ದೇಶದ ಹೆಮ್ಮೆಯ ವೈಮಾನಿಕ ಸಂಸ್ಥೆ ಬೆಂಗಳೂರಿನ ಹೆಚ್‌ಎಎಲ್ (HAL) ಮತ್ತೊಂದು ಮೈಲಿಗಲ್ಲು ಸಾಧಿಸಿದೆ. ಹೆಚ್‌ಎಎಲ್ ಸಂಸ್ಥೆ ತಯಾರಿಸಿದ 2 ಎಲ್‌ಸಿಎ ತೇಜಸ್, ಎಫ್‌ಓಸಿ ಟ್ವಿನ್ ಸೀಟರ್ ಟ್ರೈನರ್, ಹೆಚ್‌ಟಿಟಿ-40 ಬೇಸಿಕ್ ಟ್ರೈನರ್ ವಿಮಾನಗಳು, 4 ಧ್ರುವ್ ನೆಕ್ಸ್ಟ್ ಜನರೇಷನ್ ಯುದ್ಧ ಹೆಲಿಕಾಪ್ಟರ್‌ಗಳನ್ನು ಭಾರತೀಯ ವಾಯುಪಡೆಗೆ ಹಸ್ತಾಂತರ ಮಾಡಲಾಗಿದೆ.
ಹೆಚ್‌ಎಎಲ್ ವಿಮಾನ ನಿಲ್ದಾಣದಲ್ಲಿ ಆಯೋಜನೆಯಾಗಿದ್ದ ಕಾರ್ಯಕ್ರಮದಲ್ಲಿ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ (Rajnath Singh), ಕೇಂದ್ರ ನಾಗರಿಕ ವಿಮಾನಯಾನ ಸಚಿವ ರಾಮ್ ಮೋಹನ್ ನಾಯ್ಡು ಹಾಗೂ ವಾಯುಪಡೆಯ ಮುಖ್ಯಸ್ಥ ಏರ್‌ಚೀಫ್ ಮಾರ್ಷಲ್ ಎಪಿ ಸಿಂಗ್ ಭಾಗಿಯಾಗಿದ್ದರು. ಆತ್ಮನಿರ್ಭರ ಭಾರತ ಮತ್ತು ಮೇಕ್ ಇನ್ ಇಂಡಿಯಾ ಯೋಜನೆಗೆ ಮತ್ತಷ್ಟು ಬಲ ಖಾಸಗಿ ಸಂಸ್ಥೆಗೂ (ಪವನ್ ಹನ್ಸ್) ಧ್ರುವ್ ನೆಕ್ಸ್ಟ್ ಜನರೇಷನ್ (ಎನ್‌ಜಿ) ಹೆಲಿಕಾಪ್ಟರ್‌ಗಳ ಹಸ್ತಾಂತರ ಮಾಡಲಾಗಿದೆ








