‘Belonging: A Journey of Love’ ಪುಸ್ತಕ ಪ್ರಕಟವಾದ ಬಳಿಕ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ತಮ್ಮ ಮಕ್ಕಳಾದ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಅವರೊಂದಿಗೆ ಭಾವನಾತ್ಮಕ ಮಾತುಕತೆ ನಡೆಸಿದ್ದಾರೆ. ಪುಸ್ತಕದಲ್ಲಿ ಉಲ್ಲೇಖಿಸದ ಹಲವು ವೈಯಕ್ತಿಕ ವಿಚಾರಗಳನ್ನು ಈ ಸಂದರ್ಭದಲ್ಲಿ ಮಕ್ಕಳೊಂದಿಗೆ ಹಂಚಿಕೊಂಡಿದ್ದಾರೆ.
ತಾಯಿ ಮತ್ತು ಸಹೋದರಿ ಪ್ರಿಯಾಂಕಾ ಗಾಂಧಿ ಜೊತೆ ಕುಳಿತು ಮಾತನಾಡುತ್ತಿರುವ ವಿಡಿಯೋವನ್ನು ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ಸಂಭಾಷಣೆಯಲ್ಲಿ ಪುಸ್ತಕದಲ್ಲಿ ಹೇಳದ ಕೆಲವು ಘಟನೆಗಳು ಹಾಗೂ ಕುಟುಂಬದ ನೆನಪುಗಳನ್ನು ಸೋನಿಯಾ ಗಾಂಧಿ ಮೆಲುಕು ಹಾಕಿದ್ದಾರೆ.
ಈ ಮಾತುಕತೆಯ ಕುರಿತು ರಾಹುಲ್ ಗಾಂಧಿ ಕೆಲವು ಗಂಭೀರ ವಿಚಾರಗಳನ್ನು ಪ್ರಸ್ತಾಪಿಸಿದ್ದಾರೆ. ಒಂದು ಪ್ರಸ್ತಾವನೆ ಯೋಜನೆಯಂತೆ ನಡೆಯಲಿಲ್ಲ, ತಮ್ಮ ಏಳನೇ ಹುಟ್ಟುಹಬ್ಬದ ವೇಳೆಯೂ ಅದು ಸಾಧ್ಯವಾಗಲಿಲ್ಲ ಎಂದು ಹೇಳಿದ್ದಾರೆ. 2004ರ ನಿರ್ಧಾರದಿಂದ ಕೆಲವರಿಗೆ ನಿರಾಳತೆ, ಇನ್ನು ಕೆಲವರಿಗೆ ಸಂತೋಷವಾಗಿತ್ತು ಎಂದಿರುವ ಅವರು, ತಮ್ಮ ತಂದೆ ರಾಜೀವ್ ಗಾಂಧಿ ಅವರ ಭದ್ರತೆಯನ್ನು ಹಿಂಪಡೆಯುವುದರ ಹಿಂದೆ ಉದ್ದೇಶವಿತ್ತು ಎಂದು ಆರೋಪಿಸಿದ್ದಾರೆ. ಈ ನಿರ್ಧಾರವೇ ರಾಜೀವ್ ಗಾಂಧಿ ಹತ್ಯೆಗೆ ಕಾರಣವಾಯಿತು ಎಂಬ ಗಂಭೀರ ಹೇಳಿಕೆಯನ್ನೂ ನೀಡಿದ್ದಾರೆ.








