KPSC ಹಗರಣ: ಬಸವರಾಜ ಕನ್ನಾಳೆ ‘ಯಾವ ಪಕ್ಷದವರು’..? ಈಶ್ವರ್ ಖಂಡ್ರೆ ಸ್ಫೋಟಕ ಹೇಳಿಕೆ

ಸುದ್ದಿ ಮತ್ತು ಪ್ರಕಟಣೆಗಳಿಗಾಗಿ:
9000144466
kannadasakshi.in

KPSC ಹಗರಣ: ಬಸವರಾಜ ಕನ್ನಾಳೆ ‘ಯಾವ ಪಕ್ಷದವರು’..? ಈಶ್ವರ್ ಖಂಡ್ರೆ ಸ್ಫೋಟಕ ಹೇಳಿಕೆ

04 Sep 2026, 10:29 pm KANNADA SAKSHI

ಕೆಪಿಎಸ್ನೇಮಕಾತಿ ಹಗರಣ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ಬಸವರಾಜ ಕನ್ನಾಳೆ ಅವರು ಭಾಲ್ಕಿ ಕ್ಷೇತ್ರದ ಬಿಜೆಪಿ ಕಾರ್ಯಕರ್ತರಾಗಿದ್ದು, ತಮ್ಮ ವಿರುದ್ಧ ಬಿಜೆಪಿಯಿಂದ ಸ್ಪರ್ಧಿಸಲು ಸಿದ್ಧತೆ ನಡೆಸಿದ್ದರು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರ ಬಿ. ಖಂಡ್ರೆ ಆರೋಪಿಸಿದ್ದಾರೆ.
ಬೆಂಗಳೂರಿನಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಸವರಾಜ ಕನ್ನಾಳೆ ತಮ್ಮ ಕಚೇರಿಗೆ ಬಂದಿದ್ದ ಸಂದರ್ಭದಲ್ಲಿ ನಡೆದಿದ್ದ ಫೋಟೋ ವೈರಲ್ ಆಗಿರುವ ಕುರಿತು ಸ್ಪಷ್ಟನೆ ನೀಡಿದರು.
ಕೆಲವು ತಿಂಗಳ ಹಿಂದೆ ಕನ್ನಾಳೆ ತಮ್ಮ ಕಚೇರಿಗೆ ಆಗಮಿಸಿ, ಬಿಜೆಪಿ ರಾಜ್ಯ ನಾಯಕರ ಶಿಫಾರಸಿನ ಮೇರೆಗೆ ರಾಜ್ಯಪಾಲರು ತಮ್ಮನ್ನು ತುಮಕೂರು ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯರನ್ನಾಗಿ ನಾಮಕರಣ ಮಾಡಿದ್ದಾರೆ ಎಂದು ಹೇಳಿದ್ದರು. ಈ ಹಿನ್ನೆಲೆಯಲ್ಲಿ ಆಶೀರ್ವಾದ ಪಡೆಯಲು ಬಂದಿದ್ದೇನೆ ಎಂದು ಹೇಳಿ ಸಿಹಿ ತಿನ್ನಿಸಲು ಮುಂದಾಗಿದ್ದರು. ಆದರೆ ತಾನು ಸಿಹಿ ತಿನ್ನುವುದಿಲ್ಲ ಎಂದು ಹೇಳಿ, ಕನ್ನಾಳೆಗೇ ಸಿಹಿ ತಿನ್ನಿಸಿದ್ದಾಗಿ ಖಂಡ್ರೆ ವಿವರಿಸಿದರು.
ತಮ್ಮ ಹಾಗೂ ಕನ್ನಾಳೆ ನಡುವಿನ ಫೋಟೋವನ್ನು ಮುಂದಿಟ್ಟುಕೊಂಡು ರಾಜಕೀಯ ಮಾಡಲಾಗುತ್ತಿದೆ ಎಂದು ಆಕ್ಷೇಪಿಸಿದ ಖಂಡ್ರೆ, ನನ್ನ ಕ್ಷೇತ್ರದ ಒಬ್ಬ ಯುವಕ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯನಾಗಿದ್ದೇನೆ, ಆಶೀರ್ವಾದ ಮಾಡಿ ಎಂದು ಬಂದಾಗ ಶುಭ ಕೋರುವುದು ಸಹಜ ಎಂದರು. ನಿತ್ಯ ತಮ್ಮ ಕಚೇರಿಗೆ ನೂರಾರು ಜನ ಬರುತ್ತಾರೆ. ಹಲವರು ಫೋಟೋ ತೆಗೆಸಿಕೊಳ್ಳುತ್ತಾರೆ. ಅಂತಹ ಒಂದು ಫೋಟೋವನ್ನು ಇಟ್ಟುಕೊಂಡು ರಾಜಕೀಯ ಮಾಡುವುದು ಸರಿಯಲ್ಲ ಎಂದು ಹೇಳಿದರು.

ಬಸವರಾಜ ಕನ್ನಾಳೆ ಅವರಿಗೆ ಯಾವ ಬಿಜೆಪಿ ನಾಯಕರು ಶಿಫಾರಸು ಮಾಡಿದ್ದರು? ರಾಜ್ಯಪಾಲರು ಯಾವ ಮಾನದಂಡದ ಆಧಾರದ ಮೇಲೆ ಅವರನ್ನು ತುಮಕೂರು ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯರನ್ನಾಗಿ ನಾಮಕರಣ ಮಾಡಿದರು? ಎಂಬುದನ್ನು ಬಿಜೆಪಿ ಹಾಗೂ ಜೆಡಿಎಸ್ ನಾಯಕರು ಸ್ಪಷ್ಟಪಡಿಸಬೇಕು ಎಂದು ಖಂಡ್ರೆ ಆಗ್ರಹಿಸಿದರು.

ಕನ್ನಾಳೆ ಅವರು ಭಾಲ್ಕಿಯಿಂದ ಬಿಜೆಪಿಯ ಟಿಕೆಟ್ ಪಡೆದು ತಮ್ಮ ವಿರುದ್ಧವೇ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ಹೇಳಿದ್ದರು. ಆಗ ಪ್ರಜಾಪ್ರಭುತ್ವದಲ್ಲಿ ಎಲ್ಲರಿಗೂ ಚುನಾವಣೆಯಲ್ಲಿ ಸ್ಪರ್ಧಿಸುವ ಹಕ್ಕಿದೆ. ಪ್ರಯತ್ನ ಮಾಡಿ ಎಂದು ತಾವು ಹೇಳಿದ್ದಾಗಿ ಖಂಡ್ರೆ ತಿಳಿಸಿದರು.

ಕನ್ನಾಳೆ ವಿವಿಧ ಪಕ್ಷಗಳ ನಾಯಕರೊಂದಿಗೆ ಫೋಟೋ ತೆಗೆಸಿಕೊಂಡಿದ್ದಾರೆ ಎಂದು ಹೇಳಿದ ಖಂಡ್ರೆ, ರಾಜ್ಯದ ಮಾಜಿ ಮುಖ್ಯಮಂತ್ರಿಯೊಬ್ಬರೊಂದಿಗೆ ಅವರು ವಿದೇಶದಲ್ಲಿ ಫೋಟೋ ತೆಗೆಸಿಕೊಂಡಿರುವುದಾಗಿ ಹೇಳಿದರು.

ಅಲ್ಲದೆ, ಕನ್ನಾಳೆ ನಡೆಸುತ್ತಿದ್ದ ಟ್ರಾವಲ್ಸ್ ಬಸ್ ಅನ್ನು ಜೆಡಿಎಸ್ ಶಾಸಕರೊಬ್ಬರು ಉದ್ಘಾಟಿಸಿದ್ದರು ಎಂದು ಉಲ್ಲೇಖಿಸಿದರು. ಬಿಜೆಪಿ ಚಿಹ್ನೆ ಇರುವ ಶಲ್ಯ ಧರಿಸಿ ಬಿಜೆಪಿ ನಾಯಕರೊಂದಿಗೆ ಕುಳಿತಿರುವ ಹಾಗೂ ಬಿಜೆಪಿ ನಾಯಕರಿಂದ ಸಿಹಿ ತಿನ್ನಿಸಿಕೊಳ್ಳುತ್ತಿರುವ ಕನ್ನಾಳೆಯ ಹಲವು ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ ಎಂದು ಹೇಳಿದರು. ನನ್ನ ಒಂದು ಫೋಟೋವನ್ನು ಹಿಡಿದುಕೊಂಡು ಬಿಜೆಪಿ ಮತ್ತು ಜೆಡಿಎಸ್‌ನವರು ರಾಜಕೀಯ ಮಾಡುವುದು ಸರಿಯಲ್ಲ ಎಂದು ಖಂಡ್ರೆ ಕಿಡಿಕಾರಿದರು.

ಕೆಪಿಎಸ್‌ಸಿ ನೇಮಕಾತಿ ಹಗರಣದ ವಿಚಾರದಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿಕೂಟದವರು ತಮ್ಮ ತಪ್ಪುಗಳನ್ನು ಕಾಂಗ್ರೆಸ್‌ನ ಹೆಗಲಿಗೆ ಕಟ್ಟಲು ಪ್ರಯತ್ನಿಸುತ್ತಿದ್ದಾರೆ ಎಂದು ಖಂಡ್ರೆ ಆರೋಪಿಸಿದರು. ಕೋತಿ ಮೊಸರನ್ನ ತಿಂದು ಮೇಕೆಯ ಬಾಯಿಗೆ ಒರೆಸಿತು ಎನ್ನುವ ಗಾದೆಯಂತೆ ಬಿಜೆಪಿ-ಜೆಡಿಎಸ್‌ನವರು ವರ್ತಿಸುತ್ತಿದ್ದಾರೆ ಎಂದು ಅವರು ವಾಗ್ದಾಳಿ ನಡೆಸಿದರು.

ಕೆಪಿಎಸ್‌ಸಿಯಲ್ಲಿನ ಎಲ್ಲ ಹಗರಣಗಳ ಕುರಿತು ರಾಜ್ಯ ಸರ್ಕಾರ ತನಿಖೆ ನಡೆಸುತ್ತಿದೆ ಎಂದು ಖಂಡ್ರೆ ಹೇಳಿದರು. ತಪ್ಪಿತಸ್ಥರು ಯಾರೇ ಆಗಿದ್ದರೂ ಅವರಿಗೆ ತಕ್ಕ ಶಿಕ್ಷೆಯಾಗಲಿದೆ ಎಂದು ಭರವಸೆ ನೀಡಿದರು.

ಪ್ರಕರಣದಲ್ಲಿ ಭಾಗಿಯಾಗಿರುವವರ ಬಗ್ಗೆಯೂ ಸಮಗ್ರ ಹಾಗೂ ಪಾರದರ್ಶಕ ತನಿಖೆ ನಡೆಯಲಿದೆ. ಸರ್ಕಾರ ಈ ಹಗರಣವನ್ನು ಗಂಭೀರವಾಗಿ ಪರಿಗಣಿಸಿದ್ದು, ಎಲ್ಲ ಆಯಾಮಗಳಲ್ಲೂ ತನಿಖೆ ನಡೆಸಲಾಗುತ್ತಿದೆ ಎಂದು ಹೇಳಿದರು. ಹಾಲು ಯಾವುದು, ನೀರು ಯಾವುದು ಎಂಬುದು ಬಹಿರಂಗವಾಗಿಯೇ ಆಗುತ್ತದೆ. ಯಾರ ಚರಿತ್ರೆ ಏನು ಎಂಬುದು ಜನರಿಗೂ ತಿಳಿಯುತ್ತದೆ ಎಂದು ಈಶ್ವರ ಖಂಡ್ರೆ ಹೇಳಿದರು.

Generating image…

Editor Reporter

Share ePaper Clip

Preparing image...

   SHARE  

Facebook
Twitter
Telegram
WhatsApp

   TOP NEWS  

   RECENT NEWS