ಕರ್ನಾಟಕದಲ್ಲಿ ಮೆಗಾ ಹೂಡಿಕೆ: ₹1,000 ಕೋಟಿ ಹೂಡಿಕೆ, 1,200 ಮಂದಿಗೆ ಕೆಲಸ ನೀಡಲಿರುವ ವಿಪ್ರೋ..

ಸುದ್ದಿ ಮತ್ತು ಪ್ರಕಟಣೆಗಳಿಗಾಗಿ:
9000144466
kannadasakshi.in

ಕರ್ನಾಟಕದಲ್ಲಿ ಮೆಗಾ ಹೂಡಿಕೆ: ₹1,000 ಕೋಟಿ ಹೂಡಿಕೆ, 1,200 ಮಂದಿಗೆ ಕೆಲಸ ನೀಡಲಿರುವ ವಿಪ್ರೋ..

04 Sep 2026, 10:27 pm KANNADA SAKSHI

ಹೈಡ್ರಾಲಿಕ್ ಪಂಪ್ ತಯಾರಿಕೆಯಲ್ಲಿ ಹೆಸರಾಗಿರುವ ವಿಪ್ರೋ-ಕವಾಸಕಿ ಪ್ರಿಸಿಷನ್ ಮಷಿನರಿ ಕಂಪನಿ ಕರ್ನಾಟಕದಲ್ಲಿ ಬೃಹತ್ ಹೂಡಿಕೆಗೆ ಮುಂದಾಗಿದೆ. ಹಾರೋಹಳ್ಳಿಯ 5ನೇ ಹಂತದ ಕೈಗಾರಿಕಾ ಪ್ರದೇಶದಲ್ಲಿ ಹೊಸ ಉತ್ಪಾದನಾ ಘಟಕ ಸ್ಥಾಪಿಸಲು ಕಂಪನಿ ಯೋಜನೆ ರೂಪಿಸಿದ್ದು, ಇದಕ್ಕಾಗಿ ಸುಮಾರು ₹1,000 ಕೋಟಿ ಹೂಡಿಕೆ ಮಾಡಲು ಮುಂದಾಗಿದೆ.
ಈ ಯೋಜನೆಯಿಂದ ಸುಮಾರು 1,200 ಉದ್ಯೋಗಗಳು ಸೃಷ್ಟಿಯಾಗಲಿವೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ ತಿಳಿಸಿದ್ದಾರೆ. ಖನಿಜ ಭವನದಲ್ಲಿ ತಮ್ಮನ್ನು ಭೇಟಿಯಾದ ಕಂಪನಿಯ ಸಿಇಒ ಮಿನೋರು ಹತ್ಸುದ ನೇತೃತ್ವದ ಉನ್ನತ ಮಟ್ಟದ ನಿಯೋಗದೊಂದಿಗೆ ಸಚಿವ ಎಂ.ಬಿ. ಪಾಟೀಲ ಅವರು ಮಾತುಕತೆ ನಡೆಸಿದರು.
ಈ ಕುರಿತು ಮಾತನಾಡಿದ ಸಚಿವ ಎಂ.ಬಿ. ಪಾಟೀಲ, ಜಪಾನ್ ಮೂಲದ ಕವಾಸಕಿ ಕಂಪನಿ ವಿಪ್ರೋ ಜೊತೆಗೂಡಿ ಹೊಸ ಘಟಕಕ್ಕಾಗಿ ಸುಮಾರು 30 ಎಕರೆ ಭೂಮಿಯನ್ನು ಕೇಳಿದೆ . ಕಂಪನಿಗೆ ಅಗತ್ಯವಿರುವ ಭೂಮಿಯನ್ನು ತ್ವರಿತವಾಗಿ ಒದಗಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ. ನೂತನ ಉತ್ಪಾದನಾ ಘಟಕವು ಮುಂದಿನ ಒಂದು ವರ್ಷದೊಳಗೆ ಕಾರ್ಯಾರಂಭ ಮಾಡುವ ನಿರೀಕ್ಷೆಯಿದೆ ಎಂದೂ ಅವರು ಹೇಳಿದ್ದಾರೆ.

ವಿಪ್ರೋ-ಕವಾಸಕಿ ಕಂಪನಿಯು ಪ್ರಸ್ತುತ ಕುಂಬಳಗೋಡಿನಲ್ಲಿ ಬಾಡಿಗೆ ಆಧಾರದ ಮೇಲೆ ಉತ್ಪಾದನಾ ಘಟಕವನ್ನು ಹೊಂದಿದೆ. ಅಲ್ಲಿ ಪ್ರತಿವರ್ಷ ಸುಮಾರು 80 ಸಾವಿರ ಹೈಡ್ರಾಲಿಕ್ ಪಂಪ್‌ಗಳನ್ನು ತಯಾರಿಸಲಾಗುತ್ತಿದೆ.

Generating image…

Editor Reporter

Share ePaper Clip

Preparing image...

   SHARE  

Facebook
Twitter
Telegram
WhatsApp

   TOP NEWS  

   RECENT NEWS