ಮಾಜಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ (Lakshmi Hebbalkar) ಅವರು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರನ್ನು ಭೇಟಿ ಮಾಡಿ, ಧನ್ಯವಾದ ಸಲ್ಲಿಸಿದ್ದಾರೆ.
ಇಂದು (ಜೂ.4) ಭೇಟಿ ಮಾಡಿದ ಅವರು ಸಚಿವ ಸಂಪುಟದಲ್ಲಿ 3 ವರ್ಷಗಳ ಕಾಲ ಸಚಿವೆಯಾಗಿ ರಾಜ್ಯದ ಸೇವೆ ಮಾಡಲು ಅವಕಾಶ ಕಲ್ಪಿಸಿಕೊಟ್ಟಿದ್ದಕ್ಕೆ ಕೃತಜ್ಞತೆ ಸಲ್ಲಿಸಿದ್ದಾರೆ. ಇದನ್ನೂ ಓದಿ: ಡಿಕೆಶಿ ಕಣಕಣದಲ್ಲೂ ಅಜ್ಜಯ್ಯ – ಯಾರು ಈ ಆರಾಧ್ಯದೈವ? ಇಷ್ಟೊಂದು ಬಲವಾಗಿ ನಂಬಲು ಕಾರಣವೇನು?
ಶೋಷಿತರ, ಹಿಂದುಳಿದವರ ಹಾಗೂ ಬಡವರ ಧ್ವನಿಯಾಗಿ ನಿಂತು, ಜನಪರ ಆಡಳಿತ ನೀಡಿದ ಹೆಗ್ಗಳಿಕೆ ತಮ್ಮದು. ನಿಮ್ಮ ದೂರದೃಷ್ಟಿಯ ಯೋಜನೆಗಳು, ಸಾಮಾಜಿಕ ನ್ಯಾಯದ ಬದ್ಧತೆ ಮತ್ತು ಆಡಳಿತ ವೈಖರಿ ನಮಗೆಲ್ಲರಿಗೂ ಸದಾ ದಾರಿದೀಪ. ನಿಮ್ಮ ಮಾರ್ಗದರ್ಶನದಲ್ಲಿ ಜನಸೇವೆ ಮಾಡುವ ಭಾಗ್ಯ ಸಿಕ್ಕಿದ್ದು ನನ್ನ ಪುಣ್ಯ ಎಂದಿದ್ದಾರೆ.
ನಿಮ್ಮ ಅನುಭವದ ನಾಯಕತ್ವ ಹಾಗೂ ಆಶೀರ್ವಾದ ಎಂದಿನಂತೆ ನಮ್ಮ ಮೇಲಿರಲಿ ಎಂದು ವಿನಂತಿಸಿದ್ದಾರೆ. ಈ ವೇಳೆ ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಉಪಸ್ಥಿತರಿದ್ದರು.










