ಕ್ಯಾಲಿಫೋರ್ನಿಯಾದ ರಾಜಧಾನಿ ಸ್ಯಾಕ್ರಮೆಂಟೊದಲ್ಲಿ ಭಾರತೀಯ ಮೂಲದ 38 ವರ್ಷದ ಮಹಿಳೆಯೊಬ್ಬರನ್ನು 22 ವರ್ಷದ ಯುವಕ ಗುಂಡಿಕ್ಕಿ ಹತ್ಯೆ ಮಾಡಿರುವ ಘಟನೆ ನಡೆದಿದೆ. ಮೃತರನ್ನು ಶಾಲಿನಿ ಠಾಕೂರ್ ಎಂದು ಗುರುತಿಸಲಾಗಿದೆ.
ಶಾಲಿನಿ ಠಾಕೂರ್ ಅವರನ್ನು ರೋಹಿತ್ ಎಂಬ ಯುವಕ ಗುಂಡಿಕ್ಕಿ ಹತ್ಯೆ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಪೊಲೀಸರು ತನಿಖೆ ನಡೆಸುತ್ತಿದ್ದು, ಪ್ರಕರಣದ ಸಂಪೂರ್ಣ ವಿವರಗಳನ್ನು ಕಲೆಹಾಕುತ್ತಿದ್ದಾರೆ.
ಆರೋಪಿಯಾಗಿರುವ ಯುವಕ ಕೆಲವು ತಿಂಗಳುಗಳಿಂದ ಶಾಲಿನಿ ಅವರನ್ನು ಹಿಂಬಾಲಿಸಿ ಕಿರುಕುಳ ನೀಡುತ್ತಿದ್ದ ಎಂದು ತಿಳಿದುಬಂದಿದೆ. ಈ ಹಿನ್ನೆಲೆಯಲ್ಲೇ ಗುಂಡಿನ ದಾಳಿ ನಡೆದಿರುವ ಶಂಕೆ ವ್ಯಕ್ತವಾಗಿದ್ದು, ತನಿಖೆ ಮುಂದುವರಿದಿದೆ.










