ಕಳೆದ ಬಾರಿಗಿಂತ ಈ ಬಾರಿ ತುಮಕೂರಿನಲ್ಲಿ ಅದ್ಧೂರಿ ದಸರಾ (Tumakuru Dasara) ಮಾಡಲು ನಿರ್ಧರಿಸಲಾಗಿದೆ ಎಂದು ಡಿಸಿಎಂ ಜಿ.ಪರಮೇಶ್ವರ್ (G Parameshwar) ಹೇಳಿದ್ದಾರೆ.
ದಸರಾ ಸಭೆ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ತುಮಕೂರು ದಸರಾ ಉತ್ಸವ ಮಾಡಲು ನಿರ್ಧಾರ ಮಾಡಲಾಗಿದೆ. ತುಮಕೂರು ದಸರಾ ಕಳೆದ ಬಾರಿ ಎರಡು ವರ್ಷವೂ ಯಶಸ್ವಿಯಾಗಿತ್ತು. ಈ ವರ್ಷವೂ ಅದ್ಧೂರಿಯಾಗಿ ಆಚರಣೆ ಮಾಡಲು ನಿರ್ಧಾರ ಮಾಡಲಾಗಿದೆ. ಈ ವರ್ಷದ ದಸರಾ ಹೇಗೆ ಮಾಡಬೇಕು ಅನ್ನೋದರ ಬಗ್ಗೆ ಇಂದಿನ ಸಭೆಯಲ್ಲಿ ಚರ್ಚೆ ನಡೆದಿದೆ ಎಂದರು.
ಮೈಸೂರು ದಸರಾ ಮಾದರಿಯಲ್ಲಿ ಈ ಬಾರಿ ತುಮಕೂರು ದಸರಾ ಆಚರಣೆ ಮಾಡಲಾಗುವುದು. ಯಾವುದೇ ಬದಲಾವಣೆ ಇಲ್ಲ. ಅದೇ ರೀತಿ ತುಮಕೂರು ದಸರಾ ಮಾಡಬೇಕು ಎಂದು ತೀರ್ಮಾನ ಮಾಡಿದ್ದೇವೆ. ನಾವು ಆಚರಣೆ ಮಾಡುತ್ತಿರೋದು ನಾಡ ಹಬ್ಬ. 9 ದಿನಗಳ ದುರ್ಗೆಯರ ಫೂಜೆ ಮಾಡಿ ಪ್ರತಿನಿತ್ಯ ಹೋಮ ಹವನ, ಸಾಂಸ್ಕೃತಿಕ ಕಾರ್ಯಕ್ರಮ ಮಾಡುತ್ತೇವೆ. ತುಮಕೂರು ದಸರಾದಲ್ಲಿ ವಿಶೇಷವಾಗಿ 5,343 ಸ್ಥಳೀಯ ಕಲಾವಿದರಿಗೆ ಅವಕಾಶ ಕಲ್ಪಿಸಿಕೊಟ್ಟಿದ್ದೇವೆ. ಈ ಬಾರಿ ಅದು ಮುಂದುವರಿಯಲಿದೆ ಎಂದು ತಿಳಿಸಿದರು. ಇ










