲುದಾರರನ್ನು ಗುರುತಿಸುವ ಕುರಿತು ಉಭಯ ಕಡೆಯವರು ಚರ್ಚಿಸಲಾಯಿತು. ರಾಜ್ಯಾದ್ಯಂತ ಕಾರ್ಯಸಾಧುವಾದ ತ್ಯಾಜ್ಯದಿಂದ ಇಂಧನ ಉತ್ಪಾದನೆ ಮತ್ತು ನಗರ ಮೂಲಸೌಕರ್ಯ ಯೋಜನೆಗಳನ್ನು ಅನ್ವೇಷಿಸಲು ಜೆಎಫ್‌ಇ ಇಂಜಿನಿಯರಿಂಗ್‌ನೊಂದಿಗೆ ಮುಂದಿನ ಹಂತದ ಮಾತುಕತೆಗಳಿಗೆ ನಾವು ಅನುವು ಮಾಡಿಕೊಡಲಿದ್ದೇವೆ” ಎಂದು ಸಿಎಂ ತಿಳಿಸಿದ್ದಾರೆ.

Generating image…

Editor Reporter

Share ePaper Clip

Preparing image...

   SHARE  

Facebook
Twitter
Telegram
WhatsApp

   TOP NEWS  

   RECENT NEWS