ಕ್ಷೇತ್ರ ಪುನರ್‌ವಿಂಗಡನೆ ಮಸೂದೆ ಮಂಡನೆಗೆ ಮುನ್ನ ಸರ್ವಪಕ್ಷ ಸಭೆ ನಡೆಸಿ – ಮೋದಿಗೆ 4ನೇ ಬಾರಿಗೆ ಖರ್ಗೆ ಪತ್ರ..

ಸುದ್ದಿ ಮತ್ತು ಪ್ರಕಟಣೆಗಳಿಗಾಗಿ:
9000144466
kannadasakshi.in

ಕ್ಷೇತ್ರ ಪುನರ್‌ವಿಂಗಡನೆ ಮಸೂದೆ ಮಂಡನೆಗೆ ಮುನ್ನ ಸರ್ವಪಕ್ಷ ಸಭೆ ನಡೆಸಿ – ಮೋದಿಗೆ 4ನೇ ಬಾರಿಗೆ ಖರ್ಗೆ ಪತ್ರ..

17 Oct 2026, 5:32 am KANNADA SAKSHI

ಕ್ಷೇತ್ರ ಪುನರ್‌ವಿಂಗಡನೆ(Delimitation) ಕುರಿತಾದ ಹೊಸ ಪ್ರಸ್ತಾಪಗಳನ್ನು ಅಂತಿಮಗೊಳಿಸಿ ಸಂಸತ್ತಿನಲ್ಲಿ ಮಂಡಿಸುವ ಮುನ್ನ ಸರ್ವಪಕ್ಷ ಸಭೆ ಕರೆಯುವಂತೆ ಆಗ್ರಹಿಸಿ ಎಐಸಿಸಿ ಅಧ್ಯಕ್ಷ ಹಾಗೂ ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ(Mallikarjun Kharge) ಅವರು ಪ್ರಧಾನಿ ನರೇಂದ್ರ ಮೋದಿ(Narendra Modi) ಅವರಿಗೆ ನಾಲ್ಕನೇ ಬಾರಿಗೆ ಪತ್ರ ಬರೆದಿದ್ದಾರೆ.
ಶುಕ್ರವಾರ ಪ್ರಧಾನಿಗೆ ಕಳುಹಿಸಿರುವ ಸುದೀರ್ಘ ಪತ್ರದಲ್ಲಿ, ಮುಂಗಾರು ಅಧಿವೇಶನ ಮುಗಿದು ತಿಂಗಳುಗಳೇ ಕಳೆದರೂ ಸಂಸತ್ತನ್ನು ಸಾಂವಿಧಾನಿಕವಾಗಿ ಸಂಪೂರ್ಣ ಮುಕ್ತಾಯಗೊಳಿಸದೆ ವಿಳಂಬ ಮಾಡುತ್ತಿರುವ ಬಗ್ಗೆ ಅವರು ಗಂಭೀರ ಕಳವಳ ವ್ಯಕ್ತಪಡಿಸಿದ್ದಾರೆ. ಯಾವುದೇ ಮಹತ್ವದ ಸಂವಿಧಾನ ತಿದ್ದುಪಡಿ ಮಸೂದೆಯನ್ನು ಮಂಡಿಸುವ ಸರ್ವ ಪಕ್ಷಗಳ ಜೊತೆ ಸಮಾಲೋಚನೆ ನಡೆಸಬೇಕು ಎಂದು ಅವರು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಆಗಸ್ಟ್ 13 ರಂದು ಸಂಸತ್ತಿನ ಮುಂಗಾರು ಅಧಿವೇಶನವನ್ನು ಅನಿರ್ದಿಷ್ಟಾವಧಿಗೆ ಮುಂದೂಡಲಾಗಿತ್ತು. ಆದರೆ ಉಭಯ ಸದನಗಳನ್ನು ರಾಷ್ಟ್ರಪತಿಗಳ ಅಧಿಕೃತ ಆದೇಶದ ಮೂಲಕ ಮುಕ್ತಾಯಗೊಳಿಸದೆ ಬರೋಬ್ಬರಿ 64 ದಿನಗಳು ಕಳೆದಿವೆ. ಇಂತಹ ಪರಿಸ್ಥಿತಿ ಸಂಸದೀಯ ಇತಿಹಾಸದಲ್ಲೇ ಹಿಂದೆಂದೂ ಕಂಡಿರದ ಅಸಾಮಾನ್ಯ ವಿದ್ಯಮಾನ ಎಂದು ಪತ್ರದಲ್ಲಿ ಉಲ್ಲೇಖಿಸಿರುವ ಖರ್ಗೆ, ಈ ವಿಳಂಬವು ದಿಢೀರ್ ವಿಶೇಷ ಅಧಿವೇಶನ ಕರೆಯುವ ಅಥವಾ ಅಧಿವೇಶನ ವಿಸ್ತರಿಸುವ ಲೆಕ್ಕಾಚಾರಗಳ ಕುರಿತು ಅನುಮಾನಗಳನ್ನು ಹುಟ್ಟುಹಾಕಿದೆ ಎಂದು ಎಚ್ಚರಿಸಿದ್ದಾರೆ.

ಸಾಮಾನ್ಯವಾಗಿ ಅನಿರ್ದಿಷ್ಟಾವಧಿಗೆ ಮುಂದೂಡುವುದು ಮುಂದಿನ ದಿನಾಂಕ ನಿಗದಿಪಡಿಸದೆ ಕಲಾಪವನ್ನು ತಾತ್ಕಾಲಿಕವಾಗಿ ನಿಲ್ಲಿಸುವುದಾದರೆ, ರಾಷ್ಟ್ರಪತಿಗಳ ಅಧಿಸೂಚನೆಯ ಮೂಲಕ ಸದನವನ್ನು ಅಧಿಕೃತವಾಗಿ ಸಂಪೂರ್ಣ ಮುಕ್ತಾಯಗೊಳಿಸುವುದು ಸಂಸದೀಯ ಸಂಪ್ರದಾಯವಾಗಿದೆ.
ನಾಲ್ಕನೇ ಬಾರಿಗೆ ಪತ್ರಕಳೆದ ಏಪ್ರಿಲ್ 17 ರಂದು ಲೋಕಸಭೆಯಲ್ಲಿ ಕ್ಷೇತ್ರ ಪುನರ್ವಿಂಗಡಣೆಗೆ ಸಂಬಂಧಿಸಿದ ಸಂವಿಧಾನ ತಿದ್ದುಪಡಿ ಮಸೂದೆಗೆ ಅಗತ್ಯವಿದ್ದ ಮೂರನೇ ಎರಡರಷ್ಟು ಬಹುಮತ ಸಿಗದೆ ಹಿನ್ನಡೆಯಾಗಿದ್ದನ್ನು ಖರ್ಗೆ ನೆನಪಿಸಿದ್ದಾರೆ. ಆ ಸಂದರ್ಭದಲ್ಲೂ ಮಸೂದೆ ಮಂಡನೆಗೂ ಮುನ್ನ ಏಪ್ರಿಲ್ 11 ರಂದು ಸರ್ವಪಕ್ಷ ಸಭೆ ನಡೆಸುವಂತೆ ಪ್ರಧಾನಿಗೆ ಪತ್ರ ಬರೆಯಲಾಗಿತ್ತು. ಆದರೆ ಸರ್ಕಾರ ಏಪ್ರಿಲ್ 14 ರಂದು ಮಸೂದೆಯನ್ನು ಸಾರ್ವಜನಿಕಗೊಳಿಸಿ, ಏಪ್ರಿಲ್ 16 ರಂದು ತರಾತುರಿಯಲ್ಲಿ ವಿಶೇಷ ಕಲಾಪ ಕರೆದಿತ್ತು. ನಂತರ ಜುಲೈ 16 ಮತ್ತು ಆಗಸ್ಟ್ 27 ರಂದು ಪುನಃ ಪತ್ರ ಬರೆದು ಸರ್ವಪಕ್ಷ ಸಭೆಗೆ ಒತ್ತಾಯಿಸಲಾಗಿತ್ತು. ಇದೀಗ ನಾಲ್ಕನೇ ಬಾರಿಗೆ ಪತ್ರ ಬರೆದು ಒಮ್ಮತದ ನಿರ್ಧಾರಕ್ಕೆ ಆಗ್ರಹಿಸಿದ್ದಾರೆ.

Generating image…

ನಾಲ್ಕನೇ ಬಾರಿಗೆ ಪತ್ರ
ಕಳೆದ ಏಪ್ರಿಲ್ 17 ರಂದು ಲೋಕಸಭೆಯಲ್ಲಿ ಕ್ಷೇತ್ರ ಪುನರ್ವಿಂಗಡಣೆಗೆ ಸಂಬಂಧಿಸಿದ ಸಂವಿಧಾನ ತಿದ್ದುಪಡಿ ಮಸೂದೆಗೆ ಅಗತ್ಯವಿದ್ದ ಮೂರನೇ ಎರಡರಷ್ಟು ಬಹುಮತ ಸಿಗದೆ ಹಿನ್ನಡೆಯಾಗಿದ್ದನ್ನು ಖರ್ಗೆ ನೆನಪಿಸಿದ್ದಾರೆ. ಆ ಸಂದರ್ಭದಲ್ಲೂ ಮಸೂದೆ ಮಂಡನೆಗೂ ಮುನ್ನ ಏಪ್ರಿಲ್ 11 ರಂದು ಸರ್ವಪಕ್ಷ ಸಭೆ ನಡೆಸುವಂತೆ ಪ್ರಧಾನಿಗೆ ಪತ್ರ ಬರೆಯಲಾಗಿತ್ತು. ಆದರೆ ಸರ್ಕಾರ ಏಪ್ರಿಲ್ 14 ರಂದು ಮಸೂದೆಯನ್ನು ಸಾರ್ವಜನಿಕಗೊಳಿಸಿ, ಏಪ್ರಿಲ್ 16 ರಂದು ತರಾತುರಿಯಲ್ಲಿ ವಿಶೇಷ ಕಲಾಪ ಕರೆದಿತ್ತು. ನಂತರ ಜುಲೈ 16 ಮತ್ತು ಆಗಸ್ಟ್ 27 ರಂದು ಪುನಃ ಪತ್ರ ಬರೆದು ಸರ್ವಪಕ್ಷ ಸಭೆಗೆ ಒತ್ತಾಯಿಸಲಾಗಿತ್ತು. ಇದೀಗ ನಾಲ್ಕನೇ ಬಾರಿಗೆ ಪತ್ರ ಬರೆದು ಒಮ್ಮತದ ನಿರ್ಧಾರಕ್ಕೆ ಆಗ್ರಹಿಸಿದ್ದಾರೆ.

Editor Reporter
kannadasakshi.in

ಕ್ಷೇತ್ರ ಪುನರ್‌ವಿಂಗಡನೆ ಮಸೂದೆ ಮಂಡನೆಗೆ ಮುನ್ನ ಸರ್ವಪಕ್ಷ ಸಭೆ ನಡೆಸಿ – ಮೋದಿಗೆ 4ನೇ ಬಾರಿಗೆ ಖರ್ಗೆ ಪತ್ರ..

ಕ್ಷೇತ್ರ ಪುನರ್‌ವಿಂಗಡನೆ(Delimitation) ಕುರಿತಾದ ಹೊಸ ಪ್ರಸ್ತಾಪಗಳನ್ನು ಅಂತಿಮಗೊಳಿಸಿ ಸಂಸತ್ತಿನಲ್ಲಿ ಮಂಡಿಸುವ ಮುನ್ನ ಸರ್ವಪಕ್ಷ ಸಭೆ ಕರೆಯುವಂತೆ ಆಗ್ರಹಿಸಿ ಎಐಸಿಸಿ ಅಧ್ಯಕ್ಷ ಹಾಗೂ ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ(Mallikarjun Kharge) ಅವರು ಪ್ರಧಾನಿ ನರೇಂದ್ರ ಮೋದಿ(Narendra Modi) ಅವರಿಗೆ ನಾಲ್ಕನೇ ಬಾರಿಗೆ ಪತ್ರ ಬರೆದಿದ್ದಾರೆ.
ಶುಕ್ರವಾರ ಪ್ರಧಾನಿಗೆ ಕಳುಹಿಸಿರುವ ಸುದೀರ್ಘ ಪತ್ರದಲ್ಲಿ, ಮುಂಗಾರು ಅಧಿವೇಶನ ಮುಗಿದು ತಿಂಗಳುಗಳೇ ಕಳೆದರೂ ಸಂಸತ್ತನ್ನು ಸಾಂವಿಧಾನಿಕವಾಗಿ ಸಂಪೂರ್ಣ ಮುಕ್ತಾಯಗೊಳಿಸದೆ ವಿಳಂಬ ಮಾಡುತ್ತಿರುವ ಬಗ್ಗೆ ಅವರು ಗಂಭೀರ ಕಳವಳ ವ್ಯಕ್ತಪಡಿಸಿದ್ದಾರೆ. ಯಾವುದೇ ಮಹತ್ವದ ಸಂವಿಧಾನ ತಿದ್ದುಪಡಿ ಮಸೂದೆಯನ್ನು ಮಂಡಿಸುವ ಸರ್ವ ಪಕ್ಷಗಳ ಜೊತೆ ಸಮಾಲೋಚನೆ ನಡೆಸಬೇಕು ಎಂದು ಅವರು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಆಗಸ್ಟ್ 13 ರಂದು ಸಂಸತ್ತಿನ ಮುಂಗಾರು ಅಧಿವೇಶನವನ್ನು ಅನಿರ್ದಿಷ್ಟಾವಧಿಗೆ ಮುಂದೂಡಲಾಗಿತ್ತು. ಆದರೆ ಉಭಯ ಸದನಗಳನ್ನು ರಾಷ್ಟ್ರಪತಿಗಳ ಅಧಿಕೃತ ಆದೇಶದ ಮೂಲಕ ಮುಕ್ತಾಯಗೊಳಿಸದೆ ಬರೋಬ್ಬರಿ 64 ದಿನಗಳು ಕಳೆದಿವೆ. ಇಂತಹ ಪರಿಸ್ಥಿತಿ ಸಂಸದೀಯ ಇತಿಹಾಸದಲ್ಲೇ ಹಿಂದೆಂದೂ ಕಂಡಿರದ ಅಸಾಮಾನ್ಯ ವಿದ್ಯಮಾನ ಎಂದು ಪತ್ರದಲ್ಲಿ ಉಲ್ಲೇಖಿಸಿರುವ ಖರ್ಗೆ, ಈ ವಿಳಂಬವು ದಿಢೀರ್ ವಿಶೇಷ ಅಧಿವೇಶನ ಕರೆಯುವ ಅಥವಾ ಅಧಿವೇಶನ ವಿಸ್ತರಿಸುವ ಲೆಕ್ಕಾಚಾರಗಳ ಕುರಿತು ಅನುಮಾನಗಳನ್ನು ಹುಟ್ಟುಹಾಕಿದೆ ಎಂದು ಎಚ್ಚರಿಸಿದ್ದಾರೆ.

ಸಾಮಾನ್ಯವಾಗಿ ಅನಿರ್ದಿಷ್ಟಾವಧಿಗೆ ಮುಂದೂಡುವುದು ಮುಂದಿನ ದಿನಾಂಕ ನಿಗದಿಪಡಿಸದೆ ಕಲಾಪವನ್ನು ತಾತ್ಕಾಲಿಕವಾಗಿ ನಿಲ್ಲಿಸುವುದಾದರೆ, ರಾಷ್ಟ್ರಪತಿಗಳ ಅಧಿಸೂಚನೆಯ ಮೂಲಕ ಸದನವನ್ನು ಅಧಿಕೃತವಾಗಿ ಸಂಪೂರ್ಣ ಮುಕ್ತಾಯಗೊಳಿಸುವುದು ಸಂಸದೀಯ ಸಂಪ್ರದಾಯವಾಗಿದೆ.
ನಾಲ್ಕನೇ ಬಾರಿಗೆ ಪತ್ರಕಳೆದ ಏಪ್ರಿಲ್ 17 ರಂದು ಲೋಕಸಭೆಯಲ್ಲಿ ಕ್ಷೇತ್ರ ಪುನರ್ವಿಂಗಡಣೆಗೆ ಸಂಬಂಧಿಸಿದ ಸಂವಿಧಾನ ತಿದ್ದುಪಡಿ ಮಸೂದೆಗೆ ಅಗತ್ಯವಿದ್ದ ಮೂರನೇ ಎರಡರಷ್ಟು ಬಹುಮತ ಸಿಗದೆ ಹಿನ್ನಡೆಯಾಗಿದ್ದನ್ನು ಖರ್ಗೆ ನೆನಪಿಸಿದ್ದಾರೆ. ಆ ಸಂದರ್ಭದಲ್ಲೂ ಮಸೂದೆ ಮಂಡನೆಗೂ ಮುನ್ನ ಏಪ್ರಿಲ್ 11 ರಂದು ಸರ್ವಪಕ್ಷ ಸಭೆ ನಡೆಸುವಂತೆ ಪ್ರಧಾನಿಗೆ ಪತ್ರ ಬರೆಯಲಾಗಿತ್ತು. ಆದರೆ ಸರ್ಕಾರ ಏಪ್ರಿಲ್ 14 ರಂದು ಮಸೂದೆಯನ್ನು ಸಾರ್ವಜನಿಕಗೊಳಿಸಿ, ಏಪ್ರಿಲ್ 16 ರಂದು ತರಾತುರಿಯಲ್ಲಿ ವಿಶೇಷ ಕಲಾಪ ಕರೆದಿತ್ತು. ನಂತರ ಜುಲೈ 16 ಮತ್ತು ಆಗಸ್ಟ್ 27 ರಂದು ಪುನಃ ಪತ್ರ ಬರೆದು ಸರ್ವಪಕ್ಷ ಸಭೆಗೆ ಒತ್ತಾಯಿಸಲಾಗಿತ್ತು. ಇದೀಗ ನಾಲ್ಕನೇ ಬಾರಿಗೆ ಪತ್ರ ಬರೆದು ಒಮ್ಮತದ ನಿರ್ಧಾರಕ್ಕೆ ಆಗ್ರಹಿಸಿದ್ದಾರೆ.

Share ePaper Clip

Preparing image...

   SHARE  

Facebook
Twitter
Telegram
WhatsApp

   TOP NEWS  

   RECENT NEWS