ರಜೆ ಕೇಳಿದಾಗ ಯಾವುದೇ ಪ್ರಶ್ನೆ ಇಲ್ಲದೆ ಒಪ್ಪಿಗೆ; ‘ಗುಡ್ ಬಾಸ್’ WhatsApp ಚಾಟ್ ವೈರಲ್

ಸುದ್ದಿ ಮತ್ತು ಪ್ರಕಟಣೆಗಳಿಗಾಗಿ:
9000144466
kannadasakshi.in

ರಜೆ ಕೇಳಿದಾಗ ಯಾವುದೇ ಪ್ರಶ್ನೆ ಇಲ್ಲದೆ ಒಪ್ಪಿಗೆ; ‘ಗುಡ್ ಬಾಸ್’ WhatsApp ಚಾಟ್ ವೈರಲ್

26 Aug 2026, 3:44 pm KANNADA SAKSHI

ಕಾರ್ಪೊರೇಟ್‌ ಜಗತ್ತಿನಲ್ಲಿ ಟಾಕ್ಸಿಕ್‌ ಬಾಸ್‌ಗಳ ಬಗ್ಗೆ ಆಗಾಗ ಚರ್ಚೆಗಳು ನಡೆಯುತ್ತಲೇ ಇರುತ್ತವೆ. ರಜೆ ಕೇಳಿದಾಗ ಹಲವು ಪ್ರಶ್ನೆಗಳನ್ನು ಕೇಳಿ, ನೌಕರರಿಗೆ ಮಾನಸಿಕ ಒತ್ತಡ ನೀಡುವ ಮ್ಯಾನೇಜರ್‌ಗಳ ಬಗ್ಗೆ ಸಾಮಾನ್ಯವಾಗಿ ದೂರುಗಳು ಕೇಳಿಬರುತ್ತವೆ. ಆದರೆ ಇದಕ್ಕೆ ಸಂಪೂರ್ಣ ವಿರುದ್ಧವಾದ ಅನುಭವವೊಂದನ್ನು ಉದ್ಯೋಗಿಯೊಬ್ಬರು ಹಂಚಿಕೊಂಡಿದ್ದು, ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

Redditನ r/IndianWorkplace ಸಮುದಾಯದಲ್ಲಿ ಉದ್ಯೋಗಿಯೊಬ್ಬರು ತಮ್ಮ ಮ್ಯಾನೇಜರ್ ಜೊತೆಗಿನ WhatsApp ಚಾಟ್‌ನ ಸ್ಕ್ರೀನ್‌ಶಾಟ್‌ಗಳನ್ನು ಹಂಚಿಕೊಂಡಿದ್ದಾರೆ. “ಮ್ಯಾನೇಜರ್ ಕಡೆಯಿಂದ ಒಂದು ಪೋಸ್ಟ್” ಎಂಬ ಶೀರ್ಷಿಕೆಯೊಂದಿಗೆ ಹಂಚಿಕೊಂಡಿರುವ ಈ ಪೋಸ್ಟ್‌ನಲ್ಲಿ, ರಜೆ ಹಾಗೂ ವರ್ಕ್ ಫ್ರಮ್ ಹೋಮ್ ಕೇಳಿದಾಗ ಮ್ಯಾನೇಜರ್ ಯಾವುದೇ ಅನಗತ್ಯ ಪ್ರಶ್ನೆಗಳನ್ನು ಕೇಳದೆ ಒಪ್ಪಿಗೆ ನೀಡಿರುವುದು ಕಂಡುಬಂದಿದೆ.

ಈ ಪೋಸ್ಟ್‌ಗೆ ಪ್ರತಿಕ್ರಿಯಿಸಿರುವ ಉದ್ಯೋಗಿ, ಇದರಲ್ಲಿ ಯಾವುದೇ ನಾಟಕೀಯ ಘಟನೆಗಳಿಲ್ಲ, ಬದಲಾಗಿ “ತುಂಬಾ ಬೋರಿಂಗ್” ಆಗಿದೆ ಎಂದು ಹೇಳಿದ್ದಾರೆ. ಸರಳವಾಗಿ ರಜೆ ಮತ್ತು ವರ್ಕ್ ಫ್ರಮ್ ಹೋಮ್‌ಗೆ ಅನುಮತಿ ನೀಡುವ ಮ್ಯಾನೇಜರ್‌ ಅವರ ನಡೆ ಇದೀಗ ನೆಟ್ಟಿಗರ ಗಮನ ಸೆಳೆದಿದ್ದು, ಇಂತಹ ‘ಗುಡ್ ಬಾಸ್‌’ಗಳು ನಿಜಕ್ಕೂ ಅಪರೂಪ ಎಂದು ಹಲವರು ಅಭಿಪ್ರಾಯಪಟ್ಟಿದ್ದಾರೆ.

Generating image…

Editor Reporter

Share ePaper Clip

Preparing image...

   SHARE  

Facebook
Twitter
Telegram
WhatsApp

   TOP NEWS  

   RECENT NEWS