ಕ್ವಾಡ್ ನಾಯಕರ ಫೋಟೋಶೂಟ್ ವೇಳೆ ಭಾರತದ ಧ್ವಜದ ಗುರುತಿನ ಕಾರ್ಡ್ ಎತ್ತಿಕೊಂಡ ಮೋದಿ..

ಸುದ್ದಿ ಮತ್ತು ಪ್ರಕಟಣೆಗಳಿಗಾಗಿ:
9000144466
kannadasakshi.in

ಕ್ವಾಡ್ ನಾಯಕರ ಫೋಟೋಶೂಟ್ ವೇಳೆ ಭಾರತದ ಧ್ವಜದ ಗುರುತಿನ ಕಾರ್ಡ್ ಎತ್ತಿಕೊಂಡ ಮೋದಿ..

17 Nov 2026, 11:00 pm KANNADA SAKSHI

ಫಿಲಿಪ್ಪೀನ್ಸ್‌ನ ಮನಿಲಾದಲ್ಲಿ ಮಂಗಳವಾರ (ಇಂದು) ನಡೆದ ಕ್ವಾಡ್ ಶೃಂಗಸಭೆಯಲ್ಲಿ (Quad summit) ಗ್ರೂಪ್‌ ಫೋಟೋಶೂಟ್ ವೇಳೆ ನಡೆದ ಘಟನೆಯೊಂದು ಇದೀಗ ಭಾರೀ ಸದ್ದು ಮಾಡುತ್ತಿದೆ. ಹೌದು. ನೆಲದ ಮೇಲೆ ಬಿದ್ದಿದ್ದ ಭಾರತದ ಧ್ವಜ ಹೊಂದಿರುವ ಗುರುತಿನ ಕಾರ್ಡ್‌ವೊಂದನ್ನ ಪ್ರಧಾನಿ ಮೋದಿ (PM Modi) ಎತ್ತಿಕೊಂಡು ತಮ್ಮ ಜೇಬಿಗೆ ಹಾಕಿಕೊಂಡಿದ್ದಾರೆ. ಈ ವಿಡಿಯೋ ಈಗ ಸೋಷಿಯಲ್‌ ಮೀಡಿಯಾದಲ್ಲಿ (Social Media) ಭಾರೀ ವೈರಲ್‌ ಆಗಿದೆ.
2024ರ ಬಳಿಕ ಮೊದಲ ಬಾರಿಗೆ ನಡೆದ ಕ್ವಾಡ್ ನಾಯಕರ ಸಭೆಯು ಮನಿಲಾದಲ್ಲಿ ನಡೆದ ಆಸಿಯಾನ್ ನಾಯಕರ ಶೃಂಗಸಭೆಯ ನೇಪಥ್ಯದಲ್ಲಿ ಆಯೋಜಿಸಲಾಗಿತ್ತು. ಈ ಸಂದರ್ಭದಲ್ಲಿ ನಾಯಕರ ಫೋಟೋಶೂಟ್ ನಡೆಯುತ್ತಿದ್ದಾಗ ಈ ಘಟನೆ ನಡೆದಿದೆ.

ವೈರಲ್ ಆಗಿರುವ ವಿಡಿಯೋದಲ್ಲಿ, ಫೋಟೋಶೂಟ್‌ಗಾಗಿ ಹಾಸಲಾಗಿದ್ದ ಕಾರ್ಪೆಟ್ ಮೇಲೆ ಬಿದ್ದಿದ್ದ ಸಣ್ಣ ಬಿಳಿ ಬಣ್ಣದ ಕಾರ್ಡ್‌ವೊಂದನ್ನ ಪ್ರಧಾನಿ ಮೋದಿ ಬಗ್ಗಿ ಎತ್ತಿಕೊಂಡಿರುವುದನ್ನು ಕಾಣಬಹುದು. ಆ ಕಾರ್ಡ್‌ನಲ್ಲಿ ಭಾರತದ ಧ್ವಜದ ಚಿತ್ರವಿತ್ತು. ಗ್ರೂಪ್‌ ಫೋಟೋದಲ್ಲಿ ನಾಯಕರ ಸ್ಥಾನವನ್ನ ಗುರುತಿಸಲು ಬಳಸುವ ಗುರುತಿನ ಚೀಟಿ ಅದಾಗಿತ್ತು ಎಂದು ಹೇಳಲಾಗ್ತಿದೆ. ಇತರ ನಾಯಕರು ತಮ್ಮ ತಮ್ಮ ದೇಶಗಳ ಧ್ವಜಗಳ ಗುರುತು ಹೊಂದಿದ್ದ ಕಾರ್ಡ್‌ಗಳ ಮುಂದೆ ನಿಂತರು, ಪ್ರಧಾನಿ ಮೋದಿ ಮಾತ್ರ ಕೆಳಗೆ ಬಾಗಿ ಭಾರತದ ಧ್ವಜವಿದ್ದ ಕಾರ್ಡ್ ಅನ್ನು ಎತ್ತಿಕೊಂಡು ತಮ್ಮ ಜೇಬಿಗೆ ಹಾಕಿಕೊಂಡರು.

ಕಾರ್ಡ್ ಎತ್ತಿಕೊಳ್ಳುವ ಸಂದರ್ಭದಲ್ಲಿ, ʻನಾನು ಭಾರತದ ಧ್ವಜವನ್ನು ನೆಲದ ಮೇಲೆ ಬಿಡಲು ಸಾಧ್ಯವಿಲ್ಲʼ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ ಎನ್ನಲಾಗಿದೆ. ಇದಕ್ಕೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪ್ರತಿಕ್ರಿಯಿಸಿ, ʻಅದನ್ನು ಉಳಿಸಿಕೊಳ್ಳಿʼ (Save it) ಎಂದು ಹೇಳಿದ್ರಂತೆ.

ಇಂತಹದ್ದೇ ಘಟನೆಯೊಂದು 2023ರಲ್ಲಿ ದಕ್ಷಿಣ ಆಫ್ರಿಕಾದ ಜೋಹಾನ್ಸ್‌ಬರ್ಗ್‌ನಲ್ಲಿ ನಡೆದ ಬ್ರಿಕ್ಸ್ ಶೃಂಗಸಭೆಯ ಸಂದರ್ಭದಲ್ಲಿಯೂ ನಡೆದಿತ್ತು. ಆಗಲೂ ಪ್ರಧಾನಿ ಮೋದಿ ವೇದಿಕೆಯ ಮೇಲಿದ್ದ ಭಾರತದ ಧ್ವಜದ ಗುರುತಿನ ಕಾರ್ಡ್ ಅನ್ನು ಎತ್ತಿಕೊಂಡಿದ್ದರು. ಪ್ರಧಾನಿ ಮೋದಿಯವರ ಈ ನಡೆಗೆ ಸಾಮಾಜಿಕ ಜಾಲತಾಣಗಳಲ್ಲಿ ಹಲವರು ಮೆಚ್ಚುಗೆ ವ್ಯಕ್ತಪಡಿಸಿದ್ದು, ಇದು ರಾಷ್ಟ್ರಧ್ವಜದ ಮೇಲಿನ ಗೌರವ ಮತ್ತು ದೇಶಭಕ್ತಿಯನ್ನ ತೋರಿಸುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಆದರೆ, ಈ ಘಟನೆಯನ್ನು ವಿಪಕ್ಷ ನಾಯಕರು ಟೀಕಿಸಿವೆ. ತೃಣಮೂಲ ಕಾಂಗ್ರೆಸ್ (TMC) ಸಂಸದೆ ಮಹುವಾ ಮೊಯಿತ್ರಾ ಅವರು ಈ ವಿಡಿಯೋವನ್ನ ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡು ಪ್ರಧಾನಿ ಮೋದಿ ವಿರುದ್ಧ ವ್ಯಂಗ್ಯವಾಡಿದ್ದಾರೆ. ʻಜಾಗತಿಕ ವೇದಿಕೆಯಲ್ಲಿ ಪ್ರಧಾನಮಂತ್ರಿ ಮೋದಿ ಭಾರತವನ್ನ ಇದಕ್ಕಿಂತ ಹೆಚ್ಚು ಮುಜುಗರಕ್ಕೀಡು ಮಾಡುವುದು ಹೇಗೆ? ಅವರು ನೆಲದ ಮೇಲಿದ್ದ ಫ್ಲೋರ್ ಮಾರ್ಕರ್ ಅನ್ನು ಅಕ್ಷರಶಃ ಎತ್ತಿಕೊಂಡು ಜೇಬಿನಲ್ಲಿ ಇಟ್ಟುಕೊಂಡಿದ್ದಾರೆ. ನಂಬಲು ಸಾಧ್ಯವಾಗುತ್ತಿಲ್ಲ!ʼʼ ಎಂದು ಅವರು ಟೀಕಿಸಿದ್ದಾರೆ.

Generating image…

Editor Reporter

Share ePaper Clip

Preparing image...

   SHARE  

Facebook
Twitter
Telegram
WhatsApp

   TOP NEWS  

   RECENT NEWS