ಲಿಂಕ್ಡ್‌ಇನ್ 2026ರ ಪಟ್ಟಿ ಬಿಡುಗಡೆ: ಬೆಂಗಳೂರಿನ ಟಾಪ್ 10 ಅತ್ಯುತ್ತಮ ಕಂಪನಿಗಳು ಯಾವುವು ಗೊತ್ತಾ?

ಉದ್ಯೋಗಿಗಳಿಗೆ ವೃತ್ತಿಜೀವನದ ಬೆಳವಣಿಗೆ (Career Growth) ಮತ್ತು ಉತ್ತಮ ಕೆಲಸದ ವಾತಾವರಣ ಒದಗಿಸುವ ಭಾರತದ ಟಾಪ್ ಕಂಪನಿಗಳ 2026ರ ವಾರ್ಷಿಕ ಪಟ್ಟಿಯನ್ನು ವೃತ್ತಿಪರ ಸಾಮಾಜಿಕ ಜಾಲತಾಣ ‘ಲಿಂಕ್ಡ್‌ಇನ್’ (LinkedIn) ಬಿಡುಗಡೆ ಮಾಡಿದೆ. ದೇಶದ ಪ್ರಮುಖ ಐಟಿ ಮತ್ತು ಉದ್ಯೋಗ ಹಬ್ ಆಗಿರುವ ಬೆಂಗಳೂರು, ಈ ಪಟ್ಟಿಯಲ್ಲಿ ಸ್ಥಾನ ಪಡೆದಿರುವ ಬಹುತೇಕ ಕಂಪನಿಗಳಿಗೆ ಪ್ರಮುಖ ಪ್ರತಿಭಾನ್ವಿತ ಕೇಂದ್ರವಾಗಿ (Talent Hub) ಹೊರಹೊಮ್ಮಿದೆ. ಈ ವರ್ಷ ಬಿಡುಗಡೆಯಾಗಿರುವ ಅಗ್ರ 25 ಕಂಪನಿಗಳ ಪಟ್ಟಿಯಲ್ಲಿ ಬೆಂಗಳೂರಿನಲ್ಲಿ ಅತಿ ಹೆಚ್ಚು ಸಕ್ರಿಯ ನೇಮಕಾತಿ ಹೊಂದಿರುವ ಟಾಪ್ 10 ಕಂಪನಿಗಳು ಉದ್ಯೋಗಾಕಾಂಕ್ಷಿಗಳ ಗಮನ ಸೆಳೆದಿವೆ.

ಲಿಂಕ್ಡ್‌ಇನ್ ವರದಿಯ ಪ್ರಕಾರ, ಈ ವರ್ಷದ ಭಾರತದ ಅತ್ಯುತ್ತಮ ಕಂಪನಿಗಳ ಪಟ್ಟಿಯಲ್ಲಿ ಐಟಿ ದೈತ್ಯ ಇನ್ಫೋಸಿಸ್ (Infosys) ಮೊದಲ ಸ್ಥಾನವನ್ನು ಮುಡಿಗೇರಿಸಿಕೊಂಡಿದೆ. ಇದರ ಬೆನ್ನಲ್ಲೇ ಜಾಗತಿಕ ಕನ್ಸಲ್ಟಿಂಗ್ ಸಂಸ್ಥೆ ಅಕ್ಸೆಂಚರ್ (Accenture) ಮತ್ತು ಇ-ಕಾಮರ್ಸ್ ದೈತ್ಯ ಅಮೆಜಾನ್ (Amazon) ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನಗಳನ್ನು ಪಡೆದುಕೊಂಡಿವೆ. ಇನ್ನುಳಿದಂತೆ ಹಣಕಾಸು ಸೇವೆಗಳ ದೈತ್ಯ ಸಂಸ್ಥೆ ಜೆಪಿಮೊರ್ಗನ್ ಚೇಸ್ (JPMorganChase) ಮತ್ತು ಎಂಟರ್‌ಪ್ರೈಸ್ ಸಾಫ್ಟ್‌ವೇರ್ ಸಂಸ್ಥೆ ಎಸ್ಎಪಿ (SAP) ಟಾಪ್ 5 ರೊಳಗೆ ಸ್ಥಾನ ಭದ್ರಪಡಿಸಿಕೊಂಡಿದ್ದು, ಇವೆಲ್ಲವೂ ಬೆಂಗಳೂರಿನಲ್ಲಿ ಬೃಹತ್ ಕಚೇರಿ ಹಾಗೂ ಉದ್ಯೋಗಿಗಳನ್ನು ಹೊಂದಿವೆ.

ಉಳಿದ ಅಗ್ರ ಹತ್ತರ ಪಟ್ಟಿಯಲ್ಲಿ ಟೆಕ್ ದೈತ್ಯ ಸಂಸ್ಥೆಗಳಾದ ಐಬಿಎಂ (IBM), ಫಿಡೆಲಿಟಿ ಇನ್ವೆಸ್ಟ್‌ಮೆಂಟ್ಸ್ (Fidelity Investments), ಗೂಗಲ್‌ನ ತಾಯಿ ಸಂಸ್ಥೆ ಆಲ್ಫಾಬೆಟ್ (Alphabet), ಪ್ರಮುಖ ಕನ್ಸಲ್ಟಿಂಗ್ ಸಂಸ್ಥೆ ಇವೈ (EY) ಮತ್ತು ವೆಲ್ಸ್ ಫಾರ್ಗೋ (Wells Fargo) ಕಂಪನಿಗಳು ಸ್ಥಾನ ಪಡೆದಿವೆ. ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನದ ಅಳವಡಿಕೆ ಮತ್ತು ಉದ್ಯೋಗಿಗಳಲ್ಲಿ ಕೌಶಲ್ಯಾಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡುತ್ತಿರುವ ಕಂಪನಿಗಳೇ ಈ ಪಟ್ಟಿಯಲ್ಲಿ ಮುಂಚೂಣಿಯಲ್ಲಿವೆ. ಉದ್ಯೋಗಿಗಳ ಬಡ್ತಿ ಅವಕಾಶ, ಕೌಶಲ್ಯ ಕಲಿಕೆ ಮತ್ತು ಕಂಪನಿಯ ಸ್ಥಿರತೆಯನ್ನು ಆಧರಿಸಿ ಲಿಂಕ್ಡ್‌ಇನ್ ಈ ಶ್ರೇಯಾಂಕವನ್ನು ಸಿದ್ಧಪಡಿಸಿದೆ.

   SHARE  

Facebook
Twitter
Telegram
WhatsApp

   TOP NEWS  

   RECENT NEWS