ಲಿಬಿಯಾ ಬಂದರಿನಲ್ಲಿ ರಷ್ಯಾದ ಯುದ್ಧನೌಕೆ ಮೇಲೆ ಉಕ್ರೇನ್ ಡ್ರೋನ್ ದಾಳಿ; ಮುಳುಗಿಸಿದ ಝೆಲೆನ್ಸ್ಕಿ ಘೋಷಣೆ

ಸುದ್ದಿ ಮತ್ತು ಪ್ರಕಟಣೆಗಳಿಗಾಗಿ:
9000144466
kannadasakshi.in

ಲಿಬಿಯಾ ಬಂದರಿನಲ್ಲಿ ರಷ್ಯಾದ ಯುದ್ಧನೌಕೆ ಮೇಲೆ ಉಕ್ರೇನ್ ಡ್ರೋನ್ ದಾಳಿ; ಮುಳುಗಿಸಿದ ಝೆಲೆನ್ಸ್ಕಿ ಘೋಷಣೆ

24 Nov 2026, 3:26 pm KANNADA SAKSHI

ಲಿಬಿಯಾದ ಬಂದರಿನಲ್ಲಿ ನಿಂತಿದ್ದ ರಷ್ಯಾದ ಯುದ್ಧನೌಕೆ ಹಾಗೂ ಸರಕು ಹಡಗಿನ ಮೇಲೆ ಉಕ್ರೇನ್ ಭಾನುವಾರ ಡ್ರೋನ್ ದಾಳಿ ನಡೆಸಿದೆ. ಈ ದಾಳಿಯನ್ನು ಉಕ್ರೇನ್ ನಡೆಸಿರುವುದಾಗಿ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಸೋಮವಾರ ದೃಢಪಡಿಸಿದ್ದಾರೆ. ಪೂರ್ವ ಲಿಬಿಯಾದ ಬೆಂಘಾಜಿ ನೌಕಾನೆಲೆಯಲ್ಲಿ ಈ ಘಟನೆ ನಡೆದಿದ್ದು, ರಷ್ಯಾಕ್ಕೆ ಮರಳುವ ಮುನ್ನ ಇಂಧನ ಮತ್ತು ಅಗತ್ಯ ವಸ್ತುಗಳನ್ನು ತುಂಬಿಸಿಕೊಳ್ಳಲು ಹಡಗುಗಳು ಅಲ್ಲಿ ತಂಗಿದ್ದವು ಎನ್ನಲಾಗಿದೆ.

ರಷ್ಯಾದ ಅತ್ಯಾಧುನಿಕ ಯುದ್ಧನೌಕೆಗಳಲ್ಲಿ ಒಂದಾದ ಮೆರ್ಕ್ಯುರಿಯನ್ನು ಮುಳುಗಿಸಲು ಏಳು ನೌಕಾ ಡ್ರೋನ್‌ಗಳನ್ನು ಬಳಸಲಾಗಿದೆ ಎಂದು ಝೆಲೆನ್ಸ್ಕಿ ತಿಳಿಸಿದ್ದಾರೆ. ಈ ದಾಳಿಯಲ್ಲಿ ರಷ್ಯಾದ Ka-27 ಯುದ್ಧ ಹೆಲಿಕಾಪ್ಟರ್ ಕೂಡ ಸುಟ್ಟುಹೋಗಿದೆ ಎಂದು ಅವರು ಹೇಳಿದ್ದಾರೆ. ರಷ್ಯಾದ ಯುದ್ಧಕ್ಕೆ ಪ್ರತಿಯಾಗಿ ಉಕ್ರೇನ್ ನಡೆಸಿದ ಮಹತ್ವದ ಕಾರ್ಯಾಚರಣೆ ಇದಾಗಿದೆ ಎಂದು ಝೆಲೆನ್ಸ್ಕಿ ಪ್ರತಿಕ್ರಿಯಿಸಿದ್ದಾರೆ.

ಇದೇ ವೇಳೆ, ಶಸ್ತ್ರಾಸ್ತ್ರಗಳನ್ನು ಸಾಗಿಸುತ್ತಿದ್ದ ರಷ್ಯಾದ ಎಂವಿ ಅಂಗಾರ (MV Angara) ಎಂಬ ಕಂಟೇನರ್ ಹಡಗಿನ ಮೇಲೂ ದಾಳಿ ನಡೆಸಲಾಗಿದೆ ಎಂದು ಉಕ್ರೇನ್ ಅಧ್ಯಕ್ಷರು ತಿಳಿಸಿದ್ದಾರೆ. ಬಂದರಿನ ಸಮೀಪ ದಾಳಿಗೊಳಗಾದ ವಾಣಿಜ್ಯ ಹಡಗಿನಲ್ಲಿದ್ದ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಲಿಬಿಯಾದ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ. ಆದರೆ ಉಕ್ರೇನ್ ಉಲ್ಲೇಖಿಸಿರುವ ಹಡಗು ಮತ್ತು ಗಾಯಾಳುಗಳಿದ್ದ ವಾಣಿಜ್ಯ ಹಡಗು ಒಂದೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.

Generating image…

Editor Reporter

Share ePaper Clip

Preparing image...

   SHARE  

Facebook
Twitter
Telegram
WhatsApp

   TOP NEWS  

   RECENT NEWS