ಬೆಂಗಳೂರಿನಲ್ಲಿ ಟೆಕ್ಕಿಯೊಬ್ಬರ ತಿಂಗಳ ಜೀವನಾ ವೆಚ್ಚ 71 ಸಾವಿರ ರೂ.: ದುಬಾರಿ ಮನೆ ಬಾಡಿಗೆ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಭಾರಿ ಚರ್ಚೆ

ಸಿಲಿಕಾನ್‌ ಸಿಟಿ ಬೆಂಗಳೂರಿನಲ್ಲಿ ಜೀವನ ನಿರ್ವಹಣೆ ಎಷ್ಟು ದುಬಾರಿಯಾಗಿದೆ ಎಂಬುದಕ್ಕೆ ಸಾಕ್ಷಿಯಾಗಿ ಟೆಕ್ಕಿಯೊಬ್ಬರ ಮಾಸಿಕ ಖರ್ಚಿನ ವಿವರಗಳು ಅಂತರ್ಜಾಲದಲ್ಲಿ ವೈರಲ್ ಆಗಿವೆ. ಈ ಟೆಕ್ಕಿಯು ತಿಂಗಳಿಗೆ ಬರೋಬ್ಬರಿ 71,000 ರೂಪಾಯಿಗಳನ್ನು ಖರ್ಚು ಮಾಡುತ್ತಿದ್ದು, ಅದರಲ್ಲಿ ಕೇವಲ ಮನೆ ಬಾಡಿಗೆಗೇ 28,000 ರೂ. ವ್ಯಯಿಸುತ್ತಿರುವುದು ಸಾರ್ವಜನಿಕರ ಹುಬ್ಬೇರಿಸಿದೆ.

ಈ ಯುವಕ ಹಂಚಿಕೊಂಡಿರುವ ವೆಚ್ಚದ ಪಟ್ಟಿಯ ಪ್ರಕಾರ, ಬಾಡಿಗೆಯ ಹೊರತಾಗಿ ಆಹಾರ, ಸಾರಿಗೆ, ಯುಟಿಲಿಟಿ ಬಿಲ್‌ಗಳು ಮತ್ತು ಇತರ ವೈಯಕ್ತಿಕ ಖರ್ಚುಗಳು ದೊಡ್ಡ ಮೊತ್ತವನ್ನು ಆಕ್ರಮಿಸಿಕೊಂಡಿವೆ. ಕೈಯಲ್ಲಿ ಒಳ್ಳೆಯ ಸಂಬಳವಿದ್ದರೂ, ಇಂದಿನ ಅಗತ್ಯ ವಸ್ತುಗಳು ಮತ್ತು ಜೀವನಶೈಲಿಯ ದುಬಾರಿ ವೆಚ್ಚದಿಂದಾಗಿ ಉಳಿತಾಯ ಮಾಡುವುದು ಕಷ್ಟಕರವಾಗುತ್ತಿದೆ ಎಂದು ಅವರು ಅಳಲು ತೋಡಿಕೊಂಡಿದ್ದಾರೆ.

ಈ ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದ್ದು, ನೆಟ್ಟಿಗರು ಭಿನ್ನ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದಾರೆ. ಕೆಲವರು ಬೆಂಗಳೂರಿನಲ್ಲಿ ಗಗನಕ್ಕೇರುತ್ತಿರುವ ಮನೆ ಬಾಡಿಗೆ ಹಾಗೂ ಬೆಲೆಯೇರಿಕೆಯ ಬಗ್ಗೆ ಆತಂಕ ವ್ಯಕ್ತಪಡಿಸಿದರೆ, ಇನ್ನು ಕೆಲವರು ಇದು ಐಷಾರಾಮಿ ಜೀವನಶೈಲಿಯ ಅತಿಯಾದ ಖರ್ಚು ಎಂದು ಟೀಕಿಸಿದ್ದಾರೆ.

   SHARE  

Facebook
Twitter
Telegram
WhatsApp

   TOP NEWS  

   RECENT NEWS