‘ಚಂದ್ರಹಾಸ’ ಚಿತ್ರದ ಮೊದಲ ಹಾಡು ಬಿಡುಗಡೆ: ‘ಚಡ್ಡಿ ಬಡ್ಡಿ’ಗೆ ಭಾರೀ ಮೆಚ್ಚುಗೆ

ಹರೀಶ್ ಹಿರಿಯೂರು ಅಭಿನಯದ ಚಂದ್ರಹಾಸ ಚಿತ್ರದ ಮೊದಲ ಹಾಡು ಬಿಡುಗಡೆಯಾಗಿದೆ. ಇತ್ತೀಚೆಗೆ ನಡೆದ ಕಾರ್ಯಕ್ರಮದಲ್ಲಿ ನಿರ್ಮಾಪಕಿ ಶೈಲಜಾ ನಾಗ್ ಈ ಹಾಡನ್ನು ಅನಾವರಣಗೊಳಿಸಿದರು.

ಹೊಸ ಪ್ರತಿಭೆಗಳ ತಂಡ ಸೇರಿ ನಿರ್ಮಿಸಿರುವ ಈ ಚಿತ್ರವನ್ನು ಆನಂದ್ ಎಸ್. ಕಲಕಬಂಡಿ ನಿರ್ದೇಶಿಸಿದ್ದಾರೆ. ಪೂರ್ಣಚಂದ್ರ ತೇಜಸ್ವಿ ಸಂಗೀತ ನಿರ್ದೇಶನ ಮಾಡಿರುವ ಈ ಚಿತ್ರದ ಮೊದಲ ಹಾಡಿಗೆ ಯೋಗರಾಜ್ ಭಟ್ ಸಾಹಿತ್ಯ ಬರೆದಿದ್ದಾರೆ.

‘ಚಡ್ಡಿ ಬಡ್ಡಿ’ ಎಂಬ ಈ ಹಾಡು ಸ್ನೇಹಿತರ ನಡುವಿನ ಬಾಂಧವ್ಯವನ್ನು ಮನಮುಟ್ಟುವಂತೆ ಹೇಳುತ್ತದೆ. ವಿಶೇಷವೆಂದರೆ, ನಟ ಶರಣ್ ಮತ್ತು ಗಾಯಕ ನವೀನ್ ಸಜ್ಜು ಮೊದಲ ಬಾರಿಗೆ ಜೊತೆಯಾಗಿ ಹಾಡಿದ್ದಾರೆ. ಬಸವಂತಗೌಡ ಪಾಟೀಲ್ ನಿರ್ಮಿಸಿರುವ ಈ ಚಿತ್ರಕ್ಕೆ ಬಸಣ್ಣ ಕಮತ್ತರ್ ಸಹ ನಿರ್ಮಾಪಕರಾಗಿದ್ದು, ‘ಚಡ್ಡಿ ಬಡ್ಡಿ’ ಹಾಡು ಡಿ ಬೀಟ್ಸ್ ಯೂಟ್ಯೂಬ್ ಚಾನೆಲ್‌ನಲ್ಲಿ ಬಿಡುಗಡೆಯಾಗಿದೆ.

   SHARE  

Facebook
Twitter
Telegram
WhatsApp

   TOP NEWS  

   RECENT NEWS