ನಾವೆಲ್ಲರೂ ಆಡಳಿತ ಬದಲಾವಣೆಯಾಗಬೇಕೆಂದು(Regime Change) ಬಯಸುತ್ತಿದ್ದೇವೆ. ಹಾಗೆ ಬಯಸುವುದರಲ್ಲಿ ತಪ್ಪೇನಿದೆ ಎಂದು ಸುಪ್ರೀಂ ಕೋರ್ಟ್ನ(Supreme Court) ಹಿರಿಯ ವಕೀಲ ಹಾಗೂ ಸಾಮಾಜಿಕ ಹೋರಾಟಗಾರ ಪ್ರಶಾಂತ್ ಭೂಷಣ್(Prashant Bhushan) ಹೇಳಿದ್ದಾರೆ.
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಸಿಜೆಪಿ ನಾಯಕರ ಜೊತೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪ್ರಸ್ತುತ ರಾಜಕೀಯ ಮತ್ತು ಆಡಳಿತ ವ್ಯವಸ್ಥೆಯ ವಿರುದ್ಧ ನೇರ ಅಸಮಾಧಾನ ವ್ಯಕ್ತಪಡಿಸಿದರುಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಆಡಳಿತ ಬದಲಾವಣೆ ಬಯಸುವುದು ಜನರ ಮೂಲಭೂತ ಹಕ್ಕು ಎಂದಿರುವ ಅವರು, ಜನವಿರೋಧಿ ನೀತಿಗಳು ಮತ್ತು ಪ್ರಸ್ತುತ ಸರ್ಕಾರದ ಕಾರ್ಯವೈಖರಿಯಿಂದ ಬೇಸತ್ತಿರುವ ದೇಶದ ಜನರು ಬದಲಾವಣೆಯ ನಿರೀಕ್ಷೆಯಲ್ಲಿದ್ದಾರೆ ಎಂದರು.
ಅಸ್ತಿತ್ವದಲ್ಲಿರುವ ರಾಜಕೀಯ ಸರ್ಕಾರ, ನಾಯಕತ್ವ ಅಥವಾ ಆಡಳಿತ ವ್ಯವಸ್ಥೆಯನ್ನು ಸಂಪೂರ್ಣವಾಗಿ ತೆಗೆದುಹಾಕಿ ಹೊಸ ವ್ಯವಸ್ಥೆಯನ್ನು ತರುವುದಕ್ಕೆ ರಿಜಿಮ್ ಚೇಂಜ್ ಎಂದು ಕರೆಯಲಾಗುತ್ತದೆ. ಇತ್ತೀಚಿನ ವರ್ಷಗಳಲ್ಲಿ ಬಾಂಗ್ಲಾದೇಶ, ಸಿರಿಯಾ, ವೆನೆಜುವೆಲಾದಲ್ಲಿ ಸ್ಥಾಪಿತ ಸರ್ಕಾರವನ್ನೇ ಕಿತ್ತುಹಾಕಿ ಹೊಸ ಸರ್ಕಾರ ಅಧಿಕಾರಕ್ಕೆ ಏರಿತ್ತು.









