ಇನ್ಮುಂದೆ ಬುಕ್‌ ಮಾಡಿದ ದಿನವೇ ಗೃಹ ಬಳಕೆ ಸಿಲಿಂಡರ್ ವಿತರಣೆ – ಗ್ಯಾಸ್ ಏಜೆನ್ಸಿಗಳಿಗೆ ಸೂಚನೆ..

ಮಧ್ಯಪ್ರಾಚ್ಯದಲ್ಲಿ ಕದನ ವಿರಾಮದ್ದೇ ಒಂದು ಕಥೆಯಾದ್ರೆ, ರಾಜ್ಯದಲ್ಲಿ ಗ್ಯಾಸ್ (Gas) ಅಭಾವದ್ದೇ ಇನ್ನೊಂದು ಕಥೆಯಾಗಿದೆ. ಈ ಮಧ್ಯೆ ಗೃಹ ಬಳಕೆ ಸಿಲಿಂಡರ್ (LPG Cylinder) ಸಮಸ್ಯೆ ಬಗೆಹರಿಸಲು ಮುಂದಾಗಿರೋ ಸರ್ಕಾರ, 26 ದಿನಗಳ ಬಳಿಕ ಸಿಲಿಂಡರ್ ಬುಕ್ ಮಾಡಿದ್ರೆ ತಕ್ಷಣವೇ ವಿತರಿಸುವಂತೆ ಗ್ಯಾಸ್ ಏಜೆನ್ಸಿಗಳಿಗೆ ಸೂಚಿಸಿದೆ.

 

ಯಾವುದೇ ಕಾರಣಕ್ಕೂ ಗ್ಯಾಸ್ ಏಜೆನ್ಸಿಗಳ ಮುಂದೆ ಜನ ಕ್ಯೂ ನಿಲ್ಲದಂತೆ ನೋಡಿಕೊಳ್ಳಬೇಕೆಂದು ತಿಳಿಸಿದೆ. ಇನ್ನೂ, ಕಮರ್ಷಿಯಲ್ ಸಿಲಿಂಡರ್ ವಿಚಾರದಲ್ಲಿ ಸುಧಾರಣೆ ಆಗಿದ್ದು, ಆಟೋ ಗ್ಯಾಸ್ ಸಮಸ್ಯೆ ಇದೆ. ಕೇಂದ್ರಕ್ಕೆ ಪತ್ರ ಬರೆದರೂ ಸ್ಪಂದನೆ ಸಿಕ್ಕಿಲ್ಲ ಎಂದು ಆರೋಪಿಸಿದ್ದಾರೆ. ಇದನ್ನೂ ಓದಿ: ಹಾರ್ಮುಜ್ ಜಲಸಂಧಿಯಲ್ಲಿ ಅಮೆರಿಕದ 1,859 ಕೋಟಿ ಮೌಲ್ಯದ MQ-4C ಟ್ರೈಟಾನ್ ಡ್ರೋನ್ ನಾಪತ್ತೆ

 

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಸಚಿವ ಕೃಷ್ಣಬೈರೇಗೌಡ, ದಿನೇಶ್ ಗುಂಡೂರಾವ್, ಕೇಂದ್ರ ಶೀಘ್ರ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕೆಂದು ಆಗ್ರಹಿಸಿದ್ದಾರೆ. ಇನ್ನು ಹಾವೇರಿಯಲ್ಲಿ ಗ್ಯಾಸ್ ಏಜೆನ್ಸಿಯಲ್ಲಿ ಕೆವೈಸಿ ಮಾಡಿಸಲು ಬಂದ ಗ್ರಾಹಕ ಹಾಗೂ ಏಜೆನ್ಸಿ ಸಿಬ್ಬಂದಿ ಗಲಾಟೆ ನಡೆದಿದೆ. ಏಜೆನ್ಸಿ ಸಿಬ್ಬಂದಿ ಮತ್ತು ಗ್ರಾಹಕ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೀತಿದ್ದಾರೆ.

 

ಇನ್ನೂ, ಬೆಂಗಳೂರಿನಲ್ಲಿ ಇವತ್ತು ಕೂಡ ಆಟೋ ಗ್ಯಾಸ್‌ಗಾಗಿ ಕ್ಯೂ ನಿಂತಿರೋ ದೃಶ್ಯ ಎದ್ದು ಕಾಣುತ್ತಿತ್ತು. ಇನ್ನು ಯುದ್ಧ ನಿಲ್ಲಲಿ ಅಂತ ಉಡುಪಿಯ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ಯಾಗ ಹಮ್ಮಿಕೊಳ್ಳಲಾಗಿದೆ. ವಿವಿಧ ಸಂತರು, ಸಾವಿರಾರು ಭಕ್ತರು ಪಾಲ್ಗೊಂಡು ವಿಶ್ವಶಾಂತಿಗಾಗಿ ಪ್ರಾರ್ಥಿಸಿದ್ದಾರೆ.

   SHARE  

Facebook
Twitter
Telegram
WhatsApp

   TOP NEWS  

   RECENT NEWS