ಕರ್ನಾಟಕದಲ್ಲಿ ಆಟೋ ಗ್ಯಾಸ್‌ ಪೂರೈಕೆಯನ್ನು ಹೆಚ್ಚಿಸಿದ್ದೇವೆ: ಇಂಡಿಯನ್‌ ಆಯಿಲ್‌

ಬೇಡಿಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕರ್ನಾಟಕದಾದ್ಯಂತ (Karnataka) ಆಟೋ ಎಲ್‌ಪಿಜಿ ಪೂರೈಕೆಯನ್ನು ಗಣನೀಯವಾಗಿ ಹೆಚ್ಚಳ ಮಾಡಲಾಗಿದೆ ಎಂದು ಇಂಡಿಯನ್‌ ಆಯಿಲ್‌ (Indian oil) ತಿಳಿಸಿದೆ.

 

ಬೆಂಗಳೂರು ಮತ್ತು ರಾಜ್ಯದ ಇತರ ಭಾಗಗಳಲ್ಲಿ ಹಲವಾರು ಖಾಸಗಿ ಆಟೋ ಎಲ್‌ಪಿಜಿ (LPG) ಔಟ್‌ಲೆಟ್‌ಗಳು ಮುಚ್ಚಿವೆ. ದಿಢೀರ್‌ ಬೇಡಿಕೆ ಹೆಚ್ಚಳವಾಗಿರುವ ಕಾರಣ ರಾಜ್ಯಾದ್ಯಂತ ಆಟೋ ಎಲ್‌ಪಿಜಿ ಪೂರೈಕೆಯನ್ನು ಗಣನೀಯವಾಗಿ ಹೆಚ್ಚಿಸಲಾಗಿದೆ ಎಂದು ತನ್ನ ಮಾಧ್ಯಮ ಹೇಳಿಕೆಯಲ್ಲಿ ಹೇಳಿದೆ. ಇದನ್ನೂ ಓದಿ: ವರದಕ್ಷಿಣೆ ಕಿರುಕುಳಕ್ಕೆ ಬೇಸತ್ತು ನವವಿವಾಹಿತ ಟೆಕ್ಕಿ ನೇಣಿಗೆ ಶರಣು

 

 

ಕರ್ನಾಟಕದಲ್ಲಿರುವ 55 ಇಂಡಿಯನ್‌ ಆಯಿಲ್‌ ಆಟೋ ಎಲ್‌ಪಿಜಿ ವಿತರಣಾ ಕೇಂದ್ರಗಳಿದೆ. 300 ಖಾಸಗಿ ಕೇಂದ್ರಗಳು ಮುಚ್ಚಲ್ಪಟ್ಟಿವೆ ಅಥವಾ ಭಾಗಶಃ ಕಾರ್ಯನಿರ್ವಹಿಸುತ್ತಿವೆ ಎಂದು ವರದಿಯಾಗಿದೆ. ಖಾಸಗಿ ಕೇಂದ್ರಗಳು ತಾತ್ಕಾಲಿಕ ಸ್ಥಗಿತ ಆಗಿರುವ ಕಾರಣ ಸರ್ಕಾರಿ ಸ್ವಾಮ್ಯದ ಬಂಕ್‌ನತ್ತ ಆಟೋಗಳು ಮುಖ ಮಾಡುತ್ತಿವೆ.

 

ಕರ್ನಾಟಕದ ಇಂಡಿಯನ್ ಆಯಿಲ್‌ನ ಆಟೋ ಎಲ್‌ಪಿಜಿ ಕೇಂದ್ರದಲ್ಲಿ ದೈನಂದಿನ ಮಾರಾಟ ಮೂರು ತಿಂಗಳ ಸರಾಸರಿ 43.4 ಮೆಟ್ರಿಕ್‌ ಟನ್‌ ಇದ್ದರೆ ಈಗ ಇದು 59.53 ಮೆಟ್ರಿಕ್ ಟನ್‌ಗಳಿಗೆ ಏರಿಕೆಯಾಗಿದೆ. ಸವಾಲಿನ ಪರಿಸ್ಥಿತಿಯಲ್ಲಿಯೂ ಎಲ್‌ಪಿಜಿ ವಿತರಣೆಗೆ ನಾವು ಕ್ರಮ ಕೈಗೊಳ್ಳುತ್ತೇವೆ ಎಂದು ಐಒಸಿ ಭರವಸೆ ನೀಡಿದೆ.

   SHARE  

Facebook
Twitter
Telegram
WhatsApp

   TOP NEWS  

   RECENT NEWS