3ನೇ ಸ್ಥಾನದ ಅಭ್ಯರ್ಥಿಗಾಗಿ ಭಾರೀ ಕಸರತ್ತು ನಡೆದಿತ್ತು. ಆಂಧ್ರದ ಮಾಜಿ ಸಿಎಂ ವೈ.ಎಸ್ ರಾಜಶೇಖರ ರೆಡ್ಡಿ ಪುತ್ರಿ ಹಾಗೂ ಆಂಧ್ರ ಕಾಂಗ್ರೆಸ್ ಅಧ್ಯಕ್ಷೆ ಶರ್ಮಿಳಾ ರೆಡ್ಡಿ ಹಾಗೂ ಪವನ್ ಖೇರಾ ಅವರ ಹೆಸರು ರೇಸ್‌ನಲ್ಲಿತ್ತು. ಆದ್ರೆ ಹೈಕಮಾಂಡ್ ಪವನ್ ಖೇರಾ ಅವರ ಹೆಸರನ್ನು ಅಂತಿಮಗೊಳಿಸಿದೆ.
Pawan Khera
ಶುಕ್ರವಾರ ಮಧ್ಯಾಹ್ನ ಮಲ್ಲಿಕಾರ್ಜುನ ಖರ್ಗೆ ನಾಮಪತ್ರ ಸಲ್ಲಿಕೆ ವೇಳೆ ರಾಹುಲ್ ಗಾಂಧಿ ಕೂಡ ಉಪಸ್ಥಿತರಿರಲಿದ್ದಾರೆ. ಈ ಮಧ್ಯೆ, ಎಂಎಲ್‌ಸಿ ಹಾಗೂ ರಾಜ್ಯಸಭೆ ಚುನಾವಣೆಗೆ ಕಾಂಗ್ರೆಸ್ ಸದ್ದಿಲ್ಲದೆ ಸಹಿ ಸಂಗ್ರಹ ಮಾಡುತ್ತಿದೆ.
ರಾಜ್ಯದಿಂದ ಚುನಾಯಿತರಾಗುವ ಅಭ್ಯರ್ಥಿಗಳು ಸ್ಥಳೀಯರೇ ಆಗಿರಬೇಕು. ಯಾವುದೇ ಕಾರಣಕ್ಕೂ ಹೊರ ರಾಜ್ಯದವರಿಗೆ ಮಣೆ ಹಾಕುವುದು ಬೇಡ ಎಂಬುದು ಇಲ್ಲಿನ ನಾಯಕರ ಆಗ್ರಹವಾಗಿತ್ತು. ಆದರೆ, ಪಕ್ಷ ಸಂಘಟನೆ ಮಾಡುವ ಉದ್ದೇಶದಿಂದ ಪವನ್ ಖೇರಾ ಅವರನ್ನು ರಾಜ್ಯಸಭೆಗೆ ಚುನಾಯಿಸಿದೆ.
ನಾಮಪತ್ರ ಸಲ್ಲಿಕೆ ಮಾಡಲು ಜೂ.8 ಅಂತಿಮ ದಿನವಾಗಿದ್ದು, ಜೂ.9 ರಂದು ನಾಮಪತ್ರ ಪರಿಶೀಲನೆ ನಡೆಯಲಿದೆ. ಉಮೇದುವಾರಿಕೆ ಹಿಂಪಡೆಯಲು ಜೂ.11ರಂದು ಕೊನೆಯ ದಿನವಾಗಿದೆ










