ನಮ್ಮ ಇತಿಹಾಸ, ಸಂಸ್ಕೃತಿ ಇಡೀ ವಿಶ್ವಕ್ಕೆ ತಲುಪಬೇಕು: ಯಶ್‌..

ಸುದ್ದಿ ಮತ್ತು ಪ್ರಕಟಣೆಗಳಿಗಾಗಿ:
9000144466
kannadasakshi.in

ನಮ್ಮ ಇತಿಹಾಸ, ಸಂಸ್ಕೃತಿ ಇಡೀ ವಿಶ್ವಕ್ಕೆ ತಲುಪಬೇಕು: ಯಶ್‌..

15 Oct 2026, 11:02 pm KANNADA SAKSHI

ರಾಮಾಯಣ(Ramayana) ಪ್ರತಿಯೊಬ್ಬ ಭಾರತೀಯನ ರಕ್ತದಲ್ಲಿದೆ. ಇದನ್ನು ನಾವ್ಯಾರೂ ಕೇವಲ ಒಂದು ಸಿನಿಮಾ ತರಹ ಟ್ರೀಟ್ ಮಾಡಿಲ್ಲ. ಭಕ್ತಿಯಿಂದ ಸಿಕ್ಕ ಒಂದು ದೈವಿಕ ಅವಕಾಶವಿದು. ನಮ್ಮ ಇತಿಹಾಸ ಮತ್ತು ಸಂಸ್ಕೃತಿ ಇಡೀ ವಿಶ್ವಕ್ಕೆ ತಲುಪಬೇಕು ಎಂಬ ಉದ್ದೇಶದಿಂದ ಈ ಸಾಹಸಕ್ಕೆ ಕೈಹಾಕಿದ್ದೇವೆ ಎಂದು ನಟ ಯಶ್‌(Yash) ಹೇಳಿದರು.
ರಾಕಿಂಗ್ ಸ್ಟಾರ್ ಯಶ್ ಅಭಿನಯದ ಹಾಗೂ ಸಹ-ನಿರ್ಮಾಣದ ಬಹುನಿರೀಕ್ಷಿತ ಮಹಾಕಾವ್ಯ ಆಧಾರಿತ ಸಿನಿಮಾ ‘ರಾಮಾಯಣ’ದ ಅಧಿಕೃತ ಪ್ರಚಾರ ಕಾರ್ಯಕ್ರಮಕ್ಕೆ ರಾಜಧಾನಿ ಬೆಂಗಳೂರಿನಲ್ಲಿ ಇದು ಅದ್ಧೂರಿ ಚಾಲನೆ ಸಿಕ್ಕಿದೆ.

ಈ ವೇಳೆ ಮಾತನಾಡಿದ ಅವರು, ಪ್ರತೀ ಬಾರಿ ಹೊಸ ಪ್ರಯೋಗದೊಂದಿಗೆ ನನ್ನ ಊರಿನಲ್ಲಿ ನಿಂತು ಮಾತನಾಡುವುದು ನನಗೆ ಅಪಾರ ಸಂತಸ ತರುತ್ತದೆ. ನನ್ನ ಕನಸಿಗೆ ಪ್ರೋತ್ಸಾಹ ಕೊಟ್ಟು, ಶ್ರದ್ಧೆಗೆ ಆಶೀರ್ವಾದ ಮಾಡಿದ್ದು ಇದೇ ನಮ್ಮ ಊರು, ಕರ್ನಾಟಕ(Karnataka) ಎಂದು ಅಭಿಮಾನಿಗಳಿಗೆ ನಮಸ್ಕರಿಸುತ್ತಾ ಯಶ್ ಮಾತು ಆರಂಭಿಸಿದರು.

ನಮ್ಮ ಇತಿಹಾಸ ಮತ್ತು ಸಂಸ್ಕೃತಿ ಇಡೀ ವಿಶ್ವಕ್ಕೆ ತಲುಪಬೇಕು ಎಂಬ ಉದ್ದೇಶದಿಂದ ಈ ಸಾಹಸಕ್ಕೆ ಕೈಹಾಕಿದ್ದೇವೆ. ಸೋನಿ ಪಿಕ್ಚರ್ಸ್‌ನಂತಹ ಅಂತಾರಾಷ್ಟ್ರೀಯ ಸಂಸ್ಥೆ ಇದನ್ನು ವಿಶ್ವಮಟ್ಟದಲ್ಲಿ ವಿತರಣೆ ಮಾಡುತ್ತಿದೆ. ಕೆಲವೊಮ್ಮೆ ಗಡಿ ದಾಟಿ, ಸೋಲು-ಗೆಲುವನ್ನು ಪಣಕ್ಕಿಟ್ಟು ಇಂತಹ ಮಹತ್ಕಾರ್ಯಗಳನ್ನು ಮಾಡಬೇಕಾಗುತ್ತದೆ. ಇಡೀ ಭಾರತೀಯ ಚಿತ್ರರಂಗ ಒಂದಾಗಿ ನಿಲ್ಲಬೇಕು, ಅದರಲ್ಲಿ ಕನ್ನಡಿಗನ ಶ್ರಮ ಹಾಗೂ ಸೇವೆಯೂ ಇರಬೇಕು ಎಂದರು.

ಸಾಮಾಜಿಕ ಜಾಲತಾಣಗಳಲ್ಲಿ ವ್ಯಕ್ತವಾಗುವ ನಕಾರಾತ್ಮಕ ಚರ್ಚೆಗಳ ಬಗ್ಗೆ ಮಾತನಾಡಿದ ಯಶ್, “ಸೋಷಿಯಲ್ ಮೀಡಿಯಾದಲ್ಲಿ ಆ ನಟ ಹಾಗೆ ಇರಬೇಕಿತ್ತು, ಈ ನಟ ಹೀಗೆ ಇರಬೇಕಿತ್ತು ಎಂದು ಬರೆಯುವುದನ್ನು ನೋಡುತ್ತಿರುತ್ತೇನೆ. ಬ್ರಿಟಿಷರು ಮಾಡಿದ್ದು ಇದೇ ‘ಡಿವೈಡ್ ಅಂಡ್ ರೂಲ್’ ತಂತ್ರ. ಉದ್ದೇಶ ಸರಿಯಾಗಿದ್ದಾಗ ಇಡೀ ಚಿತ್ರರಂಗ ಹಾಗೂ ಇಡೀ ಸೌತ್ ಇಂಡಿಯಾ ಒಂದಾಗಿ ನಿಲ್ಲಬೇಕು. ಕಥೆಗಳನ್ನು ಕೇಳುತ್ತಾ ಬೆಳೆದ ನಾವು, ಈ ತಂಡ ಪಟ್ಟಿರುವ ಶ್ರಮಕ್ಕೆ ಗೌರವ ನೀಡಬೇಕು. ಯಾರ ಮೇಲೂ ಕೋಪ ಬೇಡ, ಪ್ರೀತಿ ಹಂಚೋಣ, ಪ್ರೀತಿ ಪಡೆಯೋಣ ಎಂದು ಹೇಳಿದರು.

ಚಿಕ್ಕವರಿದ್ದಾಗ ರೆಹಮಾನ್ ಹಾಡುಗಳಿಗೆ ಹೆಜ್ಜೆ ಹಾಕುತ್ತಿದ್ದ ದಿನಗಳನ್ನು ನೆನಪಿಸಿಕೊಂಡ ಯಶ್, “ನನ್ನ ಸಿನಿಮಾಗೆ ರೆಹಮಾನ್ ಸರ್ ಸಂಗೀತ ನೀಡಿದ್ದಾರೆ ಎನ್ನುವುದೇ ಒಂದು ಕನಸು. ಅವರು ಈ ಹಿಂದೆ ‘ಡ್ಯಾನ್ಸ್ ರಾಜ ಡ್ಯಾನ್ಸ್’ ಚಿತ್ರಕ್ಕೆ ಕೆಲಸ ಮಾಡಿದ್ದರು. ‘ನಾನು ಮೊದಲ ಸ್ಟುಡಿಯೋ ಕಟ್ಟಿದ್ದು ಕನ್ನಡಿಗರು ಕೊಟ್ಟ ದುಡ್ಡಿನಿಂದ’ ಎಂದು ರೆಹಮಾನ್ ಅವರೇ ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ ಎಂದರು.

ರೆಹಮಾನ್ ಹಾಗೂ ಹಾಲಿವುಡ್‌ನ ದಿಗ್ಗಜ ಹ್ಯಾನ್ಸ್ ಜಿಮ್ಮರ್ ಇಬ್ಬರೂ ಏಕೆ ಬೇಕು ಎಂದು ಹಲವರು ಕೇಳಿದರು. ಇದು ಭಾರತ ಮತ್ತು ಹಾಲಿವುಡ್ ಎಂಬ ಎರಡು ಜಗತ್ತುಗಳನ್ನು ಒಟ್ಟಿಗೆ ಸೇರಿಸುವ ಅದ್ಭುತ ಪ್ರಯತ್ನ ಎಂದು ವಿವರಿಸಿದರು.

‘ಟಾಕ್ಸಿಕ್’ ಕುರಿತು ಕೇಳಿಬಂದ ಟೀಕೆಗಳಿಗೆ ಉತ್ತರಿಸಿದ ಯಶ್, ಯಾರೆಲ್ಲಾ ಎಂತೆಂತಹ ಮಾತುಗಳನ್ನು ಆಡಿದ್ದೀರಿ, ಎಷ್ಟು ಕಲೆಕ್ಷನ್ ಕೊಟ್ಟಿದ್ದೀರಿ ಎಂಬುದೆಲ್ಲವನ್ನೂ ನಾನು ಸೂಕ್ಷ್ಮವಾಗಿ ಗಮನಿಸಿದ್ದೇನೆ. ಯಾವಾಗ, ಯಾವ ತರಹದ ಸಿನಿಮಾ ಮಾಡಬೇಕು ಎಂಬ ಅರಿವು ನಮಗೂ ಇದೆ. ರಾಮಾಯಣವನ್ನು ಎಲ್ಲಾ ವಯೋಮಾನದವರೂ ಕುಳಿತು ನೋಡಬಹುದು” ಎಂದು ಟಾಂಗ್ ಕೊಟ್ಟರು.

ವೇದಿಕೆಯಲ್ಲಿದ್ದ ಪತ್ನಿ ರಾಧಿಕಾ ಪಂಡಿತ್ ಅವರನ್ನು ಉಲ್ಲೇಖಿಸಿದ ಯಶ್, “ನಮ್ಮ ಸೀತೆ ಇಲ್ಲೇ ಇದ್ದಾರೆ. ನಾನು ತೆರೆಯ ಮೇಲೆ ರಾವಣನೇ ಆಗಲಿ, ರಾಯನೇ ಆಗಲಿ, ರಾಕಿಯೇ ಆಗಲಿ… ನಿಜ ಜೀವನದಲ್ಲಿ ಮಾತ್ರ ಸದಾ ‘ರಾಧಿಕಾಪತಿ’. ಮನೆಯಲ್ಲಿ ಹೆಂಡತಿಯೆಂಬ ಶಕ್ತಿ ಬೆಂಬಲವಾಗಿ ಇಲ್ಲದಿದ್ದರೆ ನಮ್ಮ ಇಂತಹ ಹುಚ್ಚುತನದ ದೊಡ್ಡ ಪ್ರಯೋಗಗಳನ್ನು ಮಾಡಲು ಸಾಧ್ಯವೇ ಇಲ್ಲ” ಎಂದು ನಗೆ ಬೀರಿದರು.

“ಎರಡೂ ಭಾಗಗಳು ಸೇರಿ ಸುಮಾರು 4,000 ಕೋಟಿ ರೂ. ಬಜೆಟ್‌ನಲ್ಲಿ ಮೂಡಿಬರುತ್ತಿರುವ ಈ ಚಿತ್ರವನ್ನು ಪ್ರತಿಯೊಬ್ಬ ಭಾರತೀಯನೂ ಹೆಮ್ಮೆಯಿಂದ ಹೇಳಿಕೊಳ್ಳಬೇಕು. ನಾವು ಆಡುತ್ತಿರುವುದು ಭಾರತಕ್ಕಾಗಿ, ಆದರೆ ಸದಾ ಗಟ್ಟಿಯಾಗಿ ನಿಲ್ಲುವುದು ನಮ್ಮ ಕನ್ನಡಕ್ಕಾಗಿ” ಎಂದು ಯಶ್ ತಮ್ಮ ಭಾಷಣವನ್ನು ಭಾವಪೂರ್ಣವಾಗಿ ಮುಕ್ತಾಯಗೊಳಿಸಿದರು.

Generating image…

‘ಟಾಕ್ಸಿಕ್’ ಕುರಿತು ಕೇಳಿಬಂದ ಟೀಕೆಗಳಿಗೆ ಉತ್ತರಿಸಿದ ಯಶ್, ಯಾರೆಲ್ಲಾ ಎಂತೆಂತಹ ಮಾತುಗಳನ್ನು ಆಡಿದ್ದೀರಿ, ಎಷ್ಟು ಕಲೆಕ್ಷನ್ ಕೊಟ್ಟಿದ್ದೀರಿ ಎಂಬುದೆಲ್ಲವನ್ನೂ ನಾನು ಸೂಕ್ಷ್ಮವಾಗಿ ಗಮನಿಸಿದ್ದೇನೆ. ಯಾವಾಗ, ಯಾವ ತರಹದ ಸಿನಿಮಾ ಮಾಡಬೇಕು ಎಂಬ ಅರಿವು ನಮಗೂ ಇದೆ. ರಾಮಾಯಣವನ್ನು ಎಲ್ಲಾ ವಯೋಮಾನದವರೂ ಕುಳಿತು ನೋಡಬಹುದು”* ಎಂದು ಟಾಂಗ್ ಕೊಟ್ಟರು.

ವೇದಿಕೆಯಲ್ಲಿದ್ದ ಪತ್ನಿ ರಾಧಿಕಾ ಪಂಡಿತ್ ಅವರನ್ನು ಉಲ್ಲೇಖಿಸಿದ ಯಶ್, “ನಮ್ಮ ಸೀತೆ ಇಲ್ಲೇ ಇದ್ದಾರೆ. ನಾನು ತೆರೆಯ ಮೇಲೆ ರಾವಣನೇ ಆಗಲಿ, ರಾಯನೇ ಆಗಲಿ, ರಾಕಿಯೇ ಆಗಲಿ… ನಿಜ ಜೀವನದಲ್ಲಿ ಮಾತ್ರ ಸದಾ ‘ರಾಧಿಕಾಪತಿ’. ಮನೆಯಲ್ಲಿ ಹೆಂಡತಿಯೆಂಬ ಶಕ್ತಿ ಬೆಂಬಲವಾಗಿ ಇಲ್ಲದಿದ್ದರೆ ನಮ್ಮ ಇಂತಹ ಹುಚ್ಚುತನದ ದೊಡ್ಡ ಪ್ರಯೋಗಗಳನ್ನು ಮಾಡಲು ಸಾಧ್ಯವೇ ಇಲ್ಲ” ಎಂದು ನಗೆ ಬೀರಿದರು.

“ಎರಡೂ ಭಾಗಗಳು ಸೇರಿ ಸುಮಾರು 4,000 ಕೋಟಿ ರೂ. ಬಜೆಟ್‌ನಲ್ಲಿ ಮೂಡಿಬರುತ್ತಿರುವ ಈ ಚಿತ್ರವನ್ನು ಪ್ರತಿಯೊಬ್ಬ ಭಾರತೀಯನೂ ಹೆಮ್ಮೆಯಿಂದ ಹೇಳಿಕೊಳ್ಳಬೇಕು. ನಾವು ಆಡುತ್ತಿರುವುದು ಭಾರತಕ್ಕಾಗಿ, ಆದರೆ ಸದಾ ಗಟ್ಟಿಯಾಗಿ ನಿಲ್ಲುವುದು ನಮ್ಮ ಕನ್ನಡಕ್ಕಾಗಿ” ಎಂದು ಯಶ್ ತಮ್ಮ ಭಾಷಣವನ್ನು ಭಾವಪೂರ್ಣವಾಗಿ ಮುಕ್ತಾಯಗೊಳಿಸಿದರು.

Editor Reporter
kannadasakshi.in

ನಮ್ಮ ಇತಿಹಾಸ, ಸಂಸ್ಕೃತಿ ಇಡೀ ವಿಶ್ವಕ್ಕೆ ತಲುಪಬೇಕು: ಯಶ್‌..

ರಾಮಾಯಣ(Ramayana) ಪ್ರತಿಯೊಬ್ಬ ಭಾರತೀಯನ ರಕ್ತದಲ್ಲಿದೆ. ಇದನ್ನು ನಾವ್ಯಾರೂ ಕೇವಲ ಒಂದು ಸಿನಿಮಾ ತರಹ ಟ್ರೀಟ್ ಮಾಡಿಲ್ಲ. ಭಕ್ತಿಯಿಂದ ಸಿಕ್ಕ ಒಂದು ದೈವಿಕ ಅವಕಾಶವಿದು. ನಮ್ಮ ಇತಿಹಾಸ ಮತ್ತು ಸಂಸ್ಕೃತಿ ಇಡೀ ವಿಶ್ವಕ್ಕೆ ತಲುಪಬೇಕು ಎಂಬ ಉದ್ದೇಶದಿಂದ ಈ ಸಾಹಸಕ್ಕೆ ಕೈಹಾಕಿದ್ದೇವೆ ಎಂದು ನಟ ಯಶ್‌(Yash) ಹೇಳಿದರು.
ರಾಕಿಂಗ್ ಸ್ಟಾರ್ ಯಶ್ ಅಭಿನಯದ ಹಾಗೂ ಸಹ-ನಿರ್ಮಾಣದ ಬಹುನಿರೀಕ್ಷಿತ ಮಹಾಕಾವ್ಯ ಆಧಾರಿತ ಸಿನಿಮಾ ‘ರಾಮಾಯಣ’ದ ಅಧಿಕೃತ ಪ್ರಚಾರ ಕಾರ್ಯಕ್ರಮಕ್ಕೆ ರಾಜಧಾನಿ ಬೆಂಗಳೂರಿನಲ್ಲಿ ಇದು ಅದ್ಧೂರಿ ಚಾಲನೆ ಸಿಕ್ಕಿದೆ.

ಈ ವೇಳೆ ಮಾತನಾಡಿದ ಅವರು, ಪ್ರತೀ ಬಾರಿ ಹೊಸ ಪ್ರಯೋಗದೊಂದಿಗೆ ನನ್ನ ಊರಿನಲ್ಲಿ ನಿಂತು ಮಾತನಾಡುವುದು ನನಗೆ ಅಪಾರ ಸಂತಸ ತರುತ್ತದೆ. ನನ್ನ ಕನಸಿಗೆ ಪ್ರೋತ್ಸಾಹ ಕೊಟ್ಟು, ಶ್ರದ್ಧೆಗೆ ಆಶೀರ್ವಾದ ಮಾಡಿದ್ದು ಇದೇ ನಮ್ಮ ಊರು, ಕರ್ನಾಟಕ(Karnataka) ಎಂದು ಅಭಿಮಾನಿಗಳಿಗೆ ನಮಸ್ಕರಿಸುತ್ತಾ ಯಶ್ ಮಾತು ಆರಂಭಿಸಿದರು.

ನಮ್ಮ ಇತಿಹಾಸ ಮತ್ತು ಸಂಸ್ಕೃತಿ ಇಡೀ ವಿಶ್ವಕ್ಕೆ ತಲುಪಬೇಕು ಎಂಬ ಉದ್ದೇಶದಿಂದ ಈ ಸಾಹಸಕ್ಕೆ ಕೈಹಾಕಿದ್ದೇವೆ. ಸೋನಿ ಪಿಕ್ಚರ್ಸ್‌ನಂತಹ ಅಂತಾರಾಷ್ಟ್ರೀಯ ಸಂಸ್ಥೆ ಇದನ್ನು ವಿಶ್ವಮಟ್ಟದಲ್ಲಿ ವಿತರಣೆ ಮಾಡುತ್ತಿದೆ. ಕೆಲವೊಮ್ಮೆ ಗಡಿ ದಾಟಿ, ಸೋಲು-ಗೆಲುವನ್ನು ಪಣಕ್ಕಿಟ್ಟು ಇಂತಹ ಮಹತ್ಕಾರ್ಯಗಳನ್ನು ಮಾಡಬೇಕಾಗುತ್ತದೆ. ಇಡೀ ಭಾರತೀಯ ಚಿತ್ರರಂಗ ಒಂದಾಗಿ ನಿಲ್ಲಬೇಕು, ಅದರಲ್ಲಿ ಕನ್ನಡಿಗನ ಶ್ರಮ ಹಾಗೂ ಸೇವೆಯೂ ಇರಬೇಕು ಎಂದರು.

ಸಾಮಾಜಿಕ ಜಾಲತಾಣಗಳಲ್ಲಿ ವ್ಯಕ್ತವಾಗುವ ನಕಾರಾತ್ಮಕ ಚರ್ಚೆಗಳ ಬಗ್ಗೆ ಮಾತನಾಡಿದ ಯಶ್, “ಸೋಷಿಯಲ್ ಮೀಡಿಯಾದಲ್ಲಿ ಆ ನಟ ಹಾಗೆ ಇರಬೇಕಿತ್ತು, ಈ ನಟ ಹೀಗೆ ಇರಬೇಕಿತ್ತು ಎಂದು ಬರೆಯುವುದನ್ನು ನೋಡುತ್ತಿರುತ್ತೇನೆ. ಬ್ರಿಟಿಷರು ಮಾಡಿದ್ದು ಇದೇ ‘ಡಿವೈಡ್ ಅಂಡ್ ರೂಲ್’ ತಂತ್ರ. ಉದ್ದೇಶ ಸರಿಯಾಗಿದ್ದಾಗ ಇಡೀ ಚಿತ್ರರಂಗ ಹಾಗೂ ಇಡೀ ಸೌತ್ ಇಂಡಿಯಾ ಒಂದಾಗಿ ನಿಲ್ಲಬೇಕು. ಕಥೆಗಳನ್ನು ಕೇಳುತ್ತಾ ಬೆಳೆದ ನಾವು, ಈ ತಂಡ ಪಟ್ಟಿರುವ ಶ್ರಮಕ್ಕೆ ಗೌರವ ನೀಡಬೇಕು. ಯಾರ ಮೇಲೂ ಕೋಪ ಬೇಡ, ಪ್ರೀತಿ ಹಂಚೋಣ, ಪ್ರೀತಿ ಪಡೆಯೋಣ ಎಂದು ಹೇಳಿದರು.

ಚಿಕ್ಕವರಿದ್ದಾಗ ರೆಹಮಾನ್ ಹಾಡುಗಳಿಗೆ ಹೆಜ್ಜೆ ಹಾಕುತ್ತಿದ್ದ ದಿನಗಳನ್ನು ನೆನಪಿಸಿಕೊಂಡ ಯಶ್, “ನನ್ನ ಸಿನಿಮಾಗೆ ರೆಹಮಾನ್ ಸರ್ ಸಂಗೀತ ನೀಡಿದ್ದಾರೆ ಎನ್ನುವುದೇ ಒಂದು ಕನಸು. ಅವರು ಈ ಹಿಂದೆ ‘ಡ್ಯಾನ್ಸ್ ರಾಜ ಡ್ಯಾನ್ಸ್’ ಚಿತ್ರಕ್ಕೆ ಕೆಲಸ ಮಾಡಿದ್ದರು. ‘ನಾನು ಮೊದಲ ಸ್ಟುಡಿಯೋ ಕಟ್ಟಿದ್ದು ಕನ್ನಡಿಗರು ಕೊಟ್ಟ ದುಡ್ಡಿನಿಂದ’ ಎಂದು ರೆಹಮಾನ್ ಅವರೇ ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ ಎಂದರು.

ರೆಹಮಾನ್ ಹಾಗೂ ಹಾಲಿವುಡ್‌ನ ದಿಗ್ಗಜ ಹ್ಯಾನ್ಸ್ ಜಿಮ್ಮರ್ ಇಬ್ಬರೂ ಏಕೆ ಬೇಕು ಎಂದು ಹಲವರು ಕೇಳಿದರು. ಇದು ಭಾರತ ಮತ್ತು ಹಾಲಿವುಡ್ ಎಂಬ ಎರಡು ಜಗತ್ತುಗಳನ್ನು ಒಟ್ಟಿಗೆ ಸೇರಿಸುವ ಅದ್ಭುತ ಪ್ರಯತ್ನ ಎಂದು ವಿವರಿಸಿದರು.

‘ಟಾಕ್ಸಿಕ್’ ಕುರಿತು ಕೇಳಿಬಂದ ಟೀಕೆಗಳಿಗೆ ಉತ್ತರಿಸಿದ ಯಶ್, ಯಾರೆಲ್ಲಾ ಎಂತೆಂತಹ ಮಾತುಗಳನ್ನು ಆಡಿದ್ದೀರಿ, ಎಷ್ಟು ಕಲೆಕ್ಷನ್ ಕೊಟ್ಟಿದ್ದೀರಿ ಎಂಬುದೆಲ್ಲವನ್ನೂ ನಾನು ಸೂಕ್ಷ್ಮವಾಗಿ ಗಮನಿಸಿದ್ದೇನೆ. ಯಾವಾಗ, ಯಾವ ತರಹದ ಸಿನಿಮಾ ಮಾಡಬೇಕು ಎಂಬ ಅರಿವು ನಮಗೂ ಇದೆ. ರಾಮಾಯಣವನ್ನು ಎಲ್ಲಾ ವಯೋಮಾನದವರೂ ಕುಳಿತು ನೋಡಬಹುದು” ಎಂದು ಟಾಂಗ್ ಕೊಟ್ಟರು.

ವೇದಿಕೆಯಲ್ಲಿದ್ದ ಪತ್ನಿ ರಾಧಿಕಾ ಪಂಡಿತ್ ಅವರನ್ನು ಉಲ್ಲೇಖಿಸಿದ ಯಶ್, “ನಮ್ಮ ಸೀತೆ ಇಲ್ಲೇ ಇದ್ದಾರೆ. ನಾನು ತೆರೆಯ ಮೇಲೆ ರಾವಣನೇ ಆಗಲಿ, ರಾಯನೇ ಆಗಲಿ, ರಾಕಿಯೇ ಆಗಲಿ… ನಿಜ ಜೀವನದಲ್ಲಿ ಮಾತ್ರ ಸದಾ ‘ರಾಧಿಕಾಪತಿ’. ಮನೆಯಲ್ಲಿ ಹೆಂಡತಿಯೆಂಬ ಶಕ್ತಿ ಬೆಂಬಲವಾಗಿ ಇಲ್ಲದಿದ್ದರೆ ನಮ್ಮ ಇಂತಹ ಹುಚ್ಚುತನದ ದೊಡ್ಡ ಪ್ರಯೋಗಗಳನ್ನು ಮಾಡಲು ಸಾಧ್ಯವೇ ಇಲ್ಲ” ಎಂದು ನಗೆ ಬೀರಿದರು.

“ಎರಡೂ ಭಾಗಗಳು ಸೇರಿ ಸುಮಾರು 4,000 ಕೋಟಿ ರೂ. ಬಜೆಟ್‌ನಲ್ಲಿ ಮೂಡಿಬರುತ್ತಿರುವ ಈ ಚಿತ್ರವನ್ನು ಪ್ರತಿಯೊಬ್ಬ ಭಾರತೀಯನೂ ಹೆಮ್ಮೆಯಿಂದ ಹೇಳಿಕೊಳ್ಳಬೇಕು. ನಾವು ಆಡುತ್ತಿರುವುದು ಭಾರತಕ್ಕಾಗಿ, ಆದರೆ ಸದಾ ಗಟ್ಟಿಯಾಗಿ ನಿಲ್ಲುವುದು ನಮ್ಮ ಕನ್ನಡಕ್ಕಾಗಿ” ಎಂದು ಯಶ್ ತಮ್ಮ ಭಾಷಣವನ್ನು ಭಾವಪೂರ್ಣವಾಗಿ ಮುಕ್ತಾಯಗೊಳಿಸಿದರು.

Share ePaper Clip

Preparing image...

   SHARE  

Facebook
Twitter
Telegram
WhatsApp

   TOP NEWS  

   RECENT NEWS