ಕುತೂಹಲ ಕೆರಳಿಸಿದ ಸಿಎಂ ಡಿಕೆಶಿ – ಬಿ.ಕೆ ಹರಿಪ್ರಸಾದ್‌ ಭೇಟಿ..

ನೂತನ ಕೆಪಿಸಿಸಿ ಅಧ್ಯಕ್ಷರಾದ ಬಿ.ಕೆ ಹರಿಪ್ರಸಾದ್ (BK Hariprasad) ಅವರಿಂದು, ಹಾಲಿ ಸಿಎಂ ಡಿಕೆ ಶಿವಕುಮಾರ್‌, ಮಾಜಿ ಸಿಎಂ ಸಿದ್ದರಾಮಯ್ಯ (Siddaramaiah) ಸೇರಿದಂತೆ ಹಲವಾರು ನಾಯಕರನ್ನ ಭೇಟಿಯಾಗಿ ಧನ್ಯವಾದ ಹೇಳಿದ್ದಾರೆ.

 

ಅಧ್ಯಕ್ಷರಾಗಿ ನೇಮಕವಾದ ಮರು ದಿನವೇ ಕುಮಾರಕೃಪ ರಸ್ತೆಯಲ್ಲಿನ ಸಿಎಂ ಸರ್ಕಾರಿ ನಿವಾಸದಲ್ಲಿ ಡಿಕೆ ಶಿವಕುಮಾರ್‌ (DK Shivakumar) ಅವರನ್ನ ಭೇಟಿಯಾಗಿ ಸಭೆ ನಡೆಸಿದ್ದಾರೆ. ʻಅಧಿಕಾರ ಬೇಕಾದವರು ಡಿಕೆಶಿ ಹಿಂದೆ ಹೋಗಿ, ಸಂಘಟನೆ ಮಾಡೋರು ನನ್ನ ಜೊತೆ ಬನ್ನಿʼ ಎಂದು ಬಿ.ಕೆ ಹರಿಪ್ರಸಾದ್ ಅವರು ಹೇಳಿದ ಕೆಲ ಗಂಟೆಗಳಲ್ಲೇ ಉಭಯ ನಾಯಕರ ಭೇಟಿ ಕುತೂಹಲ ಕೆರಳಿಸಿದೆ.

 

BK Hariprasad

ಸಿಎಂ ಡಿಕೆಶಿ ಭೇಟಿ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಹರಿಪ್ರಸಾದ್‌, ಅಧ್ಯಕ್ಷ ಹಾಗೂ ಸಿಎಂ ನಡುವೆ ಸೌಜನ್ಯ ಭೇಟಿ ನಡೆಯೋದು ಸಹಜ. ಅದೇ ರೀತಿಯ ಸೌಜನ್ಯ ಭೇಟಿಯಷ್ಟೇ ಇದು ಯಾವುದೇ ಅಜೆಂಡಾ ಇಲ್ಲ ಎಂದಿದ್ದಾರೆ. ಇದನ್ನೂ ಓದಿ: ಅಧಿಕಾರ ಬೇಕಾದವರು ಡಿಕೆಶಿ ಹಿಂದೆ ಹೋಗಿ, ಸಂಘಟನೆ ಮಾಡೋರು ನನ್ನ ಜೊತೆ ಬನ್ನಿ – ಬಿ.ಕೆ ಹರಿಪ್ರಸಾದ್

 

ನಾಳೆ ರಾಹುಲ್ ಗಾಂಧಿ ಬೆಂಗಳೂರಿಗೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನಾಮಪತ್ರಿ ಸಲ್ಲಿಕೆ ಮಾಡ್ತಿದ್ದಾರೆ. ಬಹುಶಃ ಅದಕ್ಕೇ ಅವರ ಜೊತೆಗೇ ಬರ್ತಿದ್ದಾರೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಡಿಕೆಶಿ ಕಣಕಣದಲ್ಲೂ ಅಜ್ಜಯ್ಯ – ಯಾರು ಈ ಆರಾಧ್ಯದೈವ? ಇಷ್ಟೊಂದು ಬಲವಾಗಿ ನಂಬಲು ಕಾರಣವೇನು?

 

DK Shivakumar 2 3

ರಾಮಲಿಂಗಾ ರೆಡ್ಡಿ ಖಾತೆಗೆ ಪಟ್ಟು ವಿಚಾರಕ್ಕೆ ಉತ್ತರಿಸಿ, ರಾಮಲಿಂಗಾ ರೆಡ್ಡಿ ಹಿರಿಯ ನಾಯಕರು ಖಾತೆ ಯಾರಿಗೆ ಹಂಚಿಕೆ ಮಾಡಬೇಕು ಎನ್ನುವುದನ್ನ ಸಿಎಂ ನೋಡ್ತಾರೆ ಎಂದು ತಿಳಿಸಿದ್ದಾರೆ. ಬಳಿಕ ʻಹಳೇ ಸಿನಿಮಾಗೆ ಹೊಸ ಪೋಸ್ಟರ್ ಹಾಕಿದ್ದಾರೆʼ ಎಂಬ ಆರ್. ಅಶೋಕ್ ಟೀಕೆಗೆ ಉತ್ತರಿಸಿ, ಅವರಿಗೆ ಹೇಳಿ ಪಿಚ್ಚರ್ ಅಭಿ ಬಾಕಿ ಹೈ.. ಇದು ಕೇವಲ ಟ್ರೈಲರ್ ಅಷ್ಟೇ ಎಂದಿದ್ದಾರೆ.

 

ಇದೇ ವೇಳೆ ಮಲ್ಲಿಕಾರ್ಜುನ ಖರ್ಗೆ ಜೊತೆಗೆ ಯಾರು ನಾಪಪತ್ರ ಸಲ್ಲಿಕೆ ಮಾಡ್ತಾರೆ ಎಂಬ ಮಾಧ್ಯಮಗಳ ಪ್ರಶ್ನೆಗೆ, ನನ್ನನ್ನ ‌ನೆಣಿಗೆ ಹಾಕಬೇಕು ಎಂದು ತೀರ್ಮಾನ ಮಾಡಿದ್ದೀರಾ? ಅಂತ ಹೇಳುತ್ತಲೇ ಕಾಲ್ಕಿತ್ತಿದ್ದಾರೆ.

   SHARE  

Facebook
Twitter
Telegram
WhatsApp

   TOP NEWS  

   RECENT NEWS