ನಗರ ಸೇರಿ ರಾಜ್ಯದಲ್ಲಿ ಹೆಲ್ತ್ ಎಮೆರ್ಜೆನ್ಸಿ ಸೃಷ್ಠಿಯಾಗುತ್ತಾ ಅನ್ನೋ ಆತಂಕ ಶುರುವಾಗಿದೆ. ಇಂದು ಜಿವಿಕೆ ಸಂಸ್ಥೆ ಜೊತೆ 108 ನೌಕರರ (108 Ambulance Workers) ಮಹತ್ವದ ಸಭೆ ನಡೆಯಲಿದೆ. ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ 15 ದಿನಗಳ ಗಡುವು ನೀಡಿದ್ದ ನೌಕರರು, ಇಂದಿನ ಸಭೆಯಲ್ಲಿ ಭಾಗಿಯಾಗಲಿದ್ದಾರೆ.
ಬೇಡಿಕೆ ಈಡೇರದೇ ಇದ್ರೆ ಇಂದು ರಾತ್ರಿಯಿಂದಲೇ 108 ಅಂಬುಲೆನ್ಸ್ ಸೇವೆ ಬಂದ್ ಮಾಡಲು ನಿರ್ಧಾರ ಮಾಡಲಾಗಿದೆ. ಸಾಮೂಹಿಕ ರಾಜೀನಾಮೆ ನೀಡಿ ಹೋರಾಟ ತೀವ್ರಗೊಳಿಸಲು ಸಿದ್ಧತೆ ನಡೆದಿದೆ.
ರಾಜ್ಯಾದ್ಯಂತ 108 ಸೇವೆ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ. ಸರ್ಕಾರ ಕೂಡಲೇ ಮಧ್ಯಪ್ರವೇಶಿಸಿ ಬೇಡಿಕೆ ಈಡೇರಿಸುವಂತೆ ಒತ್ತಾಯ ಮಾಡಲಾಗಿದೆ. ಹಾಗಾದ್ರೆ 108 ಅಂಬುಲೆನ್ಸ್ ನೌಕರರ ಬೇಡಿಕೆಗಳು ಏನು ಅಂತ ನೋಡೋದಾದ್ರೆ..










