ಬಿಗ್‌ಬಾಸ್ ಮನೆ ದಿನದಿಂದ ದಿನಕ್ಕೆ ಜಗಳ, ವಾಗ್ವಾದಗಳಿಂದ ಕೂಡಿದ ರಣರಂಗವಾಗುತ್ತಿದೆ. ಟಾಸ್ಕ್‌ಗಳ ವಿಚಾರದಲ್ಲಿ ಸ್ಪರ್ಧಿಗಳ ನಡುವೆ ಮಾತಿನ ಚಕಮಕಿ ಹೆಚ್ಚಾಗುತ್ತಿದ್ದು, ಕೆಲ ಸಂದರ್ಭಗಳಲ್ಲಿ ಪರಿಸ್ಥಿತಿ ಭಾವನಾತ್ಮಕವಾಗಿಯೂ ತಿರುಗುತ್ತಿದೆ.
ಇದೇ ಟಾಸ್ಕ್ ವಿಚಾರವಾಗಿ ಸ್ಪರ್ಧಿ ಆಸಿಯಾ ಫಿರ್ದೋಸ್ ಕಣ್ಣೀರಿಟ್ಟಿದ್ದಾರೆ. ಈ ಬಾರಿ ಟಾಸ್ಕ್‌ನಲ್ಲಿ ತಾನು ಕೂಡ ಭಾಗವಹಿಸಬೇಕು ಎಂಬ ಆಸೆಯನ್ನು ವ್ಯಕ್ತಪಡಿಸಿದ ಅವರು, ಉಳಿದ ಸ್ಪರ್ಧಿಗಳೊಂದಿಗೆ ಈ ಬಗ್ಗೆ ಬೇಸರ ಹಂಚಿಕೊಂಡಿದ್ದಾರೆ.
“ನಾನು ಆಡುತ್ತೇನೆ, ನಾನ್ಯಾಕೆ ಆಡಬಾರದು?” ಎಂದು ಪ್ರಶ್ನಿಸಿರುವ ಆಸಿಯಾ, ಟಾಸ್ಕ್‌ನಲ್ಲಿ ಅವಕಾಶ ನೀಡದಿರುವ ಬಗ್ಗೆ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ. ಈ ಘಟನೆ ಬಿಗ್‌ಬಾಸ್ ಮನೆಯಲ್ಲಿನ ಸ್ಪರ್ಧಿಗಳ ನಡುವಿನ ಮತ್ತೊಂದು ಚರ್ಚೆಗೆ ಕಾರಣವಾಗಿದೆ.










