ಭಾರತದ ಮೇಲೆ 100% ಸುಂಕ ವಿಧಿಸುವ ಮಸೂದೆಗೆ ಟ್ರಂಪ್ ಸಹಿ..

ಸುದ್ದಿ ಮತ್ತು ಪ್ರಕಟಣೆಗಳಿಗಾಗಿ:
9000144466
kannadasakshi.in

ಭಾರತದ ಮೇಲೆ 100% ಸುಂಕ ವಿಧಿಸುವ ಮಸೂದೆಗೆ ಟ್ರಂಪ್ ಸಹಿ..

19 Sep 2026, 9:18 am KANNADA SAKSHI

ರಷ್ಯಾದಿಂದ ಕಚ್ಚಾ ತೈಲ (Russia Crude Oil) ಮತ್ತು ಅನಿಲ ಖರೀದಿಸುವ ಭಾರತ (India) ಹಾಗೂ ಚೀನಾ ಸೇರಿದಂತೆ ಹಲವು ರಾಷ್ಟ್ರಗಳ ಮೇಲೆ ಬರೋಬ್ಬರಿ ಶೇ.100 ರಷ್ಟು ಆಮದು ಸುಂಕ ವಿಧಿಸಲು ಪರಮಾಧಿಕಾರ ಹೊಂದಿರುವ ಮಸೂದೆಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಸಹಿ ಹಾಕಿದ್ದಾರೆ.
ಇದರಿಂದ ರಷ್ಯಾದ ಪ್ರಮುಖ ತೈಲ ಖರೀದಿದಾರರಾದ ಭಾರತ ಮತ್ತು ಚೀನಾ (China) ಮೇಲೆ 100% ವರೆಗೆ ಆಮದು ಸುಂಕ ವಿಧಿಸಲು ಟ್ರಂಪ್‌ ಅವರಿಗೆ ಪರಮಾಧಿಕಾರ ದೊರೆತಂತಾಗಿದೆ.

‘ಲಿಂಡ್ಸೆ ಒ. ಗ್ರಹಾಂ ನಿರ್ಬಂಧಗಳ ಕಾಯ್ದೆ-2026’  ಹೆಸರಿನ ಈ ಮಸೂದೆಗೆ ಅಮೆರಿಕದ ಪ್ರತಿನಿಧಿಗಳ ಸಭೆ ಬುಧವಾರ 262-159 ಮತಗಳಿಂದ ಮಸೂದೆಯನ್ನ ಅಂಗೀಕರಿಸಿತು. ಇದಕ್ಕೂ ಮುನ್ನ ಸೆನೆಟ್ ಕೂಡ ಇದಕ್ಕೆ ಅನುಮೋದನೆ ನೀಡಿತ್ತು.

ಡೆಮಾಕ್ರಟಿಕ್ ಸಂಸದ ಸ್ಟೆನಿ ಹೋಯರ್ ಮಂಡಿಸಿದ ತಿದ್ದುಪಡಿಯಲ್ಲಿ ಭಾರತ, ಚೀನಾ, ಯುಎಇ, ಟರ್ಕಿ, ಸಿಂಗಾಪುರ, ಅಜರ್‌ಬೈಜಾನ್, ಕಜಕಿಸ್ತಾನ್, ಹಂಗೇರಿ, ಕಿರ್ಗಿಸ್ತಾನ್ ಮತ್ತು ಸ್ಲೊವಾಕಿಯಾ ಸೇರಿ ಒಟ್ಟು 10 ರಾಷ್ಟ್ರಗಳನ್ನು ನೇರವಾಗಿ ಹೆಸರಿಸಲಾಗಿದೆ. ಈ ದೇಶಗಳು ರಷ್ಯಾದಿಂದ ಇಂಧನ ಆಮದು ಮಾಡಿಕೊಳ್ಳುತ್ತಿರುವುದರಿಂದ ಇವುಗಳ ಮೇಲೆ ಶೇ.100ರಷ್ಟು ದ್ವಿತೀಯ ಶ್ರೇಣಿಯ ಸುಂಕ (Secondary Tariffs) ವಿಧಿಸಲು ಅವಕಾಶ ಕಲ್ಪಿಸಲಾಗಿದೆ.

ಇದೀಗ ಟ್ರಂಪ್‌ ಮಸೂದೆಗೆ ಸಹಿ ಹಾಕಿರುವುದರಿಂದ ಅವರು ತಮ್ಮ ಈ ವಿಶೇಷ ಅಧಿಕಾರ ಚಲಾಯಿಸಲು ನಿರ್ಧರಿಸಿದರೆ ಮಾತ್ರ ಭಾರತದ ಮೇಲೆ ಗರಿಷ್ಠ ಶೇ.100 ರಷ್ಟು ಸುಂಕ ಹೇರಲ್ಪಡುತ್ತದೆ.
ಮಸೂದೆಯಲ್ಲಿ ಏನಿದೆ?– ರಷ್ಯಾದ ನಾಯಕತ್ವ ಹಾಗೂ ಇಂಧನ ಕ್ಷೇತ್ರದ ಮೇಲೆ ಕಠಿಣ ನಿರ್ಬಂಧಗಳನ್ನು ಹೇರುವುದು.– ನಿರ್ಬಂಧಗಳನ್ನು ತಪ್ಪಿಸಿ ಕಚ್ಚಾತೈಲ ಪೂರೈಸುವ ರಷ್ಯಾದ ‘ಶಾಡೋ ಫ್ಲೀಟ್’ (ರಹಸ್ಯ ಹಡಗುಗಳ ಜಾಲ) ಹಡಗುಗಳನ್ನು ಗುರಿಯಾಗಿಸುವುದು.– ರಷ್ಯಾದ ಮೇಲಿನ ಅವಲಂಬನೆ ತಗ್ಗಿಸಲು ಭಾರತ ಮತ್ತು ಚೀನಾ ಸೇರಿದಂತೆ ಇತರ ದೇಶಗಳ ಮೇಲೆ ಭಾರಿ ಆಮದು ಸುಂಕ ವಿಧಿಸಲು ಅಧ್ಯಕ್ಷರಿಗೆ ಅಧಿಕಾರ ನೀಡುವುದು.– ಇರಾನ್ ಮೇಲೂ ಹೆಚ್ಚುವರಿ ಆರ್ಥಿಕ ನಿರ್ಬಂಧಗಳನ್ನು ಹೇರುವುದು.
ಭಾರತ-ಅಮೆರಿಕ ಸಂಬಂಧಗಳ ಮೇಲೆ ಪರಿಣಾಮಹೊಸ ಮಸೂದೆಯಿಂದ ಭಾರತ ಮತ್ತು ಅಮೆರಿಕ ನಡುವಿನ ದ್ವಿಪಕ್ಷೀಯ ಸಂಬಂಧಗಳ ಮೇಲೆ ಪರಿಣಾಮ ಬೀರಬಹುದು ಎಂದು ಭಾರತ ಈಗಾಗಲೇ ಅಮೆರಿಕಕ್ಕೆ ಎಚ್ಚರಿಕೆ ನೀಡಿದೆ. ಇಂಧನ ಭದ್ರತೆಗೆ ಭಾರತ ಬದ್ಧವಾಗಿದ್ದು, ಮಾರುಕಟ್ಟೆಯ ಪರಿಸ್ಥಿತಿಗೆ ಅನುಗುಣವಾಗಿ ವಿವಿಧ ದೇಶಗಳಿಂದ ತೈಲ ಖರೀದಿಸುವುದನ್ನ ಮುಂದುವರಿಸುವುದಾಗಿ ಕೇಂದ್ರ ಸರ್ಕಾರ ಹೇಳಿದೆ.
ಜಿನ್‌ಪಿಂಗ್‌ ಭೇಟಿಗೂ ಮುನ್ನವೇ ಉದ್ವಿಗ್ನತೆಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರು ಸೆಪ್ಟೆಂಬರ್ 24ರಂದು ಅಮೆರಿಕಕ್ಕೆ ಭೇಟಿ ನೀಡಿ ಟ್ರಂಪ್ ಅವರೊಂದಿಗೆ ಮಾತುಕತೆ ನಡೆಸಲು ಮುಂದಾಗಿದ್ದಾರೆ. ಆದ್ರೆ ಜಿನ್‌ಪಿಂಗ್‌ ಭೇಟಿಗು ಮುನ್ನವೇ ಟ್ರಂಪ್ ನಿರ್ಬಂಧಗಳ ಮಸೂದೆಗೆ ಸಹಿ ಹಾಕಿರುವುದು ಉಭಯ ದೇಶಗಳ ನಡುವಿನ ಸಂಬಂಧದ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ ಎಂದು ಹೇಳಲಾಗ್ತಿದೆ.

Generating image…

ಮಸೂದೆಯಲ್ಲಿ ಏನಿದೆ?
– ರಷ್ಯಾದ ನಾಯಕತ್ವ ಹಾಗೂ ಇಂಧನ ಕ್ಷೇತ್ರದ ಮೇಲೆ ಕಠಿಣ ನಿರ್ಬಂಧಗಳನ್ನು ಹೇರುವುದು.
– ನಿರ್ಬಂಧಗಳನ್ನು ತಪ್ಪಿಸಿ ಕಚ್ಚಾತೈಲ ಪೂರೈಸುವ ರಷ್ಯಾದ ‘ಶಾಡೋ ಫ್ಲೀಟ್’ (ರಹಸ್ಯ ಹಡಗುಗಳ ಜಾಲ) ಹಡಗುಗಳನ್ನು ಗುರಿಯಾಗಿಸುವುದು.
– ರಷ್ಯಾದ ಮೇಲಿನ ಅವಲಂಬನೆ ತಗ್ಗಿಸಲು ಭಾರತ ಮತ್ತು ಚೀನಾ ಸೇರಿದಂತೆ ಇತರ ದೇಶಗಳ ಮೇಲೆ ಭಾರಿ ಆಮದು ಸುಂಕ ವಿಧಿಸಲು ಅಧ್ಯಕ್ಷರಿಗೆ ಅಧಿಕಾರ ನೀಡುವುದು.
– ಇರಾನ್ ಮೇಲೂ ಹೆಚ್ಚುವರಿ ಆರ್ಥಿಕ ನಿರ್ಬಂಧಗಳನ್ನು ಹೇರುವುದು.

ಭಾರತ-ಅಮೆರಿಕ ಸಂಬಂಧಗಳ ಮೇಲೆ ಪರಿಣಾಮ
ಹೊಸ ಮಸೂದೆಯಿಂದ ಭಾರತ ಮತ್ತು ಅಮೆರಿಕ ನಡುವಿನ ದ್ವಿಪಕ್ಷೀಯ ಸಂಬಂಧಗಳ ಮೇಲೆ ಪರಿಣಾಮ ಬೀರಬಹುದು ಎಂದು ಭಾರತ ಈಗಾಗಲೇ ಅಮೆರಿಕಕ್ಕೆ ಎಚ್ಚರಿಕೆ ನೀಡಿದೆ. ಇಂಧನ ಭದ್ರತೆಗೆ ಭಾರತ ಬದ್ಧವಾಗಿದ್ದು, ಮಾರುಕಟ್ಟೆಯ ಪರಿಸ್ಥಿತಿಗೆ ಅನುಗುಣವಾಗಿ ವಿವಿಧ ದೇಶಗಳಿಂದ ತೈಲ ಖರೀದಿಸುವುದನ್ನ ಮುಂದುವರಿಸುವುದಾಗಿ ಕೇಂದ್ರ ಸರ್ಕಾರ ಹೇಳಿದೆ.

ಜಿನ್‌ಪಿಂಗ್‌ ಭೇಟಿಗೂ ಮುನ್ನವೇ ಉದ್ವಿಗ್ನತೆ
ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರು ಸೆಪ್ಟೆಂಬರ್ 24ರಂದು ಅಮೆರಿಕಕ್ಕೆ ಭೇಟಿ ನೀಡಿ ಟ್ರಂಪ್ ಅವರೊಂದಿಗೆ ಮಾತುಕತೆ ನಡೆಸಲು ಮುಂದಾಗಿದ್ದಾರೆ. ಆದ್ರೆ ಜಿನ್‌ಪಿಂಗ್‌ ಭೇಟಿಗು ಮುನ್ನವೇ ಟ್ರಂಪ್ ನಿರ್ಬಂಧಗಳ ಮಸೂದೆಗೆ ಸಹಿ ಹಾಕಿರುವುದು ಉಭಯ ದೇಶಗಳ ನಡುವಿನ ಸಂಬಂಧದ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ ಎಂದು ಹೇಳಲಾಗ್ತಿದೆ.

Editor Reporter
kannadasakshi.in

ಭಾರತದ ಮೇಲೆ 100% ಸುಂಕ ವಿಧಿಸುವ ಮಸೂದೆಗೆ ಟ್ರಂಪ್ ಸಹಿ..

ರಷ್ಯಾದಿಂದ ಕಚ್ಚಾ ತೈಲ (Russia Crude Oil) ಮತ್ತು ಅನಿಲ ಖರೀದಿಸುವ ಭಾರತ (India) ಹಾಗೂ ಚೀನಾ ಸೇರಿದಂತೆ ಹಲವು ರಾಷ್ಟ್ರಗಳ ಮೇಲೆ ಬರೋಬ್ಬರಿ ಶೇ.100 ರಷ್ಟು ಆಮದು ಸುಂಕ ವಿಧಿಸಲು ಪರಮಾಧಿಕಾರ ಹೊಂದಿರುವ ಮಸೂದೆಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಸಹಿ ಹಾಕಿದ್ದಾರೆ.
ಇದರಿಂದ ರಷ್ಯಾದ ಪ್ರಮುಖ ತೈಲ ಖರೀದಿದಾರರಾದ ಭಾರತ ಮತ್ತು ಚೀನಾ (China) ಮೇಲೆ 100% ವರೆಗೆ ಆಮದು ಸುಂಕ ವಿಧಿಸಲು ಟ್ರಂಪ್‌ ಅವರಿಗೆ ಪರಮಾಧಿಕಾರ ದೊರೆತಂತಾಗಿದೆ.

‘ಲಿಂಡ್ಸೆ ಒ. ಗ್ರಹಾಂ ನಿರ್ಬಂಧಗಳ ಕಾಯ್ದೆ-2026’  ಹೆಸರಿನ ಈ ಮಸೂದೆಗೆ ಅಮೆರಿಕದ ಪ್ರತಿನಿಧಿಗಳ ಸಭೆ ಬುಧವಾರ 262-159 ಮತಗಳಿಂದ ಮಸೂದೆಯನ್ನ ಅಂಗೀಕರಿಸಿತು. ಇದಕ್ಕೂ ಮುನ್ನ ಸೆನೆಟ್ ಕೂಡ ಇದಕ್ಕೆ ಅನುಮೋದನೆ ನೀಡಿತ್ತು.

ಡೆಮಾಕ್ರಟಿಕ್ ಸಂಸದ ಸ್ಟೆನಿ ಹೋಯರ್ ಮಂಡಿಸಿದ ತಿದ್ದುಪಡಿಯಲ್ಲಿ ಭಾರತ, ಚೀನಾ, ಯುಎಇ, ಟರ್ಕಿ, ಸಿಂಗಾಪುರ, ಅಜರ್‌ಬೈಜಾನ್, ಕಜಕಿಸ್ತಾನ್, ಹಂಗೇರಿ, ಕಿರ್ಗಿಸ್ತಾನ್ ಮತ್ತು ಸ್ಲೊವಾಕಿಯಾ ಸೇರಿ ಒಟ್ಟು 10 ರಾಷ್ಟ್ರಗಳನ್ನು ನೇರವಾಗಿ ಹೆಸರಿಸಲಾಗಿದೆ. ಈ ದೇಶಗಳು ರಷ್ಯಾದಿಂದ ಇಂಧನ ಆಮದು ಮಾಡಿಕೊಳ್ಳುತ್ತಿರುವುದರಿಂದ ಇವುಗಳ ಮೇಲೆ ಶೇ.100ರಷ್ಟು ದ್ವಿತೀಯ ಶ್ರೇಣಿಯ ಸುಂಕ (Secondary Tariffs) ವಿಧಿಸಲು ಅವಕಾಶ ಕಲ್ಪಿಸಲಾಗಿದೆ.

ಇದೀಗ ಟ್ರಂಪ್‌ ಮಸೂದೆಗೆ ಸಹಿ ಹಾಕಿರುವುದರಿಂದ ಅವರು ತಮ್ಮ ಈ ವಿಶೇಷ ಅಧಿಕಾರ ಚಲಾಯಿಸಲು ನಿರ್ಧರಿಸಿದರೆ ಮಾತ್ರ ಭಾರತದ ಮೇಲೆ ಗರಿಷ್ಠ ಶೇ.100 ರಷ್ಟು ಸುಂಕ ಹೇರಲ್ಪಡುತ್ತದೆ.
ಮಸೂದೆಯಲ್ಲಿ ಏನಿದೆ?– ರಷ್ಯಾದ ನಾಯಕತ್ವ ಹಾಗೂ ಇಂಧನ ಕ್ಷೇತ್ರದ ಮೇಲೆ ಕಠಿಣ ನಿರ್ಬಂಧಗಳನ್ನು ಹೇರುವುದು.– ನಿರ್ಬಂಧಗಳನ್ನು ತಪ್ಪಿಸಿ ಕಚ್ಚಾತೈಲ ಪೂರೈಸುವ ರಷ್ಯಾದ ‘ಶಾಡೋ ಫ್ಲೀಟ್’ (ರಹಸ್ಯ ಹಡಗುಗಳ ಜಾಲ) ಹಡಗುಗಳನ್ನು ಗುರಿಯಾಗಿಸುವುದು.– ರಷ್ಯಾದ ಮೇಲಿನ ಅವಲಂಬನೆ ತಗ್ಗಿಸಲು ಭಾರತ ಮತ್ತು ಚೀನಾ ಸೇರಿದಂತೆ ಇತರ ದೇಶಗಳ ಮೇಲೆ ಭಾರಿ ಆಮದು ಸುಂಕ ವಿಧಿಸಲು ಅಧ್ಯಕ್ಷರಿಗೆ ಅಧಿಕಾರ ನೀಡುವುದು.– ಇರಾನ್ ಮೇಲೂ ಹೆಚ್ಚುವರಿ ಆರ್ಥಿಕ ನಿರ್ಬಂಧಗಳನ್ನು ಹೇರುವುದು.
ಭಾರತ-ಅಮೆರಿಕ ಸಂಬಂಧಗಳ ಮೇಲೆ ಪರಿಣಾಮಹೊಸ ಮಸೂದೆಯಿಂದ ಭಾರತ ಮತ್ತು ಅಮೆರಿಕ ನಡುವಿನ ದ್ವಿಪಕ್ಷೀಯ ಸಂಬಂಧಗಳ ಮೇಲೆ ಪರಿಣಾಮ ಬೀರಬಹುದು ಎಂದು ಭಾರತ ಈಗಾಗಲೇ ಅಮೆರಿಕಕ್ಕೆ ಎಚ್ಚರಿಕೆ ನೀಡಿದೆ. ಇಂಧನ ಭದ್ರತೆಗೆ ಭಾರತ ಬದ್ಧವಾಗಿದ್ದು, ಮಾರುಕಟ್ಟೆಯ ಪರಿಸ್ಥಿತಿಗೆ ಅನುಗುಣವಾಗಿ ವಿವಿಧ ದೇಶಗಳಿಂದ ತೈಲ ಖರೀದಿಸುವುದನ್ನ ಮುಂದುವರಿಸುವುದಾಗಿ ಕೇಂದ್ರ ಸರ್ಕಾರ ಹೇಳಿದೆ.
ಜಿನ್‌ಪಿಂಗ್‌ ಭೇಟಿಗೂ ಮುನ್ನವೇ ಉದ್ವಿಗ್ನತೆಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರು ಸೆಪ್ಟೆಂಬರ್ 24ರಂದು ಅಮೆರಿಕಕ್ಕೆ ಭೇಟಿ ನೀಡಿ ಟ್ರಂಪ್ ಅವರೊಂದಿಗೆ ಮಾತುಕತೆ ನಡೆಸಲು ಮುಂದಾಗಿದ್ದಾರೆ. ಆದ್ರೆ ಜಿನ್‌ಪಿಂಗ್‌ ಭೇಟಿಗು ಮುನ್ನವೇ ಟ್ರಂಪ್ ನಿರ್ಬಂಧಗಳ ಮಸೂದೆಗೆ ಸಹಿ ಹಾಕಿರುವುದು ಉಭಯ ದೇಶಗಳ ನಡುವಿನ ಸಂಬಂಧದ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ ಎಂದು ಹೇಳಲಾಗ್ತಿದೆ.

Share ePaper Clip

Preparing image...

   SHARE  

Facebook
Twitter
Telegram
WhatsApp

   TOP NEWS  

   RECENT NEWS