ಲಡಾಖ್‌ಗೆ 3,500 ಕೋಟಿ ಮೌಲ್ಯದ ಯೋಜನೆಗೆಳನ್ನು ಲೋಕಾರ್ಪಣೆಗೊಳಿಸಿದ ಮೋದಿ..

ಸುದ್ದಿ ಮತ್ತು ಪ್ರಕಟಣೆಗಳಿಗಾಗಿ:
9000144466
kannadasakshi.in

ಲಡಾಖ್‌ಗೆ 3,500 ಕೋಟಿ ಮೌಲ್ಯದ ಯೋಜನೆಗೆಳನ್ನು ಲೋಕಾರ್ಪಣೆಗೊಳಿಸಿದ ಮೋದಿ..

15 Oct 2026, 11:06 pm KANNADA SAKSHI

ದೇಶದ ಮುಕುಟ ಮಣಿಯಾಗಿರುವ ಲಡಾಖ್‌ನಲ್ಲಿ (Ladakh) 3,350 ಕೋಟಿ ರೂ. ಮೌಲ್ಯದ ಅಭಿವೃದ್ಧಿ ಯೋಜನೆಗಳನ್ನು ಪ್ರಧಾನಿ ಮೋದಿ (PM Modi) ವರ್ಚುವಲ್ ಆಗಿ ಉದ್ಘಾಟನೆ ಮಾಡಿದ್ದಾರೆ.
ಪ್ರಮುಖವಾಗಿ 640 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಿರುವ ಲೇಹ್‌ನ (Leh) ಕುಶೋಕ್ ಬಕುಲಾ ರಿಂಪೋಚಿ ವಿಮಾನ ನಿಲ್ದಾಣದ ಹೊಸ ಟರ್ಮಿನಲ್ ಅನ್ನು ಉದ್ಘಾಟಿಸಿದರು. ಈ ಆಧುನಿಕ ಟರ್ಮಿನಲ್ 23,800 ಚದರ ಮೀಟರ್ ವಿಸ್ತೀರ್ಣ ಹೊಂದಿದ್ದು, ವಾರ್ಷಿಕವಾಗಿ 35 ಲಕ್ಷ ಪ್ರಯಾಣಿಕರನ್ನು ನಿರ್ವಹಿಸುವ ಸಾಮರ್ಥ್ಯ ಹೊಂದಿದೆ. ಟರ್ಮಿನಲ್‌ನಲ್ಲಿ ಇಂಧನ ದಕ್ಷತೆಯನ್ನು ಹೆಚ್ಚಿಸಲು ಭೂಶಾಖದ ಶಕ್ತಿಯನ್ನು ಬಳಸಲಾಗಿರುವುದು ವಿಶೇಷವಾಗಿದೆ

ಇದರ ಜೊತೆಗೆ, ರಸ್ತೆ ಪ್ರವಾಸ ಕೈಗೊಳ್ಳುವವರಿಗೆ ಸುರಕ್ಷಿತ, ಸುಖದಾಯಕ ಪ್ರಯಾಣಕ್ಕಾಗಿ `ಬಾರ್ಡರ್ ರೋಡ್ಸ್ ಆರ್ಗನೈಸೇಷನ್’ (ಬಿಆರ್‌ಓ) ಲೇಹ್‌ನಲ್ಲಿ ನಿರ್ಮಿಸಿರುವ 298 ಕಿ.ಮೀ. ಉದ್ದದ ‘ನಿಮ್ಮು-ಪದುಮ್-ದಾರ್ಚಾ’ ರಸ್ತೆಯೂ ಸೇರಿದೆ. ಇದು ಲೇಹ್‌ನಲ್ಲಿರುವ `ನಿಮ್ಮು’ವನ್ನು, ಹಿಮಾಚಲ ಪ್ರದೇಶದ ‘ದಾರ್ಚಾ’ದೊಂದಿಗೆ ಝನ್ಕ್ಸಾರ್‌ ಕಣಿವೆಯ ಮೂಲಕ ಸಂಪರ್ಕಿಸುತ್ತದೆ. ಶ್ರೀನಗರ-ಲೇಹ್ ಮತ್ತು ಮನಾಲಿಗೆ-ಲೇಹ್ ಹೆದ್ದಾರಿಗಳಿಗೆ ಪರ್ಯಾಯ ಮಾರ್ಗ ಇದಾಗಿದೆ. ಈ ಮಾರ್ಗವು ಅತ್ಯಂತ ಎತ್ತರದಲ್ಲಿರುವ `ಶಿಂಕುನ್ ಲಾ ಪಾಸ್’ (ಕಣಿವೆ ಮಾರ್ಗ) ಸೇರಿದಂತೆ, ಹಿಮಾಲಯದ ಕಠಿಣ ಭೂಪ್ರದೇಶಗಳ ಮೂಲಕ ಹಾದುಹೋಗುತ್ತದೆ.
ಅಲ್ಲದೆ, 9 ಮೆಗಾವ್ಯಾಟ್ ಹನು ಸಣ್ಣ ಜಲವಿದ್ಯುತ್ ಯೋಜನೆ ಮತ್ತು 66 ಕೆವಿ ಡಬಲ್-ಸರ್ಕ್ಯೂಟ್ ದಹ್-ಹನು-ಖಲ್ತ್ಸಿ ಪ್ರಸರಣ ಮಾರ್ಗ, ಸಿಂಧು ಘಾಟ್‌ನಲ್ಲಿ ಶಿಲಾ ಕಲೆ ರಕ್ಷಣೆಗೆ ಭಾರತದ ಮೊದಲ ಪೆಟ್ರೋಗ್ಲಿಫ್ ಸಂರಕ್ಷಣಾ ಉದ್ಯಾನವನ, ಪ್ರಾಜೆಕ್ಟ್ ಹಿಮ್ ಸರೋವರದ ಅಡಿಯಲ್ಲಿ 40 ಹಳ್ಳಿಗಳಲ್ಲಿ ಅಭಿವೃದ್ಧಿಪಡಿಸಲಾದ 40 ಜಲಮೂಲಗಳನ್ನು ಉದ್ಘಾಟಿಸಿದರು.

Generating image…

Editor Reporter

Share ePaper Clip

Preparing image...

   SHARE  

Facebook
Twitter
Telegram
WhatsApp

   TOP NEWS  

   RECENT NEWS