ಹುಸಿ ಬಾಂಬ್ ಕರೆಗಳು (Fake Bomb Call), ಇಮೇಲ್ಗಳನ್ನು (Emails) ಪತ್ತೆ ಹಚ್ಚುವುದು ಕಷ್ಟದ ಕೆಲಸ. ಆದರೂ ಹುಸಿ ಬಾಂಬ್ ಕರೆಗಳ ಬಗ್ಗೆ ಕ್ರಮ ತೆಗೆದುಕೊಳ್ಳಲಾಗುತ್ತಿದೆ ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ (Priyank Kharge) ತಿಳಿಸಿದ್ದಾರೆ.
ಇಸ್ರೋಗೆ ಹುಸಿ ಬಾಂಬ್ ಬೆದರಿಕೆ ಬಂದ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಆಗಾಗ ಇಂತಹ ಹುಸಿ ಬೆದರಿಕೆಗಳು ಬರುತ್ತದೆ. ವಿಮಾನ ನಿಲ್ದಾಣ (Air Port) ಇರಬಹುದು, ಥರ್ಮಲ್ ಪವರ್ ಪ್ಲ್ಯಾಂಟ್ ಇರಬಹುದು. ಎಚ್ಚೆತ್ತುಕೊಂಡು ಸೂಕ್ತ ಕ್ರಮ ತೆಗೆದುಕೊಂಡಿದ್ದೇವೆ ಎಂದರು.
ನಿರಂತರವಾಗಿ ಸೈಬರ್ ದಾಳಿ (Cyber Attack), ಹುಸಿ ಕರೆಗಳು ಇದಕ್ಕೆ ಅಗತ್ಯ ಸಿಬ್ಬಂದಿ ಮತ್ತು ತಂತ್ರಜ್ಞಾನವನ್ನು ಅಳವಡಿಕೆ ಮಾಡಿಕೊಂಡಿದ್ದೇವೆ. ಮತ್ತಷ್ಟು ನಿಗಾ ಇಡುವ ಕೆಲಸ ಮುಂದುವರೆಸುತ್ತೇವೆ. ಹುಸಿ ಕರೆ, ಇಮೇಲ್ ಗಳನ್ನ ಪತ್ತೆ ಹಚ್ಚೋದು ಕಷ್ಟ. ಐಪಿ ಅಡ್ರೆಸ್ ಬೇರೆ ಬೇರೆ ದೇಶದಲ್ಲಿ ಇರುವುದರಿಂದ ಮ್ಯಾಪ್ ಮಾಡಲು ಕಷ್ಟ ಆಗುತ್ತದೆ. ಆದರೆ ಇದನ್ನು ತಡೆ ಹಿಡಿಯೋದು ನಮ್ಮ ಜವಾಬ್ದಾರಿ ಎಂದರು.
ಮೂಲ ಕಂಡು ಹಿಡಿಯುವುದು ಕಷ್ಟ. ಆದರೂ ಪ್ರಯತ್ನ ಮಾಡ್ತೀವಿ. ಅಂತಾರಾಷ್ಟ್ರೀಯ ಸಂಸ್ಥೆಗಳ ಜೊತೆಗೂ ನಮ್ಮ ಒಪ್ಪಂದ ಇದೆ. ಅಂತಹದ್ದು ಏನಾದರೂ ಇದ್ದರೆ ಕೇಂದ್ರದ ಸಹಾಯ ಪಡೆಯುತ್ತೇವೆ ಎಂದು ತಿಳಿಸಿದರು.










