ತುಳು-ಕನ್ನಡದ ‘ಬನ’ ಚಿತ್ರ ಅಕ್ಟೋಬರ್ 23ರಂದು ಬಿಡುಗಡೆ

ನಿರೀಕ್ಷೆ ಮೂಡಿಸಿರುವ ‘ಬನ’ ಸಿನಿಮಾದ ಬಿಡುಗಡೆ ದಿನಾಂಕ ಘೋಷಣೆಯಾಗಿದ್ದು, ಚಿತ್ರವು ತುಳು ಮತ್ತು ಕನ್ನಡ ಭಾಷೆಗಳಲ್ಲಿ ಅಕ್ಟೋಬರ್ 23ರಂದು ತೆರೆ ಕಾಣಲಿದೆ. ಬಹಳ ವರ್ಷಗಳ ನಂತರ ನಾಗ ಕಥೆಯನ್ನು ಆಧರಿಸಿದ ಚಿತ್ರವೊಂದು ಬರುತ್ತಿರುವುದರಿಂದ ಸಿನಿಪ್ರೇಕ್ಷಕರಲ್ಲಿ ಕುತೂಹಲ ಹೆಚ್ಚಾಗಿದೆ.

ತುಳು ಚಿತ್ರರಂಗದ ಇತಿಹಾಸದಲ್ಲೇ ನಾಗ ಕಥೆಯನ್ನು ಹೊಂದಿರುವ ಮೊದಲ ಸಿನಿಮಾ ಎಂಬ ಹೆಗ್ಗಳಿಕೆಗೆ ‘ಬನ’ ಪಾತ್ರವಾಗಲಿದೆ ಎಂದು ಚಿತ್ರತಂಡ ತಿಳಿಸಿದೆ. ಸ್ಥಳೀಯ ಸಂಸ್ಕೃತಿ, ಪರಂಪರೆ ಮತ್ತು ನಾಗಾರಾಧನೆಯ ಹಿನ್ನೆಲೆಯನ್ನು ಒಳಗೊಂಡಿರುವ ಈ ಸಿನಿಮಾ ವಿಶೇಷವಾಗಿರಲಿದೆ.

ಈ ಚಿತ್ರದ ಮತ್ತೊಂದು ವಿಶೇಷವೆಂದರೆ ಸುದ್ದಿ ನಿರೂಪಕ ಹಾಗೂ ಪತ್ರಕರ್ತ ಜಯಪ್ರಕಾಶ್ ಶೆಟ್ಟಿ ಅವರು ನಟಿಸಿರುವುದು. ಅವರ ಅಭಿನಯವನ್ನು ನೋಡಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದು, ‘ಬನ’ ಸಿನಿಮಾ ತುಳು ಮತ್ತು ಕನ್ನಡ ಚಿತ್ರರಂಗದಲ್ಲಿ ಹೊಸ ಸಂಚಲನ ಮೂಡಿಸಲಿದೆ ಎಂಬ ನಿರೀಕ್ಷೆ ವ್ಯಕ್ತವಾಗಿದೆ.

   SHARE  

Facebook
Twitter
Telegram
WhatsApp

   TOP NEWS  

   RECENT NEWS