ನೂತನ ಸಚಿವರಿಗೆ ಖಾತೆ ಹಂಚಿಕೆ ಫೈನಲ್‌ ಆಗಿದೆ: ಸಿಎಂ ಡಿಕೆಶಿ..

ಸುದ್ದಿ ಮತ್ತು ಪ್ರಕಟಣೆಗಳಿಗಾಗಿ:
9000144466
kannadasakshi.in

ನೂತನ ಸಚಿವರಿಗೆ ಖಾತೆ ಹಂಚಿಕೆ ಫೈನಲ್‌ ಆಗಿದೆ: ಸಿಎಂ ಡಿಕೆಶಿ..

04 Jun 2026, 10:47 pm KANNADA SAKSHI

ನೂತನ ಸಚಿವರಿಗೆ ಖಾತೆ ಹಂಚಿಕೆ ಆಗಿದ್ದು, ಪಟ್ಟಿಯನ್ನ ಹೈಕಮಾಂಡ್‌ಗೆ ಕಳಿಸಿದ್ದೇವೆ. ಶೀಘ್ರವೇ ಪಟ್ಟಿ ಬಿಡುಗಡೆ ಆಗಲಿದೆ ಎಂದು ಮುಖ್ಯಮಂತ್ರಿ ಡಿಕೆ ಶಿವಕುಮಾರ್‌ ತಿಳಿಸಿದರು.

ಇಂದು ಸಂಜೆ ವಿಧಾನಸೌಧಕ್ಕೆ ತೆರಳಿದ್ದ ಸಿಎಂ ಹಲವು ಗಣ್ಯಾತಿಗಣ್ಯರ ಪ್ರತಿಮೆಗಳಿಗೆ ಮಾಲಾರ್ಪಣೆ ಮಾಡಿದರು. ವಿಧಾನಸೌಧದಲ್ಲಿರೊ ಭುವನೇಶ್ವರಿ ತಾಯಿ, ದಿ. ದೇವರಾಜ ಅರಸ್, ಕೆ.ಸಿ ರೆಡ್ಡಿಯವರ, ಎಸ್‌. ನಿಜಲಿಂಗಪ್ಪ, ಡಾ. ಬಾಬು ಜಗಜೀವನ್ ರಾಂ, ಕೆಂಗಲ್ ಹನುಮಂತಯ್ಯ, ಲಾಲ್ ಬಹುದ್ದೂರ್ ಶಾಸ್ತ್ರಿ ಹಾಗೂ ಸುಭಾಷ್ ಚಂದ್ರ ಭೋಸ್ ಅವರ ಪ್ರತಿಮೆಗಳಿಗೆ ಮಾಲಾರ್ಪಣೆ ಮಾಡಿ, ವಂದಿಸಿದರು. ಇದನ್ನೂ ಓದಿ: ಗೃಹಜ್ಯೋತಿ, ಗೃಹಲಕ್ಷ್ಮಿ ಯೋಜನೆ ಪರಿಷ್ಕರಣೆ ಸುಳಿವು – ಸಿಎಂ ಡಿಕೆಶಿ ಫುಲ್‌ ಆಕ್ಟೀವ್‌

ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಸಿಎಂ, ಎಲ್ಲರಿಗೂ ಖಾತೆ ಹಂಚಿಕೆ ಫೈನಲ್ ಆಗಿದ್ದು, ಪಟ್ಟಿಯನ್ನ ಹೈಕಮಾಂಡ್‌ಗೆ ಕಳಿಸಿದ್ದೇವೆ. ಶೀಘ್ರದಲ್ಲೇ ಖಾತೆ ಹಂಚಿಕೆ ಪಟ್ಟಿ ಬಿಡುಗಡೆ ಆಗಲಿದೆ ಎಂದು ಸ್ಪಷ್ಟಪಡಿಸಿದರು.

DK Shivakumar Cabinet ministers

ಇದಕ್ಕೂ ಮುನ್ನ ಮಾತನಾಡಿ, ರಾಜ್ಯಕ್ಕೆ ಸೇವೆ ಮಾಡಿದ ನಾಡಿನ ಹಿರಿಯರಿಗೆ, ತಾಯಿ ಭುವನೇಶ್ವರಿಗೆ ಸ್ಮರಿಸೋದು ನನ್ನ ಕರ್ತವ್ಯ. ಕೆಂಗಲ್ ಹನುಮಂತಯ್ಯ, ನಿಜಲಿಂಗಪ್ಪ ಅವರಂತಹ ಮೇರು ವ್ಯಕ್ತಿತ್ವಗಳಿಗೆ ಗೌರವ ಸಲ್ಲಬೇಕು. ನಾಳೆ ಮಿಕ್ಕ ಮಾಜಿ ಮುಖ್ಯಮಂತ್ರಿಗಳನ್ನ ಭೇಟಿ ಮಾಡ್ತೇನೆ. ಕುಮಾರಸ್ವಾಮಿ, ಸದಾನಂದ ಗೌಡ ಸೇರಿದಂತೆ ಮಾಜಿ ಮುಖ್ಯಮಂತ್ರಿಗಳನ್ನ ಭೇಟಿ ಮಾಡ್ತೇನೆ. ಕುಮಾರಸ್ವಾಮಿ ಅವ್ರು ಬಂದಮೇಲೆ ಅವರನ್ನೂ ಭೇಟಿ ಮಾಡ್ತೀನಿ. ಅವರ ಆಡಳಿತದ ಅನುಭವ, ಸಲಹೆ ಪಡೆಯೋದು ನನಗೆ ಮುಖ್ಯ ಎಂದು ತಿಳಿಸಿದರು.

ರಾಜ್ಯಸಭೆಗೆ ನಾಳೆ ಮಲ್ಲಿಕಾರ್ಜುನ ಖರ್ಗೆ ನಾಮಪತ್ರ ಸಲ್ಲಿಕೆ ಮಾಡ್ತಾರೆ. ಅವರೊಂದಿಗೆ ರಾಹುಲ್ ಗಾಂಧಿ, ಸಿದ್ದರಾಮಯ್ಯ ನಾನೂ ಎಲ್ಲರೂ ಇರ್ತೀವಿ. ರಾಜ್ಯಸಭೆಗೆ 5 ಅಭ್ಯರ್ಥಿಗಳನ್ನು ನಾವು ಹಾಕ್ತೀವಿ. ಜೆಡಿಎಸ್ ನವರು ಹಾಕ್ತಾರೋ ಬಿಡ್ತಾರೋ ನಾವು 5 ಅಭ್ಯರ್ಥಿ ಹಾಕ್ತೀವಿ. ನಂಬರ್ ಎಷ್ಟಿದೆ ಎಲ್ಲಾ ನೋಡಿಕೊಂಡೇ ಈ ತೀರ್ಮಾನ ಮಾಡಿದ್ದೀವಿ ಎಂದು ಹೇಳಿದರು.

Generating image…

Editor Reporter

Share ePaper Clip

Preparing image...

   SHARE  

Facebook
Twitter
Telegram
WhatsApp

   TOP NEWS  

   RECENT NEWS